Leadership Qualities: ಉತ್ತಮ ನಾಯಕರಾಗಲು ನಿಮಗೆ ಇರಬೇಕಾದ 6 ಗುಣಗಳಿವು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೀವೂ ಸಹ ಲೀಡರ್‌ ಆಗಬೇಕೆಂದು ಅಂದುಕೊಂಡಿದ್ದರೆ ಕೆಲ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಮನಸ್ಥಲಿಯ ಸಂಸ್ಥಾಪಕರು ಹಾಗೂ ಹಿರಿಯ ಮನೋವೈದ್ಯರಾದ ಡಾ. ಜ್ಯೋತಿ ಕಪೂರ್ ಅವರು ನಾಯಕರಾಗಲು ಬಯಸುವವರು ಹೊಂದಿರಬೇಕಾದ ಗುಣಗಳ ಬಗ್ಗೆ ಹೇಳುತ್ತಾರೆ. ಹಾಗಿದ್ರೆ ಅವುಗಳು ಯಾವುವು ಅನ್ನೋದನ್ನು ನೋಡೋಣ.

ಮುಂದೆ ಓದಿ ...
  • Share this:

ಎಲ್ಲರೂ ಲೀಡರ್‌ (Leader) ಅಥವಾ ನಾಯಕನಾಗಲು ಸಾಧ್ಯವಿಲ್ಲ. ಹೀಗೆ ಲೀಡರ್‌ ಆಗಬೇಕಾದರೆ ಕೆಲವಷ್ಟು ವಿಶಿಷ್ಟ ಗುಣಗಳು ಅವರಲ್ಲಿರಬೇಕು. ಅಥವಾ ನಾಯಕನಾಗಲು ಬಯಸುವವರು ಕೆಲವು ಗುಣಗಳನ್ನು (Leadership Qualities) ಅಳವಡಿಸಿಕೊಳ್ಳಬೇಕು. ಹಾಗಿದ್ದರೆ ಯಾವ ಗುಣಗಳು ನಾಯಕನನ್ನಾಗಿಸುತ್ತವೆ ? ಇದು ಬಹಳಷ್ಟು ಜನರು ಯೋಚಿಸುವ ಒಂದು ಪ್ರಶ್ನೆಯಾಗಿದೆ. ನಾಯಕತ್ವ ಅನ್ನೋದು ಹುಟ್ಟುಗುಣವಲ್ಲ. ಅದನ್ನು ಬೆಳೆಸಿಕೊಳ್ಳಬಹುದು. ವಿಶೇಷವಾಗಿ ವೃತ್ತಿಪರ ಜೀವನದ ವಿಷಯಕ್ಕೆ ಬಂದಾಗ ನಾಯಕರಾಗಬೇಕೆಂದರೆ ನೀವು ಕೌಶಲ್ಯಗಳನ್ನು(Skills) ಅಳವಡಿಸಿಕೊಳ್ಳಬಹುದು. ಒಬ್ಬ ಪರಿಣಾಮಕಾರಿ ನಾಯಕನಾದವನಿಗೆ ಕೇವಲ ಆತ್ಮವಿಶ್ವಾಸ (Confidence) ಇದ್ದರೆ ಸಾಕು ಎಂದು ನೀವು ಭಾವಿಸಬಹುದು. ಆದರೆ ಇದರ ಜೊತೆಗೆ ಇನ್ನೂ ಕೆಲವಷ್ಟು ಗುಣಗಳು ಆತನಲ್ಲಿರಬೇಕಾಗುತ್ತದೆ.


ಹಾಗಾಗಿ ನೀವೂ ಸಹ ಲೀಡರ್‌ ಆಗಬೇಕೆಂದು ಅಂದುಕೊಂಡಿದ್ದರೆ ಕೆಲ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಮನಸ್ಥಲಿಯ ಸಂಸ್ಥಾಪಕರು ಹಾಗೂ ಹಿರಿಯ ಮನೋವೈದ್ಯರಾದ ಡಾ. ಜ್ಯೋತಿ ಕಪೂರ್ ಅವರು ನಾಯಕರಾಗಲು ಬಯಸುವವರು ಹೊಂದಿರಬೇಕಾದ ಗುಣಗಳ ಬಗ್ಗೆ ಹೇಳುತ್ತಾರೆ. ಹಾಗಿದ್ರೆ ಅವುಗಳು ಯಾವುವು ಅನ್ನೋದನ್ನು ನೋಡೋಣ.




1.ಹೊಂದಿಕೊಳ್ಳುವ ಮನಸ್ಥಿತಿ: ಜಗತ್ತು ವೈವಿದ್ಯಮಯ ಜನರಿಂದ ಕೂಡಿದೆ. ನಾಯಕನಾದವರು ಹೊಸ ಜನರೊಂದಿಗೆ ಹೊಸ ಹೊಸ ಸಂದರ್ಭಗಳಿಗೆ ತಕ್ಕನಾಗಿ ನಡೆದುಕೊಳ್ಳಬೇಕಾಗುತ್ತದೆ. ಹೊಸ ಪರಿಸರ ಮತ್ತು ವಿವಿಧ ರೀತಿಯ ಜನರಿರುವ ಟೀಂಗಳಿಗೆ ಹೊಂದಿಕೊಳ್ಳುವುದು ಅತ್ಯಗತ್ಯ. ಅಪಾಯದ ಮಟ್ಟವನ್ನು ಗಣನೆಗೆ ತೆಗೆದುಕೊಂಡು ನೀವು ಮತ್ತು ತಂಡವು ಎಷ್ಟು ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ನಿರ್ಧರಿಸಿಕೊಳ್ಳಿ.


2.ನಿಮ್ಮ ಟೀಂ ಮುಖ್ಯ ಅನ್ನೋದನ್ನು ನೆನಪಿಡಿ: ನೀವು ಎಷ್ಟು ಮುಖ್ಯವೋ ಅಷ್ಟೇ ನಿಮ್ಮ ತಂಡ ಕೂಡ ಮುಖ್ಯ ಅನ್ನೋದನ್ನು ನೆನಪಿಡಿ. ನಿಮ್ಮ ಆಲೋಚನೆಯೊಂದಿಗೆ ನಿಮ್ಮ ತಂಡವನ್ನು ನಂಬುವುದು ಅಷ್ಟೇ ಮುಖ್ಯ. ನಂಬಿಕೆಯ ಬುನಾದಿಯ ಮೇಳೆ ನಿಮ್ಮ ಕಂಪನಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ನಿಧಾನವಾಗಿ ಪ್ರಾರಂಭಿಸುವುದು ಮತ್ತು ನಿಮ್ಮ ಉದ್ಯೋಗಿಗಳಲ್ಲಿ ನಂಬಿಕೆಯನ್ನು ಹುಟ್ಟುಹಾಕುವುದು, ಅವರು ಹೆಚ್ಚು ಪರಿಣಾಮಕಾರಿ ಕೆಲಸ ಮಾಡುವಂತೆ ಮಾಡಲು ಸಹಕಾರಿಯಾಗಿದೆ.


ಸಾಂದರ್ಭಿಕ ಚಿತ್ರ


3. ಉತ್ತಮ ಸಂವಹನ ಕೌಶಲ್ಯ: ನಿಮ್ಮ ಕಂಪನಿಗಾಗಿ ನೀವು ಹೊಂದಿರುವ ಗುರಿಗಳು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ತೋರುತ್ತಿದ್ದರೂ, ನೀವು ಈ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದು ಮನೋವೈದ್ಯರು ವಿವರಿಸುತ್ತಾರೆ. ಒಬ್ಬ ನಾಯಕನು ಅವರ ಆಲೋಚನೆಗಳ ಬಗ್ಗೆ ಸ್ಪಷ್ಟವಾಗಿರುತ್ತಾನೆ. ಆ ಸ್ಪಷ್ಟತೆಯನ್ನು ಬೇರೆಯವರಿಗೂ ಹೇಗೆ ತಿಳಿಸುವುದೆಂದು ತಿಳಿದಿರುತ್ತಾನೆ.


4. ನಿರ್ಣಯವು ಮುಖ್ಯ: ನೀವು ತೆಗೆದುಕೊಳ್ಳುವುದು ದೃಢ ನಿರ್ಧಾರ ಅತ್ಯಗತ್ಯವಾಗಿರುತ್ತದೆ. ಹಾಗೆ ಮಾಡುವ ಮೂಲಕ, ನಿಮ್ಮ ಸಂಸ್ಥೆಗೆ ನಿಮ್ಮ ಬದ್ಧತೆಯನ್ನು ತೋರಿಸುತ್ತೀರಿ. ಜೊತೆಗೆ ತಂಡದ ಜೊತೆಗೆ ಮುನ್ನಡೆಯಲು ಉತ್ಸಾಹವನ್ನೂ ಪ್ರದರ್ಶಿಸುತ್ತೀರಿ. ಇದು ಇತರರನ್ನು ಅದೇ ರೀತಿ ಮಾಡಲು ಉತ್ತೇಜಿಸುತ್ತದೆ.


5. ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ: ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ. ಒಳ್ಳೆಯ ನಾಯಕರು ನಿರ್ಣಾಯಕರಾಗಿರುತ್ತಾರೆ. ಸಂಸ್ಥೆ, ಉದ್ಯೋಗಿಗಳು, ಮಧ್ಯಸ್ಥಗಾರರು ಮತ್ತು ಗ್ರಾಹಕರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿದಿರುತ್ತಾರೆ. ಅಸ್ಪಷ್ಟ ಮತ್ತು ಅನಿಶ್ಚಿತತೆ ನಾಯಕನಾದವನಿಗೆ ಎಂದಿಗೂ ಕಾಡಬಾರದು. ಆದ್ದರಿಂದ, ನಿಮ್ಮನ್ನು ಅನುಮಾನಿಸುವುದನ್ನು ನಿಲ್ಲಿಸಿ ಮತ್ತು ಕೆಲಸದಲ್ಲಿ ವಿಷಯಗಳನ್ನು ಸುಗಮವಾಗಿಸಲು ಸ್ಮಾರ್ಟ್ ನಿರ್ಧಾರಗಳನ್ನು ತೆಗೆದುಕೊಳ್ಳಿ.


ಇದನ್ನೂ ಓದಿ: Husband: ತಮ್ಮ ಗಂಡನಿಂದ ಪತ್ನಿಯರು ಬಯಸುವ ಗುಣಗಳು ಯಾವವು? ಇಲ್ಲಿದೆ ಸುಖ ಸಂಸಾರದ 11 ಸೂತ್ರಗಳು


6. ನಮ್ರತೆಯ ಗುಣವಿಬೇಕು: ನಾಯಕನಾಗುವವರಲ್ಲಿ ಮುಖ್ಯವಾಗಿ ನಮ್ರತೆ ಇರಬೇಕು. ನೆನಪಿಡಿ, ಅಹಂಕಾರಿಯಾದ ನಾಯಕನನ್ನು ಯಾರೂ ಇಷ್ಟಪಡುವುದಿಲ್ಲ. ವಿನಮ್ರ ನಾಯಕರು ಅತ್ಯುತ್ತಮ ನಾಯಕರು ಎಂದು ಡಾ. ಕಪೂರ್ ಹೇಳುತ್ತಾರೆ. ನಾಯಕರಾದವರು ಎಲ್ಲರ ಒಳಿತನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.




ಒಟ್ಟಾರೆ, ಕೆಲಸದಲ್ಲಿ ಮತ್ತು ಜೀವನದಲ್ಲಿ ಉತ್ತಮ ನಾಯಕನಾಗಲು ನೀವು ಈ ಎಲ್ಲ ಗುಣಗಳನ್ನು ಅಳವಡಿಸಿಕೊಳ್ಳಬೇಕು. ರಾತ್ರಿ ಬೆಳಗಾಗುವುದರಲ್ಲಿ ನಾಯಕನಾಗಲು ಸಾಧ್ಯವಿಲ್ಲ. ಇಂಥ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಹಾಗೂ ಸಮಯ ಅಗತ್ಯ. ಆದರೆ ನೀವು ಬಯಸಿದ ನಾಯಕರಾದಾಗ ವಿನಮ್ರರಾಗಿರಲು ಮರೆಯಬೇಡಿ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು