Health Tips: ಮಳೆಗಾಲದ ರೋಗ-ರುಜಿನಗಳನ್ನು ತಪ್ಪಿಸಲು ಈ 7 ಆರೋಗ್ಯ ಸಲಹೆಗಳನ್ನು ಪಾಲಿಸಿ

ಈ ಮಳೆಯು ನಮಗೆ ಮಲೇರಿಯಾ ಮತ್ತು ಡೆಂಗ್ಯೂಗಳಂತಹ ರೋಗಗಳನ್ನು ಉಂಟುಮಾಡುವ ಸೊಳ್ಳೆಗಳ ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಪ್ರತಿ ವರ್ಷವು ಇದರಿಂದ ಪಾರಾಗಲು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲ (Monsoon) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಆ ಹನಿಗಳ ಆಟ ಕೇವಲ ಕಣ್ತುಂಬಿಕೊಳ್ಳಲು ಮಾತ್ರವಲ್ಲದೇ, ಆ ಹನಿಗಳ ಜೊತೆ ಮಳೆಯಾಟ (Rain) ಆಡಿದರೆ ಮುಗೀತು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಹ ಸಂತಸ (Happiness) ಸಿಗುತ್ತದೆ. ಅದರಲ್ಲೂ ಈಗ ಶುರುವಾಗುತ್ತಿರುವ ಮುಂಗಾರು ಮಳೆ ನೆನೆದು “ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ” ಎಂಬ ಹಾಡು ತನ್ನಷ್ಟಕ್ಕೆ ತಾನೇ ನಾಲಿಗೆಯಲ್ಲಿ ಗುನುಗುತ್ತದೆ. ಭಾರತದಲ್ಲಿ ಈ ಮಾನ್ಸೂನ್‌ ಕಾಲವು ಒಂದು ಉಲ್ಲಾಸದ ಸಮಯ ಎನ್ನಬಹುದು.  ವರ್ಷವಿಡೀ ಸುಡುವ ಬೆಂಕಿಯಂತಹ ಬಿಸಿಲಿನಿಂದ (Sunny) ಬೆಂದ ನಮಗೆಲ್ಲ ಈ ಮಾನ್ಸೂನ್‌ ಮಳೆಯು ಕೆಲ ದಿನಗಳ ಕಾಲ ಮೈ ಮನವನ್ನು ತಣಿಸುತ್ತದೆ ಎಂದರೆ ತಪ್ಪಾಗದು.

ಆದರೆ ಈ ಭಾರೀ ಮಳೆಯಿಂದ ಪರಿಸರವು ಅಸ್ತವ್ಯಸ್ತಗೊಂಡು ಮಾನವ ಸಂಕುಲವು ಅನೇಕ ರೋಗಗಳಿಂದ ಬಳಲುವುದನ್ನು ನಾವು ಪ್ರತಿ ವರ್ಷ ಕಾಣುತ್ತಲೆ ಇದ್ದೆವೆ.  ಈ ಮಳೆಯು ನಮಗೆ ಮಲೇರಿಯಾ ಮತ್ತು ಡೆಂಗ್ಯೂಗಳಂತಹ ರೋಗಗಳನ್ನು ಉಂಟುಮಾಡುವ ಸೊಳ್ಳೆಗಳ ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಪ್ರತಿ ವರ್ಷವು ಇದರಿಂದ ಪಾರಾಗಲು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ನೀವು ಅನಾರೋಗ್ಯಕ್ಕೆ ತುತ್ತಾಗದಂತೆ ತಡೆಗಟ್ಟಲು ಕೆಲವು ಮಾನ್ಸೂನ್ ಆರೋಗ್ಯ ಸಲಹೆಗಳು ಇಲ್ಲಿವೆ.

1) 5) ಹಸಿ ತರಕಾರಿಗಳನ್ನು ತಿನ್ನಬೇಡಿ
ಮೊದಲನೇ ಆರೋಗ್ಯ ಸಲಹೆಯೆಂದರೆ ಹಸಿ ತರಕಾರಿಗಳನ್ನು ತಿನ್ನಬೇಡಿ ಏಕೆಂದರೆ ಅವುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹೊಂದಿರುತ್ತವೆ, ಇದರಿಂದ ಹೊಟ್ಟೆ ನೋವು, ಆಹಾರವು ವಿಷಗೊಳ್ಳುವುದು, ವಾಂತಿ ಮತ್ತು ಅತಿಸಾರದಂತಹ ತೀವ್ರತರವಾದ ಸೋಂಕುಗಳಿಗೆ ಕಾರಣವಾಗಬಹುದು. ಬೇಯಿಸಿದ ಮತ್ತು ಆವಿಯಲ್ಲಿ ಬೆಂದ ತರಕಾರಿಗಳು ಆರೋಗ್ಯಕರವಾಗಿರುತ್ತವೆ ಮತ್ತು ಬಹಳಷ್ಟು ಪ್ರೋಟೀನ್‌ಗಳು, ನಾರುಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು, ಇದರ ಜೊತೆಗೆ ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಉತ್ತಮ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಮೊಡವೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

2) ಕಹಿ ಆಹಾರವನ್ನು ಸೇವಿಸಿ
ಸೋರೆಕಾಯಿ, ಬೇವಿನ ಬೀಜಗಳು ಮತ್ತು ಗ್ರೀನ್‌ ಟೀಗಳಂತಹ ಚಹಾಪೇಯಗಳನ್ನು ಹೆಚ್ಚು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ಯಾವ ಅಲರ್ಜಿ ರೋಗಗಳು ಹತ್ತಿರವೂ ಸುಳಿಯುವುದಿಲ್ಲ.

ಇದನ್ನೂ ಓದಿ: Vitamin B 12: ದೇಹಕ್ಕೆ ಪ್ರತಿದಿನ ಬೇಕು ವಿಟಮಿನ್ ಬಿ 12; ಯಾವ ಪದಾರ್ಥಗಳು ಈ ಕೊರತೆ ಪೂರೈಸುತ್ತದೆ?

3) ಮನೆಯಲ್ಲಿ ತಯಾರಿಸಿದ ಹಣ್ಣುಗಳ ರಸ ಸೇವನೆ
ನಿಮ್ಮ ಮನೆಯಲ್ಲಿ ತಯಾರಿಸಿದ ಹಣ್ಣುಗಳ ರಸವನ್ನು ಮಾತ್ರ ಸೇವಿಸಿ. ಹೊರಗಡೆ ಏನಾದರೂ ಸೇವಿಸಿದ್ದಲ್ಲಿ ಅನಾರೋಗ್ಯಕ್ಕೆ ತುತ್ತಾಗುವಿರಿ. ಉದಾ: ಸೇಬು ಮತ್ತು ಕಿತ್ತಳೆ ಹಣ್ಣುಗಳ ರಸ ರುಚಿಸಲು ಮಾತ್ರವಲ್ಲದೇ ಸಾಕಷ್ಟು ಆರೋಗ್ಯ ಅಂಶಗಳನ್ನು ಹೊಂದಿವೆ. ಈ ಹಣ್ಣುಗಳು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಲೇರಿಯಾ ಮತ್ತು ಅತಿಸಾರದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

4) ಕೀಟ ನಿವಾರಕಗಳನ್ನು ಬಳಸಿ
ನೀವು ಎಲ್ಲೆಲ್ಲೆ ಓಡಾಡುವಿರೋ ಅಲ್ಲಲ್ಲಿ ಕೆಲವು ಕೀಟ ನಿವಾರಕಗಳನ್ನು ಬಳಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿದೆ. ಮಳೆ ನೀರು ನಿಲ್ಲದಂತೆ ಎಚ್ಚರವಹಿಸಿ. ಇಲ್ಲದಿದ್ದರೆ ಆ ಸ್ಥಳಗಳು ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿ ಬದಲಾಗುತ್ತವೆ. ಸೊಳ್ಳೆಗಳು ಮತ್ತು ನೊಣಗಳಿಂದ ಉಂಟಾಗುವ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಬೇವಿನ ಎಲೆಗಳು ಮತ್ತು ಲವಂಗಗಳಂತಹ ಕೀಟ ನಿವಾರಕಗಳು ಮತ್ತು ಸೋಂಕುನಿವಾರಕಗಳನ್ನು ಬಳಸುವ ಮೂಲಕ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.

5) ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು
ಶಾಲೆ ಅಥವಾ ಕೆಲಸದಿಂದ ಹಿಂತಿರುಗಿದ ನಂತರ ಕೂಡಲೇ ಬಿಸಿನೀರಿನ ಸ್ನಾನ ಮಾಡುವುದರಿಂದ ಬೆವರಿನಿಂದ ಉಂಟಾಗುವ ರೋಗಗಳಿಂದ ಪಾರಾಗಬಹುದು.

6) ಮಿತವಾಗಿ ತಿನ್ನಿರಿ
ಈ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸುವುದು ಸೂಕ್ತವಲ್ಲ. ಏಕೆಂದರೆ ಮಳೆಗಾಲವು ತಂಪಾಗಿರುವುದರಿಂದ ಹೆಚ್ಚಿನ ಶಕ್ತಿಯು ವ್ಯಯವಾಗದೇ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆಹಾರದ ಅತಿಯಾದ ಸೇವನೆಯು ಹೊಟ್ಟೆ ಉಬ್ಬರ,ಅಸಿಡಿಟಿ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು. ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ನೀವು ಪ್ರಯತ್ನಿಸುತ್ತಿದ್ದರೆ, ಬೆಳ್ಳುಳ್ಳಿ, ಮೆಣಸು ಮತ್ತು ಕೊತ್ತಂಬರಿ ಹೊಂದಿರುವ ಆಹಾರವನ್ನು ಪ್ರತಿ 2 ತಾಸುಗಳಿಗೊಮ್ಮೆ ಸೇವಿಸಿ.

7) ಬೀದಿ ಬದಿ ಆಹಾರ ತ್ಯಜಿಸಿ
ಬೀದಿ ಬದಿ ಆಹಾರ ಯಾವ ಕಾಲಕ್ಕೂ ಸೂಕ್ತವಲ್ಲ ಎಂದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಬೀದಿ ಬದಿಯಲ್ಲಿ ಸ್ವಚ್ಛತೆಗೆ ಮಹತ್ವ ನೀಡದೇ ಇರುವುದರಿಂದ ಇದು ಗಂಭಿರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಬೀದಿ ಬದಿ ಆಹಾರಗಳಿಗೆ ಗುಡ್‌ ಬೈ ಹೇಳಿ ಉತ್ತಮ ಆರೋಗ್ಯಕ್ಕೆ ಜೈ ಎನ್ನಿ.

ಇದನ್ನೂ ಓದಿ:  Hair Botox: ಸೊಂಪಾದ ಸ್ಟ್ರೈಟ್ ಕೂದಲಿಗೆ ಬೊಟೊಕ್ಸ್! ಇದೇನಿದು ಹೊಸ ಚಿಕಿತ್ಸೆ?

ಈ ಮಾನ್ಸೂನ್‌ನಲ್ಲಿ ನೀವು ಸಂತಸದಿಂದ ಆರೋಗ್ಯಕರವಾಗಿರಲು ಬಯಸಿದರೆ, ಮೇಲಿನ ಸಲಹೆಗಳನ್ನು ತಪ್ಪದೇ ಫಾಲೋ ಮಾಡಿ.
Published by:Ashwini Prabhu
First published: