• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Weight Loss: ಡಯೆಟ್​ ಮಾಡ್ಬೇಕಂದ್ರೆ ಈ ಬಯಕೆಗಳು ಕಂಟ್ರೋಲ್ ಆಗ್ತಿಲ್ವಾ? ಹಾಗಾದ್ರೆ ಈ ಟಿಪ್ಸ್​ ಚಾಚೂ ತಪ್ಪದೇ ಪಾಲಿಸಿ!

Weight Loss: ಡಯೆಟ್​ ಮಾಡ್ಬೇಕಂದ್ರೆ ಈ ಬಯಕೆಗಳು ಕಂಟ್ರೋಲ್ ಆಗ್ತಿಲ್ವಾ? ಹಾಗಾದ್ರೆ ಈ ಟಿಪ್ಸ್​ ಚಾಚೂ ತಪ್ಪದೇ ಪಾಲಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವೂ ಕೂಡ ಡಯೆಟ್‌ ಮಾಡ್ತಿದ್ದು, ಇಲ್ಲಾ ತೂಕ ಇಳಿಸಲು ಏನನ್ನಾದರೂ ಮಾಡುತ್ತಿರುವಾಗ ಕಡುಬಯಕೆಗಳು ನಿಮ್ಮ ಪ್ರಯತ್ನಗಳನ್ನು ಹಾಳು ಮಾಡುತ್ತಿದ್ದರೆ ಇನ್ನುಮುಂದೆ ಕಡುಬಯಕೆಗಳನ್ನು ಕಂಟ್ರೋಲ್‌ ಮಾಡಲು ಡಯೆಟಿಷಿಯನ್ ಹರಿ ಲಕ್ಷ್ಮಿ ನೀಡಿರುವ ಸಲಹೆಗಳನ್ನು ಚಾಚು ತಪ್ಪದೇ ಫಾಲೋ ಮಾಡಿ.

  • Share this:

ಏನನ್ನಾದರೂ ತಿನ್ನಬೇಕು ಅಂತಾ ಅನಿಸಿದಾಗ ಅಥವಾ ರುಚಿಯಾದ ಆಹಾರ (Tasty Food), ತಿನಿಸು ನೋಡಿದಾಗ ನಮಗೇ ಅರಿವಿಲ್ಲದಂತೆ ನಮ್ಮ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಈ ಅನುಭವ ಡಯೆಟ್‌ನಲ್ಲಿರುವಾಗಲೋ (Diet), ಯಾವುದೋ ಪಥ್ಯದಲ್ಲಿರುವಾಗಲೋ ಆಗುವುದೇ ಹೆಚ್ಚು. ಕಡಿವಾಣ ಹಾಕಲು ಕಷ್ಟವಾದವರು ಸುಮ್ಮನೆ ತಿಂದು ನಾಳೆ ಇಂದ ಡಯೆಟ್‌ ಮಾಡ್ತೀನಿ ಅಂತಾ ಅವರಿಗವರೇ ಸಮಜಾಯಿಷಿ ಬೇರೆ ಕೊಟ್ಟುಕೊಳ್ಳುತ್ತಾರೆ. ಸುಮಾರು ಮಂದಿ ಆಗಾಗಹೇಳುತ್ತಿರುತ್ತಾರೆ, ಅಯ್ಯೋ ನಾನು ಡಯೆಟ್​ ಶುರು ಮಾಡಿದಾಗ್ಲೇ ನನಗೆ ಜಾಸ್ತಿ ಹಸಿವಾಗುತ್ತೆ ಇಲ್ಲಾ ಏನನ್ನಾದರೂ ತಿನ್ನೂ ಬಯಕೆ ಆಗುತ್ತದೆ ಅಂತಾ. ಹೀಗೆ ನಾಲಿಗೆ ಚಪಲ, ಕಡುಬಯಕೆಗಳನ್ನು ನಿಯಂತ್ರಿಸುವುದು ಭಾರೀ ಕಷ್ಟ, ಹಾಗಂತ ಬಿಟ್ಟರೆ ನಮ್ಮ ಡಯೆಟ್‌ ನೀರಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಆಹಾರದ (Food) ಮೇಲಿನ ಕಡುಬಯಕೆಗಳಿಗೆ ಮೂಗುದಾರ ಹಾಕದೇ ಕಂಡದ್ದನ್ನೆಲ್ಲಾ ತಿನ್ನುತ್ತಾ ಹೋದರೆ ಬೇಡದ ಕೊಲೆಸ್ಟ್ರಾಲ್‌ (Cholesterol), ವಿಪರೀತ ತೂಕ ಎಲ್ಲವಕ್ಕೂ ಕಾರಣವಾಗುತ್ತದೆ.


ನೀವೂ ಕೂಡ ಡಯೆಟ್‌ ಮಾಡ್ತಿದ್ದು, ಇಲ್ಲಾ ತೂಕ ಇಳಿಸಲು ಏನನ್ನಾದರೂ ಮಾಡುತ್ತಿರುವಾಗ ಕಡುಬಯಕೆಗಳು ನಿಮ್ಮ ಪ್ರಯತ್ನಗಳನ್ನು ಹಾಳು ಮಾಡುತ್ತಿದ್ದರೆ ಇನ್ನುಮುಂದೆ ಕಡುಬಯಕೆಗಳನ್ನು ಕಂಟ್ರೋಲ್‌ ಮಾಡಲು ಡಯೆಟಿಷಿಯನ್ ಹರಿ ಲಕ್ಷ್ಮಿ ನೀಡಿರುವ ಸಲಹೆಗಳನ್ನು ಚಾಚು ತಪ್ಪದೇ ಫಾಲೋ ಮಾಡಿ.


ಸಾಂದರ್ಭಿಕ ಚಿತ್ರ


1. ಹೆಚ್ಚು ನೀರು ಕುಡಿಯಿರಿ


ಹೆಚ್ಚು, ಹೆಚ್ಚು ನೀರು ಸೇವನೆ ನಿಮ್ಮ ಕಡುಬಯಕೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖವಾಗಿದೆ. ದೇಹದಲ್ಲಿ ಉಂಟಾಗುವ ನಿರ್ಜಲೀಕರಣ, ಹಸಿವನ್ನು ಹೆಚ್ಚಿಸುವುದರಿಂದ ನಿಮಗೆ ಏನನ್ನಾದರೂ ತಿನ್ನುವ ಬಯಕೆ ಹೆಚ್ಚುತ್ತದೆ. ಹೀಗಾಗಿ ಇಂತಹ ಕಡುಬಯಕೆಗಳಿಗೆ ಕಡಿವಾಣ ಹಾಕಬೇಕು ಎಂದರೆ ನಿಮ್ಮನ್ನು ನೀವು ಹೈಡ್ರೇಟ್‌ ಮಾಡಿಕೊಳ್ಳಿ.


2. ಸಂಸ್ಕರಿಸಿದ ಮತ್ತು ಪ್ಯಾಕ್ಡ್‌ ಆಹಾರಗಳನ್ನು ಮನೆಯಲ್ಲಿಟ್ಟು ಕೊಳ್ಳಬೇಡಿ


ಮೊದಲಿಗೆ ನೀವು ತೂಕ ಇಳಿಸಲು ಪ್ಲ್ಯಾನ್‌ ಮಾಡುತ್ತಿದ್ದರೆ ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುವಂತಹ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಆಹಾರಗಳಿಂದ ದೂರವಿರಿ. ಇದನ್ನು ಹೊರಗೆ ತಿನ್ನುವುದನ್ನು ತಪ್ಪಿಸುವ ಜೊತೆ ಜೊತೆಯೇ ಮನೆಯಲ್ಲೂ ಈ ಆಹಾರಗಳನ್ನು ತಂದಿಟ್ಟುಕೊಳ್ಳಬೇಡಿ. ಮನೆಯಲ್ಲಿ ಇವುಗಳ ಬದಲಿಗೆ ಹಣ್ಣುಗಳು, ತರಕಾರಿಗಳು, ಬೀಜಗಳಂತಹ ಆಹಾರಗಳನ್ನು ಇರಿಸಿಕೊಳ್ಳಿ.


3. ಸಾಕಷ್ಟು ನಿದ್ರೆ ಮಾಡಿ


ಉತ್ತಮ ನಿದ್ರೆ, ಹಸಿವು ಮತ್ತು ಅನಾರೋಗ್ಯಕರ ತಿಂಡಿಗಳ ಕಡುಬಯಕೆಗಳನ್ನು ಹೆಚ್ಚಿಸುತ್ತದೆ. ನಿಮ್ಮ ಹಾರ್ಮೋನ್‌ಗಳನ್ನು ನಿಯಂತ್ರಿಸಲು ಮತ್ತು ನಿಮ್ಮ ಕಡುಬಯಕೆಗಳನ್ನು ನಿಯಂತ್ರಣದಲ್ಲಿಡಲು ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಮಾಡಿ. ರಾತ್ರಿ ಹೊತ್ತಲ್ಲಿ ಏನನ್ನಾದರೂ ತಿನ್ನಬೇಕು ಎನ್ನುವ ಬಯಕೆ ಆಗುವುದು ಹೆಚ್ಚು, ಹೀಗೆ ಸಿಕ್ಕಿದೆಲ್ಲಾ ತಿನ್ನುವುದನ್ನು ತಪ್ಪಿಸಿಕೊಳ್ಳಲು ಬೇಗ ಮಲಗಿಬಿಡಿ.


ಸಾಂದರ್ಭಿಕ ಚಿತ್ರ


4. ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇರಲಿ


ಪ್ರೋಟೀನ್ ಒಂದು ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿದ್ದು ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಆಹಾರದಲ್ಲಿ ಪ್ರೋಟೀನ್‌ ಇಲ್ಲದಿದ್ದಾಗಲೂ ಈ ಕಡುಬಯಕೆ ಭಾವನೆ ಹೆಚ್ಚಾಗುತ್ತದೆ. ಹೀಗಾಗಿ ನಿಮ್ಮ ಆಹಾರದ ಕಡುಬಯಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಮೊಟ್ಟೆ, ತೋಫು, ಚಿಕನ್ ಅಥವಾ ಮೀನಿನಂತಹ ಪ್ರೋಟೀನ್ ಭರಿತ ಆಹಾರಗಳನ್ನು ಡಯೆಟ್‌ನಲ್ಲಿ ಸೇರಿಸಿಕೊಳ್ಳಿ.


5. ಜಾಗರೂಕತೆಯಿಂದ ತಿನ್ನುವುದನ್ನು ಅಭ್ಯಾಸ ಮಾಡಿ


ಮೈಂಡ್‌ಫುಲ್ ಈಟಿಂಗ್ ಅಭ್ಯಾಸವನ್ನು ರೂಢಿಸಿಕೊಳ್ಳಿ. ಅಂದರೆ ದೇಹದ ಸಂಕೇತಗಳನ್ನು ಆಧರಿಸಿ ತಿನ್ನುವ ಕ್ರಮ. ಇದು ನಿಮಗೆ ಹಸಿದಿರುವಾಗ ತಿನ್ನಲು ಮತ್ತು ಹೊಟ್ಟೆ ತುಂಬಿರುವಾಗ ನಿಲ್ಲಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಕಡುಬಯಕೆಗಳನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುವ ಒಂದ ಕ್ರಮ. ಸಣ್ಣ ಆಗಲು ಪ್ರಯತ್ನಿಸುತ್ತಿರುವವರು ಈ ಮೈಂಡ್‌ಫುಲ್‌ ಈಟಿಂಗ್‌ ಅಭ್ಯಾಸ ಮೈಗೂಡಿಸಿಕೊಳ್ಳಬೇಕು.


ಸಾಂದರ್ಭಿಕ ಚಿತ್ರ


6. ನಿಮ್ಮ ಊಟ ಮತ್ತು ತಿಂಡಿಗಳನ್ನು ಯೋಜಿಸಿ


ಸಣ್ಣ ಆಗಲು ಪೂರಕವಾಗುವ ಯಾವೆಲ್ಲಾ ಆಹಾರಗಳನ್ನು ಪಾನೀಯಗಳನ್ನು ದಿನದಲ್ಲಿ ಸೇವಿಸಬೇಕು ಅಂತಾ ಪ್ಲ್ಯಾನ್‌ ಮಾಡಿಕೊಂಡು ಅದೇ ಟ್ರ್ಯಾಕ್‌ನಲ್ಲಿ ಹೋಗಿ. ಆಗ ನೀವು ಬೇಡದನ್ನೆಲ್ಲಾ ತಿನ್ನುವ ಕಡುಬಯಕೆಗಳನ್ನು ಹತೋಟಿಯಲ್ಲಿಡಬಹುದು. ಊಟದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಸಮತೋಲನವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.


ಇದನ್ನೂ ಓದಿ: Morning Breakfast: ಡಯೆಟ್​ನಲ್ಲಿದ್ರೆ ಬೆಳಗ್ಗೆ ಉಪಹಾರಕ್ಕೆ ಮಾಡ್ಕೊಳ್ಳಿ ಪ್ರೋಟೀನ್ ಶೇಕ್




7. ಒತ್ತಡ ಕಡಿಮೆ ಮಾಡಿಕೊಳ್ಳಿ


ಒತ್ತಡವು ಆಹಾರದ ಕಡುಬಯಕೆಗಳ ಜೊತೆಗೆ ನೇರವಾಗಿ ಸಂಬಂಧ ಹೊಂದಿರುವುದರಿಂದ ಒತ್ತಡದ ಹೆಚ್ಚಾದರೆ ತಿನ್ನುವ ಬಯಕೆ ಕೂಡ ಹೆಚ್ಚುತ್ತದೆ. ಹೀಗಾಗಿ ಯೋಗ, ಧ್ಯಾನ ಅಭ್ಯಾಸ ಮಾಡುವ ಮೂಲಕ ನಿಮ್ಮ ಒತ್ತಡದ ಮಟ್ಟವನ್ನು ನಿರ್ವಹಿಸಲು ಪ್ರಯತ್ನಿಸಿ.

top videos
    First published: