Weight Loss: ಸಣ್ಣ ಆಗಲು ಓಟ್ ಮೀಲ್ ಸೇವಿಸಿ; ಈ 6 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ನಿಮ್ಮ ಆರೋಗ್ಯಕರ ಜೀವನಶೈಲಿಯಲ್ಲಿ ಓಟ್ ಮೀಲ್ ಅಭ್ಯಾಸಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಹಾರ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸರ್ವೋತ್ಕೃಷ್ಟ ಉಪಹಾರಗಳ (BreakFast) ಪಟ್ಟಿಯಲ್ಲಿ ಓಟ್ ಮೀಲ್ ಪ್ರಮುಖವಾಗಿದೆ. ಓಟ್ಸ್ ನೈಸರ್ಗಿಕವಾಗಿ ಫೈಬರ್ (Fiber), ಬಿ ಜೀವಸತ್ವಗಳನ್ನು ಸೇರಿ ಹಲವು ಪೋಷಕಾಂಶಗಳನ್ನು(Protein)  ಒಳಗೊಂಡಿದೆ. ಒಟ್ಟಾರೆ ಆರೋಗ್ಯದ ಜೊತೆಗೆ ಸಣ್ಣ ಆಗಲು ಇದು ಸಹಾಯ ಮಾಡುತ್ತದೆ. ಓಟ್ ಮೀಲ್ (Oatmeal) ತೂಕವನ್ನು ನಿರ್ವಹಿಸಲು ಸಹಾಯ ಮಾಡುವ ರುಚಿಕರವಾದ ಮತ್ತು ತೃಪ್ತಿಕರ ಭಕ್ಷ್ಯವಾಗಿದೆ. ಓಟ್ ಮೀಲ್ ತೂಕ ಇಳಿಕೆಯಲ್ಲಿ (Weight Loss) ಹೆಚ್ಚು ಶಿಫಾರಸು ಮಾಡಲಾದ ಆಹಾರವಾಗಿದ್ದು, ಕಡಿಮೆ ಫೈಬರ್ ಹೊಂದಿರುವ ಓಟ್ಸ್ ಜೀರ್ಣಶಕ್ತಿಯನ್ನು ವೃದ್ಧಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.

ನಿಮ್ಮ ಆರೋಗ್ಯಕರ ಜೀವನಶೈಲಿಯಲ್ಲಿ ಓಟ್ ಮೀಲ್ ಅಭ್ಯಾಸಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಹಾರ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಓಟ್ಸ್ ಜೊತೆಗೆ ಸೇರಿಸುವ ಬೇರೆ ಪದಾರ್ಥಗಳಿಂದ ಹಿಡಿದು ಅದನ್ನು ಸರಿಯಾದ ರೀತಿಯಲ್ಲಿ ಸಿದ್ಧಪಡಿಸುವವರೆಗೆ, ತೂಕ ನಷ್ಟಕ್ಕೆ ಕಾರಣವಾಗುವ 6 ಓಟ್ ಮೀಲ್ ಅಭ್ಯಾಸಗಳು ಇಲ್ಲಿವೆ.

1) ತ್ವರಿತವಾಗಿ ಬೇಯಿಸಿ

ಓಟ್ಸ್ ಬೇಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ತಕ್ಷಣದ ಹಸಿವನ್ನು ನಿವಾರಿಸಿಕೊಳ್ಳಲು ಜಂಕ್ ಫುಡ್‌ನಂತಹ ಆಹಾರಗಳಿಗೆ ಮೊರೆ ಹೋಗುತ್ತೇವೆ. ಈ ಅಭ್ಯಾಸಗಳು ಅಧಿಕ ತೂಕಕ್ಕೆ ಕಾರಣವಾಗುತ್ತವೆ. ಹೀಗಾಗಿ ನಿಮ್ಮ ಓಟ್ಸ್ ಅನ್ನು ತ್ವರಿತವಾಗಿ ಬೇಯಿಸಲು 1 ರಿಂದ 3 ಅನುಪಾತದಂತೆ ಪಾತ್ರೆಯಲ್ಲಿ ನೀರು ಮತ್ತು ಓಟ್ಸ್ ಸೇರಿಸಿ ಬೇಯಿಸಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಯಾವ ಪದಾರ್ಥದ ಜೊತೆಗೆ ಜೇನುತುಪ್ಪ ತಿನ್ನಬಾರದು?

2) ನಿಮ್ಮ ರಾತ್ರಿಯ ಓಟ್ಸ್ ಪಾಕವಿಧಾನದಲ್ಲಿ ಕೆಫೀರ್ ಬಳಸಿ

ನೀವು ರಾತ್ರಿಯ ಸಮಯದಲ್ಲಿ ಓಟ್ಸ್‌ ತಿನ್ನಲು ಬಯಸಿದರೆ ಪ್ರೋಬಯಾಟಿಕ್ ವರ್ಧಕಕ್ಕಾಗಿ ಹಾಲಿನ ಬದಲಿಗೆ ಕೆಫೀರ್ ಅನ್ನು ಓಟ್ಸ್ ಜೊತೆಗೆ ಸೇರಿಸಿಕೊಳ್ಳಿ. "ಕೆಫೀರ್ ಮೊಸರುಗಿಂತ ಹೆಚ್ಚು ಕರುಳು-ಸ್ನೇಹಿ ಪ್ರೋಬಯಾಟಿಕ್‌ಗಳನ್ನು ಹೊಂದಿದೆ, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಸ್ಥಿರವಾದ ರಕ್ತದಲ್ಲಿನ ಸಕ್ಕರೆಗಳನ್ನು ಹೆಚ್ಚಿಸುವ ಮೂಲಕ ಪೂರ್ಣ ಸಂತೃಪ್ತಿಯನ್ನು ಉತ್ತೇಜಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಉತ್ತಮ ತೂಕ ನಿಯಂತ್ರಣ ಮತ್ತು ತೂಕವನ್ನು ಕಡಿಮೆ ಮಾಡಲು ಸಹಕಾರಿ.

3) ಖಾರದ ಓಟ್ ಮೀಲ್ ಖಾದ್ಯ

ಓಟ್ ಮೀಲ್ ಪಾಕವಿಧಾನಗಳನ್ನು ಸಾಮಾನ್ಯವಾಗಿ ಬ್ರೌನ್ ಶುಗರ್ ಅಥವಾ ಮೇಪಲ್ ಸಿರಪ್‌ನಂತಹ ಸಿಹಿಯಾದ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಸಿಹಿಯಾದ ಓಟ್ ಮೀಲ್ ತಿಂದು ಬೇಜಾರಾಗಿದ್ದರೆ ನೀವು ಸ್ಪೈಸಿ ಖಾರದ ಓಟ್ ಮೀಲ್ ಅನ್ನು ಸೇವಿಸಬಹುದು. ಇದು ಸಕ್ಕರೆಗೆ ಬದಲಿ ಉತ್ತಮ ಆಯ್ಕೆಯಾಗಿರುತ್ತದೆ. ಕೋಸುಗಡ್ಡೆ, ಸಿಹಿ ಗೆಣಸು ಮತ್ತು ಅಣಬೆಗಳಂತಹ ಹುರಿದ ತರಕಾರಿಗಳೊಂದಿಗೆ ಖಾರದ ಓಟ್ ಮೀಲ್ ಅನ್ನು ತಯಾರಿಸಬಹುದು. ಓಟ್ಸ್ ಜೊತೆಗಿನ ಇವುಗಳ ಸಂಯೋಜನೆ ಫೈಬರ್ ಅನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಇನ್ಸುಲಿನ್ ನಿಯಂತ್ರಣ, ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.

4) ಬೇಯಿಸಿದ ಓಟ್ ಮೀಲ್ ತಯಾರಿಸಿ

ಬೇಯಿಸಿದ ಓಟ್ ಮೀಲ್ ತೂಕ ನಷ್ಟಕ್ಕೆ ಸಹಾಯ ಮಾಡುವ ಪೋಷಕಾಂಶಗಳಿಂದ ತುಂಬಿರುತ್ತದೆ. ಅಲ್ಲದೆ ಇದರ ಜೊತೆ ನೀವು ಮೊಟ್ಟೆಗಳನ್ನು ಸಹ ಸೇರಿಸಿಕೊಳ್ಳಬಹುದು. ಮೊಟ್ಟೆಗಳಲ್ಲಿನ ಪ್ರೋಟೀನ್ ಮತ್ತು ಓಟ್ ಮೀಲ್‌ನಲ್ಲಿರುವ ಫೈಬರ್ ಎರಡೂ ಕಡುಬಯಕೆಗಳನ್ನು ನಿಗ್ರಹಿಸುವುದರ ಜೊತೆಗೆ ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

5) ಆರೋಗ್ಯಕರ ಕೊಬ್ಬನ್ನು ಸೇರಿಸಿ

ನಿಮ್ಮ ಓಟ್ ಮೀಲ್ ಖಾದ್ಯಕ್ಕೆ ಕೆಲವು ಆರೋಗ್ಯಕರ ಕೊಬ್ಬನ್ನು ಸೇರಿಸುವ ಮೂಲಕ ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಬೆಣ್ಣೆ, ಚಿಯಾ ಬೀಜಗಳಂತಹ, ಅನೇಕ ಆರೋಗ್ಯಕರ ಕೊಬ್ಬನ್ನು ಓಟ್ ಮೀಲ್ ಉಪಾಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡಿ ಕಡಿಮೆ ತಿನ್ನಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸೂಪರ್ ಫುಡ್ ಗಳ ಉಪಾಹಾರ ಸೇವಿಸಿ, ಪ್ರಯೋಜನ ಪಡೆಯಿರಿ

6) ಸಕ್ಕರೆಯ ಬದಲಿಗೆ ಮಸಾಲೆಗಳನ್ನು ಬಳಸಿ

ಓಟ್‌ ಮೀಲ್‌ನಲ್ಲಿ ಸಕ್ಕರೆ ರುಚಿಯನ್ನು ನೀಡುತ್ತದೆ, ಆದರೆ ಅದರ ಜೊತೆ ಕ್ಯಾಲೋರಿಗಳನ್ನು ಸಹ ಸೇರಿಸಬಹುದು, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಕ್ಕರೆ ಬದಲಿಗೆ ಓಟ್ ಮೀಲ್ ಅನ್ನು ದಾಲ್ಚಿನ್ನಿ, ಕೇನ್ ಮತ್ತು ಶುಂಠಿಯೊಂದಿಗೆ ಸೇವಿಸಬಹುದು. ಈ ಮಸಾಲೆ ಪದಾರ್ಥಗಳು ತೂಕ ನಷ್ಟಕ್ಕೆ ಸಹಕಾರಿಯಾಗುವುದರ ಜೊತೆಗೆ ಉರಿಯೂತದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ.
Published by:Pavana HS
First published: