ಪ್ರತಿದಿನ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು

ಮೂಸಂಬಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಸೇವನೆ ಉತ್ತಮ. ಅಷ್ಟೇ ಅಲ್ಲದೆ ಶೀತ ಮತ್ತು ಕೆಮ್ಮಿಗೆ ಈ ಹಣ್ಣು ಅತ್ಯುತ್ತಮ ಪರಿಹಾರವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹವಾಮಾನದ ಬದಲಾವಣೆ ಸಮಯದಲ್ಲಿ ಶೀತ, ಜ್ವರ, ಅಸ್ವಸ್ಥತೆಮುಂತಾದ ಸಮಸ್ಯೆಗಳು ಕಾಣಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಸಂದರ್ಭದಲ್ಲಿ ನಾವು ಸೇವಿಸುತ್ತಿರುವ ಆಹಾರ ಎನ್ನಬಹುದು. ಇಂತಹ ಸಮಯದಲ್ಲಿ ನಾವು ಕೆಲ ಹಣ್ಣು-ಹಂಪಲುಗಳನ್ನು ಸೇವಿಸುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಇಂತಹ ಹಣ್ಣುಗಳಲ್ಲಿ ಮೂಸಂಬಿ ಕೂಡ ಒಂದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಹೇರಳವಾಗಿ ಕಂಡುಬರುತ್ತವೆ. ಹಾಗೆಯೇ ಫೈಬರ್ ಅಂಶ ಕೂಡ ಇದರಲ್ಲಿದೆ. ಈ ಹಣ್ಣಿನ ರಸವನ್ನು ಕುಡಿಯುವುದರಿಂದ ಅಥವಾ ಈ ಹಣ್ಣನ್ನು ತಿನ್ನುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

  - ಸ್ಕರ್ವಿ ಒಂದು ಕಾಯಿಲೆಯಾಗಿದ್ದು, ಈ ಸಮಸ್ಯೆ ಕಾಣಿಸಿಕೊಂಡರೆ ಒಸಡುಗಳಿಂದ ರಕ್ತಸ್ರಾವವಾಗುತ್ತವೆ. ಈ ರೋಗವು ವಿಟಮಿನ್ ಸಿ ಕೊರತೆಯಿಂದ ಉಂಟಾಗುತ್ತದೆ. ಮೂಸಂಬು ರಸದಲ್ಲಿ ಬಹಳಷ್ಟು ವಿಟಮಿನ್ ಸಿ ಇದ್ದು, ಇದು ಈ ಕಾಯಿಲೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

  - ಮೂಸಂಬಿ ರಸ ಜೀರ್ಣಕಾರಿ ಚಟುವಟಿಕೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಆಮ್ಲ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆಯೇ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

  - ಮೂಸಂಬಿ ರಸವನ್ನು ಕುಡಿಯುವುದರಿಂದ, ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಮೂಸಂಬಿ ರಸವನ್ನು ಕುಡಿಯುವುದರಿಂದ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

  - ಈ ಹಣ್ಣು ರಕ್ತದ ಜೀವಕೋಶಗಳಲ್ಲಿ ಎಲೆಕ್ಟ್ರೋಲೈಟ್​ ಸಮತೋಲನ ಕಾಪಾಡಿಕೊಳ್ಳುವಲ್ಲಿ ಈ ಅಂಶಗಳು ಸಹಾಯಕವಾಗಿದೆ. ಈ ಹಣ್ಣಿನಲ್ಲಿರುವ ಪೊಟಾಶಿಯಂ ಮೆದುಳಿಗೆ ಆಮ್ಲಜನಕವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

  - ಮೂಸಂಬಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಸೇವನೆ ಉತ್ತಮ. ಅಷ್ಟೇ ಅಲ್ಲದೆ ಶೀತ ಮತ್ತು ಕೆಮ್ಮಿಗೆ ಈ ಹಣ್ಣು ಅತ್ಯುತ್ತಮ ಪರಿಹಾರವಾಗಿದೆ.
  Published by:zahir
  First published: