• Home
  • »
  • News
  • »
  • lifestyle
  • »
  • Sleeping Tips: ಸುಖ ನಿದ್ರೆಗೆ ಈ ಸಪ್ತ ಸೂತ್ರಗಳನ್ನು ತಪ್ಪದೇ ಪಾಲಿಸಿ

Sleeping Tips: ಸುಖ ನಿದ್ರೆಗೆ ಈ ಸಪ್ತ ಸೂತ್ರಗಳನ್ನು ತಪ್ಪದೇ ಪಾಲಿಸಿ

Photo: Google

Photo: Google

ನೆಮ್ಮದಿಯ ನಿದ್ದೆ ಬೇಕಿದ್ದರೆ, ಮಲಗುವ ಮುನ್ನ ಈ ಏಳು ಅಭ್ಯಾಸಗಳನ್ನು ರೂಢಿಸಿಕೊಳ್ಳಿ

  • Share this:

    ನಿತ್ಯವೂ ರಾತ್ರಿ ನಿದ್ದೆ ಬಾರದೆ ಒದ್ದಾಡುತ್ತಿದ್ದೀರಾ? ಹಾಗಿದ್ದರೆ ನಿಮ್ಮ ದೈನಂದಿನ ಅನಾರೋಗ್ಯಕರ ಅಭ್ಯಾಸಗಳೇ ರಾತ್ರಿಯ ನಿದ್ದೆ ನಿಮ್ಮಿಂದ ದೂರ ಹೋಗಲು ಕಾರಣವಾಗಿರುತ್ತವೆ. ಸೂಕ್ತ ಬೆಳಕು, ಓದು ಇತ್ಯಾದಿ ಆರೋಗ್ಯಕರ ಅಭ್ಯಾಸಗಳು ನಿಮಗೆ ಸುಖವಾದ ನಿದ್ದೆಯನ್ನು ಬರಿಸಲು ಸಹಾಯ ಮಾಡಬಹುದು. ನಿಮಗೆ ನೆಮ್ಮದಿಯ ನಿದ್ದೆ ಬೇಕಿದ್ದರೆ, ಮಲಗುವ ಮುನ್ನ ಈ ಏಳು ಅಭ್ಯಾಸಗಳನ್ನು ರೂಢಿಸಿಕೊಳ್ಳಿ.


    1. ಬೆಳಕು -ಹಗಲಿನ ಸಮಯದಲ್ಲಿ ಬೆಳಕಿಗೆ ಒಡ್ಡಿಕೊಳ್ಳುವುದು ಉಪಯೋಗಕಾರಿ, ಆದರೆ ಕಂಪ್ಯೂಟರ್ ಮತ್ತು ಸೆಲ್ಯುಲರ್ ಸಾಧನಗಳು , ಸರ್ಕಾಡಿಯಂ ರಿದಮ್‍ಗೆ ಅಡ್ಡಿಪಡಿಸಿ, ಇನ್ನೂ ಹಗಲಿನ ವೇಳೆ ಎಂದುಕೊಳ್ಳುವಂತೆ ಮೆದುಳನ್ನು ಮೋಸಗೊಳಿಸುತ್ತದೆ. ಇದು ನಿಮ್ಮ ಗಾಢ ನಿದ್ರೆಗೆ ಕಾರಣವಾಗುವ ಮೆಲಟೊನಿನ್ ಹಾರ್ಮೋನನ್ನು ಕಡಿಮೆ ಮಾಡುತ್ತದೆ. ಸೂರ್ಯಾಸ್ತದ ಬಳಿಕ ನಿಮ್ಮ ಎಲ್ಲಾ ಸಾಧನಗಳಲ್ಲಿ ‘f.lux’ ಸಾಫ್ಟ್‌ವೇರ್‌ ಬಳಸಿಕೊಂಡು ನೀಲಿ ಬೆಳಕನ್ನು ಹೊಂದಿಸಿಕೊಳ್ಳಬಹುದು.


    2. ರಾತ್ರಿಯ ಪೇಯ-ಅರಿಶಿನ ಹಾಕಿದ ಹಾಲು ಸುಖ ನಿದ್ರೆಗೆ ಸಹಕಾರಿ. ಇದು ಪ್ರಾಚೀನ ಕಾಲದಿಂದಲೂ ನಿದ್ರಾಹೀನತೆಯನ್ನು ತಡೆಯಲು ಬಳಕೆಯಲ್ಲಿರುವ ಪರಿಹಾರ. ಹಾಲಿನಲ್ಲಿ ಅಮಿನೋ ಆ್ಯಸಿಡ್ ಮತ್ತು ಮೆಲಟೊನಿನ್ ಹಾರ್ಮೋನ್ ಇರುತ್ತದೆ. ಅದಕ್ಕೆ ರುಬ್ಬಿದ ಬಾದಾಮಿ, ಅರಿಶಿನ, ಜೇನು ತುಪ್ಪ ಮತ್ತು ಏಲಕ್ಕಿಯನ್ನು ಕೂಡ ಸೇರಿಸಬಹುದು. ಅದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ , ಜೊತೆಗೆ ನೆಮ್ಮದಿಯ ನಿದ್ದೆಯು ಕೂಡ ನಿಮ್ಮದಾಗುತ್ತದೆ.


    3. ಓದು-ಮಲಗುವ ಮುನ್ನ ಪುಸ್ತಕ ಓದುವುದು ಅತ್ಯಂತ ಒಳ್ಳೆಯ ಅಭ್ಯಾಸ. ಅದು ನಿಮಗೆ ಉಲ್ಲಾಸ ನೀಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಸುಖ ನಿದ್ದೆಯನ್ನು ಕೊಡುತ್ತದೆ. ಓದುವುದರಿಂದ ಮೆದುಳು ಚುರುಕಾಗುತ್ತದೆ ಮತ್ತು ಕ್ರಿಯಾಶೀಲವಾಗುತ್ತದೆ.


    4. ಬಿಸಿ ನೀರಿನ ಸ್ನಾನ –ಮಲಗುವ ಮುನ್ನ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹಕ್ಕೆ ಉಲ್ಲಾಸ ದೊರಕುತ್ತದೆ, ಶೀಘ್ರ ಮತ್ತು ಉತ್ತಮ ನಿದ್ದೆ ಬರುತ್ತದೆ.


    5. ಮರುದಿನಕ್ಕೆ ತಯಾರಾಗಿ-ನಿತ್ಯವೂ ರಾತ್ರಿ ಮಲಗುವ ಮುನ್ನ, ನೀವು ಮರುದಿನ ಧರಿಸಬೇಕಿರುವ ಬಟ್ಟೆಗಳನ್ನು ಎತ್ತಿಡಿ. ಹಾಗೆ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆ ಆಗುತ್ತದೆ ಮತ್ತು ಮರುದಿನದ ಬೆಳಗ್ಗಿನ ಸಮಯವನ್ನು ಕೂಡ ಉಳಿಸಬಹುದು.


    6. ದಿನಚರಿ ಬರೆಯಿರಿ-ನಿತ್ಯವೂ ಮಲಗುವ ಮುನ್ನ ದಿನಚರಿ ಬರೆಯುವುದನ್ನು ಅಭ್ಯಾಸ ಮಾಡಿ. ಅದು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ, ನಿದ್ರೆಯ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನೀವು ಪುಟಗಟ್ಟಲೆ ಬರೆಯಬೇಕಿಲ್ಲ. ಕೇವಲ ಒಂದೇ ಒಂದು ವಾಕ್ಯ ಬರೆದರೂ ಕೂಡ, ಅದು ಆ ದಿನದ ನಿಮ್ಮ ಅನುಭವದ ಮೇಲೆ ಬೆಳಕು ಚೆಲ್ಲುತ್ತದೆ.


    7. ನಿದ್ದೆಗೆ ಪೂರಕ ವಾತಾವರಣ ಸೃಷ್ಟಿಸಿ -ಕತ್ತಲಿನ, ನಿಶ್ಯಬ್ಧ ಮತ್ತು ತಣ್ಣನೆಯ ಕೋಣೆ ಸುಖ ನಿದ್ದೆಗೆ ಪೂರಕ. ಹೊರಗಿನ ಶಬ್ಧಗಳು ಒಳ ಬಾರದಂತೆ ತಡೆಯಲು ಕಿಟಕಿಗಳಿಗೆ ದಪ್ಪನೆಯ ಪರದೆಗಳನ್ನು ಹಾಕಿ, ಬೆಳಕಿನ ಕಿರಿಕಿರಿ ಬೇಡವೆಂದರೆ ಐ ಮಾಸ್ಕ್ ಬಳಸಿ ಮತ್ತು ಕೋಣೆಯ ತಾಪಮಾನ ಕಡಿಮೆ ಇರುವಂತೆ ನೋಡಿಕೊಳ್ಳಿ.
    ಈ ಸಪ್ತ ಸೂತ್ರಗಳನ್ನು ನಿತ್ಯವೂ ಪಾಲಿಸಿ ಮತ್ತು ಸುಖ ನಿದ್ದೆಯನ್ನು ನಿಮ್ಮದಾಗಿಸಿಕೊಳ್ಳಿ.


    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು