HOME » NEWS » Lifestyle » 9 FOODS THAT HAVE MORE PROTEIN THAN AN EGG ZP

Health Tips: ಮೊಟ್ಟೆಯ ಹೊರತಾಗಿ, ಅತೀ ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರಗಳಿವು..!

ಒಂದು ಕಪ್ ಕೋಸುಗಡ್ಡೆಯಲ್ಲಿ 3 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್ ಮತ್ತು ಪೊಟ್ಯಾಸಿಯಮ್ ಸಹ ಇದರಲ್ಲಿ ಕಂಡುಬರುತ್ತದೆ. ಕ್ಯಾಲೊರಿಗಳ ಬಗ್ಗೆ ಹೇಳುವುದಾದರೆ, ಇದು ಇತರ ತರಕಾರಿಗಳಿಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ.

news18-kannada
Updated:March 31, 2021, 3:05 PM IST
Health Tips: ಮೊಟ್ಟೆಯ ಹೊರತಾಗಿ, ಅತೀ ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರಗಳಿವು..!
ಸಾಂದರ್ಭಿಕ ಚಿತ್ರ
  • Share this:
ಆರೋಗ್ಯಕರ ಆಹಾರದ ವಿಷಯ ಬಂದಾಗ, ಎಲ್ಲರೂ ಮೊಟ್ಟೆಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣ ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿರುವುದು. ಅಲ್ಲದೆ ಇದು ನಮ್ಮ ತೂಕವನ್ನು ನಿಯಂತ್ರಿಸುವುದರ ಜೊತೆಗೆ, ದೇಹದಲ್ಲಿ ಪ್ರೋಟೀನ್ ಅನ್ನು ಸಮತೋಲನದಲ್ಲಿರಿಸುತ್ತದೆ. ಹೆಲ್ತ್‌ಲೈನ್ ವರದಿ ಪ್ರಕಾರ, ಒಂದು ಮೊಟ್ಟೆಯಲ್ಲಿ 6 ಗ್ರಾಂ ಪ್ರೋಟೀನ್ ಇರುತ್ತದೆ. ಇದಾಗ್ಯೂ ಅನೇಕರು ಮೊಟ್ಟೆಯನ್ನು ತಿನ್ನಲು ಇಷ್ಟಪಡುವುದಿಲ್ಲ. ಮುಖ್ಯವಾಗಿ ಸಸ್ಯಹಾರಿಗಳು ಮೊಟ್ಟೆಯಿಂದ ದೂರವಿರುತ್ತಾರೆ. ಹೀಗಾಗಿ ಇಂತಹವರು ಪ್ರೋಟೀನ್ ಆಹಾರಗಳಿಗಾಗಿ ಏನು ಮಾಡಬೇಕು ಎಂಬ ಪ್ರಶ್ನೆಯೊಂದು ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ. ಹೌದು, ಮೊಟ್ಟೆಯ ಹೊರತಾಗಿಯೂ ಅನೇಕ ಆಹಾರಗಳಲ್ಲಿ ಮೊಟ್ಟೆಯಿಂದ ಸಿಗುವಷ್ಟೇ ಪ್ರೋಟೀನ್ ಲಭಿಸುತ್ತದೆ. ಅಂತಹ ಕಲೆ ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

1.ಕ್ವಿನೋವಾ : ಕನ್ನಡದಲ್ಲಿ ನವಣೆ ಅಕ್ಕಿ ಎನ್ನಲಾಗುವ ಕ್ವಿನೋವಾ ಪ್ರೋಟೀನ್​ನ ಉತ್ತಮ ಮೂಲ. ಒಂದು ಕಪ್ ಕ್ವಿನೋವಾ (185 ಗ್ರಾಂ)ದಲ್ಲಿ ಸುಮಾರು ಎಂಟು ಗ್ರಾಂ ಪ್ರೋಟೀನ್ ಇರುತ್ತದೆ. ಇದು ಜೀವಸತ್ವಗಳು, ಖನಿಜಗಳು, ಫೈಬರ್, ಅ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಹೀಗಾಗಿ ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ.

2. ಗ್ರೀಕ್ ಮೊಸರು: ಒಂದು ಕಪ್ ಗ್ರೀಕ್ ಮೊಸರಿನಲ್ಲಿ 23 ಗ್ರಾಂ ಪ್ರೋಟೀನ್ ಇರುತ್ತದೆ. 170 ಗ್ರಾಂ ಗ್ರೀಕ್ ಮೊಸರು 17 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಇದು ಅನೇಕ ಜೀವಸತ್ವಗಳು, ಕ್ಯಾಲ್ಸಿಯಂ ಇತ್ಯಾದಿಗಳ ಉತ್ತಮ ಮೂಲವಾಗಿದೆ.

3. ಹಾಲು ಮತ್ತು ಸೋಯಾ ಹಾಲು: ಒಂದು ಕಪ್ ಹಾಲಿನಲ್ಲಿ 8 ಗ್ರಾಂ ಪ್ರೋಟೀನ್ ಇದ್ದರೆ, ಒಂದು ಕಪ್ ಸೋಯಾ ಹಾಲಿನಲ್ಲಿ 6.1 ಗ್ರಾಂ ಪ್ರೋಟೀನ್ ಇರುತ್ತದೆ. ಇದಲ್ಲದೆ ಹಾಲಿನಲ್ಲಿ ಕ್ಯಾಲ್ಸಿಯಂ, ರಂಜಕ, ವಿಟಮಿನ್ ಬಿ 2 ಕೂಡ ಇದೆ.

4.ಕಪ್ಪು ಕಡಲೆ: ಒಂದು ಕಪ್ ಕಪ್ಪು ಕಡಲೆ (ಚೆನ್ನ)ಯಲ್ಲಿ ಎಂಟು ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಇತ್ಯಾದಿಗಳಿವೆ.

5. ಬಾದಾಮಿ ಬೆಣ್ಣೆ: ಎರಡು ಚಮಚ ಬಾದಾಮಿ ಬೆಣ್ಣೆಯಲ್ಲಿ ಸುಮಾರು ಏಳು ಗ್ರಾಂ ಪ್ರೋಟೀನ್ ಇರುತ್ತದೆ. ಇದರಲ್ಲಿ ಉತ್ತಮ ಕೊಬ್ಬು ಕೂಡ ಹೇರಳವಾಗಿರುತ್ತದೆ.

6. ದ್ವಿದಳ ಧಾನ್ಯಗಳು: ದ್ವಿದಳ ಧಾನ್ಯಗಳು ಸಹ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಒಂದು ಕಪ್ ಬೇಯಿಸಿದ ದ್ವಿದಳ ಧಾನ್ಯದಲ್ಲಿ ಸುಮಾರು 18 ಗ್ರಾಂ ಪ್ರೋಟೀನ್ ಇರುತ್ತದೆ. ಇದಲ್ಲದೆ ಇದರಲ್ಲಿ ಹೆಚ್ಚಿನ ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಇತ್ಯಾದಿಗಳೂ ಈ ಆಹಾರದಲ್ಲಿವೆ.7. ಕಡಲೆಕಾಯಿ: ಕಡಲೆಕಾಯಿ ಪ್ರೋಟೀನ್, ಫೈಬರ್ ಮತ್ತು ಮೆಗ್ನೀಸಿಯಮ್​ನ ಭಂಡಾರವಾಗಿದೆ. 28 ಗ್ರಾಂ ನೆಲಗಡಲೆಯಲ್ಲಿ 7 ಗ್ರಾಂ ಪ್ರೋಟೀನ್ ಹೊಂದಿದ್ದರೆ, ಎರಡು ಚಮಚ ಕಡಲೆಕಾಯಿ ಬೆಣ್ಣೆಯಲ್ಲಿ ಏಳು ಗ್ರಾಂ ಪ್ರೋಟೀನ್ ಇರುತ್ತದೆ.

8. ಕುಂಬಳಕಾಯಿ ಬೀಜಗಳು: ಒಂದು ಔನ್ಸ್​ ಕುಂಬಳಕಾಯಿ ಬೀಜದಲ್ಲಿ 8.5 ಗ್ರಾಂ ಪ್ರೋಟೀನ್ ಇರುತ್ತದೆ. ಇದಲ್ಲದೆ, ಇದು ಸತು, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ.

9. ಬ್ರೊಕ್ಲಿ: ಒಂದು ಕಪ್ ಕೋಸುಗಡ್ಡೆಯಲ್ಲಿ 3 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್ ಮತ್ತು ಪೊಟ್ಯಾಸಿಯಮ್ ಸಹ ಇದರಲ್ಲಿ ಕಂಡುಬರುತ್ತದೆ. ಕ್ಯಾಲೊರಿಗಳ ಬಗ್ಗೆ ಹೇಳುವುದಾದರೆ, ಇದು ಇತರ ತರಕಾರಿಗಳಿಗಿಂತ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹೀಗಾಗಿ ಮೊಟ್ಟೆ ಸೇವಿಸದವರು ಈ ಆಹಾರಗಳ ಮೂಲಕ ದೇಹದಲ್ಲಿ ಪ್ರೋಟೀನ್ ಹೆಚ್ಚಿಸಬಹುದು.
Published by: zahir
First published: March 31, 2021, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories