ಶೇ.90 ರಷ್ಟು ಭಾರತೀಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ..!

ಶೇ. 74% ಹೈಪೋಥೈರಾಯ್ಡ್ ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ ಕಾಣಿಸಿದೆ. ಸ್ಥೂಲಕಾಯದಿಂದ ಬಳಲುತ್ತಿರುವ 82% ಜನರು ಸಹ ವಿಟಮಿನ್ ಡಿ ಕೊರತೆಯನ್ನು ಹೊಂದಿರುವುದು ಆಘಾತಕಾರಿ ಎಂದು ಸಂಶೋಧಕರು ಹೇಳಿದ್ದಾರೆ.

zahir | news18-kannada
Updated:August 29, 2019, 3:55 PM IST
ಶೇ.90 ರಷ್ಟು ಭಾರತೀಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ..!
vitamin-D
  • Share this:
ನಮ್ಮ ದೇಹದ ಆರೋಗ್ಯ ಕಾಪಾಡಲು ವಿಟಮಿನ್ ಜೀವಸತ್ವಗಳು ಅತ್ಯವಶ್ಯಕ. ಅದರಲ್ಲೂ ಇಂದಿನ ಜೀವನ ಶೈಲಿಯಲ್ಲಿ ಅನೇಕರಲ್ಲಿ ವಿಟಮಿನ್ ಡಿ ಕೊರತೆ ಕಾಡುತ್ತಿದೆ. ವಿಟಮಿನ್ ಡಿ ಉತ್ಪಾದನೆಯಾಗುವ ಪ್ರಮುಖ ಅಂಗ ನಮ್ಮ ದೇಹದ ಚರ್ಮ. ಸೂರ್ಯನ ಕಿರಣ ಚರ್ಮದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತೆ. ಆದರೆ ಭಾರತದಂತಹ ದೇಶದಲ್ಲೂ ವಿಟಮಿನ್ ಡಿ ಕೊರತೆ ಹೊಸ ಸಮಸ್ಯೆಯಾಗಿ ತಲೆದೂರಿದೆ ಎಂಬುದೇ ಆಘಾತಕಾರಿ.

ಹೊಸ ಸಂಶೋಧನಾ ತಂಡವೊಂದು, ಹೆಚ್ಚಿನ ಭಾರತೀಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆ ಇರುವವರಲ್ಲಿ ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಪ್ರಸ್ತುತ ದೇಶದಲ್ಲಿ ಶೇ.70 ರಿಂದ 90 ರಷ್ಟು ಜನರಲ್ಲಿ ವಿಟಮಿನ್ ಡಿ ಜೀವಸತ್ವದ ಕೊರತೆ ಇದೆ ಎಂದು ಅಧ್ಯಯನ ವರದಿ ಹೇಳಿದೆ.

ವಿಟಮಿನ್ ಡಿ ಕೊರತೆಯಿರುವ ಜನರಲ್ಲಿ ಅಪಾಯಕಾರಿ ಕಾಯಿಲೆಗಳು ಕಾಣಿಸುತ್ತಿದೆ. ಹಾಗೆಯೇ ದೇಶದಲ್ಲಿ ಶೇ. 84 ರಷ್ಟು ಗರ್ಭಿಣಿಯರಿಗೆ ವಿಟಮಿನ್ ಡಿ ಕೊರತೆ ಕಾಡುತ್ತಿದೆ ಎಂದು ಅಬಾಟ್ ಇಂಡಿಯಾ ಮುಂಬೈ ನಿರ್ದೇಶಕ ಶ್ರೀ ರೂಪಾ ದಾಸ್ ತಿಳಿಸಿದ್ದಾರೆ.

ಗರ್ಭಿಣಿಯರಲ್ಲಿ ಕಾಣಿಸುವ ಈ ಸಮಸ್ಯೆಯು ನವಜಾತ ಶಿಶುಗಳ ಮೇಲೆ ಪರಿಣಾಮ ಬೀರುತ್ತಿದೆ. ವಯಸ್ಕರು ಸಹ ವಿಟಮಿನ್ ಡಿ ಕೊರತೆಯಿಂದ ಸ್ನಾಯು ದೌರ್ಬಲ್ಯಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಮೂಳೆ ಮುರಿತ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಸಂಶೋಧನೆಯನ್ನು 1508 ಜನರ ಮೇಲೆ ಮಾಡಲಾಗಿದ್ದು, ಮುಂಬೈನ 88% ಜನರಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದಿದೆ. ಇನ್ನು ಟೈಪ್ 2 ಡಯಾಬಿಟಿಸ್‌ ಹೊಂದಿರುವ 84.2 ರಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಹಾಗೆಯೇ ಶೇ. 82.6 ರಷ್ಟು ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ಕಂಡು ಬಂದಿದೆ ಎಂದು ತಿಳಿಸಲಾಗಿದೆ.

ಇನ್ನು ಶೇ. 74% ಹೈಪೋಥೈರಾಯ್ಡ್ ರೋಗಿಗಳಲ್ಲಿ ವಿಟಮಿನ್ ಡಿ ಕೊರತೆ ಕಾಣಿಸಿದೆ. ಸ್ಥೂಲಕಾಯದಿಂದ ಬಳಲುತ್ತಿರುವ 82% ಜನರು ಸಹ ವಿಟಮಿನ್ ಡಿ ಕೊರತೆಯನ್ನು ಹೊಂದಿರುವುದು ಆಘಾತಕಾರಿ ಎಂದು ಸಂಶೋಧಕರು ಹೇಳಿದ್ದಾರೆ.

ಭಾರತದಲ್ಲಿ ವಿಟಮಿನ್ ಡಿ ಕೊರತೆಗೆ ವಿವಿಧ ಕಾರಣಗಳಿವೆ. ಹೆಚ್ಚಿನ ಜನರು ಸೂರ್ಯನ ಬೆಳಕಿಗೆ ಮೈಯೊಡ್ಡುವು ದಿಲ್ಲ. ನಗರ ಮತ್ತು ಆಧುನಿಕ ಜೀವನಶೈಲಿ ಕೂಡ ಇದಕ್ಕೆ ಮತ್ತೊಂದು ಕಾರಣ. ಅದೇ ರೀತಿ ಆಘಾತಕಾರಿ ವಾಯುಮಾಲಿನ್ಯ ಕೂಡ ವಿಟಮಿನ್ ಡಿ ಕೊರತೆ ಕಾರಣವಾಗಿದೆ. ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವವರಿಗೆ ಈ ಜೀವಸತ್ವ ಹೆಚ್ಚು ಹೊಂದಿರುವ ಆಹಾರಗಳನ್ನು ಹೆಚ್ಚಾಗಿ ನೀಡಬೇಕೆಂದು ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆವಿಟಮಿನ್ 'ಡಿ' ಹೆಚ್ಚಾಗಿರುವ ಆಹಾರಗಳು:
- ಮೊಸರು
- ಹಾಲು
- ಅಣಬೆ
- ಚೀಸ್
- ಮೊಟ್ಟೆಯ ಹಳದಿ ಭಾಗ
- ಕಿತ್ತಳೆ ರಸ
- ಕೊಬ್ಬಿನ ಮೀನು (ಒಮೆಗಾ ಆಮ್ಲ ಹೊಂದಿರುವ ಸೀ ಫುಡ್)

ಐರಾವತದಲ್ಲಿ ದಾಸನೊಂದಿಗೆ ಮಿಂಚಿ ಮರೆಯಾಗಿದ್ದ ನಟಿ ಈಗ ಎಂಥಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಗೊತ್ತಾ? 
First published: August 29, 2019, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading