Best Concealers: ಮುಖದಲ್ಲಿರುವ ಮೊಡವೆಗಳನ್ನು ಮರೆಮಾಚುತ್ತವೆ ಈ 7 ಕನ್ಸೀಲರ್ ಬ್ರ್ಯಾಂಡ್​​​ಗಳು

ಕನ್ಸೀಲರ್ ನಿಮ್ಮ ಮೇಕಪ್ ದಿನಚರಿಯ ಅತ್ಯಗತ್ಯ ಭಾಗವಾಗಿದೆ. ಕಣ್ಣಿನ ಕೆಳಭಾಗದಲ್ಲಿ ಹಚ್ಚುವ ಕನ್ಸೀಲರ್ ಮುಖದಲ್ಲಿರುವ ಮೊಡವೆ ಕಲೆ, ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ಕಲೆಗಳನ್ನು ಮರೆಮಾಚಬಹುದು. ಮಾರುಕಟ್ಟೆಯಲ್ಲಿ ಮೇಕಪ್ ಗೆ ಸಂಬಂಧಿಸಿದ ನೂರಾರು ಬ್ರ್ಯಾಂಡ್ ಗಳಿವೆ. ಆದರೇ ಅವುಗಳಲ್ಲಿ ನಮ್ಮ ಚರ್ಮಕ್ಕೆ ಹೊಂದುವ, ಬಜೆಟ್ ಫ್ರೆಂಡ್ಲಿ ಮತ್ತು ಉತ್ತಮ ಉತ್ಪನ್ನಗಳನ್ನು ಆರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಉತ್ತಮ ಗುಣಮಟ್ಟದ ಕನ್ಸೀಲರ್‌ಗಳ ಪಟ್ಟಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂದು ಪರಿಪೂರ್ಣ ಮೇಕಪ್ (Make Up) ಅಂದರೆ ಅಲ್ಲಿ ಹಂತ ಹಂತವಾಗಿ ಮಾಯಿಶ್ಚರೈಸರ್, ಪ್ರೈಮರ್, ಫೌಂಡೇಷನ್, ಕನ್ಸೀಲರ್, ಕಾಂಪ್ಯಾಕ್ಟ್, ಹೈಲೈಟರ್ ಹೀಗೆ ಒಂದೊಂದಾಗಿ ಮುಖಕ್ಕೆ ಹಾಕಿಕೊಳ್ಳಬೇಕು. ಮೇಕಪ್ ನಲ್ಲಿ ಪ್ರತಿ ಉತ್ಪನ್ನಗಳು (Product) ಸಹ ಮುಖ್ಯವಾಗುತ್ತದೆ. ಇವುಗಳಲ್ಲಿ ಒಂದು ಕನ್ಸೀಲರ್. ಕನ್ಸೀಲರ್ ನಿಮ್ಮ ಮೇಕಪ್ ದಿನಚರಿಯ ಅತ್ಯಗತ್ಯ ಭಾಗವಾಗಿದೆ. ಕಣ್ಣಿನ ಕೆಳಭಾಗದಲ್ಲಿ ಹಚ್ಚುವ ಕನ್ಸೀಲರ್ (Concealer) ಮುಖದಲ್ಲಿರುವ ಮೊಡವೆ ಕಲೆ, ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ಕಲೆಗಳನ್ನು ಮರೆಮಾಚಬಹುದು. ಮಾರುಕಟ್ಟೆಯಲ್ಲಿ (Market) ಮೇಕಪ್ ಗೆ ಸಂಬಂಧಿಸಿದ ನೂರಾರು ಬ್ರ್ಯಾಂಡ್ ಗಳಿವೆ. ಆದರೇ ಅವುಗಳಲ್ಲಿ ನಮ್ಮ ಚರ್ಮಕ್ಕೆ (Skin) ಹೊಂದುವ, ಬಜೆಟ್ ಫ್ರೆಂಡ್ಲಿ ಮತ್ತು ಉತ್ತಮ ಉತ್ಪನ್ನಗಳನ್ನು ಆರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಹಾಗಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಉತ್ತಮ ಗುಣಮಟ್ಟದ ಕನ್ಸೀಲರ್‌ಗಳ ಪಟ್ಟಿ ಇಲ್ಲಿದೆ.

1) ಕವರ್ಗರ್ಲ್ ಕ್ಲೀನ್ ಫ್ರೆಶ್ ಹೈಡ್ರೇಟಿಂಗ್ ಕನ್ಸೀಲರ್
ಮುಖದ ಮೇಲಿನ ಕಲೆಗಳನ್ನು ಮರೆಮಾಚುವ ಮತ್ತು ಹೊಳೆಯುವ ಚರ್ಮಕ್ಕಾಗಿ ಈ ಕನ್ಸೀಲರ್ ಉತ್ತಮವಾಗಿದೆ. ಥಾಲೇಟ್‌ಗಳು, ಖನಿಜ ತೈಲ, ಫಾರ್ಮಾಲ್ಡಿಹೈಡ್, ಟಾಕ್, ಪ್ಯಾರಾಬೆನ್‌ಗಳು ಮತ್ತು ಸಲ್ಫೇಟ್‌ಗಳಿಲ್ಲದ ಮತ್ತು ತೆಂಗಿನ ಹಾಲು, ಅಲೋವೆರಾ ಸಾರದೊಂದಿಗೆ ತಯಾರಾದ ಈ ಕನ್ಸೀಲರ್ ನಿಮ್ಮ ಮೇಕಪ್ ಅನ್ನು ಇನ್ನಷ್ಟು ಅಂದಗೊಳಿಸುತ್ತದೆ. ಚರ್ಮವನ್ನು ನೈಸರ್ಗಿಕವಾಗಿ ಮತ್ತು ಹೊಳೆಯುವಂತೆ ಮಾಡಲು ಉತ್ತಮವಾಗಿದೆ.

2) ಅಲ್ಮೇ ಕನ್ಸೀಲರ್
ಈ ಕನ್ಸೀಲರ್ ಸೂಕ್ಷ್ಮ ಚರ್ಮಕ್ಕೆ ಸೂಕ್ತವಾಗಿದ್ದು, 6 ಸ್ಕಿನ್-ಟೋನ್ ಶೇಡ್ ನಲ್ಲಿ ಲಭ್ಯವಿದೆ. ಮೇಕಪ್ ಜೊತೆ ಉತ್ತಮವಾಗಿ ಹೊಂದಿಕೊಳ್ಳುವ ಅಲ್ಮೇ ಕನ್ಸೀಲರ್ ಮೇಕಪ್ ಅನ್ನು ಬಿರುಕುಗೊಳಿಸದಂತೆ ನೋಡಿಕೊಳ್ಳುತ್ತದೆ.

3) ರೆವ್ಲಾನ್ ಕಲರ್ ಸ್ಟೇ ಕನ್ಸೀಲರ್
ಈ ಫುಲ್ ಕವರೇಜ್ ಕನ್ಸೀಲರ್ ಮೇಕ್ಅಪ್ ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ಗಳನ್ನು ಹೈಲೆಟ್ ಮಾಡದೇ ಮರೆಮಾಚುತ್ತದೆ. ಕೇಕಿಂಗ್, ಕ್ಲಂಪಿಂಗ್ ಅಥವಾ ಫ್ಲೇಕಿಂಗ್ ಇಲ್ಲದೆ ಕಲೆಗಳನ್ನೂ ಸಹ ಮುಚ್ಚಿಬಿಡುತ್ತದೆ. ಈ ಲೈಟ್ ಕನ್ಸೀಲರ್ ಕಣ್ಣಿನ ಪ್ರದೇಶವನ್ನು ಹೊಳಪುಗೊಳಿಸುತ್ತದೆ. ದೀರ್ಘಕಾಲ ಮೇಕಪ್ ಅನ್ನು ಉಳಿಸಲು ರೆವ್ಲಾನ್ ಕಲರ್ ಸ್ಟೇ ಕನ್ಸೀಲರ್ ಸಹಕಾರಿಯಾಗಿದೆ.

ಇದನ್ನೂ ಓದಿ:  Vitamin D: ದೇಹಕ್ಕೆ ಸರಿಯಾದ ಪ್ರಮಾಣದ ವಿಟಮಿನ್ ಡಿ ಸಿಗದಿದ್ರೆ ಏನಾಗತ್ತೆ ಗೊತ್ತಾ?

4) ಮೇಬೆಲ್ಲೈನ್ ಮಲ್ಟಿ-ಯೂಸ್ ಕನ್ಸೀಲರ್
ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್‌ಗಳ ನೋಟವನ್ನು ಕಡಿಮೆ ಮಾಡಿ ಲೈಟ್ ಲುಕ್ ನೀಡುತ್ತದೆ ಮೇಬೆಲ್ಲೈನ್ ಬ್ರ್ಯಾಂಡ್ ನ ಈ ಪ್ರೊಡಕ್ಟ್. ಹ್ಯಾಲೋಕ್ಸಿಲ್‌ನಿಂದ ತುಂಬಿಸಲಾದ ಈ ಆಂಟಿ-ಏಜಿಂಗ್ ಅಂಡರ್ ಐ ಟ್ರೀಟ್‌ಮೆಂಟ್ ಕನ್ಸೀಲರ್‌ ಸೂಕ್ಷ್ಮ ಗೆರೆಗಳು, ಕಲೆಗಳು, ಕೆಂಪಾಗುವಿಕೆ ಮತ್ತು ಡಾರ್ಕ್ ಸರ್ಕಲ್ ಗಳನ್ನು ಮರೆಮಾಚುತ್ತದೆ. ಮೇಬೆಲ್ಲೈನ್ ಮಲ್ಟಿ-ಯೂಸ್ ಕನ್ಸೀಲರ್ ಎಲ್ಲರ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

5) E.l.f ಕ್ಯಾಮೊ ಕನ್ಸೀಲರ್
ಈ ಸಂಪೂರ್ಣ ಕವರೇಜ್ ಮತ್ತು 16-ಗಂಟೆಗಳ ವೇರ್ ಕನ್ಸೀಲರ್ ಮೇಕಪ್ ಸ್ನೇಹಿ ಕನ್ಸೀಲರ್ ಆಗಿದೆ. ಚರ್ಮವನ್ನು ತೇವಗೊಳಿಸಲು ಮತ್ತು ರಕ್ಷಿಸಲು ಆವಕಾಡೊ ಎಣ್ಣೆಯಿಂದ ಸಮೃದ್ಧವಾಗಿದೆ ಮತ್ತು ಹೆಚ್ಚುವರಿ ಎಣ್ಣೆ ಮತ್ತು ಹೊಳಪನ್ನು ನಿಯಂತ್ರಿಸಲು ಕಾಯೋಲಿನ್ ಜೇಡಿಮಣ್ಣನ್ನು ಸಹ ಇದರಲ್ಲಿ ಬಳಸಿಕೊಳ್ಳಲಾಗಿದೆ. ಉತ್ತಮ ಕನ್ಸೀಲರ್ ನೋಡುತ್ತಿರುವ ನಿಮಗೆ ಇದು ಒಳ್ಳೆ ಆಯ್ಕೆಯಾಗಲಿದೆ.

6) L.A ಗರ್ಲ್ ಪ್ರೊ ಕನ್ಸೀಲರ್
ಈ ಹೈ-ಕವರೇಜ್ HD ಕನ್ಸೀಲರ್ ಚರ್ಮದ ಎಲ್ಲಾ ಕಲೆಗಳನ್ನು ಮರೆಮಾಚಿ ಉಳಿದ ಫೌಂಡೇಶನ್, ಕಾಂಪ್ಯಾಕ್ಟ್ ಜೊತೆ ಹೊಂದಿಕೊಳ್ಳುತ್ತದೆ. ಇದು ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ ಕೂಡ.

7) ಕೊಸಾಸ್ ರಿವೀಲರ್ ಕನ್ಸೀಲರ್
ಈ ಮಧ್ಯಮ ಕವರೇಜ್, ಸೂಪರ್ ಕ್ರೀಮಿ ಕನ್ಸೀಲರ್, ಐ ಕ್ರೀಮ್ ಮತ್ತು ಸ್ಪಾಟ್ ಟ್ರೀಟ್ಮೆಂಟ್ ಹೈಲೆಟ್ ಆಗಿ ಹೊಳಪು ಕೊಡುತ್ತದೆ. ಇದು ನಿಮ್ಮ ತ್ವಚೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಚರ್ಮವು ಹೆಚ್ಚು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಕೊಸಾಸ್ ರಿವೀಲರ್ ಕನ್ಸೀಲರ್ ಅನ್ನು ಹೈಡ್ರೇಟ್ ಮಾಡುವ ಪೆಪ್ಟೈಡ್‌ಗಳು ಮತ್ತು ಹೈಲುರಾನಿಕ್ ಆಮ್ಲದಿಂದ ಪ್ಯಾಕ್ ಮಾಡಲಾಗಿದೆ.

ಇದನ್ನೂ ಓದಿ: Shaving or Waxing: ನಿಮಗೆ ಯಾವುದು ಸೂಕ್ತ? ಇಲ್ಲಿದೆ ನೋಡಿ

ಕಣ್ಣಿನ ಕೆಳಭಾಗದಲ್ಲಿ ಹಚ್ಚುವ ಈ ಮೇಲಿನ ಎಲ್ಲಾ ಕನ್ಸೀಲರ್ ಗಳು ನಿಮ್ಮ ಮೇಕಪ್ ಗೆ ಉತ್ತಮ ಫಿನಿಶಿಂಗ್ ಕೊಡುವುದರಲ್ಲಿ ಅನುಮಾನವೇ ಇಲ್ಲ. ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ಸಿಗುವ ಈ ಬ್ರ್ಯಾಂಡೆಡ್ ಉತ್ಪನ್ನಗಳನ್ನು ನಿಮ್ಮ ಆಯ್ಕೆ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.
Published by:Ashwini Prabhu
First published: