Health Tips: ಹೊಟ್ಟೆ ನೋವಿಗೂ ಮದ್ದು, ತೂಕ ಕಳೆದುಕೊಳ್ಳಲು ಸಹಕಾರಿ ಶುಂಠಿ

Ginger: ಹಸಿಶುಂಠಿ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚೆಯಷ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವಾಂತಿ ನಿಂತುಹೊಗುತ್ತದೆ.

 ಶುಂಠಿ

ಶುಂಠಿ

 • Share this:
  ನೆಗಡಿಯಾದರೆ(Cold) ಸಾಕು ಶುಂಠಿ(Ginger) ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿಮಾತು. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್(Vicks) ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ. ಆಹಾರದಲ್ಲಿ ಶುಂಠಿ ಬಳಸುವುದರಿಂದ ಆಹಾರದ ಸುವಾಸನೆ(Smell) ಮತ್ತು ರುಚಿ(Taste) ಹೆಚ್ಚುವುದಷ್ಟೇ ಅಲ್ಲ, ಆರೋಗ್ಯ ಮತ್ತು ಸೌಂದರ್ಯದ(Beauty) ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ನಮ್ಮ ಅಡುಗೆ ಮನೆಯಲ್ಲಿ(Kitchen) ಶುಂಠಿ ಇಲ್ಲದೇ ಇರುವುದಿಲ್ಲ.

  ಇನ್ನು ಪ್ರಪಂಚದೆಲ್ಲೆಡೆ ಸಿಗುವ ಅತ್ಯುತ್ತಮ ಔಷಧಿ ಎಂಬ ಕಾರಣಕ್ಕೆ ಇದನ್ನು 'ಮಹೌಷಧಿ', 'ವಿಷ್ವಬೇಷಜ' ಎಂದು ಕರೆಯುತ್ತಾರೆ. ಜಠರದ ತೊಂದರೆ ನಿವಾರಣೆಗೆ, ಅಜೀರ್ಣ, ವಾಯು, ವಾಕರಿಕೆ, ಮಲಬದ್ಧತೆ, ಹೊಟ್ಟೆಯ ಸೋಂಕು ನಿವಾರಣೆಗೆ ಸಹಕಾರಿ. ಕೊಲೆಸ್ಟ್ರಾಲ್ ಕಮ್ಮಿ ಮಾಡುವುದರಿಂದ ಹೃದಯ ಸಂಬಂಧಿ ರೋಗದಿಂದ ಬಳಲುವವರಿಗೆ ಸಹಕಾರಿ. ಇಂಥಹ ಶುಂಠಿ ಮಾತ್ರವಲ್ಲದೇ ಅದರ ಎಲೆಗಳೂ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಶುಂಠಿ ಹಾಗೂ ಅದರ ಎಲೆಗಳನ್ನು ಸೇವಿಸುವುದರಿಂದ ಸಂಧಿವಾತ, ಸೆಳೆತ, ಉಳುಕು, ಗಂಟಲು ನೋವು, ಸ್ನಾಯು ನೋವು, ವಾಂತಿ, ಮಲಬದ್ಧತೆ, ಅಜೀರ್ಣ, ಅಧಿಕ ರಕ್ತದೊತ್ತಡ ಮತ್ತು ಸಾಂಕ್ರಾಮಿಕ ರೋಗಗಳಂತಹ ಅನೇಕ ಸಮಸ್ಯೆಗಳನ್ನು ನೀವು ನಿವಾರಿಸಿಕೊಳ್ಳಬಹುದು.

  1) ಹೊಟ್ಟೆ ನೋವು ಸಮಸ್ಯೆ ನಿವಾರಣೆ: ಕೇವಲ ಮಹಿಳೆಯರಿಗೆ ಮಾತ್ರ ಹೊಟ್ಟೆ ನೋವಿನ ಸಮಸ್ಯೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಲವಾರು ಕಾರಣಗಳಿಂದ ಮಕ್ಕಳು ಮತ್ತು ಪುರುಷರು ಸಹ ಈ ಸಮಸ್ಯೆಗೆ ಗುರಿಯಾಗುತ್ತಾರೆ. ಯಾವುದೇ ಸಂದರ್ಭದಲ್ಲಿ ನಿಮಗೆ ಹೊಟ್ಟೆಯ ಭಾಗದಲ್ಲಿ ನೋವು ಕಂಡು ಬಂದರೆ ಸುಲಭವಾಗಿ ಅದನ್ನು ಹೋಗಲಾಡಿಸಿಕೊಳ್ಳಲು ಹೀಗೆ ಮಾಡಬಹುದು.

  ಇದನ್ನೂ ಓದಿ: ಚಳಿಗಾಲದಲ್ಲಿ ಶೀತ, ಗಂಟಲು ನೋವು ಹೆಚ್ಚಾಗಿದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

  2) ಹಲ್ಲುನೋವು ಬರದಂತೆ ತಡೆಯಲು: ಹುಳುಕು ಹಲ್ಲು, ಹಲ್ಲು ನೋವು, ಒಸಡುಗಳ ಊತ, ಬಾಯಿಯ ಕೆಟ್ಟ ದುರ್ವಾಸನೆ ಎಲ್ಲವೂ ಸಹ ಬಗೆಹರಿಯುತ್ತದೆ. ಬಾಯಿಯಲ್ಲಿ ಗಂಟಲಿನ ಭಾಗದಿಂದ ಬಂದು ಸುತ್ತಿಕೊಳ್ಳುವ ಕಫ ಸಮಸ್ಯೆಗೆ ಕೂಡ ಇದು ರಾಮಬಾಣ ಎಂದು ಹೇಳುತ್ತಾರೆ.

  3) ತೂಕ ಕಳೆದುಕೊಳ್ಳಲು: ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ.

  4) ಆರೋಗ್ಯಕರ ಜೀರ್ಣಕ್ರಿಯೆ: ಶುಂಠಿ ಜೀರ್ಣಕ್ರಿಯೆಗೂ ಸಹಕಾರಿ. ಹಲಸಿನ ಕಾಯಿ ತಿಂದರೆ ಶುಂಠಿ ತಿನ್ನಬೇಕು ಎಂಬ ಆಡುಮಾತಿದೆ. ಅದರಂತೆ ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸಿದಾಗ ಒಂದು ತುಂಡು ಶುಂಠಿ ತಿಂದರೆ ಬೇಗನೇ ಜೀರ್ಣವಾಗುತ್ತದೆ. ಅಥವಾ ಚಹಾ ಮಾಡುವಾಗ ಚಿಕ್ಕ ಚೂರು ಶುಂಠಿ ಸೇರಿಸಿ ಮಾಡಿದರೂ, ಜೀರ್ಣಕ್ರಿಯೆ ಸುಗಮವಾಗುತ್ತದೆ.

  5) ವಾಂತಿ ನಿವಾರಣೆ: ಹಸಿಶುಂಠಿ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚೆಯಷ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವಾಂತಿ ನಿಂತುಹೊಗುತ್ತದೆ.

  6) ರಕ್ತದ ಪರಿಚಲನೆ ಶುದ್ದಗೊಳಿಸಲು: ಶುಂಠಿಯಲ್ಲಿರುವ ಪೋಷಕಾಂಶಗಳು ರಕ್ತದ ಪರಿಚಲನೆಯನ್ನು ಚುರುಕುಗೊಳಿಸಿ ಅಂಗಾಂಗಳ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಶುಂಠಿಯ ಸೇವನೆಯ ಪ್ರಯೋಜನಗಳಲ್ಲಿ ಇದು ಅತ್ಯುತ್ತಮವಾದುದು.

  ಇದನ್ನೂ ಓದಿ: ಸ್ಥೂಲಕಾಯದಿಂದ ವಸಡಿಗೂ ಸಮಸ್ಯೆಯಿದೆ ಅಂತಿದೆ ಹೊಸ ಅಧ್ಯಯನ.. ಹೇಗೆ ಗೊತ್ತೇ?

  7) ಉರಿಯೂತ ಶಮನಕಾರಿ: ಉರಿಯೂತ ಶಮನಕಾರಿ, ನೋವು ನಿವಾರಕ, ಆಂಟಿಆಕ್ಸಿಡೆಂಟ್ ಗುಣಗಳು ಇದರಲ್ಲಿ ಇದೆ.ಇದು ಉರಿಯೂತ, ಊತ ಮತ್ತು ನೋವನ್ನು ಕಡಿಮೆ ಮಾಡುವುದು.

  8) ಮಾರ್ನಿಂಗ್ ಸಿಕ್ನೆಸ್ ಸಮಸ್ಯೆ ದೂರ: ಶುಂಠಿಯಲ್ಲಿ ಇರುವ ಕಾರ್ಮಿನೇಟಿವ್ ಅಂಶವು ಗರ್ಭಿಣಿಯರಿಗೆ ನೆರವಾಗುವುದು ಮತ್ತು ಇದು ಮಾರ್ನಿಂಗ್ ಸಿಕ್ನೆಸ್ ಸಮಸ್ಯೆಯನ್ನು ದೂರ ಮಾಡುವುದು. ಆದರೆ ನೀವು ಇದರ ಸೇವನೆಗೆ ಮೊದಲು ವೈದ್ಯರ ಸಲಹೆ ಪಡೆಯಿರಿ.
  Published by:ranjumbkgowda1 ranjumbkgowda1
  First published: