HOME » NEWS » Lifestyle » 8 OF THE MOST IMPRESSIVE HEALTH BENEFITS OF EATING CLOVES ZP

ಹಲ್ಲಿನ ನೋವಿನಿಂದ ಹಿಡಿದು ಹಲವು ಸಮಸ್ಯೆಗಳಿಗೆ ಲವಂಗವೇ ಮನೆಮದ್ದು..!

ಮೊಡವೆಗಳು, ಬ್ಲ್ಯಾಕ್‌ಹೆಡ್‌ಗಳಂತಹ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಲವಂಗ ಎಣ್ಣೆಯಿಂದ ಪರಿಹಾರ ಕಂಡುಕೊಳ್ಳಬಹುದು. ಲವಂಗ ಪುಡಿಯನ್ನು ನಿಮ್ಮ ಫೇಸ್‌ಪ್ಯಾಕ್‌ನಲ್ಲಿ ಬೆರೆಸಿ ನೀವು ಅದನ್ನು ಬಳಸಬಹುದು.

news18-kannada
Updated:February 18, 2021, 7:27 AM IST
ಹಲ್ಲಿನ ನೋವಿನಿಂದ ಹಿಡಿದು ಹಲವು ಸಮಸ್ಯೆಗಳಿಗೆ ಲವಂಗವೇ ಮನೆಮದ್ದು..!
clove
  • Share this:
ಲವಂಗವನ್ನು ಆಹಾರದ ಪರಿಮಳವನ್ನು ಹೆಚ್ಚಿಸಲು ಮಾತ್ರವಲ್ಲ, ಹಲವು ರೋಗಗಳಿಗೂ ಉತ್ತಮ ಮನೆಮದ್ದು. ಸಾಮಾನ್ಯ ಶೀತ ಮತ್ತು ನೆಗಡಿ, ಹಲ್ಲುನೋವು ಮತ್ತು ಅಜೀರ್ಣ ಸಂದರ್ಭಗಳಲ್ಲಿ ಲವಂಗವನ್ನು ಸೇವಿಸುವುದು ಉತ್ತಮ. ಲವಂಗದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಿರೋಧಿ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಹಲವು ರೀತಿಯಲ್ಲಿ ಲವಂಗದಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಪ್ರಯೋಜನಗಳ ಪಟ್ಟಿ ಇಲ್ಲಿದೆ.

ಹಲ್ಲುನೋವಿಗೆ ಮನೆಮದ್ದು: ಲವಂಗದ ಪ್ರಮುಖ ಪ್ರಯೋಜನವೆಂದರೆ ಲವಂಗವು ಕೆಲವೇ ನಿಮಿಷಗಳಲ್ಲಿ ಹಲ್ಲುನೋವನ್ನು ನಿವಾರಿಸುತ್ತದೆ. ಐದು ಲವಂಗವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ಈ ನೀರಿಯಿಂದ ಅಮೂರು ಬಾರಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವಿಗೆ ಪರಿಹಾರ ನೀಡುತ್ತದೆ.

ಬಾಯಿ ದುರ್ವಾಸನೆಗೆ ಪರಿಹಾರ: ಬಾಯಿ ದುರ್ವಾಸನೆ ಲವಂಗ ಉತ್ತಮ ಮನೆಮದ್ದು. ಲವಂಗವನ್ನು ನಿಯಮಿತವಾಗಿ ಬಳಸುವುದರಿಂದ ಈ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೆಯೇ ವಾಂತಿಯಾಗುವ ಲಕ್ಷಣಗಳಿದ್ದರೆ, ಲವಂಗವನ್ನು ಫ್ರೈ ಮಾಡಿ ಅದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನೆಕ್ಕಿರಿ.

ಅಜೀರ್ಣ ಸಮಸ್ಯೆಗೆ: ಲವಂಗದಲ್ಲಿ ಕಬ್ಬಿಣ, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕದಂತಹ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರಿಂದ ಅಜೀರ್ಣ, ವಾಂತಿ, ಗ್ಯಾಸ್ಟ್ರಿಕ್, ಅತಿಸಾರ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ.

ಚರ್ಮದ ಸಮಸ್ಯೆ: ಲವಂಗ ಮತ್ತು ಅದರ ಎಣ್ಣೆಯಲ್ಲಿ ನಂಜುನಿರೋಧಕ ಗುಣಗಳಿವೆ. ಇದು ಸೋಂಕು, ಕಡಿತ, ಸುಡುವಿಕೆ, ಗಾಯಗಳು ಅಥವಾ ಚರ್ಮದ ಇತರ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಲವಂಗ ಎಣ್ಣೆಯನ್ನು ನೇರವಾಗಿ ಚರ್ಮದ ಮೇಲೆ ಹಚ್ಚುವುದರಿಂದ ಸಹ ಚರ್ಮದ ಸಮಸ್ಯೆಗಳಿಂದ ಪಾರಾಗಬಹುದು.

ಬ್ಲ್ಯಾಕ್‌ಹೆಡ್‌ಗಳನ್ನು ತೊಡೆದುಹಾಕಲು: ಮೊಡವೆಗಳು, ಬ್ಲ್ಯಾಕ್‌ಹೆಡ್‌ಗಳಂತಹ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಲವಂಗ ಎಣ್ಣೆಯಿಂದ ಪರಿಹಾರ ಕಂಡುಕೊಳ್ಳಬಹುದು. ಲವಂಗ ಪುಡಿಯನ್ನು ನಿಮ್ಮ ಫೇಸ್‌ಪ್ಯಾಕ್‌ನಲ್ಲಿ ಬೆರೆಸಿ ನೀವು ಅದನ್ನು ಬಳಸಬಹುದು. ಆದರೆ ಇದನ್ನು ಚರ್ಮದ ಮೇಲೆ ನೇರವಾಗಿ ಹಚ್ಚಬೇಡಿ. ಏಕೆಂದರೆ ನೇರವಾಗಿ ಹಚ್ಚಿದರೆ ಇದು ಹಾನಿಯನ್ನುಂಟುಮಾಡಬಹುದು.
Published by: zahir
First published: February 18, 2021, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories