• Home
  • »
  • News
  • »
  • lifestyle
  • »
  • UNESCO: ಯುನೆಸ್ಕೋದ ಸಾಂಸ್ಕೃತಿಕ ಪರಂಪರೆ ಪಟ್ಟಿ ಸೇರಿವೆ ಈ ಆಹಾರಗಳು! ಲಿಸ್ಟ್​ನಲ್ಲಿ ಯಾವುದೆಲ್ಲಾ ಇದೆ ನೋಡಿ

UNESCO: ಯುನೆಸ್ಕೋದ ಸಾಂಸ್ಕೃತಿಕ ಪರಂಪರೆ ಪಟ್ಟಿ ಸೇರಿವೆ ಈ ಆಹಾರಗಳು! ಲಿಸ್ಟ್​ನಲ್ಲಿ ಯಾವುದೆಲ್ಲಾ ಇದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

UNESCO: ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯು ಪ್ರಪಂಚದಾದ್ಯಂತದ ಕೆಲವು ಅದ್ಭುತ ಆಹಾರ ಸಂಪ್ರದಾಯಗಳು ಮತ್ತು ಪಾಕವಿಧಾನಗಳನ್ನು ಗುರುತಿಸುತ್ತದೆ.

  • Share this:

ಆಹಾರವು ಬರೀ ನಮ್ಮ ಹೊಟ್ಟೆಯನ್ನು ತುಂಬಿಸುವುದು ಮಾತ್ರವಲ್ಲದೆ, ಇದು ಆಯಾ ದೇಶದ ಸಂಸ್ಕೃತಿಯನ್ನು (Culture) ಸಹ ಪ್ರತಿಬಿಂಬಿಸುತ್ತದೆ ಅಂತ ಹೇಳಬಹುದು. ಹೌದು, ನಿಸ್ಸಂದೇಹವಾಗಿ ಆಯಾ ದೇಶದ ಆಹಾರವು (Food) ಆ ದೇಶದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸಲ್ಪಡುವ ಅನೇಕ ಕುಟುಂಬ ಪಿತ್ರಾರ್ಜಿತ ಪಾಕವಿಧಾನಗಳಿವೆ. ಹೀಗೆ ಪಾಕವಿಧಾನಗಳನ್ನು ವರ್ಗಾಯಿಸದೆ ಇದ್ದರೆ, ಇವೆಲ್ಲವನ್ನೂ ಜನರು ಮರೆತು ಹೋಗುತ್ತಾರೆ. ಈ ಕಾರಣಕ್ಕೆ ಜಾಗತೀಕರಣ (Globalization) ಮತ್ತು ಅಂತರ್ಜಾಲದ (Inetrnet) ತ್ವರಿತ ವಿಸ್ತರಣೆಗೆ ಧನ್ಯವಾದಗಳನ್ನು ಹೇಳಲೆಬೇಕು. ನಾವು ಪ್ರಪಂಚದಾದ್ಯಂತದ ಅನೇಕ ಆಸಕ್ತಿದಾಯಕ ಪಾಕವಿಧಾನಗಳು ಮತ್ತು ಅಡುಗೆ ತಂತ್ರಗಳನ್ನು ನೋಡಿರುತ್ತೇವೆ.


ಇತ್ತೀಚೆಗೆ, ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಐಸ್‌ಲ್ಯಾಂಡ್ ನಲ್ಲಿ ಬ್ರೆಡ್ ಅನ್ನು ಆ ಪ್ರದೇಶದ ಬಿಸಿನೀರಿನ ಬುಗ್ಗೆಗಳಿಂದ ನೈಸರ್ಗಿಕ ಶಾಖವನ್ನು ಬಳಸಿಕೊಂಡು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯು ಪ್ರಪಂಚದಾದ್ಯಂತದ ಕೆಲವು ಅದ್ಭುತ ಆಹಾರ ಸಂಪ್ರದಾಯಗಳು ಮತ್ತು ಪಾಕವಿಧಾನಗಳನ್ನು ಗುರುತಿಸುತ್ತದೆ.


ಏನಿದು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿ?:


ಪ್ರಪಂಚದಾದ್ಯಂತದ ನಗರಗಳು ಮತ್ತು ಗಮ್ಯಸ್ಥಾನಗಳಿಗೆ ಆಗಾಗ್ಗೆ ಯುನೆಸ್ಕೋ ವಿಶ್ವ ಪರಂಪರೆಯ ಟ್ಯಾಗ್ ಅನ್ನು ನೀಡಲಾಗುತ್ತದೆಯೋ, ಅದೇ ರೀತಿಯಾಗಿ ಜನಪ್ರಿಯ ಆಹಾರವನ್ನು ಗುರುತಿಸುವ ಸಲುವಾಗಿ ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬ ಮತ್ತೊಂದು ಪಟ್ಟಿಯನ್ನು ಹೊಂದಿದೆ. ಈ ಅದ್ಭುತ ಪಾಕಶಾಲೆಯ ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತದ ಆಹಾರಗಳು, ಪಾನೀಯಗಳು ಮತ್ತು ಆಹಾರ ಸಂಸ್ಕೃತಿಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.


ದೇಶಗಳು ತಮ್ಮ ವಿನಂತಿಗಳನ್ನು ಮತ್ತು ನಾಮನಿರ್ದೇಶನಗಳನ್ನು ಯುನೆಸ್ಕೋ ಗೆ ಸಲ್ಲಿಸುತ್ತವೆ, ನಂತರ ಅವುಗಳನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ರಚಿಸಲಾದ ಅಂತರ್ ಸರ್ಕಾರಿ ಸಮಿತಿಯು ಆಯ್ಕೆ ಮಾಡುತ್ತದೆ. ಯುನೆಸ್ಕೋ ವೆಬ್‌ಸೈಟ್ ಪ್ರಕಾರ "ಸಮಿತಿಯು 2003 ರ ಒಡಂಬಡಿಕೆಗೆ ರಾಷ್ಟ್ರಗಳು ಪ್ರಸ್ತಾಪಿಸಿದ ನಾಮನಿರ್ದೇಶನಗಳನ್ನು ಮೌಲ್ಯಮಾಪನ ಮಾಡಲು ಮತ್ತು ಆ ಸಾಂಸ್ಕೃತಿಕ ಆಚರಣೆಗಳು ಮತ್ತು ಅಮೂರ್ತ ಪರಂಪರೆಯ ಅಭಿವ್ಯಕ್ತಿಗಳನ್ನು ಕನ್ವೆನ್ಷನ್ ನ ಪಟ್ಟಿಗಳಲ್ಲಿ ಬರೆಯಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ವಾರ್ಷಿಕವಾಗಿ ಸಭೆ ಸೇರುತ್ತದೆ."


ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ವಿಶ್ವದಾದ್ಯಂತದ ಜನಪ್ರಿಯ ಆಹಾರಗಳು ಪ್ರತಿ ವರ್ಷ, ಯುನೆಸ್ಕೋ ವಿವಿಧ ದೇಶಗಳಿಗೆ ಸಂಬಂಧಿಸಿದ ಸಂಪ್ರದಾಯಗಳ ಗುಂಪನ್ನು ಬಿಡುಗಡೆ ಮಾಡುತ್ತದೆ. ಇದು ಚೀನಾದಲ್ಲಿ ಸಿಗುವ ಅವರ ಸಾಂಪ್ರದಾಯಿಕ ಚಹಾ ಸಂಸ್ಕರಣೆಯಾಗಿರಲಿ ಅಥವಾ ಫ್ರಾನ್ಸ್ ನಲ್ಲಿ ಬಗೆಟ್ ಗಳನ್ನು ತಯಾರಿಸುವ ಕಲೆಯಾಗಿರಲಿ, ಈ ಅದ್ಭುತ ಪಟ್ಟಿಯ ಭಾಗವಾಗಿರುವ ಸಾಕಷ್ಟು ಆಹಾರಗಳಿವೆ.


ಇದು ಸಮಗ್ರವಾದ ಪಟ್ಟಿ ಅಲ್ಲದೆ ಇದ್ದರೂ ಸಹ, ಇದು ಖಂಡಿತವಾಗಿಯೂ ಪ್ರಪಂಚದ ಪಾಕಶಾಲೆಯ ಇತಿಹಾಸದ ವಿಶಾಲತೆಯ ಬಗ್ಗೆ ಒಂದು ಸಣ್ಣ ಇಣುಕುನೋಟವನ್ನು ನೀಡುತ್ತದೆ. ನೀವು ಆಹಾರಪ್ರಿಯರಾಗಿದ್ದರೆ ಮತ್ತು ನೀವು ಪ್ರಪಂಚದಾದ್ಯಂತದ ಎಲ್ಲಾ ಅದ್ಭುತ ಆಹಾರಗಳು ಒಮ್ಮೆಯಾದರೂ ಟೇಸ್ಟ್ ಮಾಡಲು ಬಯಸಿದರೆ, ಈ ಪಟ್ಟಿಯು ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಬರುತ್ತದೆ.


ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿರುವ ಮೊದಲ 9 ಜನಪ್ರಿಯ ಆಹಾರಗಳು:


1. ಬಗೆಟ್: ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಬಗೆಟ್ 2022ರಲ್ಲಿ ಎಂದರೆ ಅತ್ಯಂತ ಇತ್ತೀಚಿನ ಸೇರ್ಪಡೆ ಅಂತಾನೆ ಹೇಳಬಹುದು. ಅಂಡಾಕಾರದ ಫ್ರೆಂಚ್ ಬ್ರೆಡ್ ನಿಸ್ಸಂದೇಹವಾಗಿ ದೇಶದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಅದರ ಪರಿಚಿತ ನೋಟದ ಹೊರತಾಗಿಯೂ, ಅದರ ತಯಾರಿಕೆಯಲ್ಲಿ ಸಾಕಷ್ಟು ಜ್ಞಾನ ಮತ್ತು ತಂತ್ರವು ಅಡಗಿದೆ ಅಂತ ಹೇಳಬಹುದು. ಬ್ರೆಡ್ ಹೊರಭಾಗದಲ್ಲಿ ಗರಿಗರಿಯಾಗಿ ಮತ್ತು ಮೃದುವಾಗಿರುತ್ತದೆ ಮತ್ತು ಅನೇಕ ವಿಭಿನ್ನ ಪಾಕವಿಧಾನಗಳ ಭಾಗವಾಗಿ ಪ್ರತಿದಿನ ಸೇವಿಸಲಾಗುತ್ತದೆ.


ಯುನೆಸ್ಕೋ ಮಾನ್ಯತೆಯು ಸಾಂಪ್ರದಾಯಿಕ ಬಗೆಟ್ ಬೇಕರಿಗಳು ಕುಸಿಯುತ್ತಿರುವುದರಿಂದ ಸೂಕ್ತ ಸಮಯದಲ್ಲಿ ಇದಕ್ಕೆ ಮನ್ನಣೆ ಸಿಕ್ಕಿದೆ.


2. ಕಿಮ್ಚಿ: ಕೊರಿಯನ್ ಆಹಾರವಾದ ಕಿಮ್ಚಿ ತಯಾರಿಕೆಯ ಸಾಂಪ್ರದಾಯಿಕ ಕಲೆಯು 2015 ರಲ್ಲಿ ಮಾನ್ಯತೆಯನ್ನು ಗಳಿಸಿತು. ಈ ಹುದುಗಿಸಿದ ತರಕಾರಿ ಭಕ್ಷ್ಯವು ಪ್ರತಿ ಏಷ್ಯನ್ ರೆಸ್ಟೋರೆಂಟ್ ನಲ್ಲಿ ಪ್ರಧಾನವಾಗಿದೆ ಮತ್ತು ಅದಕ್ಕೆ ಸ್ವಲ್ಪ ಹುಳಿ ಮತ್ತು ಜಿಂಗಿ ಪರಿಮಳವನ್ನು ಹೊಂದಿದೆ.


ಕಿಮ್ಚಿ ತಯಾರಿಕೆಯ ಕಲೆಯು ಪ್ರತಿ ಕೊರಿಯನ್ ಮನೆಗೂ ವಿಭಿನ್ನವಾಗಿದೆ ಮತ್ತು ಪಾಕವಿಧಾನಗಳನ್ನು ಸಾಮಾನ್ಯವಾಗಿ ಹತ್ತಿರದ ಮತ್ತು ಪ್ರೀತಿಪಾತ್ರರಿಗೆ ಕಳುಹಿಸಲಾಗುತ್ತದೆ. ಕಿಮ್ಚಿಯನ್ನು ತಯಾರಿಸುವ ಸಂಪ್ರದಾಯವನ್ನು 'ಕಿಮ್ಜಾಂಗ್' ಎಂದು ಕರೆಯಲಾಗುತ್ತದೆ.


3. ನಿಯಾಪೋಲಿಟನ್ ಪಿಜ್ಜಾ: ಸ್ವಾದಿಷ್ಟಕರವಾದ ಟಾಪಿಂಗ್ ಗಳೊಂದಿಗೆ ಅಗ್ರಸ್ಥಾನದಲ್ಲಿರುವ ನಿಯಾಪೋಲಿಟನ್ ಪಿಜ್ಜಾದ ಸ್ಲೈಸ್ ಅನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ನಿಯಾಪೋಲಿಟನ್ ಪಿಜ್ಜಾವನ್ನು ತಯಾರಿಸುವ ಕಲೆಯು ಇಟಲಿಯ ನೇಪಲ್ಸ್ ನಲ್ಲಿ ಹುಟ್ಟಿಕೊಂಡಿತು.


ಹಿಟ್ಟನ್ನು ತಯಾರಿಸುವುದು, ಸಾಂಪ್ರದಾಯಿಕವಾಗಿ ಪಿಜ್ಜಾವನ್ನು ತಯಾರಿಸುವುದು ಮತ್ತು ನಂತರದಲ್ಲಿ ಇದನ್ನು ಒಲೆಯಲ್ಲಿ ಮಾಡುವ ಬೇಕಿಂಗ್ ಇವೆಲ್ಲವೂ ಈ ಅದ್ಭುತ ಪ್ರಕ್ರಿಯೆಯ ಭಾಗವಾಗಿದೆ ಮತ್ತು ಇದನ್ನು ಯುನೆಸ್ಕೋ 2017 ರಲ್ಲಿ ಗುರುತಿಸಿದೆ. ನಿಯಾಪೋಲಿಟನ್ ಪಿಜ್ಜಾ ತಯಾರಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯವನ್ನು 'ಬೊಟೆಗಾ'ದಲ್ಲಿ ಮಾತ್ರ ಕಲಿಯಬಹುದು.


4. ಕಸ್ಕಸ್: ಆಫ್ರಿಕಾದಲ್ಲಿ ಜನಪ್ರಿಯವಾಗುವುದರಿಂದ ಹಿಡಿದು 2020ರಲ್ಲಿ ಜಾಗತಿಕ ಯುನೆಸ್ಕೋ ಮಾನ್ಯತೆಯನ್ನು ಪಡೆಯುವವರೆಗಿನ ಕಸ್ಕಸ್ ತುಂಬಾನೇ ಒಂದು ದೀರ್ಘ ಪ್ರಯಾಣವನ್ನು ಹೊಂದಿದೆ. ಈ ವಿನಮ್ರ ಭಕ್ಷ್ಯದ ತಯಾರಿಯ ಪ್ರಕ್ರಿಯೆಯು ಕೇವಲ ಸೂಕ್ಷ್ಮ ಮತ್ತು ವಿವರವಾದದ್ದು ಮಾತ್ರವಲ್ಲದೇ, ಸ್ವತಃ ಒಂದು ಆಚರಣೆಯೂ ಆಗಿದೆ. ಧಾನ್ಯವನ್ನು ಪಡೆದ ನಂತರ, ಬೀಜಗಳನ್ನು ಅರೆದು, ಕೈಯಿಂದ ಸುತ್ತಿ ನಂತರ ಹಬೆಯಲ್ಲಿ ಬೇಯಿಸಲಾಗುತ್ತದೆ.


ಪರಿಣಾಮವಾಗಿ ಉಂಟಾಗುವ ಧಾನ್ಯದ ಭಕ್ಷ್ಯವನ್ನು ನಂತರ ಬೇಯಿಸಬಹುದು ಮತ್ತು ತರಕಾರಿಗಳು, ಮಾಂಸಗಳು ಅಥವಾ ಆಯ್ಕೆಯ ಇತರ ಯಾವುದೇ ಭಕ್ಷ್ಯದೊಂದಿಗೆ ಜೋಡಿಸಬಹುದು. ಕಸ್ಕಸ್ ತಯಾರಿಕೆಯ ಕಲೆಯನ್ನು ಸಂರಕ್ಷಿಸಿದ ದೇಶಗಳಲ್ಲಿ ಅಲ್ಜೀರಿಯಾ, ಟ್ಯುನೀಷಿಯಾ, ಮೌರಿಟಾನಿಯಾ ಮತ್ತು ಮೊರಾಕ್ಕೊ ಸೇರಿವೆ.


5. ಬೆಲ್ಜಿಯಂನ ಬಿಯರ್: ಬೆಲ್ಜಿಯಂ ನ ಬಿಯರ್ 2016 ರಲ್ಲಿ ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಯಾಯಿತು. ದೇಶದಲ್ಲಿ ಸಾವಿರಾರು ವಿಧದ ಬಿಯರ್ ಗಳನ್ನು ಉತ್ಪಾದಿಸಲಾಗುತ್ತದೆ ಮತ್ತು ಅವುಗಳನ್ನು ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರವಲ್ಲದೆ ದೈನಂದಿನ ಅಡುಗೆಯ ಭಾಗವಾಗಿಯೂ ಸಹ ಬಳಸಲಾಗುತ್ತದೆ. ಬಿಯರ್ ತಯಾರಿಕೆಯ ಈ ಕಲೆಯನ್ನು ಕರಗತ ಮಾಡಿಕೊಂಡ ಬ್ರೂವರ್ ಗಳು ತಮ್ಮ ತರಬೇತಿಯನ್ನು ಹವ್ಯಾಸಿಗಳಿಗೆ ಮತ್ತು ಇತರ ಬಿಯರ್ ಉದ್ಯಮಿಗಳಿಗೆ ರವಾನಿಸುತ್ತಾರೆ.


6. ಹರಿಸ್ಸಾ ಸಾಸ್: 2022 ರ ಯುನೆಸ್ಕೋ ಅಮೂರ್ತ ಹೆರಿಟೇಜ್ ಪಟ್ಟಿಯಲ್ಲಿ ಮತ್ತೊಂದು ಇತ್ತೀಚಿನ ಸೇರ್ಪಡೆ ಅಂತಾನೆ ಹೇಳಬಹುದು. ಹರಿಸ್ಸಾ ಟ್ಯುನೀಷಿಯಾ ಮೂಲದ್ದು ಅಂತ ಹೇಳಲಾಗುತ್ತದೆ. ಇದು ಮೆಣಸುಗಳನ್ನು ಸಂಸ್ಕರಿಸುವ ಮೂಲಕ ತಯಾರಿಸಲಾದ ಮಸಾಲೆಯುಕ್ತ ಮತ್ತು ಖಾರದ ಮಸಾಲೆ ಅಥವಾ ಪೇಸ್ಟ್ ಆಗಿದೆ. ಇದನ್ನು ತಯಾರಿಸುವ ಪ್ರಕ್ರಿಯೆಯು ನಮ್ಮ ಭಾರತೀಯ ಉಪ್ಪಿನಕಾಯಿ ತಯಾರಿಕೆಯನ್ನು ಹೋಲುತ್ತದೆ.


ಮೆಣಸುಗಳನ್ನು ಬಿಸಿಲಿನಲ್ಲಿ ಒಣಗಿಸಿ, ವಿಭಜಿಸಿ, ಡೀಸೀಡ್ ಮಾಡಿ ನಂತರ ತೊಳೆಯಲಾಗುತ್ತದೆ. ಉಪ್ಪು, ಬೆಳ್ಳುಳ್ಳಿ ಮತ್ತು ಕೊತ್ತಂಬರಿಯನ್ನು ಪೇಸ್ಟ್ ಗೆ ರುಬ್ಬಿದ ನಂತರ ಇವುಗಳನ್ನು ಮಸಾಲೆ ಮಾಡಲು ಬಳಸಲಾಗುತ್ತದೆ. ನಂತರ ಹರಿಸ್ಸಾವನ್ನು ಶೇಖರಿಸಿಡಬಹುದು ಮತ್ತು ಅಗತ್ಯಕ್ಕೆ ತಕ್ಕಂತೆ ಅಡುಗೆಯಲ್ಲಿ ಬಳಸಿಕೊಳ್ಳಬಹುದು.


7. ಅರೇಬಿಕ್ ಕಾಫಿ: ಕಾಫಿ ಕುಡಿಯುವ ಸಂಪ್ರದಾಯವು ಮಧ್ಯಪ್ರಾಚ್ಯದಲ್ಲಿ ಮೂಲವನ್ನು ಹೊಂದಿದೆ ಎಂದು ಅನೇಕರು ನಂಬಿದ್ದಾರೆ, ಆದ್ದರಿಂದಲೇ ಯುನೆಸ್ಕೋ ಅದನ್ನು 2015 ರಲ್ಲೇ ತಮ್ಮ ಪಟ್ಟಿಗೆ ಸೇರಿಸಿಕೊಂಡಿತು. ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್, ಸೌದಿ ಅರೇಬಿಯಾ ಮತ್ತು ಕತಾರ್ ನಂತಹ ದೇಶಗಳು ಅರೇಬಿಕ್ ಕಾಫಿಯ ತಯಾರಿಕೆಯ ಅಭ್ಯಾಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ. ಅರೇಬಿಕ್ ಕಾಫಿ ಬೀಜಗಳನ್ನು ಹುರಿದು, ಗಾರೆ ಮತ್ತು ಪೆಸ್ಟಲ್ ನಲ್ಲಿ ಪುಡಿ ಮಾಡಿ, ನಂತರ ತಾಮ್ರದ ಪಾತ್ರೆಯಲ್ಲಿ ಹಾಕಿ ಬೆಂಕಿಯಿಂದ ಬಿಸಿ ಮಾಡಲಾಗುತ್ತದೆ.


8. ಲಾವಾಶ್: ಬ್ರೆಡ್ ತಯಾರಿಸುವ ತಂತ್ರಗಳು ಪ್ರಪಂಚದಾದ್ಯಂತ ಹೇರಳವಾಗಿ ಕಂಡು ಬರುತ್ತವೆ, ಆದರೆ ಅರ್ಮೇನಿಯಾದ ಲಾವಾಶ್ ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ.


ಇದನ್ನು 2014 ರಲ್ಲಿ ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಿಕೊಂಡಿದೆ ಮತ್ತು ಫ್ಲ್ಯಾಟ್ ಬ್ರೆಡ್ ತಯಾರಿಸುವ ಸಂಸ್ಕೃತಿಯ ಭಾಗವಾಗಿ 2016 ರ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸರಳ ಬ್ರೆಡ್ ಕೇವಲ ಎರಡು ಪದಾರ್ಥಗಳನ್ನು ಹೊಂದಿದೆ ಮತ್ತು ಮದುವೆಗಳು ಮತ್ತು ಜನ್ಮದಿನಗಳಂತಹ ಸಮಾರಂಭಗಳ ಪ್ರಮುಖ ಭಾಗವಾಗಿದೆ.


9. ಚೈನೀಸ್ ಟೀ: 2022 ರಲ್ಲಿ ಚೈನೀಸ್ ಟೀ ಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದ್ದು, ಚೀನಾದ ಚಹಾ ತಯಾರಿಸುವ ಸಂಪ್ರದಾಯಗಳು ಹಲವಾರು ಶತಮಾನಗಳಷ್ಟು ಹಿಂದಿನದು ಅಂತ ಹೇಳಲಾಗುತ್ತಿದೆ. ಚಹಾ ಸೇವನೆ, ಚಹಾ ತೋಟಗಳು ಮತ್ತು ಚಹಾ ಹಂಚಿಕೆ ಚೀನೀ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಚೀನಾದಲ್ಲಿ ಮುಖ್ಯವಾಗಿ ಆರು ವಿಧದ ಚಹಾಗಳಿವೆ.


ಬಿಳಿ, ಊಲಾಂಗ್, ಹಸಿರು, ಹಳದಿ ಮತ್ತು ಕಪ್ಪು ವಿಧಗಳಾಗಿದ್ದು, ಇವುಗಳನ್ನು ಸಂಸ್ಕರಿಸಿ 2,000 ಕ್ಕೂ ಹೆಚ್ಚು ವಿವಿಧ ರೀತಿಯ ಚಹಾವನ್ನು ತಯಾರಿಸಲಾಗುತ್ತದೆ. ಈ ಚಹಾವು ಮದುವೆಗಳು ಮತ್ತು ಇತರ ಸಮಾರಂಭಗಳ ಪ್ರಮುಖ ಭಾಗವಾಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು