Marriage: ಇಂಥವರನ್ನು ಮದುವೆಯಾಗುವ ಮುನ್ನ ಒಮ್ಮೆ ಯೋಚಿಸಿ

Marriage Tips: ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತೆ. ಆದ್ರೆ, ಅದು ಗಡಿ ದಾಟಿದ್ರೆ, ಬಾಂಧವ್ಯ ಉಳಿಯುವುದಿಲ್ಲ. ನಾನು, ನನ್ನದು, ನಾನು ಹೇಳುವುದನ್ನೇ ಕೇಳು, ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನ ತೋರಿಸುವವರಿಂದ ದೂರವಿರುವುದು ಉತ್ತಮ.

ಮದುವೆ

ಮದುವೆ

 • Share this:
  ಮದುವೆಯನ್ನು(Marriage) ಜೀವನದ(Life) ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ . ಒಬ್ಬರು ಸಂತೋಷ(Happiness) ಮತ್ತು ಒಡನಾಟಕ್ಕಾಗಿ ಮದುವೆಯಾಗುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು(Dream) ಕಟ್ಟಿಕೊಂಡಿರುತ್ತಾರೆ.. ಮದುವೆಯೆಂಬುದು ಸ್ವರ್ಗದಲ್ಲಿ(Heaven) ನಿಶ್ಚಯವಾಗಿದೆ ಎಂದು ಭಾವಿಸಿ ಕೆಲವರು ಮದುವೆಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.. ಪ್ರೀತಿಸಿ ಮದುವೆಯಾದವರು ಕೂಡ ಹೊಂದಾಣಿಕೆ ಇಲ್ಲದೆ ಸಾಮರಸ್ಯ ಇಲ್ಲದೆ ತಮ್ಮ ದಾಂಪತ್ಯವನ್ನು ವಿಚ್ಛೇದನದಲ್ಲಿ(Divorce) ಅಂತ್ಯಗೊಳಿಸುತ್ತಾರೆ.. ಹೀಗಾಗಿ ನೀವು ಮದುವೆಯಾಗುವ ಮುನ್ನ ಈ ಲಕ್ಷಣಗಳು ಇದ್ದರೆ ನೀವು ಅವರಿಂದ ದೂರ ಇರುವುದೇ ಒಳಿತು..

  1)ಸರ್ವಾಧಿಕಾರಿ ಲಕ್ಷಣ: ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕ ಆಯ್ಕೆಗಳು ಇರುತ್ತವೆ.. ತಮ್ಮಿಷ್ಟದಂತೆ ತಮ್ಮ ಬದುಕು ಆರಿಸಿಕೊಳ್ಳುವ ಆಯ್ಕೆ ಪ್ರತಿಯೊಬ್ಬರ ಕನಸಾಗಿರುತ್ತದೆ.. ಆದರೆ ನಿಮ್ಮ ಸಂಗಾತಿ ನಿಮ್ಮನ್ನು ಎಲ್ಲದಕ್ಕೂ ನಿಯಂತ್ರಣ ಮಾಡುತ್ತಿರುತ್ತಾರೆ. ಉದಾಹರಣೆಗೆ ಇದನ್ನೇ ತಿನ್ನಿ, ಈ ಉಡುಗೆಯನ್ನೇ ಧರಿಸಿ, ಸೊಂಟವನ್ನ ಹೀಗೆ ಇಟ್ಟು, ಇಲ್ಲಿ ನಿಂತುಕೊಳ್ಳಿ.. ಈ ರೀತಿ ಪ್ರತಿ ವಿಷಯದಲ್ಲೂ ತನ್ನ ನೆರೆಹೊರೆಯವರನ್ನ ನಿಯಂತ್ರಿಸುವ ಗುಣಲಕ್ಷಣಗಳನ್ನ ಹೊಂದಿರುವ ವ್ಯಕ್ತಿ ಕೂಡ ಉತ್ತಮ ಸಂಗಾತಿಯಾಗಲು ಸಾಧ್ಯವಿಲ್ಲ.

  ಇದನ್ನೂ ಓದಿ: 35 ವರ್ಷಗಳ ಬಳಿಕ ಲವ್ ಸಕ್ಸಸ್: 65ನೇ ವಯಸ್ಸಿನಲ್ಲಿ ಮದುವೆಯಾದ ಮೈಸೂರಿನ ಜೋಡಿ

  2)ಗೌರವ ಮತ್ತು ಅದ್ಯತೆ ನೀಡದ ವ್ಯಕ್ತಿ: ಗೌರವ ಮತ್ತು ಅದ್ಯತೆ ನೀಡುವುದು ಪರಸ್ಪರ ಸಂಗಾತಿಗಳ ಕರ್ತವ್ಯ ಆಗಿರುತ್ತೆ. ಮದುವೆಯಾಗಲು ಬಯಸುವ ಇಬ್ಬರ ನಡುವೆ ಇದು ಸಮಾನವಾಗಿರಬೇಕು. ತೆಗೆದುಕೊಳ್ಳುವ ಆದ್ರೆ, ಕೊಡುವ ಅಭ್ಯಾಸವಿಲ್ಲದ ಯಾರೊಂದಿಗಾದರೂ ಸುಖವಾಗಿ ಇರಲು ಸಾಧ್ಯವಿಲ್ಲ.

  3)ಅತಿಯಾದ ಅಹಂಕಾರ: ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತೆ. ಆದ್ರೆ, ಅದು ಗಡಿ ದಾಟಿದ್ರೆ, ಬಾಂಧವ್ಯ ಉಳಿಯುವುದಿಲ್ಲ. ನಾನು, ನನ್ನದು, ನಾನು ಹೇಳುವುದನ್ನೇ ಕೇಳು, ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನ ತೋರಿಸುವವರಿಂದ ದೂರವಿರುವುದು ಉತ್ತಮ.

  4)ಸುಳ್ಳುಕೋರರು:ನಿಮ್ಮ ಜೀವನದಲ್ಲಿ ಸುಳ್ಳುಗಾರನನ್ನ ಎಂದಿಗೂ ಆಹ್ವಾನಿಸಬೇಡಿ. ಇದು ಮನೋರೋಗದ ಲಕ್ಷಣವೂ ಹೌದು. ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ಸುಳ್ಳು ಹೇಳುವ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ನಿಮ್ಮೊಂದಿಗೆ ಎಷ್ಟು ಆತ್ಮವಿಶ್ವಾಸವನ್ನು ಹೊಂದಬಹುದು ಅನ್ನೋದರ ಬಗ್ಗೆ ಯೋಚಿಸಿ.

  ಇದನ್ನೂ ಓದಿ: ಮದುವೆಗೂ ಮೊದಲು ಸಂಗಾತಿಯೊಂದಿಗೆ ಕೆಲ ವಿಷಯಗಳನ್ನು ಚರ್ಚಿಸಲೇಬೇಕು...!

  5)ಪ್ರಾಮಿಸ್ ಬ್ರೇಕರ್: ಒಂದಲ್ಲ, ಎರಡು ಬಾರಿ ಭರವಸೆಗಳನ್ನ ಉಳಿಸಿಕೊಳ್ಳದಿದ್ರೆ, ಪರವಾಗಿಲ್ಲ, ಕ್ಷಮಿಸಿ. ಆದ್ರೆ, ಪದೇ ಪದೇ ಇದೇ ತಪ್ಪು ಮಾಡ್ತಿದ್ರೆ, ಅವರಿಗೆ ಕೊಟ್ಟ ಮಾತಿಗೆ ಬೆಲೆ ಗೊತ್ತಿಲ್ಲ ಅಂತಾ ಅರ್ಥ. ಪ್ರಾಮಿಸ್ ಬೇಕರ್ಸ್ ಮನೆಯಲ್ಲಿ ಬಹಳಷ್ಟು ತೊಂದರೆಗಳನ್ನ ಸೃಷ್ಟಿಸಬೋದು. ಯಾಕಂದ್ರೆ, ಅವ್ರಿಗೆ ಭರವಸೆ ನೀಡುವುದು ಸಣ್ಣ ವಿಷಯವಾಗಿರುತ್ತೆ.

  6) ಪದೇ ಪದೇ ತಪ್ಪು ಮಾಡುವವರು: ತಪ್ಪನ್ನ ಪದೇ ಪದೇ ಪುನರಾವರ್ತಿಸುವುದು, ಕ್ಷಮೆಯಾಚಿಸಿ ತಪ್ಪಿಸಿಕೊಳ್ಳುವುದು. ಈ ಅಭ್ಯಾಸ ಹೊಂದಿರುವ ಜನರು ಸಹ ಉತ್ತಮ ಜೀವನ ಪಾಲುದಾರರಾಗಲು ಸಾಧ್ಯವಿಲ್ಲ. ಅವರಿಗೆ ಕ್ಷಮೆಯ ಬೆಲೆಯೂ ತಿಳಿದಿರೋಲ್ಲ.

  7)ಆಲಿಸುವ ತಾಳ್ಮೆ ಇಲ್ಲದೆ ಇರುವವರು:  ಎಷ್ಟೋ ಜನರಿಗೆ ತಾವು ಆಡಿದ್ದು ಇತರರು ಕೇಳಬೇಕು ಎಂಬುದು ಮಾತ್ರವೇ ಮುಖ್ಯವಾಗಿರುತ್ತದೆಯೇ ಹೊರತು ಇತರರು ಹೇಳುವ ಮಾತನ್ನು ಕೇಳುವ ತಾಳ್ಮೆಇರುವುದಿಲ್ಲ. ಈ ವ್ಯಕ್ತಿಯಲ್ಲಿ ಆಲಿಸುವ ತಾಳ್ಮೆ ಎಷ್ಟಿದೆ ಎಂಬುದನ್ನು ನೀವು ಗಮನಿಸಬೇಕು

  8)ವಿಧೇಯತೆ: ವಿಧೇಯತೆಎಂದರೆ ಸರಳವಾಗಿ, ಮಿತಿಯಲ್ಲಿ ಇರುವುದು ಹಾಗೂ ತನಗೆ ವಿಧಿಸಲಾದ ಕಟ್ಟುಪಾಡುಗಳನ್ನು ಮೀರದಂತಿರುವುದು ಎಂದು ಅರ್ಥವಾಗಿದೆ. ವಿವಾಹವೆಂದರೆ, ಸತಿ ಪತಿಗಳು ಇಬ್ಬರೂ ಪರಸ್ಪರರಿಗೆ ವಿಧೇಯರಾಗಿ ಇರಬೇಕಾದ ಅತ್ಯಂತ ಮುಖ್ಯ ಗುಣವಾಗಿದೆ. ಈ ವ್ಯಕ್ತಿ ವಿವಾಹನಂತರ ನಿಮಗೆ ವಿಧೇಯನಾಗಿರುತ್ತಾನೆ ಎಂಬುದನ್ನು ಕಂಡುಕೊಳ್ಳಲು, ಈಗ ಈಗ ತನಗೆ ತಾನೇ ವಿಧೇಯನಾಗಿದ್ದಾನೆಯೇ ಎಂದು ಕಂಡುಕೊಂಡರೆ ಸಾಕು.
  Published by:ranjumbkgowda1 ranjumbkgowda1
  First published: