• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Relationship Tips: ಒಂದು ಮಗುವಾದ ನಂತರ ದಂಪತಿ ಮಧ್ಯೆ ಈ ಸಮಸ್ಯೆ ಕಾಮನ್! ತಲೆಕೆಡಿಸಿಕೊಳ್ಳಬೇಡಿ, ಪರಿಹಾರ ಇಲ್ಲಿದೆ ನೋಡಿ

Relationship Tips: ಒಂದು ಮಗುವಾದ ನಂತರ ದಂಪತಿ ಮಧ್ಯೆ ಈ ಸಮಸ್ಯೆ ಕಾಮನ್! ತಲೆಕೆಡಿಸಿಕೊಳ್ಳಬೇಡಿ, ಪರಿಹಾರ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೌದು.. ಸಂಸಾರ ಎಂದರೆ ಏನು? ಮಗುವನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇರಿಸಿಕೊಂಡು ಬೆಳೆಸುವುದು, ಆ ಹೆರಿಗೆ ನೋವು, ಎಲ್ಲದಕ್ಕಿಂತಲೂ ಹೆಚ್ಚು ಹೆಣ್ಣಿಗೆ ತಾಯ್ತನದ ಖುಷಿ ಮತ್ತು ಮಗುವಿಗೆ ತಂದೆ ಆದ ಖುಷಿ ಗಂಡನಿಗೆ.. ಇದೆಲ್ಲದರಿಂದ ಸಿಗುವ ಸಂತೋಷವನ್ನು ಪದಗಳಲ್ಲಿ ಹೇಳಿ ತೀರಿಸಿಕೊಳ್ಳಲು ಆಗುವುದೇ ಇಲ್ಲ ಅಂತ ಹೇಳಬಹುದು.

ಮುಂದೆ ಓದಿ ...
  • Share this:

ಮದುವೆ (Marriage) ಆದ ಒಂದೆರಡು ವರ್ಷಗಳು ನವಜೋಡಿಗೆ ‘ಹನಿಮೂನ್ ಟೈಂ’ (Honeymoon) ಅಂತಾನೆ ಅನೇಕರು ಹೇಳುತ್ತಾರೆ. ಸಾಮಾನ್ಯವಾಗಿ ಕೆಲಸ ಮಾಡುವ ದಂಪತಿಗಳು ಎರಡು ಮೂರು ವರ್ಷಗಳ ನಂತರವೇ ಮಗುವಿಗೆ (Baby) ಜನ್ಮ ನೀಡಲು ನಿರ್ಧರಿಸುತ್ತಾರೆ. ಆದರೆ ಕೆಲವರು ಮಾತ್ರ ತಮಗೆ ಮದುವೆಯಾಗುವುದಕ್ಕೆ ಸ್ವಲ್ಪ ವಯಸ್ಸಾಗಿದೆ, ತಡ ಮಾಡಿದಷ್ಟೂ ಮುಂದೆ ಮಗು ಆಗೋದಕ್ಕೆ ತೊಂದರೆಯಾದರೆ ಅಂತೆಲ್ಲಾ ಯೋಚನೆ ಮಾಡಿ ಮದುವೆಯಾದ ಒಂದು ವರ್ಷದಲ್ಲಿಯೇ ತಮ್ಮ ಪೋಷಕರಿಗೆ ಕೆಲ ನವ ದಂಪತಿಗಳು (Newly Married Couple) ಗುಡ್ ನ್ಯೂಸ್ ಕೊಡ್ತಾರೆ. ಮದುವೆಯಾದ ಹೊಸತರಲ್ಲಿ ಗಂಡ-ಹೆಂಡತಿ (Husband-Wife) ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದೆ, ಸುತ್ತಾಡಿದ್ದು. ಆದರೆ ಸಂಸಾರ ಅಂತ ಶುರುವಾಗುವುದು ಒಂದು ಮಗುವಿಗೆ ಜನ್ಮ ಕೊಟ್ಟಾಗಲೇ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಸಾಂದರ್ಭಿಕ ಚಿತ್ರ


ಹೌದು.. ಸಂಸಾರ ಎಂದರೆ ಏನು? ಮಗುವನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇರಿಸಿಕೊಂಡು ಬೆಳೆಸುವುದು, ಆ ಹೆರಿಗೆ ನೋವು, ಎಲ್ಲದಕ್ಕಿಂತಲೂ ಹೆಚ್ಚು ಹೆಣ್ಣಿಗೆ ತಾಯ್ತನದ ಖುಷಿ ಮತ್ತು ಮಗುವಿಗೆ ತಂದೆ ಆದ ಖುಷಿ ಗಂಡನಿಗೆ.. ಇದೆಲ್ಲದರಿಂದ ಸಿಗುವ ಸಂತೋಷವನ್ನು ಪದಗಳಲ್ಲಿ ಹೇಳಿ ತೀರಿಸಿಕೊಳ್ಳಲು ಆಗುವುದೇ ಇಲ್ಲ ಅಂತ ಹೇಳಬಹುದು.


ಆದರೆ ಮಗು ಆದ ನಂತರ ಮನೆಗೆ ಖುಷಿಯ ಜೊತೆಗೆ ಕೆಲವು ಹೊಸ ಜವಾಬ್ದಾರಿಗಳು ದಂಪತಿಗಳ ಹೆಗಲೇರಿ ಬರುತ್ತವೆ. ಕೆಲವರು ಈ ಜವಾಬ್ದಾರಿಗಳು ಬರುತ್ತವೆ ಅಂತ ಮಾನಸಿಕವಾಗಿ ಸಿದ್ದರಾಗಿ ಮಗು ಮತ್ತು ಗಂಡನನ್ನು ಇಬ್ಬರನ್ನೂ ಚೆನ್ನಾಗಿ ಸಂಬಾಳಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಈ ಜವಾಬ್ದಾರಿಗಳನ್ನು ಒಂದು ಹೊರೆಯ ರೀತಿಯಲ್ಲಿ ನೋಡಿ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಗಂಡ ಹೆಂಡತಿಯ ಮಧ್ಯೆ ಅನೇಕ ಸಮಸ್ಯೆಗಳಿಗೆ ಮತ್ತು ಜಗಳಗಳಿಗೆ ದಾರಿ ಮಾಡಿಕೊಡುತ್ತದೆ ಅಂತ ಹೇಳಬಹುದು.


ಸಾಂದರ್ಭಿಕ ಚಿತ್ರ


ಮಗುವಿನ ಜನನದ ನಂತರ ಗಂಡ ಹೆಂಡತಿಯ ಮಧ್ಯೆ ಕೆಲವು ಸಮಸ್ಯೆಗಳು ಬರುವುದು ಸಾಮಾನ್ಯವಾಗಿರುತ್ತದೆ. ಆದರೆ ಈ ಸಮಸ್ಯೆಗಳು ಬೆಟ್ಟದ ಹಾಗೆ ಬೆಳೆದು ಪ್ರೀತಿಸೋ ಮನಸ್ಸುಗಳ ಮಧ್ಯೆ ಅಂತರ ತರುವಂತಿರಬಾರದು ಅಷ್ಟೇ. ಮಗುವಿನ ಆಗಮನದ ನಂತರ ದಂಪತಿಗಳಲ್ಲಿ ಯಾವೆಲ್ಲಾ ಸಮಸ್ಯೆಗಳು ಬರಬಹುದು ಮತ್ತು ಅವುಗಳನ್ನು ಒತ್ತಡಕ್ಕೆ ಸಿಲುಕದೆ ಮತ್ತು ಪರಸ್ಪರರು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೆ ಹೇಗೆ ನಿಭಾಯಿಸಬೇಕು ಅಂತ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.


ಆದಷ್ಟು ನಿದ್ರೆಯ ಕೊರತೆ ತಪ್ಪಿಸಿ


ಮೊದಲೆಲ್ಲಾ ಹಾಯಾಗಿ ಮಲಗುತ್ತಿದ್ದ ದಂಪತಿಗಳು ಮಗು ಹುಟ್ಟಿದ ನಂತರ ಮೊದಲು ಆ ನಿದ್ರೆಯನ್ನು ತ್ಯಾಗ ಮಾಡಬೇಕಾಗುತ್ತದೆ. ತಮ್ಮ ಮಗುವನ್ನು ನೋಡಿಕೊಳ್ಳುವ ಸಲುವಾಗಿ ತಾಯಿ ಮತ್ತು ತಂದೆ ಕೆಲವೊಮ್ಮೆ ನಿದ್ರೆಯನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ. ಅದರಲ್ಲೂ ತಂದೆ ಹಾಗೆಯೇ ಮಲಗಬಹುದು, ಆದರೆ ತಾಯಿ ಮಗುವಿಗೆ ಹಾಲುಣಿಸುತ್ತಾ ಕೂತಲ್ಲಿಯೇ ಇಡೀ ರಾತ್ರಿ ತೂಕಡಿಸುತ್ತಾಳೆ ಅಂತ ಹೇಳಬಹುದು.


baby and mother suffering from fever then she breast feeing is good or bad
ಸಾಂದರ್ಭಿಕ ಚಿತ್ರ


ಹೀಗೆ ಮಗು ರಾತ್ರಿಯಲ್ಲ ನಿದ್ರೆ ಮಾಡದೆ ಅಳುವುದಕ್ಕೆ ಶುರು ಮಾಡಿದಾಗ ದಂಪತಿಗಳಿಗೆ ಕಿರಿಕಿರಿ ಅಂತ ಅನ್ನಿಸುವುದು ಸಹಜ ಮತ್ತು ಇದು ಹೆಚ್ಚಾದಂತೆ ಮನಸ್ಥಿತಿಯ ಬದಲಾವಣೆಗಳು ಮತ್ತು ಒತ್ತಡಕ್ಕೆ ಕಾರಣವಾಗಬಹುದು, ಇದು ಅವರಿಬ್ಬರ ವೈವಾಹಿಕ ಜೀವನದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಸಹ ಬೀರಬಹುದು. ಈ ಸಮಸ್ಯೆಯನ್ನು ಪರಿಹರಿಸಲು, ಪೋಷಕರು ರಾತ್ರಿಯಲ್ಲಿ ಮಗುವನ್ನು ನೋಡಿಕೊಳ್ಳುವುದಕ್ಕೆ ಕುಟುಂಬದ ಸದಸ್ಯರ ಅಥವಾ ಸ್ನೇಹಿತರ ಸಹಾಯವನ್ನು ಕೇಳಬಹುದು ಅಥವಾ ಮಗುವನ್ನು ಕೆಲವು ಗಂಟೆಗಳ ಕಾಲ ವೀಕ್ಷಿಸಲು ಶಿಶುಪಾಲಕರನ್ನು ನೇಮಿಸಿಕೊಳ್ಳಬಹುದು.


ಸಮಯ ನಿರ್ವಹಣೆ ಬಗ್ಗೆ ಕಲಿಯಿರಿ


ಮಗುವಿನ ಆಗಮನದಿಂದ ದಂಪತಿಗಳ ದೈನಂದಿನ ದಿನಚರಿ ಸಂಪೂರ್ಣವಾಗಿ ಬದಲಾಗುತ್ತದೆ ಅಂತ ಹೇಳಬಹುದು. ಇದು ಗಂಡ ಹೆಂಡತಿ ಇಬ್ಬರು ಪರಸ್ಪರ ಸಮಯವನ್ನು ಕಳೆಯಲು ಸಾಧ್ಯವಾಗದೇ ಇರಬಹುದು. ತಮ್ಮ ಸಮಯವನ್ನು ಚೆನ್ನಾಗಿ ನಿರ್ವಹಿಸಲು, ದಂಪತಿಗಳು ಡೇಟಿಂಗ್ ರಾತ್ರಿಗಳನ್ನು ಪ್ಲ್ಯಾನ್ ಮಾಡಬಹುದು, ಪರಸ್ಪರ ಸಮಯ ಕಳೆಯುವುದಕ್ಕೆ ಆದ್ಯತೆ ನೀಡಬಹುದು ಮತ್ತು ಅವರ ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಪರಸ್ಪರರು ಮುಕ್ತವಾಗಿ ಹಂಚಿಕೊಳ್ಳಬೇಕು.


ಸಾಂದರ್ಭಿಕ ಚಿತ್ರ


ದಂಪತಿಗಳು ಪರಸ್ಪರ ಮಾತನಾಡಿಕೊಳ್ಳಿ


ಪೋಷಕರಾದ ಹೆಚ್ಚುವರಿ ಜವಾಬ್ದಾರಿಗಳೊಂದಿಗೆ, ದಂಪತಿಗಳಿಗೆ ಪರಸ್ಪರ ಸಂವಹನ ನಡೆಸಲು ಕಡಿಮೆ ಸಮಯ ಸಿಗುತ್ತದೆ, ಇದು ಕೆಲವೊಮ್ಮೆ ತಪ್ಪು ತಿಳುವಳಿಕೆ ಮತ್ತು ಅಸಮಾಧಾನಕ್ಕೆ ಕಾರಣವಾಗಬಹುದು. ಸಂವಹನವನ್ನು ಸುಧಾರಿಸಲು, ದಂಪತಿಗಳು ಪರಸ್ಪರ ಮಾತನಾಡಲು, ತಮ್ಮ ಭಾವನೆಗಳು ಮತ್ತು ಅಗತ್ಯಗಳನ್ನು ವ್ಯಕ್ತಪಡಿಸಲು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಪ್ರತಿದಿನ ಸ್ವಲ್ಪ ಸಮಯವನ್ನು ಮೀಸಲಿಡುವುದು ಮುಖ್ಯವಾಗುತ್ತದೆ.


ಆರ್ಥಿಕ ಒತ್ತಡವನ್ನು ಇಬ್ಬರೂ ಸೇರಿ ನಿಭಾಯಿಸಿ


ಮಗುವನ್ನು ಬೆಳೆಸುವ ವೆಚ್ಚವು ದಂಪತಿಗಳ ಹಣಕಾಸಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಈ ಒತ್ತಡ ಇಬ್ಬರಲ್ಲೂ ಹೆಚ್ಚಾಗಿ ವಾದ ವಿವಾದಗಳಿಗೆ ಕಾರಣವಾಗುತ್ತದೆ. ಆರ್ಥಿಕ ಒತ್ತಡವನ್ನು ನಿರ್ವಹಿಸಲು, ದಂಪತಿಗಳು ಒಂದು ಬಜೆಟ್ ಯೋಜನೆಯನ್ನು ರಚಿಸಿಕೊಳ್ಳಬೇಕು, ಅನಿರೀಕ್ಷಿತ ವೆಚ್ಚಗಳಿಗೆ ಬ್ರೇಕ್ ಹಾಕಿ, ಅವರ ಮುಖ್ಯವಾದ ಖರ್ಚುಗಳಿಗೆ ಆದ್ಯತೆ ನೀಡಬೇಕು.


ಸಾಂದರ್ಭಿಕ ಚಿತ್ರ


ಕೆಲಸಗಳನ್ನು ಸರಿಯಾಗಿ ಹಂಚಿಕೊಳ್ಳಬೇಕು


ಮಗುವನ್ನು ನೋಡಿಕೊಳ್ಳುವುದು ಪೂರ್ಣ ಸಮಯದ ಕೆಲಸವಾಗಬಹುದು ಮತ್ತು ದಂಪತಿಗಳು ಈ ಜವಾಬ್ದಾರಿಗಳನ್ನು ನ್ಯಾಯಯುತವಾಗಿ ವಿಭಜಿಸಿಕೊಳ್ಳುವುದು ಉತ್ತಮ. ಕೆಲಸಗಳನ್ನು ಇಬ್ಬರು ದಂಪತಿಗಳು ಸಮನಾಗಿ ಹಂಚಿಕೊಳ್ಳುವುದಕ್ಕೆ ತಮ್ಮ ತಮ್ಮ ನಿರೀಕ್ಷೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಒಂದು ವೇಳಾಪಟ್ಟಿಯನ್ನು ರೆಡಿ ಮಾಡಬೇಕು ಮತ್ತು ಅಗತ್ಯವಿದ್ದಾಗ ಒಬ್ಬರು ಇನ್ನೊಬ್ಬರ ಸಹಾಯವನ್ನು ಕೇಳಬಹುದು.


ಅನ್ಯೋನ್ಯತೆಯಲ್ಲಿ ಬದಲಾವಣೆಗಳು


ಮಗುವಿನ ಆಗಮನವು ದಂಪತಿಗಳ ಅನ್ಯೋನ್ಯತೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಅವರ ಲೈಂಗಿಕ ಚಟುವಟಿಕೆಯಲ್ಲಿ ದೊಡ್ಡ ಬದಲಾವಣೆ ಉಂಟಾಗಬಹುದು ಅಥವಾ ಇಬ್ಬರು ಮಗು ಬರುವ ಮುಂಚೆ ಇದ್ದಂತಹ ದೈಹಿಕ ಅನ್ಯೋನ್ಯತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು. ಈ ಅನ್ಯೋನ್ಯತೆಯನ್ನು ಹಾಗೆ ಕಾಪಾಡಿಕೊಂಡು ಹೋಗಲು, ದಂಪತಿಗಳು ಅನ್ಯೋನ್ಯತೆಗೆ ಸಮಯವನ್ನು ಮೀಸಲಿಡಬಹುದು, ಅವರ ಅಗತ್ಯಗಳು ಮತ್ತು ಬಯಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದು ಮತ್ತು ಅಗತ್ಯವಿದ್ದರೆ ಸಲಹೆಗಾರರ ಸಹಾಯವನ್ನು ಪಡೆಯಬಹುದು.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Aishwarya Rai: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಐಶ್? ಫೋಟೋ ವೈರಲ್




ಪೋಷಕರಾದಾಗ ದಂಪತಿಗಳ ಜವಾಬ್ದಾರಿಗಳ ಬಗ್ಗೆ ಅರಿವಿರಲಿ


ಮನೆಗೆ ಮಗು ಬಂದ ನಂತರದಲ್ಲಿ ದಂಪತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಲು ದಂಪತಿಗಳು ತಮ್ಮ ನಿರೀಕ್ಷೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ತಮ್ಮ ಹೊಸ ಪಾತ್ರಗಳಲ್ಲಿ ಪರಸ್ಪರರನ್ನು ಬೆಂಬಲಿಸುವುದು ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಅಂತ ಹೇಳಬಹುದು.

top videos
    First published: