Weight Loss Tips: ತೂಕ ಇಳಿಸಲು ನಿಮ್ಮ ಜೀವನಶೈಲಿಯಲ್ಲಿ ಈ 8 ಬದಲಾವಣೆಗಳನ್ನು ಮಾಡಿ ಸಾಕು

Tips To Loss Weight : ಉತ್ತಮ ನಿದ್ರೆ, ಒತ್ತಡ ನಿರ್ವಹಣೆ ಮತ್ತು ಆರೋಗ್ಯಕರ ಆಹಾರಗಳ ಸೇವನೆಯ ಜೊತೆಗೆ ತೂಕ ಇಳಿಸುವುದರಲ್ಲಿ ವ್ಯಾಯಾಮ ಕೂಡ ಮುಖ್ಯ ಪಾತ್ರ ವಹಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹಳಷ್ಟು ಮಂದಿ ತೂಕ ಇಳಿಸಿಕೊಳ್ಳಲು(Weight Loss )  ಸಿಕ್ಕಾಪಟ್ಟೆ ಪರಿಶ್ರಮ ಪಡುತ್ತಾರೆ. ಆದರೆ ತೂಕ ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ, ಅಪಾರ ಬದ್ಧತೆ ಮತ್ತು ಸ್ಥಿರತೆಯ ಅಗತ್ಯವಿರುತ್ತದೆ. ಕೇವಲ ವ್ಯಾಯಾಮ ಮತ್ತು ಆಹಾರಕ್ರಮದಿಂದ(Food Style) ಮಾತ್ರ ತೂಕ ಇಳಿಕೆಯಾಗುವುದಿಲ್ಲ, ಅದರ ಜೊತೆಗೆ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಆಯುರ್ವೇದ ತಜ್ಞೆ ಡಾ. ದಿಕ್ಸಾ ಭಾವ್‍ಸ್ವರ್, “ತೂಕ ಇಳಿಸುವಿಕೆಯಲ್ಲಿ ನಿಜಕ್ಕೂ ಆಟವನ್ನು ಬದಲಾಯಿಸುವಂತವಾಗಿರುತ್ತವೆ” ಎಂಬ ಕೆಲವು ಪರ್ಯಾಯಗಳನ್ನು ಸೂಚಿಸಿದ್ದಾರೆ. “

ಸಮರ್ಥನೀಯ ರೀತಿಯಲ್ಲಿ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು, ದಿನಚರಿಯಲ್ಲಿ ಈ ಕೆಳಗಿನ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಲು ತಜ್ಞರು ಸೂಚಿಸುತ್ತಾರೆ.

1) ಬಿಳಿ ಸಕ್ಕರೆ ಬದಲಿಗೆ ಬೆಲ್ಲ
ಬಿಳಿ ಸಕ್ಕರೆಯಲ್ಲಿ ಇರುವುದು ಕೇವಲ ಖಾಲಿ ಕ್ಯಾಲೋರಿಗಳು. ಆದರೆ ಬೆಲ್ಲ ಪೌಷ್ಟಿಕಾಂಶಗಳ ಆಗರ. ಹಾಗಾಗಿ ಸಕ್ಕರೆಯ ಬದಲು ಬೆಲ್ಲ ಸೇವಿಸಿ.

2) ತಣ್ಣೀರಿನ ಬದಲು ಬಿಸಿ ನೀರು
ಬೆಚ್ಚಗಿನ ನೀರು ನಿಮ್ಮ ಜೀರ್ಣಕ್ರಿಯೆಯ ಅಗ್ನಿಯನ್ನು ಹೊತ್ತಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನು ಉತ್ತಮವಾಗಿ ಇರಿಸುತ್ತದೆ. ಅದು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದರಿಂದ ಚಯಾಪಚಯ ಸುಧಾರಿಸುತ್ತದೆ.

ಇದನ್ನೂ ಓದಿ: ಕಲ್ಲಂಗಡಿ ಬೀಜಗಳನ್ನು ಬಿಸಾಡುವ ಮುನ್ನ ಅದರ ಪ್ರಯೋಜನಗಳನ್ನು ಒಮ್ಮೆ ನೋಡಿ

3) ಪ್ರತಿನಿತ್ಯ 5000 -10000 ಹೆಜ್ಜೆ ನಡೆಯುವುದು
ದಿನವಿಡೀ ಚಟುವಟಿಕೆಯಿಂದ ಇರುವುದು (5000 -10000 ಹೆಜ್ಜೆ ನಡೆಯುವುದು) ನಿಮ್ಮ ದೇಹವನ್ನು ಚಟುವಟಿಕೆಯಿಂದ ಇಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಅತ್ಯುತ್ತಮವಾಗಿ ಇರಿಸುತ್ತದೆ.

4) ಹಣ್ಣಿನ ರಸದ ಬದಲು ಹಣ್ಣಿನ ಸೇವನೆ
ಹಣ್ಣಿನ ರಸವನ್ನು ಸೇವಿಸಿದಾಗ, ಫೈಬರ್ ಅನ್ನು ಕಳೆದುಕೊಳ್ಳುತ್ತೀರಿ ಮತ್ತು ಅದು ದ್ರವವಾಗಿರುವುದರಿಂದ ಹೆಚ್ಚು ಕುಡಿಯುತ್ತೀರಿ. ಆದರೆ ಹಣ್ಣುಗಳನ್ನು ತಿನ್ನುವಾಗ, ಅವುಗಳು ಜೀರ್ಣವಾಗುವ ಪ್ರಕ್ರಿಯೆ ನಮ್ಮ ಬಾಯಿಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಫೈಬರ್ ಹಾಗೆಯೇ ಇರುತ್ತದೆ. ಅದ್ದರಿಂದ ನೀವು ಅನ್ನು ಪ್ರಮಾಣಬದ್ಧವಾಗಿ ತಿನ್ನುತ್ತೀರಿ.

5) ಊಟ ತಪ್ಪಿಸದೆ, ಒಳ್ಳೆಯ ಊಟ ಮಾಡುವುದು
ಯಾವತ್ತೂ ಊಟ ತಪ್ಪಿಸಬೇಡಿ, ಅದು ಅನಾರೋಗ್ಯಕರ. 10 ರಿಂದ 2 ಗಂಟೆಯವರೆಗೆ ಮಧ್ಯಮದಿಂದ ಭಾರಿ ಊಟ ಮಾಡಲು ಸೂಕ್ತ ಸಮಯ (ಅದು ಪಿತ್ತಕಾಲವಾದ್ದರಿಂದ, ಆ ಸಮಯದಲ್ಲಿ ಚಯಾಪಚಯವು ಉತ್ತಮವಾಗಿ ಇರುತ್ತದೆ).

6) ಭಾರಿ ಮತ್ತು ತಡ ರಾತ್ರಿ ಭೋಜನದ ಬದಲು ಬೇಗನೆಯ ಹಗುರ ಊಟ
ಸೂರ್ಯಾಸ್ಥದ ನಂತರ ಚಯಾಪಚಯ ಕಡಿಮೆ ಆಗುತ್ತದೆ, ಹಾಗಾಗಿ ಬೇಗ ಊಟ ಮಾಡಿ ಮತ್ತು ಅದು ಹಗುರವಾಗಿ ಇರಲಿ (ರಾತ್ರಿ 8 ಗಂಟೆಯ ಮೊದಲು ಉತ್ತಮ). ತಡ ರಾತ್ರಿ ಭರ್ಜರಿಯಾಗಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

7) ಬೇಗನೆ ನಿದ್ರಿಸುವುದು
ನಿದ್ರಿಸುವಾಗ ನಮ್ಮ ಯಕೃತ್ತು ನಿರ್ವಿಷೀಕರಣ ಕಾರ್ಯದಲ್ಲಿ ತೊಡಗುತ್ತದೆ. ಹಾಗಾಗಿ ಬೇಗನೇ ತೂಕ ಇಳಿಸಿಕೊಳ್ಳಬೇಕು ಎಂದಿದ್ದರೆ, 10 ಗಂಟೆಗೆ ಮುನ್ನವೇ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

8) ಜಡ ಜೀವನದ ಬದಲು ವ್ಯಾಯಾಮ

ಇದನ್ನೂ ಓದಿ: ತೂಕ ಇಳಿಸೋಕೆ ರೆಡ್​ ವೈನ್​ ಕುಡಿಬೇಕಂತೆ -ಆಶ್ಚರ್ಯವಾದ್ರೂ ಸತ್ಯ

ಉತ್ತಮ ನಿದ್ರೆ, ಒತ್ತಡ ನಿರ್ವಹಣೆ ಮತ್ತು ಆರೋಗ್ಯಕರ ಆಹಾರಗಳ ಸೇವನೆಯ ಜೊತೆಗೆ ತೂಕ ಇಳಿಸುವುದರಲ್ಲಿ ವ್ಯಾಯಾಮ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಯೋಗ, ನಡಿಗೆ, ಜಾಗಿಂಗ್, ಸೈಕ್ಲಿಕ್, ಜಿಮ್, ಈಜು ಇತ್ಯಾದಿಗಳಲ್ಲಿ ನಿಮಗೆ ಹೊಂದುವ ಯಾವುದೇ ವ್ಯಾಯಾಮ ರೂಢಿಸಿಕೊಳ್ಳಿ, ಒಟ್ಟಿನಲ್ಲಿ ಚಟುವಟಿಕೆಯಿಂದಿರಿ.
Published by:Sandhya M
First published: