ಪುರುಷರಲ್ಲಿ ಶೇ.10 ರಿಂದ ಶೇ.20 ರಷ್ಟು ಬಂಜೆತನ ಪ್ರಕರಣಗಳು ಅವರ ವೀರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಉಂಟಾಗುತ್ತವೆ. ಆದರೆ, ಪುರುಷ ಪ್ರಸವಪೂರ್ವ ಜೀವಸತ್ವಗಳು ಅಥವಾ ಪುರುಷ ಫಲವತ್ತತೆ ಪೂರಕ ಸಪ್ಲಿಮೆಂಟ್‌ಗಳು ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಇಲಿನಾಯ್ಸ್‌ನ ಫಲವತ್ತತೆ ಕೇಂದ್ರಗಳ ಸಂತಾನೋತ್ಪತ್ತಿ ಅಂತಃಸ್ರಾವಶಾಸ್ತ್ರಜ್ಞ ಎಂಡಿ ಜುವಾನ್ ಅಲ್ವಾರೆಜ್ ಹೇಳುತ್ತಾರೆ ಎಂದು ಬ್ಯುಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
ನಿಮ್ಮ ಪತ್ನಿಯನ್ನು ಗರ್ಭಿಣಿ ಮಾಡಲು ಪ್ರಯತ್ನಿಸುವಾಗ, ನೀವು ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಅತ್ಯಗತ್ಯ. ಫಲವತ್ತತೆ ಪೂರಕ ಸಪ್ಲಿಮೆಂಟ್‌ಗಳು ತೆಗೆದುಕೊಂಡರೂ ಅನಾರೋಗ್ಯಕರ ಜೀವನಶೈಲಿ ಪಾಲಿಸುವುದು ಎಂದರ್ಥವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಪ್ರತಿನಿತ್ಯ ಮಲ್ಟಿವಿಟಮಿನ್ ಮಾತ್ರೆಗಳನ್ನು ಅಲ್ವಾರೆಜ್ ಶಿಫಾರಸು ಮಾಡುತ್ತಾರೆ, ಇದರಲ್ಲಿ ಝಿಂಕ್, ಫೋಲಿಕ್ ಆಮ್ಲ, ವಿಟಮಿನ್ ಸಿ, ಮತ್ತು ವಿಟಮಿನ್ ಡಿ ಜೊತೆಗೆ ಕೆಲವು ಪೂರಕ ಆಹಾರಗಳಿವೆ. ಈ ಪೂರಕಗಳ ಬಗ್ಗೆ ಮತ್ತು ಪುರುಷ ಫಲವತ್ತತೆಯ ಮೇಲೆ ಅವುಗಳ ಪ್ರಭಾವದ ಬಗ್ಗೆ ಸಂಶೋಧಕರು ಇಲ್ಲಿಯವರೆಗೆ ತಿಳಿದಿರುವ ಮಾಹಿತಿ ಇಲ್ಲಿದೆ..
1. ವಿಟಮಿನ್ ಇ
ವಿಟಮಿನ್ ಇ ಕೊಬ್ಬು ಕರಗುವ ಉತ್ಕರ್ಷಣ ನಿರೋಧಕವಾಗಿದೆ. 2011 ರ ಅಧ್ಯಯನವು ಬಂಜೆತನದ ಪುರುಷರಲ್ಲಿ ವೀರ್ಯಾಣುಗಳ ಚಲನಶೀಲತೆಯನ್ನು ಹೆಚ್ಚಿಸಲು ಅಥವಾ ವೀರ್ಯಾಣುಗಳ ಮೊಟ್ಟೆಗೆ ಈಜುವ ಸಾಮರ್ಥ್ಯವನ್ನು ಹೆಚ್ಚಿಸಲು ಸೆಲೆನಿಯಂ ಜೊತೆಗೆ ವಿಟಮಿನ್ ಇ ಉಪಯುಕ್ತವಾಗಿದೆ ಎಂದು ಸೂಚಿಸುತ್ತದೆ. ದಿನಕ್ಕೆ 15 ಮಿಗ್ರಾಂ ಶಿಫಾರಸು ಮಾಡಲಾಗಿದ್ದು, ಸೇವನೆಯು 180 ಮಿಗ್ರಾಂ ಮೀರಬಾರದು, ಏಕೆಂದರೆ ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ ಎಚ್ಚರಿಸಲಾಗಿದೆ.
2. ವಿಟಮಿನ್ ಸಿ
ವಿಟಮಿನ್ ಸಿ ಇತರ ದೈಹಿಕ ಪ್ರಕ್ರಿಯೆಗಳಲ್ಲಿ ಪ್ರೋಟೀನ್ ಚಯಾಪಚಯ ಕ್ರಿಯೆಯಲ್ಲಿ ಒಳಗೊಂಡಿರುವ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ವಿಟಮಿನ್ ಸಿ ಸ್ವತಃ ಉತ್ಕರ್ಷಣ ನಿರೋಧಕವಾಗಿದ್ದು ಅದು ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
2020 ರ ಪರಿಶೀಲನೆಯ ಪ್ರಕಾರ, ಪುರುಷ ಫಲವತ್ತತೆಯನ್ನು ಹೆಚ್ಚಿಸುವ ಜೀವಸತ್ವಗಳ ವೈದ್ಯಕೀಯ ಸಾಕ್ಷ್ಯವು ವಿಟಮಿನ್ ಸಿ, ಜೊತೆಗೆ ಎಲ್-ಕಾರ್ನಿಟೈನ್, ವಿಟಮಿನ್ ಇ ಮತ್ತು ಝಿಂಕ್ ಅನ್ನು ಒಳಗೊಂಡಿದೆ. ಅಲ್ವಾರೆಜ್ ದಿನಕ್ಕೆ 1000-2000 ಮಿಗ್ರಾಂ ವಿಟಮಿನ್ ಸಿ ಅನ್ನು ಶಿಫಾರಸು ಮಾಡುತ್ತಾರೆ.
3. ಎಲ್-ಕಾರ್ನಿಟೈನ್
ವೀರ್ಯದ ಗುಣಮಟ್ಟ ಮತ್ತು ವೀರ್ಯಾಣು ಚಲನೆಯನ್ನು ಹೆಚ್ಚಿಸಲು ಎಲ್-ಕಾರ್ನಿಟೈನ್ ಸಹಾಯ ಮಾಡುತ್ತದೆ ಎಂದು 2012 ರ ವಿಮರ್ಶೆ ಸೂಚಿಸುತ್ತದೆ. ಮಾನವ ದೇಹದಿಂದ ಸಾಕಷ್ಟು ಪ್ರಮಾಣದ ಕಾರ್ನಿಟೈನ್ ತಯಾರಿಸಲಾಗುತ್ತದೆ ಎಂದು ಎನ್ಐಹೆಚ್ ವರದಿ ಮಾಡಿದೆ. ಆದ್ದರಿಂದ ಪೂರಕಕ್ಕೆ ಸಂಬಂಧಿಸಿದಂತೆ ಯಾವುದೇ ಆಹಾರ ಶಿಫಾರಸುಗಳಿಲ್ಲ. ಆದರೂ, ಕೆಲವು ಅಧ್ಯಯನಗಳು ಕಾರ್ನಿಟೈನ್ ಪೂರೈಕೆಯ 2 ತಿಂಗಳವರೆಗೆ ದಿನಕ್ಕೆ 2 ಗ್ರಾಂ ತೆಗೆದುಕೊಳ್ಳುವುದರಿಂದ ವೀರ್ಯ ಚಲನಶೀಲತೆ ಹೆಚ್ಚಾಗುತ್ತದೆ ಎಂದು ಕಂಡುಹಿಡಿದಿದೆ.
4. ವಿಟಮಿನ್ ಡಿ
ವಿಟಮಿನ್ ಡಿ ಕೊಬ್ಬನ್ನು ಕರಗಿಸುವ ಮತ್ತೊಂದು ವಿಟಮಿನ್. ಜತೆಗೆ ಉರಿಯೂತವನ್ನು ಕಡಿಮೆ ಮಾಡಲು, ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2017 ರ ಅಧ್ಯಯನವು ಹೆಚ್ಚಿನ ವಿಟಮಿನ್ ಡಿ ಅನ್ನು ಸೇರಿಸುವುದರಿಂದ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ವೀರ್ಯ ಚಲನಶೀಲತೆಗೆ ಅವಶ್ಯಕವಾಗಿದೆ. ಅಲ್ವಾರೆಜ್ ದಿನಕ್ಕೆ 15 ಎಂಸಿಜಿ ವಿಟಮಿನ್ ಡಿ ಅನ್ನು ಶಿಫಾರಸು ಮಾಡುತ್ತಾರೆ.
5. ಝಿಂಕ್
ಝಿಂಕ್ ವೀರ್ಯವು ಮೊಟ್ಟೆಯೊಂದಿಗೆ ಬೆಸೆಯಲು ಮತ್ತು ಭೇದಿಸಲು ದೈಹಿಕ ಸಾಮರ್ಥ್ಯಗಳನ್ನು ನೀಡುವ ಪ್ರಕ್ರಿಯೆಗಳ ಸರಣಿಯಲ್ಲಿ ತೊಡಗಿದೆ. ಕಡಿಮೆ ಝಿಂಕ್ ಮಟ್ಟವು ಪುರುಷ ಬಂಜೆತನಕ್ಕೆ ಸಂಬಂಧಿಸಿದೆ ಎಂದು 2016 ರ ವಿಮರ್ಶೆಯೊಂದು ವರದಿ ಮಾಡಿದೆ. ಟೆಸ್ಟೋಸ್ಟೆರಾನ್ ಉತ್ಪಾದನೆ, ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣು ಕಾರ್ಯವನ್ನು ಹೆಚ್ಚಿಸುವ ಸಾಮರ್ಥ್ಯದಿಂದಾಗಿ ಪುರುಷ ಪ್ರಸವಪೂರ್ವ ಮಲ್ಟಿವಿಟಮಿನ್ ಅನ್ನು ಝಿಂಕ್‌ನೊಂದಿಗೆ ಶಿಫಾರಸು ಮಾಡುತ್ತೇವೆ ಎಂದು ಅಲ್ವಾರೆಜ್ ಹೇಳುತ್ತಾರೆ.
ದಿನಕ್ಕೆ 40 ಮಿಗ್ರಾಂ ಗಿಂತ ಹೆಚ್ಚು ಝಿಂಕ್ ಬೇಡ ಎಂದು ಎನ್ಐಹೆಚ್ ಶಿಫಾರಸು ಮಾಡುತ್ತದೆ, ಏಕೆಂದರೆ ಹೆಚ್ಚು ವಾಂತಿ, ಅತಿಸಾರ, ತಲೆನೋವು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿಯಂತಹ ಹಾನಿಕಾರಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.
6. ಫೋಲಿಕ್ ಆಮ್ಲ
ಫೋಲಿಕ್ ಆಮ್ಲವು ಫೋಲೇಟ್‌ನ ಒಂದು ರೂಪಾಂತರವಾಗಿದೆ - ನೀರಿನಲ್ಲಿ ಕರಗುವ ಬಿ ವಿಟಮಿನ್. ಇದು ಅಲ್ವಾರೆಜ್ ಪ್ರಕಾರ ವೀರ್ಯ ವೈಪರೀತ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಯಸ್ಕರು ದಿನಕ್ಕೆ 400 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ತೆಗೆದುಕೊಳ್ಳಬಾರದು ಎಂದು ಮಾಯೊ ಕ್ಲಿನಿಕ್ ಶಿಫಾರಸು ಮಾಡಿದೆ.
ಪುರುಷ ಫಲವತ್ತತೆಗೆ ಫೋಲಿಕ್ ಆಮ್ಲ ಮತ್ತು ಝಿಂಕ್ ಪರಿಣಾಮಗಳು ಇನ್ನೂ ಚರ್ಚಾಸ್ಪದವಾಗಿವೆ ಎಂಬುದನ್ನು ಗಮನಿಸುವುದು ಮುಖ್ಯ. ಎನ್‌ಐಎಚ್‌ನ 2020 ರ ಅಧ್ಯಯನವು ಝಿಂಕ್ ಮತ್ತು ಫೋಲಿಕ್ ಆಸಿಡ್ ಪೂರೈಕೆಯನ್ನು ತೆಗೆದುಕೊಳ್ಳುವ ಪುರುಷರಲ್ಲಿ ವೀರ್ಯದ ಗುಣಮಟ್ಟ ಅಥವಾ ಜನನ ದರಗಳಲ್ಲಿ ಯಾವುದೇ ಪ್ರಯೋಜನವನ್ನು ಕಂಡುಹಿಡಿಯಲಿಲ್ಲ.
ಪುರುಷರು ಪ್ರಸವಪೂರ್ವ ಜೀವಸತ್ವಗಳನ್ನು ತೆಗೆದುಕೊಳ್ಳಬಹುದೇ?
"ಅಸಹಜ ವೀರ್ಯ ನಿಯತಾಂಕಗಳನ್ನು ಹೊಂದಿರುವ ಪುರುಷರು ಎಲ್-ಕಾರ್ನಿಟೈನ್, ವಿಟಮಿನ್ ಇ, ಮತ್ತು ಒಮೆಗಾ 3 ಡಿಹೆಚ್ಎ / ಮೀನಿನ ಎಣ್ಣೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಲು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ಏಕೆಂದರೆ ಈ ಸಪ್ಲಿಮೆಂಟ್ಸ್‌ಗಳು ಉತ್ತಮ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿವೆ ಎಂದು ತೋರಿಸಲಾಗಿದೆ" ಎಂದು ಅಲ್ವಾರೆಜ್ ಹೇಳುತ್ತಾರೆ. "ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದರಿಂದ [2-3 ತಿಂಗಳುಗಳಲ್ಲಿ] ವೀರ್ಯದ ಆರೋಗ್ಯವನ್ನು ಬದಲಾಯಿಸಲು ಸಹಾಯ ಮಾಡುತ್ತದೆ, ಇದು ವೀರ್ಯಾಣು ಬೆಳೆಯಲು ಬೇಕಾದ ಸಮಯ."
ಕಡಿಮೆ ವೀರ್ಯಾಣುಗಳ ಸಂಖ್ಯೆಗೆ ಕಾರಣ ಏನು..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ