HOME » NEWS » Lifestyle » 7 AYURVEDIC HAIR FALL REMEDIES WILL RESTORE YOUR MANE TO ITS FORMER GLORY STG KVD

Hair Care : ಕೂದಲು ಉದುರುವಿಕೆಗೆ ಆಯುರ್ವೇದದ 7 ಪರಿಹಾರಗಳು ಇಲ್ಲಿವೆ

ಆಯುರ್ವೇದದಲ್ಲಿ ಕೂದಲು ಉದುರುವಿಕೆಯನ್ನು ತಡೆಯಲು, ಅನೇಕ ಚಿಕಿತ್ಸಾ ವಿಧಾನಗಳನ್ನು ತಿಳಿಸಲಾಗಿದೆ. ಅವು ಶತಮಾನಗಳಿಂದ ಚಾಲ್ತಿಯಲ್ಲಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

Trending Desk
Updated:June 22, 2021, 10:28 PM IST
Hair Care : ಕೂದಲು ಉದುರುವಿಕೆಗೆ ಆಯುರ್ವೇದದ 7 ಪರಿಹಾರಗಳು ಇಲ್ಲಿವೆ
Pc: ambika shettys kitchen
  • Share this:

ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರಗಳ ಹುಡುಕಾಟದಲ್ಲಿದ್ದೀರಾ? ಇಲ್ಲಿವೆ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕೆಲವು ಸಲಹೆಗಳು.ಆಯುರ್ವೇದದಲ್ಲಿ ಕೂದಲಿಗೆ ವಿಶೇಷ ಮಹತ್ವ ನೀಡಲಾಗಿದೆ. ಮೂಳೆಯ ಅಂಗಾಂಶ, ನರಮಂಡಲ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿನ ಯಾವುದೇ ತೊಂದರೆಗಳು, ಕೂದಲಿನ ಬೆಳವಣಿಗೆ ಮತ್ತು ವಿನ್ಯಾಸಕ್ಕೆ ಅಡ್ಡಿ ಮಾಡಬಹುದು. ಕೂದಲಿನ ಜೀವನಚಕ್ರಕ್ಕೆ ಅನುಗುಣವಾಗಿ, 10% ರಷ್ಟು ಕೂದಲು ಉದುರುವುದು ಸಾಮಾನ್ಯ ಸಂಗತಿ. ಅದಕ್ಕಿಂತ ಹೆಚ್ಚು ಕೂದಲು ಉದುರಿದರೆ ಆ ಬಗ್ಗೆ ಗಮನ ಹರಿಸಲೇಬೇಕು.


ಕೂದಲಿಗೆ ಉಗುರು ಬೆಚ್ಚಗಿನ ಎಣ್ಣೆ ಹಾಕಿ ತಿಕ್ಕುವುದು ಒಂದು ಪ್ರಾಚೀನ ಪದ್ಧತಿಯಾಗಿದ್ದು, ಅದು ಕೂದಲನ್ನು ನಯಗೊಳಿಸುವುದು ಮಾತ್ರವಲ್ಲ, ಅದನ್ನು ಸದೃಢಗೊಳಿಸುತ್ತದೆ. ಮಾನಸಿಕ ಒತ್ತಡದಿಂದಲೂ ಕೂದಲಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆಗ ಯೋಗ ಅಥವಾ ಧ್ಯಾನದಂತಹ ಒತ್ತಡ ಶಮನ ಕ್ರಿಯೆಗಳನ್ನು ಮಾಡಬಹುದು.



ಕೂದಲು ಉದುರಲು ಕೆಲವು ಮುಖ್ಯ ಕಾರಣಗಳು:
• ಕಳಪೆ ಆಹಾರ ಕ್ರಮ
• ಅಜೀರ್ಣ
• ದೀರ್ಘಕಾಲದ ಮಾನಸಿಕ ಒತ್ತಡ
• ವಾತಾವರಣದ ಅಂಶಗಳು• ನಿದ್ರಾಹೀನತೆ
• ವಂಶವಾಹಿಗಳು
• ಹಾರ್ಮೋನ್‍ಗಳ ಬದಲಾವಣೆ


ಇದನ್ನೂ ಓದಿ: 30ರ ಅಸುಪಾಸಿನಲ್ಲಿ ಮದುವೆಯಾಗುವ ಮಹಿಳೆಯರು ಎಷ್ಟು ವರ್ಷದೊಳಗೆ ಮಕ್ಕಳು ಮಾಡಿಕೊಂಡರೆ ಉತ್ತಮ?

ಕೂದಲ ರಕ್ಷಣೆಗೆ ಆಯುರ್ವೆದ ನೀಡಿರುವ ಸಲಹೆಗಳು
ಆಯುರ್ವೇದದಲ್ಲಿ ಕೂದಲು ಉದುರುವಿಕೆಯನ್ನು ತಡೆಯಲು, ಅನೇಕ ಚಿಕಿತ್ಸಾ ವಿಧಾನಗಳನ್ನು ತಿಳಿಸಲಾಗಿದೆ. ಅವು ಶತಮಾನಗಳಿಂದ ಚಾಲ್ತಿಯಲ್ಲಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.


1. ಅಮಲಾಕಿ:ಕೂದಲು ಉದುರುವಿಕೆಗೆ ಬಳಸಲ್ಪಡುವ ಔಷಧಿಗಳಲ್ಲಿ ಅಮಲಾಕಿ ವ್ಯಾಪಕವಾಗಿ ಉಪಯೋಗದಲ್ಲಿದೆ. ಅದರಲ್ಲಿ ಕೂದಲ ಆರೋಗ್ಯಕ್ಕೆ ಅಗತ್ಯವಿರುವ ವಿಟಮಿನ್ ಸಿ ಮತ್ತು ಮಿನರಲ್‍ಗಳು ಹೇರಳವಾಗಿವೆ.


2. ಅಲೋವೇರಾ:ಅಲೋವೇರಾ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ನಯವಾಗಿಸುತ್ತದೆ. ನಿಮ್ಮ ನೆತ್ತಿಯ ಮೇಲಿನ ನಿರ್ಜೀವ ಕೋಶಗಳನ್ನು ಸರಿಪಡಿಸುತ್ತದೆ, ಆ ಮೂಲಕ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ತುರಿಕೆ ಮತ್ತು ಹೊಟ್ಟಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ.


3. ಭ್ರಿಂಗರಾಜ್:ಭ್ರಿಂಗರಾಜ್ ಎಣ್ಣೆಯಿಂದ ಕೂದಲು ಬೆಳೆಯುತ್ತದೆ, ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಹೊಟ್ಟು ನಿವಾರಣೆ ಆಗುತ್ತದೆ. ಈ ಎಣ್ಣೆಯಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ.


4. ಎಳ್ಳು:ಎಳ್ಳೆಣ್ಣೆಯಲ್ಲಿ ಕೂದಲ ಬೆಳವಣಿಗೆಗೆ ಸಹಕಾರಿ ಆಗುವ ಹೇರಳ ಔಷಧೀಯ ಅಂಶಗಳಿವೆ. ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಮತ್ತು ಹಲವಾರು ಮಿನರಲ್‍ಗಳು ಅದರಲ್ಲಿವೆ. ಎಳ್ಳು ನಮ್ಮ ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.


5. ತೆಂಗಿನ ಕಾಯಿ:ಯಾವುದೇ ಅಡ್ಡ ಪರಿಣಾಮಗಳ ಭಯವಿಲ್ಲದೆ, ದಿನ ನಿತ್ಯ ಬಳಸಲ್ಪಡುವ ಎಣ್ಣೆ ಇದು. ತೆಂಗಿನ ಎಣ್ಣೆ ಕೂದಲು ಹಾಳಾಗದಂತೆ ತಡೆಯುತ್ತದೆ, ಸೂರ್ಯನ ಕಿರಣಗಳು, ಧೂಳು ಮತ್ತು ಹೊಗೆಯಿಂದ ಕೂದಲನ್ನು ರಕ್ಷಿಸುತ್ತದೆ.


6. ಬೇವು :ಬೇವಿನಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳು ಶಿಲೀಂಧ್ರ ಸೋಂಕುಗಳ ಅಪಾಯದಿಂದ ರಕ್ಷಿಸುತ್ತದೆ. ಅದು ಕೂದಲ ಫೈಬರ್‌ಗಳಿಗೆ ಪೋಷಣೆ ನೀಡಿ, ಅವುಗಳನ್ನು ಸದೃಢಗೊಳಿಸುತ್ತದೆ.


7. ಕರಿಬೇವಿನ ಸೊಪ್ಪು:ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಈ ಸೊಪ್ಪು, ಕೂದಲಿಗೂ ಪ್ರಯೋಜನಕಾರಿ. ಅದು ಅತ್ಯಧಿಕ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ಪ್ರೋಟೀನ್‍ಗಳನ್ನು ಹೊಂದಿದೆ.

Published by: Kavya V
First published: June 22, 2021, 10:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories