Vegetables : ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಈ 7 ಬಗೆಯ ವಿಭಿನ್ನ ತರಕಾರಿ

7 Different vegetable :ಹಸಿರು ತರಕಾರಿಗಳಲ್ಲಿರೋಗ ನಿರೋಧಕ ಶಕ್ತಿ, ಎ, ಬಿ, ಸಿ ಜೀವಸತ್ವಗಳು, ಖನಿಜಾಂಶ, ನಾರಿನಂಶ ವಿಪುಲವಾಗಿದ್ದು, ಇವು ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿವೆ.. ಹೀಗಾಗಿಯೇ ಆಯುರ್ವೇದ(Ayurveda) ಪದ್ಧತಿಯಲ್ಲಿ ತರಕಾರಿಗಳ ಸೇವನೆ ಬಗ್ಗೆ ಉಲ್ಲೇಖಿಸಲಾಗಿದೆ.

ತರಕಾರಿ

ತರಕಾರಿ

 • Share this:
  ಮನುಷ್ಯ ಆರೋಗ್ಯವಾಗಿರಲು (Health) ಹಾಗೂ ಶಕ್ತಿಯಿಂದStreamght) ಕೂಡಿರಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾನೆ. ಇದಕ್ಕಾಗಿ ವ್ಯಾಯಾಮ(exercise) ಹಾಗೂ ಪೌಷ್ಟಿಕಾಂಶಗಳನ್ನು ಒದಗಿಸುವ ಹಣ್ಣು(Fruits) ತರಕಾರಿಗಳನ್ನು(vegetables) ಸೇವನೆ ಮಾಡುತ್ತಲೇ ಇರುತ್ತಾನೆ. ಅದ್ರಲ್ಲೂ ಆಲೂಗಡ್ಡೆ (Potato) ಮೂಲಂಗಿ, (Radish) ಕ್ಯಾರೆಟ್, (Carrot) ಬದನೆಕಾಯಿ,(Brinjal) ಹಾಗಲಕಾಯಿ, ಸೇರಿ ವಿವಿಧ ತರಕಾರಿಗಳನ್ನು ನಿಯಮಿತವಾಗಿ ಸೇವಿಸುತ್ತಲೇ ಇರುತ್ತಾನೆ.ಇನ್ನು ಹಸಿರು ತರಕಾರಿಗಳಲ್ಲಿರೋಗ ನಿರೋಧಕ ಶಕ್ತಿ, ಎ, ಬಿ, ಸಿ ಜೀವಸತ್ವಗಳು, ಖನಿಜಾಂಶ, ನಾರಿನಂಶ ವಿಪುಲವಾಗಿದ್ದು, ಇವು ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿವೆ. ಹೀಗಾಗಿಯೇ ಆಯುರ್ವೇದ(Ayurveda) ಪದ್ಧತಿಯಲ್ಲಿ ತರಕಾರಿಗಳ ಸೇವನೆ ಬಗ್ಗೆ ಉಲ್ಲೇಖಿಸಲಾಗಿದೆ. ಅದರಲ್ಲೂ ಚಳಿಗಾಲದಲ್ಲಿ(Winter) ಹಲವು ತರಕಾರಿಗಳನ್ನು ನಿಯಮಿತವಾಗಿ ಡಯಟ್ ಮಾಡುವವರು ಸೇವನೆ ಮಾಡುವುದರಿಂದ, ಅವರು ಆರೋಗ್ಯಯುತವಾಗಿ ಸದಾಕಾಲ ಫಿಟ್ ಆಗಿ ಇರಬಹುದು. ಹೀಗಾಗಿ ಮಾಮೂಲಿಯಾಗಿ ಸಿಗುವ ತರಕಾರಿಗಳನ್ನು ಹೊರತುಪಡಿಸಿ ಚಳಿಗಾಲದಲ್ಲಿ ವಿಶೇಷವಾಗಿ ವಿವಿಧ ಬಗೆಯ ತರಕಾರಿಗಳ ಸೇವನೆ ಮಾಡಬಹುದಾಗಿದೆ.

  1) ಬಿಳಿ ಮೂಲಂಗಿ (Daikon)

  ಮೂಲಂಗಿ ಸಾಮಾನ್ಯವಾಗಿ ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ.. ಬಿಳಿ ಮೂಲಂಗಿಯನ್ನು ಹೊರತುಪಡಿಸಿ ಉಳಿದವು ಬೀಟ್ರೂಟಿನ ಆಕಾರದಲ್ಲಿರುತ್ತವೆ.. ಹೀಗಾಗಿ ಡೈಕಾನ್ ಎಂದೇ ಪ್ರಸಿದ್ಧವಾಗಿರುವ ಬಿಳಿ ಮೂಲಂಗಿಯಲ್ಲಿ ವಿಟಮಿನ್ ಸಿ, ತಾಮ್ರ, ಪೊಟ್ಯಾಸಿಯಮ್ ಮತ್ತು ಫೋಲೇಟ್ ಅಂಶಗಳು ಇವೆ.. ಹೀಗಾಗಿ ಬಿಳಿ ಮೂಲಂಗಿ ಸೇವನೆ ಮಾಡುವುದರಿಂದ ದೇಹ ಹಳದಿ ಬಣ್ಣ ಬರಲು ಕಾರಣವಾಗಿರುವ ಹೆಚ್ಚಿನ ಪ್ರಮಾಣದ ಬಿಲಿರುಬಿನ್ ಎಂಬ ರಾಸಾಯನಿಕವನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ರಕ್ತ ಶುದ್ಧೀಕರಣಗೊಳಿಸಲು, ಹೈಪೋಥೈರಾಯ್ಡಿಸಂ ಗುಣಪಡಿಸಲು ಮೂಲಂಗಿ ಸಹಕಾರಿ

  ಇದನ್ನೂ ಓದಿ :ಎಲ್ಲೆಡೆ ತರಕಾರಿ ಬೆಲೆ ಗಗಕ್ಕೇರಿದ್ರೆ, ಇಲ್ಲಿ ಮಾತ್ರ ಟೊಮೇಟೊ-ಈರುಳ್ಳಿ ಬೆಲೆ ಕಡಿಮೆಯಂತೆ

  2)ಕೆಸು (Taro root):

  ಕಸವಲ್ಲದ ಕೆಸು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಕಸದಂತೆ ಕಂಡುಬರುವ ವಸ್ತು.. ಕಾಡಲ್ಲಿ ತೋಟದಲ್ಲಿ ಮರದ ಮೇಲೆ ಬೆಳೆಯುವ ಕೆಸು ದಕ್ಷಿಣ ಏಶಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.. ಫೈಬರ್, ವಿಟಮಿನ್ ಇ, ಬಿ ಜೀವಸತ್ವಗಳು, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅಂಶಗಳು ಕೆಸುವಿನಲ್ಲಿ ಕಂಡುಬರುತ್ತದೆ..

  3)ಡೆಲಿಕಾಟಾ ಸ್ಕ್ವ್ಯಾಷ್(Delicata squash)

  ಡೆಲಿಕಾಟಾ ಸ್ಕ್ವ್ಯಾಷ್ ಕುಂಬಳಕಾಯಿಯ ತಳಿಯಾಗಿದ್ದು, ಹೊರಗಡೆಯಿಂದ ನೋಡಲು ಕಲ್ಲಂಗಡಿ ಹಣ್ಣಿನಂತೆ ಕಾಣುತ್ತದೆ.. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ಡೆಲಿಕಾಟಾ ಸ್ಕ್ವ್ಯಾಷ್, ಚಳಿಗಾಲದಲ್ಲೂ ಲಭ್ಯವಿರುವ ತರಕಾರಿ..ಇದ್ರಲ್ಲಿ ಕ್ಯಾಲೋರಿ & ಕಾರ್ಬೋಹೈಡ್ರೇಟ್‌ ಅಂಶಗಳು ಅಧಿಕವಾಗಿವೆ.

  4)ಜೆರುಸಲೆಮ್ ಪಲ್ಲೆಹೂವು (Jerusalem artichoke)

  ನೋಡಲು ಶುಂಠಿಯಂತೆ ಕಾಣುವ ಜೆರುಸಲೆಮ್ ಪಲ್ಲೆಹೂವಿನ ಪ್ರಯೋಜನ ಮಾತ್ರ ತುಂಬಾ.. ಕೆಂಪು ರಕ್ತಕಣಗಳ ಉತ್ಪಾದನೆ ಆಹಾರ ಜೀರ್ಣವಾಗಲು, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡಲು ಫೈಬರ್‌ನ ಇನ್ಯುಲಿನ್ ರೀತಿ ಕಾರ್ಯ ನಿರ್ವಹಣೆ ಮಾಡುತ್ತದೆ..

  ಇದನ್ನೂ ಓದಿ :ತೂಕ ಇಳಿಸಿಕೊಳ್ಬೇಕು ಅಂದ್ರೆ ಈ ಬಣ್ಣದ ಕ್ಯಾಪ್ಸಿಕಂ ತಿನ್ಬೇಕಂತೆ ನೋಡಿ, ಡಾಕ್ಟರ್ ಹೇಳಿದ್ದು!

  5)ಜಿಕಾಮಾ (Jicama)

  ಸಾಮಾನ್ಯವಾಗಿ ವಿದೇಶದಲ್ಲಿ ಹತ್ತಿ ಹೆಚ್ಚು ಬಳಕೆಯಲ್ಲಿರುವ ತರಕಾರಿಗಳಲ್ಲಿ ಜಿಕಾಮಾವು ಕೂಡ ಒಂದು.. ವಿಟಮಿನ್ ಸಿ, ಫೋಲೇಟ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಹಲವು ಪ್ರಮುಖ ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುವ ಜಿಕಾಮಾವು ಕರುಳಿನ ಆರೋಗ್ಯ ಸುಧಾರಿಸಲು ಸಹಕಾರಿ..

  6)ಮರಗೆಣಸು (cassava)

  ಮರಗೆಣಸು ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಸಿಗುವುದು ತುಂಬಾ ವಿರಳ, ಆದರೆ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿ ಅಂಶಗಳನ್ನು ನೀಡುವ ಒಂದು ನೈಸರ್ಗಿಕ ಆಹಾರ ಪದಾರ್ಥ ಎಂದರೆ ತಪ್ಪಾಗಲಾರದು.ಮರ ಗೆಣಸಿನಲ್ಲಿ ವಿಟಮಿನ್ ' ಬಿ2 ' ಮತ್ತು ' ರಿಬೋಫ್ಲಾವಿನ್ ಅಂಶಗಳು ಅಧಿಕವಾಗಿದ್ದು ಜಠರದ ಸಮಸ್ಯೆ ನಿವಾರಣೆ, ಮೈಗ್ರೇನ್, ನಂತಹ ಸಮಸ್ಯೆಗಳನ್ನು ನಿರ್ವಹಣೆ ಮಾಡುತ್ತದೆ..
  Published by:ranjumbkgowda1 ranjumbkgowda1
  First published: