• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Relationship Tips: ನಿಮ್ಮ ಸಂಗಾತಿ ಯಾವಾಗ್ಲೂ ಬೈಯ್ಯುತ್ತಾರಾ? ಹಾಗಾದ್ರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು ಹುಷಾರ್​!

Relationship Tips: ನಿಮ್ಮ ಸಂಗಾತಿ ಯಾವಾಗ್ಲೂ ಬೈಯ್ಯುತ್ತಾರಾ? ಹಾಗಾದ್ರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು ಹುಷಾರ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾವನಾತ್ಮಕ ನಿಂದನೆಯು ಮನಸಿನ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಉಂಟುಮಾಡುತ್ತದೆ. ಅದು ಒಬ್ಬ ವ್ಯಕ್ತಿಯು ತನ್ನ ವಿವೇಕವನ್ನೇ ಅನುಮಾನಿಸುವಂತೆ ಮಾಡುತ್ತದೆ. ದೈಹಿಕ ಗಾಯಗಳಾದರೆ ನಮಗೆ ಕಾಣುತ್ತವೆ. ಆದರೆ ಮನಸಿನ ನೋವು ಯಾರಿಗೂ ಕಾಣುವುದಿಲ್ಲ. ಇಂಥ ಭಾವನಾತ್ಮಕ ನಿಂದನೆಯಿಂದ ಮನಸಿನ ಮೇಲಾಗುವ ಗಾಯಗಳು, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮುಂದೆ ಓದಿ ...
  • Share this:

ಜೀವನ ಸಂಗಾತಿ (Life Partner) ಎಂದರೆ ಅವರು ನಮ್ಮೆಲ್ಲ ಕಷ್ಟ ಸುಖದಲ್ಲಿ ಭಾಗಿಯಾಗಬೇಕಾದವರು. ನಾವು ನೋವಿನಲ್ಲಿದ್ದಾಗ ಸಾಂತ್ವನ ಹೇಳಬೇಕಾದವರು. ಭಾವನಾತ್ಮಕಾಗಿ ಬೆಂಬಲ (Emotional Support) ನೀಡಬೇಕಾದವರು. ಆದರೆ ಕೆಲವೊಮ್ಮೆ ಸಂಗಾತಿಗಳು ಇದಕ್ಕೆ ವಿರುದ್ಧವಾಗಿರುತ್ತಾರೆ. ಭಾವನೆಗಳನ್ನು (Feelings)  ಅರ್ಥಮಾಡಿಕೊಳ್ಳದೇ ನಿಂದಿಸುತ್ತಿರುತ್ತಾರೆ. ಆದರೆ ಬಹಳಷ್ಟು ಜನರಿಗೆ ಇದರ ಅರಿವೇ ಇಲ್ಲದೇ ಮಾನಸಿಕವಾಗಿ ನೋವನ್ನು (Mentally Pain) ಅನುಭವಿಸುತ್ತಿರುತ್ತಾರೆ. ಹೌದು… ನಿಮ್ಮ ಜೊತೆಗಾರರು ಭಾವನಾತ್ಮಕವಾಗಿ ನಿಂದಿಸುತ್ತಿದ್ದರೆ ಅದನ್ನು ಗುರುತಿಸುವುದು ಸುಲಭವಲ್ಲ ಎನ್ನುತ್ತಾರೆ ತಜ್ಞರು. ಸಂಬಂಧದಲ್ಲಿ ಭಾವನಾತ್ಮಕ ನಿಂದನೆಯನ್ನು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು ಕಷ್ಟ. ಏಕೆಂದರೆ ವ್ಯಕ್ತಿಯೊಬ್ಬ ತನ್ನ ಸಂಗಾತಿಯೊಂದಿಗೆ ಒಂದು ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತಾರೆ.


zodiac sign, marriage jataka, astrology, wedding jataka, marriage relationship, kannada news, karnataka news, ರಾಶಿ ಸ್ವಭಾವಗಳು, ಮದುವೆ ಶಾಸ್ತ್ರ , ಲಗ್ನ ದೋಷ, ಮದುವೆ ಸಂಬಂಧ,
ಸಾಂದರ್ಭಿಕ ಚಿತ್ರ


ಜೊತೆಗೆ ಅನೇಕ ಸಂದರ್ಭಗಳಲ್ಲಿ ಒಬ್ಬರ ಮೇಲೊಬ್ಬರು ಅವಲಂಬಿಸಬೇಕಾಗಿರುತ್ತದೆ. ಹೀಗಿರುವಾಗ ಒಬ್ಬರಿಲ್ಲದೇ ಮತ್ತೊಬ್ಬರ ಜೀವನವನ್ನು ನೆನೆಸಿಕೊಳ್ಳುವುದೂ ಅವರ ಪಾಲಿಗೆ ಕಷ್ಟವಾಗಬಹುದು. ಆದರೆ ನೆನಪಿಸಿ, ಭಾವನಾತ್ಮಕ ನಿಂದನೆಯನ್ನು ಅನುಭವಿಸುತ್ತಲೇ ಇರುವುದು, ಅದನ್ನು ಪ್ರತಿಭಟಿಸದಿರುವುದು ಹಾಗೂ ಅದರಿಂದ ಹೊರಗೆ ಬರಲು ಪ್ರಯತ್ನಿಸದಿರುವುದು ಜೊತೆಗೆ ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುವುದು ನಿಮ್ಮ ದುಃಖವನ್ನು ಹೆಚ್ಚು ಮಾಡುತ್ತದೆ.


ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು!


ಭಾವನಾತ್ಮಕ ನಿಂದನೆಯು ಮನಸಿನ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಉಂಟುಮಾಡುತ್ತದೆ. ಅದು ಒಬ್ಬ ವ್ಯಕ್ತಿಯು ತನ್ನ ವಿವೇಕವನ್ನೇ ಅನುಮಾನಿಸುವಂತೆ ಮಾಡುತ್ತದೆ. ದೈಹಿಕ ಗಾಯಗಳಾದರೆ ನಮಗೆ ಕಾಣುತ್ತವೆ. ಆದರೆ ಮನಸಿನ ನೋವು ಯಾರಿಗೂ ಕಾಣುವುದಿಲ್ಲ. ಇಂಥ ಭಾವನಾತ್ಮಕ ನಿಂದನೆಯಿಂದ ಮನಸಿನ ಮೇಲಾಗುವ ಗಾಯಗಳು, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


ಅದಕ್ಕಾಗಿ ಮೊದಲು ಭಾವನಾತ್ಮಕ ನಿಂದನೆಯನ್ನು ಗುರುತಿಸುವುದು ಮುಖ್ಯ. ನಂತರದಲ್ಲಿ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಮಾನಸಿಕ ಆರೋಗ್ಯ ತಜ್ಞರಿಂದ ಬೆಂಬಲವನ್ನು ಪಡೆದು ಅದರಿಂದ ಮುಕ್ತಿ ಪಡೆಯುವುದು ಬಹಳ ಮುಖ್ಯ. ಎಮೋಷನಲ್‌ ಅಬ್ಯುಸ್‌ ಅಥವಾ ಭಾವನಾತ್ಮಕ ನಿಂದನೆಯು ಸೂಕ್ಷ್ಮವಾಗಿರಬಹುದು ಹಾಗೂ ಅದನ್ನು ಪತ್ತೆಹಚ್ಚಲು ಕಷ್ಟವಾಗಬಹುದು. ಆದರೆ ಇದು ಬಹಳ ಅಪಾಯಕಾರಿ. ಸಂಬಂಧದಲ್ಲಿನ ಭಾವನಾತ್ಮಕ ನಿಂದನೆಯು ವ್ಯಕ್ತಿಯ ಸ್ವಯಂ-ಮೌಲ್ಯ, ಐಡೆಂಟಿಟಿ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.


ಭಾವನಾತ್ಮಕ ನಿಂದನೆಯ ಪರಿಣಾಮಗಳು


"ಭಾವನಾತ್ಮಕ ನಿಂದನೆಯು ಸುಳ್ಳಾಗಿರಬಹುದು. ಅಲ್ಲವೇ ಇವು ಬೈಗುಳಗಳಿಂದ ಕೂಡಿರುವಂಥ ಅವಮಾನ, ಬೆದರಿಕೆ ಮುಂತಾದ ರೂಪಗಳಲ್ಲಿರಬಹುದು. ಇದು ವ್ಯಕ್ತಿಯ ಭಾವನಾತ್ಮಕ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದರೊಂದಿಗೆ ಮಾನಸಿಕ ಅಸ್ವಸ್ಥತೆಗಳನ್ನು ಅದು ಉಂಟುಮಾಡಬಹುದು. ಅಲ್ಲದೇ ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುವ ಗಂಭೀರ ಸಮಸ್ಯೆಯಾಗಿದೆ " ಎಂದು ಸೈಕೋಥೆರಪಿಸ್ಟ್, ಲೈಫ್ ಕೋಚ್, ಬಿಸಿನೆಸ್ ಕೋಚ್, NLP ತಜ್ಞ, ಹೀಲರ್, ಮತ್ತು ಗೇಟ್‌ವೇ ಆಫ್ ಹೀಲಿಂಗ್ನ ನಿರ್ದೇಶಕರಾಗಿರುವ ಡಾ. ಚಾಂದಿನಿ ತುಗ್ನೈಟ್ ಹೇಳುತ್ತಾರೆ.


ಸಾಂದರ್ಭಿಕ ಚಿತ್ರ


"ಭಾವನಾತ್ಮಕ ನಿಂದನೆಯ ಕೆಲವು ಲಕ್ಷಣಗಳು ಆತಂಕ, ಖಿನ್ನತೆ, ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆ ಮುಂತಾದವುಗಳನ್ನು ಒಳಗೊಂಡಿರಬಹುದು. ಕೆಲವು ಸಂದರ್ಭಗಳಲ್ಲಿ, ಭಾವನಾತ್ಮಕ ನಿಂದನೆಯು ದೈಹಿಕ ದುರುಪಯೋಗಕ್ಕೆ ಕಾರಣವಾಗಬಹುದು. ಏಕೆಂದರೆ ನಿಂದನೀಯ ಪಾಲುದಾರರು ತಮ್ಮ ಹಿಂಸಾತ್ಮಕ ನಡವಳಿಕೆಯನ್ನು ಸಮರ್ಥಿಸಲು ಭಾವನಾತ್ಮಕ ಕುಶಲತೆಯನ್ನು ಬಳಸುತ್ತಾರೆ" ಎಂದು ಡಾ ಚಾಂದಿನಿ ವಿವರಿಸುತ್ತಾರೆ.


ಭಾವನಾತ್ಮಕ ನಿಂದನೆಯು ಯಾವುದೇ ಸಂಬಂಧದಲ್ಲಿ ಸಂಭವಿಸಬಹುದು. ಜೊತೆಗೆ ಅದು ಕೇವಲ ರೊಮ್ಯಾಂಟಿಕ್‌ ರಿಲೇಶನ್‌ಶಿಪ್‌ಗೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ಸ್ನೇಹಿತ, ತಾಯಿ, ತಂದೆ, ಶಿಕ್ಷಕ ಅಥವಾ ಇತರ ಯಾವುದೇ ವ್ಯಕ್ತಿ ಇದಕ್ಕೆ ಕಾರಣವಾಗಬಹುದು. ಹಾಗಿದ್ದರೆ ನಿಮ್ಮ ಸಂಬಂಧದಲ್ಲಿ ಭಾವನಾತ್ಮಕ ನಿಂದನೆಯ ಕೆಲವು ಚಿಹ್ನೆಗಳು ಯಾವವು? ಅವುಗಳನ್ನು ಕಂಡುಹಿಡಿಯುವುದು ಹೇಗೆ ಎಂಬುದರ ಕುರಿತಾದ ವಿವರಗಳು ಇಲ್ಲಿವೆ:


ಭಾವನಾತ್ಮಕ ನಿಂದನೆಯ ಚಿಹ್ನೆಗಳು


1. ಕೀಳರಿಮೆ ಅಥವಾ ನಿರಂತರ ಟೀಕೆ: ಇದು ಅತಿಯಾದ ಮತ್ತು ಕೀಳುಮಟ್ಟದ ಟೀಕೆಯನ್ನು ಒಳಗೊಂಡಿರುತ್ತದೆ. ತಮ್ಮ ಸಂಗಾತಿಯನ್ನು ನಿರಂತರವಾಗಿ ಟೀಕಿಸುವ ಮೂಲಕ ಅವರನ್ನು ನಿಂದಿಸಲಾಗುತ್ತದೆ. ಹೀಗೆ ವ್ಯಕ್ತಿಯನ್ನು ನಿರಂತರವಾಗಿ ಟೀಕಿಸುವ ಅಥವಾ ಅವಮಾನಿಸುವ ಪಾಲುದಾರನು ಭಾವನಾತ್ಮಕ ನಿಂದನೆಯನ್ನು ಮಾಡುತ್ತಾನೆ. ಹೀಗೆ ಕೀಳಾಗಿ ನೋಡುವುದು, ಟೀಕೆಗೆ ಒಳಗಾಗುವುದರಿಂದ ನೀವು ಮಾನಸಿಕವಾಗಿ ಕುಗ್ಗಿಹೋಗುತ್ತೀರಿ.


2. ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕಿಸುವುದು: ಭಾವನಾತ್ಮಕವಾಗಿ ನಿಂದಿಸುವ ಸಂಗಾತಿಯು ನೀವು ಯಾರೊಂದಿಗೆ ಸಂವಹನ ನಡೆಸುತ್ತೀರಿ ಎಂಬುದನ್ನು ಗುರುತಿಸಿ ಅದನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಕುಟುಂಬದೊಳಗೆ ನಿಮ್ಮ ಆಪ್ತರನ್ನು ಬಿಟ್ಟುಕೊಳ್ಳದೇ ಅವರನ್ನು ಪ್ರತ್ಯೇಕಿಸಬಹುದು. ಹೀಗೆ ಮಾಡುವ ಮೂಲಕ ಅವರ ಪ್ರೀತಿಪಾತ್ರರು ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಮನವರಿಕೆ ಮಾಡಬಹುದು.


men who lack interest in relationship may have risk of early death japanese study
ಸಾಂದರ್ಭಿಕ ಚಿತ್ರ


3. ಹಣಕಾಸಿನ ಮೇಲಿನ ನಿಯಂತ್ರಣ: ನಿಂದನೆ ಮಾಡುವಂಥ ಸಂಗಾತಿಯು ಬೇರೆ ಬೇರೆ ವಿಷಯಗಳಿಗೆ ನಿಯಂತ್ರಣ ಹೇರಬಹುದು. ನಿಮ್ಮ ಜೀವನದ ವಿವಿಧ ಅಂಶಗಳನ್ನು ನಿಯಂತ್ರಿಸಲು ಯತ್ನಿಸಬಹುದು. ನೀವು ಯಾವ ಬಟ್ಟೆ ಹಾಕಿಕೊಂಡರೂ ತಪ್ಪು ಎಂಬಂತೆ ನಡೆದುಕೊಳ್ಳುವುದು, ನಿಮಗೆ ಇಷ್ಟವಿಲ್ಲದಿದ್ದರೂ ಹೀಗೆಯೇ ಮಾಡಬೇಕೆಂದು ಆಜ್ಞೆ ಮಾಡುವುದು, ನಿಮ್ಮ ಒಪ್ಪಿಗೆಯಿಲ್ಲದೆ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ನಿಮ್ಮ ಇಷ್ಟಗಳನ್ನು ಕಡೆಗಣಿಸುವುದು, ಅಲ್ಲದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ನಿಮಗೆ ಯಾವುದೇ ಮಾಹಿತಿ ನೀಡದೇ ಇರುವುದು, ನಿಮ್ಮ ಸಲಹೆಗಳನ್ನು ನಿರ್ಲಕ್ಷಿಸುವಂತೆ ನಡೆದುಕೊಳ್ಳುತ್ತಾರೆ.


4. ಕುಶಲತೆ ಮತ್ತು ತಪ್ಪಿತಸ್ಥ ಭಾವನೆ: ಭಾವನಾತ್ಮಕವಾಗಿ ನಿಂದಿಸುವ ವ್ಯಕ್ತಿಗಳು ಬೇರೆಯವರ ಮೇಲೆ ತಪ್ಪುಗಳನ್ನು ಹೊರಿಸುವಲ್ಲಿ ನಿಸ್ಸೀಮರಾಗಿರುತ್ತಾರೆ. ಆದ್ದರಿಂದ ನೀವೇ ತಪ್ಪಿತಸ್ಥರು ಎಂಬ ಭಾವನೆ ಬರುವಂತೆ ಅವರು ಕುಶಲ ತಂತ್ರಗಳನ್ನು ಬಳಸುತ್ತಾರೆ. ಅವರ ಬೇಡಿಕೆಗಳನ್ನು ಅನುಸರಿಸಲು ನಿಮ್ಮನ್ನು ಒತ್ತಾಯಿಸುತ್ತಾರೆ. ಜೊತೆಗೆ ಅವರ ಅಸಮಾಧಾನಗಳಿಗೆ ಅಥವಾ ಅತೃಪ್ತಿಗಳಿಗೆ ನೀವೇ ಜವಾಬ್ದಾರರು ಅನ್ನೋ ಹಾಗೆ ನಡೆದುಕೊಳ್ಳುತ್ತಾರೆ. ಈ ಮೂಲಕ ನಿಮ್ಮ ತಪ್ಪಿಲ್ಲದಿದ್ದರೂ ನೀವೇ ತಪ್ಪಿಸ್ಥರು ಎಂಬ ಭಾವನೆ ಮೂಡುವಂತೆ ಮಾಡುತ್ತಾರೆ.


5. ನಿರ್ಲಕ್ಷಿಸುವುದು ಅಥವಾ ತಿರಸ್ಕಾರ: ಭಾವನಾತ್ಮಕ ನಿಂದನೆಯು ನಿಮ್ಮನ್ನು ನಿರ್ಲಕ್ಷಿಸುವುದಾಗಿದೆ. ನಿಮ್ಮ ಭಾವನೆಗಳು, ಅಭಿಪ್ರಾಯಗಳು ಮತ್ತು ಅಗತ್ಯಗಳಿಗೆ ತಿರಸ್ಕಾರವನ್ನು ತೋರಿಸುವುದನ್ನು ಇದು ಒಳಗೊಂಡಿರುತ್ತದೆ. ಇದನ್ನು ಪದೇ ಪದೇ ಅನುಭವಿಸುವುದರಿಂದ ನೀವು ಮಾನಸಿಕವಾಗಿ ಕುಗ್ಗುವುದು ಮಾತ್ರವಲ್ಲದೇ, ಒತ್ತಡ, ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಉಂಟಾಗಬಹುದು.


6. ಮೌಖಿಕ ಬೆದರಿಕೆಗಳು: ಬೈಯ್ಯುವುದು ಹಾಗೂ ಯಾವಾಗಲೂ ಹೆಸರಿಸುವಂಥ ಸಂಗಾತಿಯ ಮಾನಸಿಕ ನಿಂದನೆ ಮಾಡುತ್ತಿದ್ದಾನೆ ಎಂಬುದರ ಸ್ಪಷ್ಟ ಉದಾಹರಣೆಯಾಗಿದೆ. ನಿಮಗೆ ಹಾನಿ ಮಾಡುವಂಥ ಅಥವಾ ನಿಮ್ಮ ಹತ್ತಿರದವರಿಗೆ, ಕುಟುಂಬದವರಿಗೆ ಅಪಾಯ ಮಾಡುತ್ತೇನೆ ಎಂಬಂಥ ಬೆದರಿಕೆ ಇರಬಹುದು ಅಥವಾ ನನ್ನ-ನಿನ್ನ ಸಂಬಂಧ ಕೊನೆಯಾಗುತ್ತದೆ ಎಂಬಂಥ ಬೆದರಿಕೆ ಇರಬಹುದು. ಇಂಥ ಬೆದರಿಕೆಗಳು ಮಾನಸಿಕ ನಿಂದನೆಯ ಸಂಕೇತಗಳಾಗಿವೆ.


7.‌ ನಿಮ್ಮನ್ನು ನೀವೇ ಅನುಮಾನಿಸುವಂತೆ ಮಾಡುವುದು: ಈ ರೀತಿಯ ಭಾವನಾತ್ಮಕ ನಿಂದನೆಯು ನಿಮಗೆ ನೀಡುವ ಭಾವನಾತ್ಮಕ ಆಘಾತವಾಗಿದೆ. ಇದು ನಿಮ್ಮ ನೆನಪುಗಳು, ಗ್ರಹಿಕೆಗಳು ಅಥವಾ ವಿವೇಕವನ್ನು ಅನುಮಾನಿಸುವಂತೆ ಮಾಡುತ್ತದೆ. ಜೊತೆಗೆ ನಿಮ್ಮ ಭಾವನೆಗಳು ಮತ್ತು ಅನುಭವಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ.


8. ಭಾವನಾತ್ಮಕ ನಿರ್ಲಕ್ಷ್ಯ : ಭಾವನಾತ್ಮಕ ನಿಂದನೆಯು ಭಾವನಾತ್ಮಕ ನಿರ್ಲಕ್ಷ್ಯವನ್ನು ಒಳಗೊಂಡಿರುತ್ತದೆ. ನಿಮ್ಮ ಭಾವನೆಗಳಿಗೆ ಯಾವುದೇ ಬೆಲೆ ಕೊಡದೇ ಇರುವುದು ಇದರ ಸಂಕೇತ. ಜೊತೆಗೆ ಪ್ರೀತಿ, ವಿಶ್ವಾಸ, ಬೆಂಬಲವನ್ನು ನೀಡದೇ ಇರುವುದು, ನಿಮ್ಮನ್ನು ಶಿಕ್ಷಿಸಲು ಕುಶಲತೆಯಿಂದ ನಡೆಸುಕೊಳ್ಳುವುದು ಅಲ್ಲದೇ ನಿಮ್ಮನ್ನು ನಿಯಂತ್ರಿಸಲು ಬೆಂಬಲಿಸುಂತೆ ನಡೆದುಕೊಳ್ಳುವುದನ್ನೂ ಇದು ಒಳಗೊಂಡಿದೆ.


"ನೀವು ಈ ಮೇಲಿನ ಯಾವುದೇ ಚಿಹ್ನೆಗಳನ್ನು ಅನುಭವಿಸುತ್ತಿದ್ದರೆ, ಪರಿಸ್ಥಿತಿಯು ಅನಾರೋಗ್ಯಕರ ಮತ್ತು ಭಾವನಾತ್ಮಕವಾಗಿ ನಿಂದನೀಯವಾಗಿದೆ ಎಂದು ಅರಿತುಕೊಳ್ಳಿ. ಇದರಿಂದ ಹೊರಬರಲು ಮಾನಸಿಕ ಆರೋಗ್ಯ ತಜ್ಞರು, ಸಂಬಂಧ ತಜ್ಞರು ಅಥವಾ ಲೈಫ್‌ ಕೋಚ್‌ಗಳನ್ನು ಭೇಟಿಯಾಗಿ. ನಂಬಿಗಸ್ಥ ಸ್ನೇಹಿತರು, ಕುಟುಂಬ, ವೃತ್ತಿಪರರ ಸಹಾಯ ಪಡೆಯಿರಿ. ಅಲ್ಲದೇ ಪ್ರತಿಯೊಬ್ಬರೂ ಪ್ರೀತಿಯ, ಬೆಂಬಲ ಮತ್ತು ಗೌರವಾನ್ವಿತ ಸಂಬಂಧಕ್ಕೆ ಅರ್ಹರು ಎಂಬುದನ್ನು ನೆನಪಿಡಿ ಎಂದು ಡಾ. ಚಾಂದಿನಿ ಹೇಳುತ್ತಾರೆ.




Relationship Tips: ನಿಮ್ಮ ಸಂಗಾತಿ ನಿಮಗೆ ಮೋಸ ಮಾಡ್ತಾ ಇದ್ದಾರೆ ಅಂತ ತಿಳ್ಕೋಬೇಕಾ? ಈ ಟಿಪ್ಸ್​ ಫಾಲೋ ಮಾಡಿ


ಒಟ್ಟಾರೆ, ಸಂಗಾತಿ ಎಂದಮೇಲೆ ಅಲ್ಲಿ ಬೆಟ್ಟದಷ್ಟು ಪ್ರೀತಿ, ನಂಬುಗೆ, ವಿಶ್ವಾಸ ಹಾಗೂ ಚಿಕ್ಕದೊಂದು ಹೊಂದಾಣಿಕೆ ಇರಬೇಕಾದದ್ದು ಸಾಮಾನ್ಯ. ಆದರೆ ನಾವು ನಂಬಿರುವ ಸಂಗಾತಿಯೇ ನಮ್ಮ ಮೇಲೆ ಮಾನಸಿಕ ನಿಂದನೆ ಮಾಡುತ್ತಾರೆಂದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೆ ಪ್ರತಿಯೊಬ್ಬರ ಬದುಕೂ ಮುಖ್ಯ. ಅವರ ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವೂ ಮುಖ್ಯ. ನಿಮ್ಮ ಬದುಕಿನ ಬಗ್ಗೆ ನೀವೇ ಹೆಚ್ಚು ಕಾಳಜಿ ವಹಿಸಬೇಕು. ಆದ್ದರಿಂದ ಇಂಥ ಸಮಸ್ಯೆಗಳಿಂದ ಆದಷ್ಟು ಬೇಗ ಹೊರಬರಬೇಕು. ಹಾಗಾಗಿ ಯಾರಿಗೆಲ್ಲ ಇಂಥ ಭಾವನಾತ್ಮಕ ನಿಂದನೆ ಆಗುತ್ತಿದೆ ಎನಿಸುತ್ತಿದೆಯೋ ಅವರು ಆದಷ್ಟು ಬೇಗ ಅಂಥ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನ ಪಡುವುದು ಮುಖ್ಯ.

top videos
    First published: