Food Recipe: ಸಂಜೆ ಟೀ ಜೊತೆ ಸೇವಿಸಲು ಈ 7 ಆರೋಗ್ಯಕರ ತಿನಿಸುಗಳನ್ನು ತಯಾರಿಸಿ

ಆರೋಗ್ಯದ ಬಗ್ಗೆ ಕಾಳಜಿ ಇದ್ದು, ಜೊತೆಗೆ ನಾಲಗೆಗೆ ರುಚಿ ಎನಿಸುವ ತಿನಿಸುಗಳನ್ನು ಕೂಡ ಸವಿಯಬೇಕು ಎಂಬ ಆಸೆ ಉಳ್ಳವರು ಚಿಂತಿಸಬೇಕಿಲ್ಲ. ಅಂತವರಿಗೂ ಸಂಜೆಯ ಚಹಾದ ಜೊತೆ, ಕ್ಯಾಲೋರಿಯ ಚಿಂತೆ ಬಿಟ್ಟು ತಿನ್ನಲು ಸಾಕಷ್ಟು ಬಗೆಯ ತಿನಿಸುಗಳಿವೆ. ಆರೋಗ್ಯಕ್ಕೆ ಉತ್ತಮವಾದ ಮತ್ತು ರುಚಿಕರವಾದ 7 ತಿನಿಸುಗಳ ಕುರಿತ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹೆಚ್ಚಿನ ಭಾರತೀಯರಿಗೆ ಸಂಜೆಯ ಚಹಾದ (Tea) ಜೊತೆ ಏನಾದರೂ ತಿನಿಸನ್ನು ಮೆಲ್ಲುವ ಅಭ್ಯಾಸವಿರುತ್ತದೆ. ಆರೋಗ್ಯಕರ ತಿನಿಸುಗಳೇ (Healthy Eats) ಬೇಕೆಂದಿಲ್ಲ ಎಂಬವರಿಗಂತೂ ಸಂಜೆಯ ಚಹಾದ ಜೊತೆಗೆ ಸೇವಿಸಬಹುದಾದ ಸ್ನ್ಯಾಕ್ಸುಗಳಲ್ಲಿ, ಬಜ್ಜಿ, ಬೋಂಡಾ ಮತ್ತಿತರ ತರಾವರಿ ಆಯ್ಕೆಗಳು ಲಭ್ಯ. ಹಾಗಂತ, ಆರೋಗ್ಯದ ಬಗ್ಗೆ ಕಾಳಜಿ ಇದ್ದು, ಜೊತೆಗೆ ನಾಲಗೆಗೆ ರುಚಿ ಎನಿಸುವ ತಿನಿಸುಗಳನ್ನು ಕೂಡ ಸವಿಯಬೇಕು ಎಂಬ ಆಸೆ ಉಳ್ಳವರು ಚಿಂತಿಸಬೇಕಿಲ್ಲ. ಅಂತವರಿಗೂ ಸಂಜೆಯ ಚಹಾದ (Tea) ಜೊತೆ, ಕ್ಯಾಲೋರಿಯ ಚಿಂತೆ ಬಿಟ್ಟು ತಿನ್ನಲು ಸಾಕಷ್ಟು ಬಗೆಯ ತಿನಿಸುಗಳಿವೆ. ಆರೋಗ್ಯಕ್ಕೆ ಉತ್ತಮವಾದ ಮತ್ತು ರುಚಿಕರವಾದ 7 ತಿನಿಸುಗಳ ಕುರಿತ ಮಾಹಿತಿ ಇಲ್ಲಿದೆ.

ಕಾರ್ನ್ ಭೇಲ್
ಭೇಲ್‍ಗೆ, ಕಾರ್ನ್ ಅನ್ನು ಸೇರಿಸಿ ಮಾಡುವ ಸ್ಪೈಸಿ ಕಾರ್ನ್ ಭೇಲ್ ತಿನ್ನಲು ರುಚಿಕರ ಮತ್ತು ಅಷ್ಟೇ ಆರೋಗ್ಯಕರ ಕೂಡ. ಸಾಮಾನ್ಯ ರೀತಿಯ ಭೇಲ್ ತಿಂದು ಬೋರ್ ಆಗಿದ್ದರೆ, ಸ್ಪೈಸಿ ಕಾರ್ನ್ ಭೇಲ್ ತಯಾರಿಸಿ ನೋಡಿ. ಬೇಯಿಸಿದ ಕಾರ್ನ್, ಬೇಯಿಸಿದ ಆಲೂಗಡ್ಡೆ ತುಂಡುಗಳು, ಚಟ್ನಿ, ಮಸಾಲೆ ಮತ್ತು ಈರುಳ್ಳಿ ಸೇರಿಸಿ ಮಾಡುವ ಈ ತಿನಿಸನ್ನು ತಯಾರಿಸುವುದು ತುಂಬಾ ಸುಲಭ.

ಆಮ್ ಚನ್ನಾ ಚಾಟ್
ಚಾಟ್ಸ್ ನಲ್ಲಿ ಕಡಿಮೆ ಕ್ಯಾಲೋರಿ ಹೇಗಿರುತ್ತದೆ ? ಎಂದು ಆಲೋಚಿಸಬೇಡಿ. ಇದು ಸಾಧ್ಯವಿದೆ. ಚಾಟ್ಸ್ ತಿನ್ನಬೇಕು ಎಂದು ಆಸೆ ಹುಟ್ಟಿದಾಗ, ಕ್ಯಾಲೋರಿಯ ಚಿಂತೆ ಇಲ್ಲದೆ ಸೇವಿಸಬಹುದಾದ ತಿನಿಸು ಆಮ್ ಚನ್ನಾ ಚಾಟ್. ಬೇಯಿಸಿದ ಮೊಳಕೆ ಕಟ್ಟಿದ ಕಡಲೇ ಕಾಳು, ಮಾವಿನ ಕಾಯಿ, ಕ್ಯಾರೆಟ್ ಮತ್ತು ಸೌತೆಕಾಯಿಗಳನ್ನು ಹಾಕಿ, ನಿಂಬೆ ರಸ, ಚಾಟ್ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಯಾರಿಸುವ ಚಾಟ್ ಇದು.

ಇದನ್ನೂ ಓದಿ: Morning Breakfast: ಬೆಳಗಿನ ತಿಂಡಿಗೆ ಗರಿಗರಿಯಾಗಿ, ರುಚಿಯಾಗಿ ಮಾಡಿ ಗೋಧಿ ದೋಸೆ! ರೆಸಿಪಿ ಇಲ್ಲಿದೆ ಓದಿ

ಹುರಿದ ಚಿವ್ಡಾ
ಚಿವ್ಡಾ ಎಂದರೆ, ಹುರಿದ ಅಥವಾ ಕೊಂಚ ಹದವಾಗಿ ಫ್ರೈ ಮಾಡಿದ ಭಾರತೀಯ ಕುರುಕಲು ತಿನಿಸು. ಸಾಮಾನ್ಯವಾಗಿ ಅವಲಕ್ಕಿಯಿಂದ ಚಿವ್ಡಾ ತಯಾರಿಸುತ್ತಾರೆ. ಆದರೆ ಈ ಆರೋಗ್ಯಕರ ರೆಸಿಪಿಯಲ್ಲಿ ಅವಲಕ್ಕಿಯ ಜೊತೆ ಡ್ರೈ ಓಟ್ಸ್ ಅನ್ನು ಕೂಡ ಸೇರಿಸಿ ಹುರಿಯಲಾಗುತ್ತದೆ. ಕಡಲೇ ಕಾಳು, ಕೊಬ್ಬರಿ ತುಂಡುಗಳು, ನೆಲಗಡಲೆ ಮತ್ತು ಕರಿಬೇವಿನ ಸೊಪ್ಪನ್ನು ಕೂಡ ಇದಕ್ಕೆ ಸೇರಿಸಲಾಗುತ್ತದೆ.

ಬೇಕ್ ಮಾಡಿದ ರಾಗಿ ಚಕ್ಕುಲಿ
ಇದೊಂದು ದಕ್ಷಿಣ ಭಾರತೀಯ ತಿನಿಸು. ರಾಗಿ ಎಷ್ಟು ಪೌಷ್ಟಿಕಾಂಶಯುಕ್ತ ಆಹಾರ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಅದರಿಂದ ತಯಾರಿಸಿದ ಬೇಕ್ ಮಾಡಿದ ಚಕ್ಕುಲಿ ಅಥವಾ ಮುರುಕ್ಕು ಕೂಡ ಅಷ್ಟೇ ಆರೋಗ್ಯಕರವಾಗಿರುತ್ತದೆ.

ಬೇಕ್ ಮಾಡಿದ ನಮಕ್‍ಪಾರಾ
ಇದು ಶೆಫ್ ಕುನಾಲ್ ಕಪೂರ್ ಅವರು ಹೇಳಿರುವ ರೆಸಿಪಿ. ಬೇಕ್ ಮಾಡಿದ ನಮಕ್‍ಪಾರ ಚಹಾ ಜೊತೆ ಸೇವಿಸಲು ಸೂಕ್ತವಾದ ರೆಸಿಪಿ. ಇದು ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕರ ಕೂಡ. ಇದನ್ನು ಬಾದಾಮಿ, ಲಿಂಬೆ ರಸ, ಟೊಮ್ಯಾಟೋ, ಆಲಿವ್ ಎಣ್ಣೆ , ಬೆಳ್ಳುಳ್ಳಿ ಮತ್ತಿತರ ಆರೋಗ್ಯಕರ ಪದಾರ್ಥಗಳನ್ನು ಹಾಕಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಕೇವಲ 30 ನಿಮಿಷ ಸಾಕು.

ಕಡಿಮೆ ಕ್ಯಾಲೋರಿ ಉಳ್ಳ ಚಿಲ್ಲಿ ಮಖನಾ (ಕಮಲದ ಬೀಜಗಳು)
ಇದು ಅತ್ಯಂತ ಸರಳವಾಗಿ ತಯಾರಿಸಬಹುದಾದ ರೆಸಿಪಿ. ಚಿಲ್ಲಿ ಫ್ಲೇಕ್ಸ್, ಆಲಿವ್ ಎಣ್ಣೆ, ಜೀರಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಕರುಕುರು ಎನ್ನುವಂತೆ ಹುರಿದ ಮಖನಾ ಬೀಜಗಳ ಜೊತೆ ಮಿಶ್ರ ಮಾಡಿದರೆ ಚಿಲ್ಲಿ ಮಖನಾ ಸಿದ್ಧವಾಗುತ್ತದೆ. ಮಖನಾ, ಅಂದರೆ ಕಮಲದ ಬೀಜಗಳು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಮಕ್ಕಳಿಗಂತೂ ಇದರಿಂದ ತಯಾರಿಸುವ ತಿನಿಸುಗಳು ಅಚ್ಚುಮೆಚ್ಚು.

ಇದನ್ನೂ ಓದಿ: Food Recipe: ನಿನ್ನೆಯ ಅನ್ನ ಮಿಕ್ಕಿದ್ಯಾ? ಹಾಗಿದ್ರೆ ಈ ಅನ್ನದ ಆರು ಟೇಸ್ಟಿ ರೆಸಿಪಿ ಟ್ರೈ ಮಾಡಿ

ಬದನೆ ಕಾಯಿ ಚಿಪ್ಸ್
ಚಿಪ್ಸ್ ಆರೋಗ್ಯಕರವೇ? ಅದು ಹೇಗಪ್ಪಾ ಸಾಧ್ಯ ಎಂದುಕೊಳ್ಳುತ್ತಿದ್ದೀರಾ? ಬದನೆಕಾಯಿಯನ್ನು ಕರಿಯುವ ಬದಲು ಬೇಕ್ ಮಾಡಿ, ಚಿಪ್ಸ್ ತಯಾರಿಸಿದರೆ, ಅದರಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ತೂಕ ಹೆಚ್ಚುತ್ತದೆ ಎಂದು ನೀವು ಚಿಂತಿಸಬೇಕಿಲ್ಲ, ಆರಾಮವಾಗಿ ಅದನ್ನು ತಿನ್ನಬಹುದು. ಬದನೇಕಾಯಿಗಳನ್ನು ದುಂಡಗೆ ಕತ್ತರಿಸಿಕೊಳ್ಳಿ, ಅದಕ್ಕೆ ಉಪ್ಪು, ಮಸಾಲೆ ಮತ್ತು ಕರಿಮೆಣಸಿನ ಪುಡಿಯನ್ನು ಸವರಿ. ಬಳಿಕ ಅತ್ಯಂತ ಕಡಿಮೆ ಎಣ್ಣೆ ಸವರಿರುವ ಬೇಕಿಂಗ್ ಟ್ರೇ ಮೇಲೆ ಇಟ್ಟು ಬೇಕ್ ಮಾಡಿ.
Published by:Ashwini Prabhu
First published: