Lifestyle Tips: ಲೇಡಿಸ್ ಹ್ಯಾಂಡ್ ಬ್ಯಾಗ್​​ನಲ್ಲಿ ಈ 8 ವಸ್ತುಗಳು ತಪ್ಪದೇ ಇರಲೇಬೇಕು..!

Women Hand Bag: ಸಾಮಾನ್ಯವಾಗಿ ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗಿನಲ್ಲಿ ಕಡ್ಡಾಯವಾಗಿ ಮಾತ್ರೆಗಳು ಇರಲೇಬೇಕು. ಶೀತ ಕೆಮ್ಮು ನೆಗಡಿ ತಲೆನೋವು ಜ್ವರದಂತಹ ಮಾತ್ರೆಗಳು, ಹಾಗೂ ಕೆಲವೊಂದು ಪ್ರಥಮ ಚಿಕಿತ್ಸೆಯಂತಹ ವಸ್ತುಗಳು ವ್ಯಾನಿಟಿ ಬ್ಯಾಗಿನಲ್ಲಿ ಇರುವುದರಿಂದ ಅದು ನಮಗೆ ಅನೇಕ ಸಂದರ್ಭಗಳಲ್ಲಿ ಸಹಾಯ ಮಾಡಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಹಿಳೆಯರ (Women) ಆಪ್ತ ಸಂಗಾತಿಯಾದ ವ್ಯಾನಿಟಿ ಬ್ಯಾಗ್‌(Vanity Bag) ಎಲ್ಲರಿಗೂ ಇಷ್ಟವಾದದ್ದೇ. ಅವರ ಜಂಬದ ಚೀಲವೆಂದೇ ಖ್ಯಾತಿಪಡೆದ ಬ್ಯಾಗ್‌ ಅದು. ಆಕೆ ಎಲ್ಲಿಗೇ ಹೋಗಲಿ ಅವಳ ಹೆಗಲೇರಿ ಕುಳಿತು ಬಿಡುತ್ತದೆ.ದಿನನಿತ್ಯದ(Daily Use) ಬಳಕೆಗೆ ಬೇಕಾಗುವ ಕೈಚೀಲಗಳಿಂದ ಹಿಡಿದು ಮದುವೆ ಮನೆಯಲ್ಲಿ ಲಲನೆಯರ ಕೈಯಲ್ಲಿ ಝಗ‌ಮಗಿಸುವ ತರಹೇವಾರಿ ಬ್ಯಾಗ್‌ಗಳು ಇಂದು ಮಾರುಕಟ್ಟೆಯಲ್ಲಿ(Market) ಲಭ್ಯವಿವೆ. ತಮ್ಮ ಬೇಕು ಬೇಡ ಎಲ್ಲವನ್ನೂ ವ್ಯಾನಿಟಿ ಬ್ಯಾಗಿನೊಳಗೆ ತುಂಬಿಕೊಳ್ಳುವ ಹೆಂಗಳೆಯರಿಗೆ ಸೂಕ್ತ ಎನ್ನಿಸುವ ವಿಭಿನ್ನ ಶೈಲಿಯ ಬ್ಯಾಗ್‌ಗಳು ಬೇಕೆ ಬೇಕು.
  ಜೀನ್ಸ್(Jeans), ಫಾರ್ಮಲ್‌, ಚೂಡಿದಾರ್‌, ಜುಬ್ಟಾ, ಸೀರೆ(Saree), ಲೆಹಂಗಾ ಎಲ್ಲಾ ರೀತಿಯ ಬಟ್ಟೆಗಳಿಗೂ ವ್ಯಾನಿಟಿ ಬ್ಯಾಗ್‌ ಬೇಕೆ ಬೇಕು. ಆದರೆ ಕೆಲವರಿಗೆ ಹ್ಯಾಂಡ್ ಬ್ಯಾಗ್ ನಲ್ಲಿ(Hand Bag) ಏನು ತೆಗೆದುಕೊಂಡು ಹೋಗಬೇಕು ಇರಬೇಕು ಎಂದು ಮಾಹಿತಿ ಇರುವುದಿಲ್ಲ.. ಹೀಗಾಗಿ ನೀವು ಹೊರಗಡೆ ಹೋಗುವಾಗ ಯಾವೆಲ್ಲಾ ವಸ್ತುಗಳು ನಿಮ್ಮ ಹ್ಯಾಂಡ್ ಬ್ಯಾಗ್ ನಲ್ಲಿ ಇರಬೇಕು ಎನ್ನುವ ಮಾಹಿತಿ ಇಲ್ಲಿದೆ.

  1)ಟಿಶ್ಯು ಪ್ಯಾಕ್: ಮಹಿಳೆಯರ ವ್ಯಾನಿಟಿ ಬ್ಯಾಗ್ ನಲ್ಲಿ ಮಿಸ್ ಮಾಡದೇ ಇಡಬೇಕಾದ ವಸ್ತುಗಳಲ್ಲಿ ಟಿಶ್ಯು ಪ್ಯಾಕ್ ಕೂಡ ಒಂದು. ಕರ್ಚಿಫ್ ಗಳ ಬದಲು ಟಿಶ್ಯೂ ಯೂಸ್ ಮಾಡುವುದರಿಂದ ಮಹಿಳೆಯರಿಗೆ ಹೆಚ್ಚಿನ ಲಾಭ. ಮೇಕಪ್ ಹಾಳಾದರೆ, ಬೆವರಿದರೆ ಅಥವಾ ಏನಾದರೂ ತಿಂದ ಬಳಿಕ ಕೈ ಒರೆಸಿಕೊಳ್ಳಲು ಈ ಟಿಶ್ಯು ಬ್ಯಾಗ್‌ನಲ್ಲಿದ್ದರೆ, ಸಹಕಾರಿ. ಹೀಗಾಗಿ ಒಮ್ಮೆ ಬಳಕೆಮಾಡಿ ಬಿಸಾಕಲು ಟಿಶ್ಯೂ ಪೇಪರ್ ಗಳು ಸಹಕಾರಿ

  ಇದನ್ನೂ ಓದಿ: ನಿಮ್ಮ ಡಯೆಟ್​ ಚಾರ್ಟ್​ನಲ್ಲಿ ಈ ಆಹಾರಗಳು ಇರಲೇಬೇಕು

  2) ತಿಂಡಿಗಳು: ನಾವು ಹೊರಗಡೆ ಹೋದಾಗಲೆಲ್ಲ ತಿಂಡಿಗಳನ್ನು ಹುಡುಕಿ ಅಲೆಯಲು ಆಗುವುದಿಲ್ಲ.. ಹೀಗಾಗಿ ಹಸಿವಾದಾಗ ಕೂಡಲೇ ತಿನ್ನಲು ಏನಾದರೂ ಬೇಕೇಬೇಕು ಎಂದು ಅನಿಸುತ್ತದೆ ಅಂತಹ ಸಂದರ್ಭದಲ್ಲಿ ಹೋಟೆಲ್ಗಳು ಅಥವಾ ಬೇಕರಿಗಳು ಸಿಗದೆ ಇದ್ದಾಗ ನಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಯಾವುದಾದರೂ ಸಣ್ಣ ತಿಂಡಿತಿನಿಸುಗಳನ್ನು ಇಟ್ಟುಕೊಂಡಿದ್ದರೆ ಅವುಗಳು ಆ ಕ್ಷಣಕ್ಕೆ ಉಪಯೋಗಕ್ಕೆ ಬರುತ್ತದೆ.

  3) ಮೊಬೈಲ್ ಚಾರ್ಜರ್: ಪ್ರಸ್ತುತ ದಿನಮಾನಗಳಲ್ಲಿ ನಾವು ಎಲ್ಲೇ ಹೋದರೂ ನಮಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಮೊಬೈಲ್. ಪ್ರಸ್ತುತ ಆನ್ಲೈನ್ ಜಮಾನ ಆಗುವುದರಿಂದ ಹಣ ಪಾವತಿ ಇಂದ ಹಿಡಿದು ಪ್ರತಿಯೊಂದು ಕೆಲಸಗಳು ಮೊಬೈಲ್ ಮೂಲಕವೇ ನಡೆಯಬೇಕು.. ಇಂತಹ ಸಂದರ್ಭದಲ್ಲಿ ಮೊಬೈಲ್ ನಲ್ಲಿರುವ ಚಾರ್ಜರ್ ಖಾಲಿ ಆಗುವ ಸಂಭವ ಇರುತ್ತದೆ.. ಹೀಗಾಗಿ ತಪ್ಪದೇ ನಿಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಮೊಬೈಲ್ ಚಾರ್ಜರ್ ಇಟ್ಟುಕೊಳ್ಳಿ

  4) ಹೆಡ್ಫೋನ್: ಹೆಡ್ಫೋನ್ಗಳು ನಾವು ಪ್ರವಾಸ ಮಾಡುವಾಗ ನಮ್ಮ ನೆಚ್ಚಿನ ಸಂಗಾತಿಗಳು.. ನಮಗೆ ಇಷ್ಟ ಬಂದ ಸಿನಿಮಾ ಧಾರಾವಾಹಿ ಹಾಗೂ ಸಂಗೀತ ಕೇಳಲು ಮತ್ತು ಏಕಾಂಗಿತನವನ್ನು ಅನುಭವಿಸಲು ಹೆಡ್ಫೋನ್ಗಳು ನಮ್ಮ ಪ್ರವಾಸದ ವೇಳೆಯಲ್ಲಿ ನಮ್ಮ ಜೊತೆ ಇರಬೇಕು

  5)ಟ್ಯಾಂಪೂನ್/ಸ್ಯಾನಿಟರಿ ಪ್ಯಾಡ್: ಜಗತ್ತು ನಿಲ್ಲುವುದಿಲ್ಲ, ಅವಧಿಯೂ ನಿಲ್ಲುವುದಿಲ್ಲ. ಯಾವುದೇ ದಿನ ಅಥವಾ ಸಮಯದಲ್ಲಿ ಪಿರಿಯಡ್ ಎದುರಾಗಬಹುದು. ಆದ್ದರಿಂದ ಇಂತಹ ಸಮಯಗಳಿಗಾಗಿ ಯಾವಾಗಲೂ ಟ್ಯಾಂಪೂನ್/ಸ್ಯಾನಿಟರಿ ಪ್ಯಾಡ್ ಅನ್ನು ಇಟ್ಟುಕೊಳ್ಳಿ. ಇದರಿಂದ ಕಲೆಗಳಿಂದ ಮುಜುಗರಕ್ಕೊಳಗಾಗುವುದು ತಪ್ಪುತ್ತದೆ ಜೊತೆಗೆ ಬೇರೆಯವರನ್ನು ಕೇಳುವ ಅವಶ್ಯಕತೆಯೂ ಬರುವುದಿಲ್ಲ

  6) ಮಾತ್ರೆಗಳು: ಸಾಮಾನ್ಯವಾಗಿ ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗಿನಲ್ಲಿ ಕಡ್ಡಾಯವಾಗಿ ಮಾತ್ರೆಗಳು ಇರಲೇಬೇಕು.ಶೀತ ಕೆಮ್ಮು ನೆಗಡಿ ತಲೆನೋವು ಜ್ವರದಂತಹ ಮಾತ್ರೆಗಳು, ಹಾಗೂ ಕೆಲವೊಂದು ಪ್ರಥಮ ಚಿಕಿತ್ಸೆಯಂತಹ ಸಾಮಾಗ್ರಿಗಳು  ವ್ಯಾನಿಟಿ ಬ್ಯಾಗಿನಲ್ಲಿ ಇರುವುದರಿಂದ ಅದು ನಮಗೆ ಅನೇಕ ಸಂದರ್ಭಗಳಲ್ಲಿ ಸಹಾಯ ಮಾಡಲಿದೆ.

  7)ರಬ್ಬರ್: ನಾವು ನಮ್ಮ ಕೂದಲನ್ನು ಫ್ರಿ ಆಗಿ ಬಿಟ್ಟು ಹೊರಟಾಗ, ಹೇರ್ ಟೈ ಅನ್ನು ಮರೆತುಬಿಡುತ್ತೇವೆ. ಅದಕ್ಕಾಗಿಯೇ ಹೆಚ್ಚುವರಿ, ರಬ್ಬರ್ ಅಥವಾ ಕ್ಲಿಪ್‌ಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಕು. ಆಗ ನಮಗೆಂದಾದರೂ, ಕೂದಲನ್ನು ಕಟ್ಟುವ ಅಗತ್ಯ ಬಂದರೆ, ಇದು ಸಹಾಯಕ್ಕೆ ಬರುವುದು. ಇಲ್ಲವಾದಲ್ಲಿ, ಮಳೆ ಅಥವಾ ಇತರ ಸಂದರ್ಭಗಳಲ್ಲಿ ಫ್ರೀ ಹೇರ್‌ನಿಂದ ಸಮಸ್ಯೆ ಎದುರಿಸುತ್ತೇವೆ.

  ಇದನ್ನೂ ಓದಿ: ಇಷ್ಟು ಮಾಡಿದ್ರೆ ಸಾಕು ಚಳಿಗಾಲದಲ್ಲಿ ಕೂದಲು ಹಾಳಾಗುವುದಿಲ್ಲ

  8) ಮನೆಯ ಕೀಗಳು: ನಾವು ಪ್ರತಿಬಾರಿ ಹೊರಗೆ ಹೋಗುವಾಗ ನಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಮನೆಯ ಮನೆಯ ಕೀ ಇಟ್ಟುಕೊಂಡು ಹೋಗುವುದು ಸೂಕ್ತ. ಯಾಕಂದರೆ ನಾವು ಮನೆಗೆ ವಾಪಸ್ ಮರಳಿ ಬಂದಾಗ ಯಾರೂ ಮನೆಯಲ್ಲಿ ಇಲ್ಲದೇ ಇದ್ದರೆ ನಮ್ಮ ಬಳಿ ಇರುವ ವ್ಯಕ್ತಿಗಳಿಂದ ನಾವು ಮನೆ ಪ್ರವೇಶ ಮಾಡಲು ಅನುಕೂಲವಾಗುತ್ತದೆ.
  Published by:ranjumbkgowda1 ranjumbkgowda1
  First published: