• Home
  • »
  • News
  • »
  • lifestyle
  • »
  • Health Tips: Hypothyroid ಸಮಸ್ಯೆ ಇದ್ದವರು ಈ 9 ಆಹಾರಗಳಿಂದ ದೂರವಿರಿ

Health Tips: Hypothyroid ಸಮಸ್ಯೆ ಇದ್ದವರು ಈ 9 ಆಹಾರಗಳಿಂದ ದೂರವಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳು ಅಧಿಕ ಫೈಬರ್ ಮತ್ತು ಪೌಷ್ಟಿಕಾಂಶಯುಕ್ತವಾಗಿರುತ್ತವೆ. ಆದರೆ, ನಿಮ್ಮಲ್ಲಿ ಐಯೋಡಿನ್ ಕೊರತೆ ಇದ್ದಲ್ಲಿ, ಆ ತರಕಾರಿಗಳಿಂದ ಥೈರಾಯ್ಡ್‌ ಹಾರ್ಮೋನಿನ ಉತ್ಪಾದನೆಗೆ ಅಡ್ಡಿ ಆಗಬಹುದು.

  • Share this:

ಥೈರಾಯ್ಡ್(thyroid)‌ ಸಮಸ್ಯೆ ಇರುವವರ ಸಂಖ್ಯೆ ಈ ದಿನಗಳಲ್ಲಿ ಅಧಿಕವಿದೆ. ಅದರಲ್ಲೂ, ಹೈಪೋಥೈರಾಯ್ಡ್(Hypothyroidism)‌ ನಿರ್ವಹಣೆಯ ಬಗ್ಗೆ ಎಚ್ಚರ ಇರಬೇಕು, ಏಕೆಂದರೆ ನಾವು ತಿನ್ನುವ ಆಹಾರ ಅದರ ಚಿಕಿತ್ಸೆಗೆ ಅಡ್ಡಿ ಆಗಬಹುದು. ಕೆಲವು ಪೋಷಕಾಂಶಗಳು ಥೈರಾಯ್ಡ್‌ ಗ್ರಂಥಿಯ ಕಾರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಕೆಲವು ಆಹಾರಗಳು ನಿಮ್ಮ ಥೈರಾಯ್ಡ್‌ ಚಿಕಿತ್ಸೆಯ ಭಾಗವಾಗಿರುವ ಬದಲಿ ಹಾರ್ಮೋನ್ ಸೇವನೆಯಲ್ಲಿ, ಅದರ ಹೀರಿಕೊಳ್ಳುವಿಕೆಯ ಸಾಮರ್ಥ್ಯಕ್ಕೆ ಅಡ್ಡಿ ಆಗಬಹುದು.


ಹೈಪೋಥೈರಾಯ್ಡ್(Hypothyroidism)‌ ಆಹಾರ ಕ್ರಮ ಎಂಬುವಂತದ್ದು ಯಾವುದೂ ಇಲ್ಲ. ಆದರೂ ಕೆಲವು ಆಹಾರಗಳು ನಿಮಗೆ ಹೈಪೋಥೈರಾಯ್ಡ್‌ ಪರಿಸ್ಥಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡಬಲ್ಲವು. ಅಂತಹ 9 ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.


1. ಸೋಯಾಯುಕ್ತ ತಿನಿಸುಗಳು


ಸೋಯಾದಲ್ಲಿರುವ ಇಸೋಫ್ಲೇವೋನ್ಸ್ ಎಂಬ ಸಂಯುಕ್ತಗಳು ಥೈರಾಯ್ಡ್‌ ಮೇಲೆ ವ್ಯತಿರಿಕ್ತ ಪರಿಣಾಮ ಮಾಡಬಹುದು. ಅತಿಯಾದ ಸೋಯಾ ಸೇವನೆಯಿಂದ ಹೈಪೋ ಥೈರಾಯ್ಡ್‌ ಉಂಟಾಗಬಹುದು ಎಂದು ಕೆಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, 2019ರಲ್ಲಿ ಸೈಂಟಿಫಿಕ್ ರಿಪೋರ್ಟ್‌ನಲ್ಲಿ ಮಾರ್ಚ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಸೋಯಾ ಥೈರಾಯ್ಡ್‌ ಹಾರ್ಮೋನ್‍ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಥೈರಾಯ್ಡ್‌ ಉತ್ತೇಜಿಸುವ ಹಾರ್ಮೊನ್ ಮಟ್ಟವನ್ನು ಸಾಧಾರಣವಾಗಿ ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.


ಈ ಕುರಿತು ಯಾವುದೇ ಯಾವುದೇ ನಿರ್ದಿಷ್ಟ ಮಾರ್ಗ ಸೂಚಿಗಳಿಲ್ಲ. ಆದರೆ ಸೋಯಾ ಸೇವನೆ ಥೈರಾಯ್ಡ್‌ ಔಷಧಿಗಳನ್ನು ಹೀರಿಕೊಳ್ಳುವ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ ಸೋಯಾ ಸೇವನೆಯ ಕುರಿತು ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.


2. ಹೂಕೋಸು ಮತ್ತು ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳು


ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳು ಅಧಿಕ ಫೈಬರ್ ಮತ್ತು ಪೌಷ್ಟಿಕಾಂಶಯುಕ್ತವಾಗಿರುತ್ತವೆ. ಆದರೆ, ನಿಮ್ಮಲ್ಲಿ ಐಯೋಡಿನ್ ಕೊರತೆ ಇದ್ದಲ್ಲಿ, ಆ ತರಕಾರಿಗಳಿಂದ ಥೈರಾಯ್ಡ್‌ ಹಾರ್ಮೋನಿನ ಉತ್ಪಾದನೆಗೆ ಅಡ್ಡಿ ಆಗಬಹುದು. ಆದರಿಂದ ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ ಉಪಾಯ. ಸಂಶೋಧನೆಗಳ ಪ್ರಕಾರ, ಈ ತರಕಾರಿಗಳ ಸೇವನೆಯು ಸಾಮಾನ್ಯ ಥೈರಾಯ್ಡ್‌ ಕಾರ್ಯನಿರ್ವಹಣೆಗೆ ಅಗತ್ಯವಿರುವ ಐಯೋಡಿನನ್ನು ಬಳಸಿಕೊಳ್ಳುವ ಥೈರಾಯ್ಡ್‌ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು. ಈ ತರಕಾರಿಗಳನ್ನು ಬೇಯಿಸಿ ತಿನ್ನುವುದರಿಂದ ಮತ್ತು ಅವುಗಳ ಸೇವನೆ ಮಿತಿಯನ್ನು ದಿನಕ್ಕೆ 5 ಔನ್ಸ್‌ನಷ್ಟು ಮಾತ್ರ ಇಟ್ಟುಕೊಳ್ಳುವುದರಿಂದ ಅವುಗಳ ಅಡ್ಡ ಪರಿಣಾಮಗಳ ಪ್ರಮಾಣ ಕೊಂಚ ಕಡಿಮೆ ಆಗಬಹುದು.


ಇದನ್ನೂ ಓದಿ:Black raisins vs yellow raisins: ಆರೋಗ್ಯಕ್ಕೆ ಕಪ್ಪು ದ್ರಾಕ್ಷಿ ಒಳ್ಳೆಯದಾ? ಹಳದಿ ದ್ರಾಕ್ಷಿ ತಿನ್ನಬೇಕಾ?


3. ಬ್ರೆಡ್, ಪಾಸ್ತಾ ಮತ್ತು ಅಕ್ಕಿಯಲ್ಲಿ ಕಂಡು ಬರುವ ಗ್ಲುಟೆನ್


ಹೈಪೋ ಥೈರಾಯ್ಡ್‌ ಇರುವವರು ಗ್ಲುಟೆನ್ ಸೇವನೆ ಮಿತಗೊಳಿಸಬೇಕು ಎನ್ನುತ್ತಾರೆ ಆಹಾರ ತಜ್ಞರು. ನೀವು ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿದ್ದರೆ, ಗ್ಲುಟೆನ್ ಸಣ್ಣ ಕರುಳಿಗೆ ಕಿರಿಕಿರಿ ಉಂಟು ಮಾಡಬಹುದು ಮತ್ತು ಥೈರಾಯ್ಡ್‌ ಹಾರ್ಮೋನ್ ಬದಲಿ ಔಷಧಿ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ಗ್ಲುಟೆನ್ ಮುಕ್ತ ಆಹಾರ ಕ್ರಮ ಥೈರಾಯ್ಡ್‌ ಹೊಂದಿರುವ ಮಹಿಳೆಯರಿಗೆ ಲಾಭದಾಯಕ ಆಗಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.


4. ಬೆಣ್ಣೆ, ಮಾಂಸ ಮತ್ತು ಕರಿದ ತಿನಿಸುಗಳಂತಹ ಕೊಬ್ಬಿನ ಆಹಾರ


ಮ್ಯಾಸೆಚುಸೆಟ್ಸ್‌ನ ಬೋಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‍ನ ಸಹಾಯಕ ಪ್ರಾಧ್ಯಾಪಕ ಶ್ಟೆಫನಿ ಲೀ ಪ್ರಕಾರ, ಕೊಬ್ಬುಗಳು, ಥೈರಾಯ್ಡ್‌ ಹಾರ್ಮೋನ್ ಬದಲಿ ಔಷಧಿಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿ ಪಡಿಸುತ್ತವೆ. ಅದಲ್ಲದೆ, ಹಾರ್ಮೋನುಗಳನ್ನು ಉತ್ಪಾದಿಸುವ ಥೈರಾಯ್ಡ್‌ ಸಾಮರ್ಥ್ಯಕ್ಕೆ ಕೊಬ್ಬಿನಿಂದ ಅಡ್ಡಿಯಾಗಬಹುದು. ಬೆಣ್ಣೆ, ಮಾಂಸ ಮತ್ತು ಎಲ್ಲಾ ರೀತಿಯ ಕರಿದ ಆಹಾರಗಳ ಸೇವನೆ ಕಡಿಮೆ ಮಾಡಬೇಕು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.


5. ಚಾಕೊಲೇಟ್ ಕೇಕ್‍ನಂತಹ ಸಕ್ಕರೆಯುಕ್ತ ಆಹಾರಗಳು


ಹೈಪೋ ಥೈರಾಯ್ಡ್‌ ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಬಹುದು. ಹಾಗಾಗಿ ಎಚ್ಚರಿಕೆ ವಹಿಸದಿದ್ದರೆ ತೂಕ ಹೆಚ್ಚಬಹುದು. ಸಕ್ಕರೆಯುಕ್ತ ತಿನಿಸುಗಳನ್ನು ಕಡಿಮೆ ಮಾಡುವುದು ಅಥವಾ ಅದನ್ನು ನಿಮ್ಮ ಆಹಾರ ಕ್ರಮದಿಂದ ಸಂಪೂರ್ಣವಾಗಿ ತೆಗೆದುಹಾಕುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.


ಇದನ್ನೂ ಓದಿ:Yoga For Kids: ಈ ಆಸನಗಳನ್ನು ಮಾಡಿಸಿದ್ರೆ ಮಕ್ಕಳು ಖುಷಿ-ಖುಷಿಯಾಗಿ ಶಾಲೆಗೆ ಹೋಗ್ತಾರೆ, ಟ್ರೈ ಮಾಡಿ ನೋಡಿ!


6. ಸಂಸ್ಕರಿತ ಮತ್ತು ಪ್ರೋಜನ್ ಆಹಾರ


ಸಂಸ್ಕರಿತ ಆಹಾರಗಳು ಬಹಳಷ್ಟು ಸೋಡಿಯಂ ಹೊಂದಿರುತ್ತವೆ ಮತ್ತು ಹೈಪೋ ಥೈರಾಯ್ಡ್‌ ಇರುವವರು ಅವುಗಳ ಸೇವನೆ ತಪ್ಪಿಸಬೇಕು ಎನ್ನುತ್ತಾರೆ ತಜ್ಞರು. ಕಡಿಮೆ ಥೈರಾಯ್ಡ್‌ ಹೊಂದಿರುವ ವ್ಯಕ್ತಿಯಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಅಧಿಕವಾಗಿರುತ್ತದೆ ಮತ್ತು ಅತಿಯಾದ ಸೋಡಿಯಂ ಈ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಧಿಕ ರಕ್ತದ ಒತ್ತಡ ಹೊಂದಿರುವವರು, ಸೋಡಿಯಂ ದಿನಕ್ಕೆ 1,500 ಮಿ. ಗ್ರಾಂ ಗೆ ಸೀಮಿತಗೊಳಿಸಬೇಕು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಹೇಳಿದೆ.


7. ಬೀನ್ಸ್, ದ್ವಿದಳ ಧಾನ್ಯ ಮತ್ತು ತರಕಾರಿಗಳಿಂದ ಅಧಿಕ ಫೈಬರ್


ಅಧಿಕ ಫೈಬರ್ ಸೇವನೆ ಒಳ್ಳೆಯದೇ, ಆದರೆ ಅದು ಅತಿಯಾದರೆ ಹೈಪೋ ಥೈರಾಯ್ಡ್‌ ಚಿಕಿತ್ಸೆ ಅಡ್ಡಿ ಆಗಬಹುದು. ನೀವು ಅಧಿಕ ಫೈಬರ್ ಆಹಾರ ಕ್ರಮ ಅನುಸರಿಸುತ್ತಿದ್ದರೆ, ನಿಮಗೆ ಹೆಚ್ಚಿನ ಪ್ರಮಾಣದ ಥೈರಾಯ್ಡ್‌ ಔಷಧಿ ಅಗತ್ಯ ಇದೆಯೇ ಎಂದು ವೈದ್ಯರಲ್ಲಿ ಕೇಳಿ. ನಿಮ್ಮ ದೇಹವು ಔಷಧಿಗಳನ್ನು ಹೀರಿಕೊಳ್ಳದಿದ್ದರೆ, ಅದರ ಪ್ರಮಾಣ ಹೆಚ್ಚು ಮಾಡಬೇಕಾಗಬಹುದು.


8. ಕಾಫಿ ಸೇವನೆ


ಜರ್ನಲ್ ಥೈರಾಯ್ಡ್‌ ಅಧ್ಯಯನದ ಪ್ರಕಾರ, ಕೆಫೀನ್ ಥೈರಾಯ್ಡ್‌ ಹಾರ್ಮೊನ್ ಬದಲಿ ಹೀರುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ”ಬೆಳಗ್ಗಿನ ಕಾಫಿಯ ಜೊತೆ ಥೈರಾಯ್ಡ್‌ ಔಷಧಿ ತೆಗೆದುಕೊಳ್ಳುವವರಲ್ಲಿ ಥೈರಾಯ್ಡ್‌ ಅನಿಯಂತ್ರತ ಪ್ರಮಾಣದಲ್ಲಿ ಇರುತ್ತದೆ” ಎನ್ನುತ್ತಾರೆ ಡಾ.ಲೀ. ಥೈರಾಯ್ಡ್‌ ಔಷಧಿಯನ್ನು ನೀರಿನ ಜೊತೆ ಸೇವಿಸಬೇಕು, ಆ ಬಳಿಕ ಕಾಫಿ ಕುಡಿಯಲು ಕನಿಷ್ಟ ಅರ್ಧ ಗಂಟೆ ಕಾಯಬೇಕು.


9. ಮದ್ಯಪಾನ


ಇಂಡಿಯನ್ ಜರ್ನಲ್ ಆಫ್ ಎಂಡ್ರೋಕ್ರೈನಾಲಜಿ ಮತ್ತು ಮೆಟಬಾಲಿಸಂ ಪ್ರಕಾರ, ಮದ್ಯಪಾನದಿಂದ ದೇಹದಲ್ಲಿ ಥೈರಾಯ್ಡ್‌ ಹಾರ್ಮೋನ್ ಪ್ರಮಾಣ ಮತ್ತು ಥೈರಾಯ್ಡ್‌ ಹಾರ್ಮೋನ್ ಉತ್ಪಾದಿಸುವ ದೇಹದ ಸಾಮಥ್ರ್ಯ ಎರಡರ ಮೇಲೂ ತೊಂದರೆ ಆಗಬಹುದು. ಮದ್ಯಪಾನ ಥೈರಾಯ್ಡ್‌ ಗ್ರಂಥಿಯ ಮೇಲೆ ವಿಷಕಾರಿ ಪರಿಣಾಮ ಬೀರುತ್ತದೆ. ಹೈಪೋ ಥೈರಾಯ್ಡ್‌ ಇರುವ ಜನರು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು.

Published by:Latha CG
First published: