Diet Plan: ಡಯೆಟ್‌, ವ್ಯಾಯಾಮ ಏನೇ ಮಾಡಿದರೂ ತೂಕ ಇಳಿಕೆ ಆಗ್ತಿಲ್ವಾ? ಅದಕ್ಕೆ ಈ ಅಂಶಗಳೇ ಕಾರಣವಿರಬಹುದು!

ವೇಟ್​ ಲಾಸ್

ವೇಟ್​ ಲಾಸ್

ಎಷ್ಟು ಪ್ರಯತ್ನಪಟ್ಟರೂ ತೂಕ ಇಳಿಯದೇ ಹೋದರೆ ಖಂಡಿತಾ ಅದು ನಿರಾಶಾದಾಯಕ ಪರಿಸ್ಥಿತಿ ಎಂದೇ ಹೇಳಬಹುದು. ಆದರೆ ನೀವು ಇಂಥ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳು, ಊಟದ ಸಮಯ, ನಿಮ್ಮ ವ್ಯಾಯಾಮದ ತೀವ್ರತೆಯನ್ನು ಹೆಚ್ಚು ಮಾಡಿಕೊಳ್ಳುವುದು ಮತ್ತು ಜೀವನಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರೆ ತೂಕ ನಷ್ಟ ಸಾಧ್ಯ.

ಮುಂದೆ ಓದಿ ...
  • Share this:

ಸ್ಥೂಲಕಾಯ (Weight Gain), ಬೊಜ್ಜು, ತೂಕ ಏರಿಕೆಯಂಥ ಸಮಸ್ಯೆಗಳು ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ, ಅನೇಕರಿಗೆ ತೂಕ ನಷ್ಟ (Weight Loss) ಅನ್ನೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವೊಮ್ಮೆ ಜನರು ಸರಿಯಾಗಿ ವ್ಯಾಯಾಮ ಮಾಡುತ್ತಾರೆ, ಆದರೆ ಚೆನ್ನಾಗಿ ತಿಂದುಬಿಡುತ್ತಾರೆ. ಇನ್ನು ಕೆಲವರು ಊಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೂ ವ್ಯಾಯಾಮ (Exercise) ಮಾಡಲು ಸೋಮಾರಿಯಾಗಿರುತ್ತಾರೆ (Laziness). ಆದರೆ ಕೆಲವರು ಮಾತ್ರ ಸರಿಯಾಗಿ ವ್ಯಾಯಾಮ, ಕ್ಯಾಲೋರಿಗೆ ಅನುಗುಣವಾಗಿ ಕಡಿಮೆ ತಿನ್ನುತ್ತಾರೆ. ಆದರೆ ಸರಿಯಾದ ಜೀವನಶೈಲಿಯನ್ನು ರೂಢಿಸಿಕೊಂಡರೂ ಕೆಲವರಿಗೆ ತೂಕ ಕಡಿಮೆಯಾಗುವುದೇ ಇಲ್ಲ. ಹೌದು… ತೂಕ ಇಳಿಸಿಕೊಳ್ಳಬೇಕು ಎಂದುಕೊಳ್ಳಲು ಪ್ರಯತ್ನಿಸುವ ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದರೂ ತೂಕವನ್ನು ಕಳೆದುಕೊಳ್ಳದೇ ಹೋದರೆ ನೀವು ಒಂದು ತಟಸ್ಥದಂತಹ ಸ್ಥಿತಿಗೆ ತಲುಪಿದ್ದೀರಿ ಎಂದರ್ಥ.


ಸಾಂದರ್ಭಿಕ ಚಿತ್ರ


ಎಷ್ಟು ಪ್ರಯತ್ನಪಟ್ಟರೂ ತೂಕ ಇಳಿಯದೇ ಹೋದರೆ ಖಂಡಿತಾ ಅದು ನಿರಾಶಾದಾಯಕ ಪರಿಸ್ಥಿತಿ ಎಂದೇ ಹೇಳಬಹುದು. ಆದರೆ ನೀವು ಇಂಥ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳು, ಊಟದ ಸಮಯ, ನಿಮ್ಮ ವ್ಯಾಯಾಮದ ತೀವ್ರತೆಯನ್ನು ಹೆಚ್ಚು ಮಾಡಿಕೊಳ್ಳುವುದು ಮತ್ತು ಜೀವನಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರೆ ತೂಕ ನಷ್ಟ ಸಾಧ್ಯ. ಪೌಷ್ಟಿಕತಜ್ಞರಾದ ನ್ಮಾಮಿ ಅಗರ್ವಾಲ್ ಅವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಒಂದು ಹಂತದಲ್ಲಿ ತೂಕ ತಟಸ್ಥ ಸ್ಥಿತಿ ತಲುಪಲು ಕಾರಣವಾಗುವ ಅಂಶಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವುಗಳು ಯಾವುವು, ನಮಗೆ ಗೊತ್ತಿಲ್ಲದೆಯೇ ಯಾವೆಲ್ಲ ಅಂಶಗಳು ಇದಕ್ಕೆ ಕಾರಣವಾಗುತ್ತವೆ ಅನ್ನೋದನ್ನು ನೋಡೋಣ.


ತೂಕ ಇಳಿಕೆಯಾಗದಿರಲು ಈ ಅಂಶಗಳು ಕಾರಣವಾಗಿರಬಹುದು


1. ಕ್ಯಾಲೊರಿ ಸಮತೋಲನ: ತೂಕ ನಷ್ಟವಾಗಬೇಕಾದರೆ ಪ್ರಮುಖವಾಗಿ ಸೇವಿಸುವ ಕ್ಯಾಲೋರಿ ಪ್ರಮಾಣಕ್ಕಿಂತ ಬರ್ನ್‌ ಮಾಡುವ ಕ್ಯಾಲೊರಿಗಳ ಪ್ರಮಾಣ ಹೆಚ್ಚಾಗಿರಬೇಕು. ಆದರೆ ನಿಮ್ಮ ತೂಕ ತಟಸ್ಥವಾಗಿದೆ ಎಂದಾದರೆ ಅದಕ್ಕೆ ಕಾರಣ ನಿಮ್ಮ ಕ್ಯಾಲೋರಿ ಸಮತೋಲನವಾಗಿರಬಹುದು ಎಂದು ಪೌಷ್ಟಿಕತಜ್ಞರು ಅಂದಾಜಿಸುತ್ತಾರೆ. ನೀವು ತೆಗೆದುಕೊಳ್ಳುವ ಕ್ಯಾಲೋರಿಗಳು ನೀವು ಬರ್ನ್‌ ಮಾಡುವ ಕ್ಯಾಲೋರಿಗಳಿಗೆ ಸಮನಾಗಿರಬಹುದು ಎಂದು  ಹೇಳುತ್ತಾರೆ.


stomach fat how to reduce it and which things helps
ವೇಟ್​ ಲಾಸ್


2. ನಿದ್ರೆಯ ಕೊರತೆ:  ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ನಿದ್ರೆಯ ಗುಣಮಟ್ಟ ಮತ್ತು ಎಷ್ಟು ಪ್ರಮಾಣದಲ್ಲಿ ನಿದ್ರೆ ಮಾಡುತ್ತೀರಿ ಎನ್ನುವುದು ಮುಖ್ಯವಾಗಿದೆ. ನಿಮ್ಮ ತೂಕ ನಷ್ಟ ಪ್ರಕ್ರಿಯೆಯ ಮೇಲೆ ನಿದ್ರೆಯು ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ತೂಕ ನಷ್ಟವನ್ನು ಹೊಂದದೇ ಇರಲು ನಿದ್ರೆಯ ಕೊರತೆಯು ಕಾರಣವಾಗಿರಬಹುದು.


3. ಸ್ನಾಯು ಹೆಚ್ಚಳ ಸಂಭವಿಸುತ್ತಿರಬಹುದು: ನೀವು ಹೆಚ್ಚಿನ ವ್ಯಾಯಾಮಗಳನ್ನು ಮಾಡಿದಾಗ ನೀವು ಇಂಚುಗಳನ್ನು ಕಳೆದುಕೊಳ್ಳಬಹುದು. ಆದರೆ ತೂಕವನ್ನು ಕಳೆದುಕೊಳ್ಳದೇ ಇರಬಹುದು ಎಂದು ನ್ಮಾಮಿ ವಿವರಿಸುತ್ತಾರೆ. ಅಲ್ಲದೇ, ನೀವು ಸ್ನಾಯುವಿನ ಹೆಚ್ಚಳವನ್ನು ಪಡೆಯುತ್ತೀರಿ. ಆದರೆ ಅದು ಸಂಪೂರ್ಣವಾಗಿ ಸರಿಯಾಗಿದೆ ಮತ್ತು ಆರೋಗ್ಯಕರವಾದದ್ದು ಎಂದು ಹೇಳುತ್ತಾರೆ.


4. ಒತ್ತಡ:  ಅತಿಯಾದ ಒತ್ತಡವು ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ನಿಮ್ಮ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ಒತ್ತಡ ನಿರ್ವಹಣೆ ನಿಮ್ಮ ತೂಕ ನಷ್ಟ ಪ್ರಯಾಣದ ನಿರ್ಣಾಯಕ ಭಾಗ ಎಂದು ಹೇಳಬಹುದು.




5. ನಿಮ್ಮ ದೇಹದ ಪ್ರತಿಕ್ರಿಯೆ ಬದಲಾಗಿದೆ:  ಪೌಷ್ಟಿಕ ತಜ್ಞರು ಹೇಳುವ ಪ್ರಕಾರ, ಕೆಲವೊಮ್ಮೆ ನಿಮ್ಮ ದೇಹವು ಸ್ವಲ್ಪ ಕೊಬ್ಬನ್ನು ಇರಿಸಿಕೊಳ್ಳಲು ಬಯಸುವ ರಕ್ಷಣಾತ್ಮಕ ಕ್ರಮದಲ್ಲಿ ಹೀಗಾಗುತ್ತದೆ. ಆದ್ದರಿಂದ ಕೆಲವೊಮ್ಮೆ ತೂಕ ಸ್ಥಿರವಾಗಿರಬಹುದು. ನಿಮ್ಮ ದೇಹಕ್ಕೆ ಸ್ವಲ್ಪ ಸಮಯ ನೀಡಿ ಎಂದು  ಸಲಹೆ ನೀಡುತ್ತಾರೆ.


6. ಏಕತಾನತೆಯ ತಾಲೀಮು: ಕೆಲವೊಮ್ಮೆ ನೀವು ಮಾಡುವಂಥ ವ್ಯಾಯಾಮಗಳಿಗೆ ದೇಹವು ಒಗ್ಗಿಕೊಂಡಿರುತ್ತದೆ. ಇದರಿಂದ ತೂಕ ನಷ್ಟ ಸಂಭವಿಸದೇ ಇರಬಹುದು. ಆದ್ದರಿಂದ, ನೀವು ವ್ಯಾಯಾಮದ ತೀವ್ರತೆ ಅಥವಾ ವ್ಯಾಯಾಮ ಮಾಡುವ ಅವಧಿಯನ್ನು ಬದಲಾಯಿಸಬೇಕಾಗಬಹುದು.

top videos
    First published: