Family Planning: ಕುಟುಂಬಕ್ಕೆ ಹೊಸ ಸದಸ್ಯನನ್ನ ಬರ ಮಾಡಿಕೊಳ್ಳುವ ಮುನ್ನ ಇರಲಿ ಸಿದ್ಧತೆ

Family planning Method : ಮಗು ಪಡೆಯುವುದು ದಂಪತಿಗಳಿಬ್ಬರ ಪಾಲಿನಲ್ಲಿ ಹೊಸ ಅಧ್ಯಾಯ... ಹೊಸ ಅಧ್ಯಾಯದಲ್ಲಿ ಯಾವುದೇ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದು ಅಷ್ಟೇ ಮಹತ್ವದ್ದು.. ಹೀಗಾಗಿ ನೀವು ಮಗು ಪಡೆಯಬೇಕು ಎಂದು ಬಯಸುವ ಮುನ್ನ ಅದಕ್ಕಾಗಿ ಹಲವು ಪೂರ್ವ ತಯಾರಿಗಳನ್ನು ಮಾಡಿಕೊಂಡರೆ ನಿಮ್ಮ ಹಾಗೂ ನಿಮ್ಮ ಮಗುವಿನ ಮುಂದಿನ ಜೀವನ ಉತ್ತಮವಾಗಿರುವುದು..

ಕುಟುಂಬ

ಕುಟುಂಬ

 • Share this:
  ವೈವಾಹಿಕ ಜೀವನಕ್ಕೆ(Marriage life )ಕಾಲಿಟ್ಟ ಮೇಲೆ ಪುರುಷ (Men)ಹಾಗೂ ಮಹಿಳೆಯರಿಗೆ (Women)ಜವಾಬ್ದಾರಿಗಳು (Responsibility)ಹೆಚ್ಚಾಗಿರುತ್ತವೆ. ತಮ್ಮ ವೈವಾಹಿಕ ಜೀವನದ ಮತ್ತೊಂದು ಮೈಲಿಗಲ್ಲು ಎಂದರೆ ಅದು ಮಗು (Baby)ಪಡೆಯುವುದು.. ತಮ್ಮ ಕುಟುಂಬವನ್ನು ಇನ್ನಷ್ಟು ವಿಸ್ತರಣೆ ಮಾಡಲು ದಂಪತಿಗಳು ಬಯಸುತ್ತಿದ್ರೆ ಅದಕ್ಕಾಗಿ ಹಲವಾರು ಸದ್ಧತೆಗಳನ್ನು ( Preparation) ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಮಗು ಪಡೆಯುವುದು ದಂಪತಿಗಳಿಬ್ಬರ ಪಾಲಿನಲ್ಲಿ ಹೊಸ ಅಧ್ಯಾಯ. ಹೊಸ ಅಧ್ಯಾಯದಲ್ಲಿ(New chapter)ಯಾವುದೇ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದು ಅಷ್ಟೇ ಮಹತ್ವದ್ದು.. ಹೀಗಾಗಿ ನೀವು ಮಗು ಪಡೆಯಬೇಕು ಎಂದು ಬಯಸುವ ಮುನ್ನ ಅದಕ್ಕಾಗಿ ಹಲವು ಪೂರ್ವ ತಯಾರಿಗಳನ್ನು ಮಾಡಿಕೊಂಡರೆ ನಿಮ್ಮ ಹಾಗೂ ನಿಮ್ಮ ಮಗುವಿನ ಮುಂದಿನ ಜೀವನ ಉತ್ತಮವಾಗಿರುವುದು..

  1) ನಿಮ್ಮ ಆರೋಗ್ಯದ ಕಡೆ ಇರಲಿ ನಿಮಗೆ ಗಮನ

  ಪ್ರಸ್ತುತ ಜಗತ್ತು ಸಾಂಕ್ರಾಮಿಕ ರೋಗಗಳ ಭೀತಿಯಿಂದ ನರಳುತ್ತಿದೆ.. ಒಂದಲ್ಲ ಒಂದು ರೀತಿಯ ರೋಗಗಳು ನಮಗೆ ಅರಿವಿಲ್ಲದಂತೆಯೇ ನಮ್ಮ ದೇಹವನ್ನು ಪ್ರವೇಶಿಸುತ್ತದೆ.. ಹೀಗಾಗಿ ನೀವು ಮಗು ಪಡೆಯುವ ಯೋಜನೆಯಲ್ಲಿ ಇದ್ದರೆ ನಿಮ್ಮ ಆರೋಗ್ಯದ ಕಡೆ ಕಂಡಿತಾ ನೀವು ಗಮನ ನೀಡಲೇಬೇಕು..

  ಹೀಗಾಗಿ ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಬರಮಾಡಿಕೊಳ್ಳುವ ಮುಂಚೆ ವ್ಯಾಯಾಮ ಸೇರಿ ಹಲವಾರು ಆರೋಗ್ಯಕರ ಅಂಶಗಳನ್ನು ಅಳವಡಿಸಿಕೊಳ್ಳಬೇಕು.. ಗರ್ಭಿಣಿಯಾಗಲು ಅಗತ್ಯವಾದ ತೂಕ ಪಡೆದುಕೊಂಡು ಆರಾಮದಾಯಕ ಗರ್ಭಧಾರಣೆ ಮಾಡಿಕೊಳ್ಳಬೇಕು..

  ಇದನ್ನೂ ಓದಿ :ಕೋರ್ಟ್ ಶೈಲಿಯಲ್ಲಿ ಮದುವೆ ಕರೆಯೋಲೆ; ವೈರಲ್ ಆಯ್ತು ವೆಡಿಂಗ್ ಕಾರ್ಡ್

  2) ತಜ್ಞರ ಸಲಹೆ

  :ಜೀವನದಲ್ಲಿ ಮಕ್ಕಳನ್ನು ಪಡೆಯುವುದು ಒಂದು ಮೈಲಿಗಲ್ಲು.. ಹೀಗಾಗಿ ಬಹುತೇಕ ದಂಪತಿ ಮಗು ಪಡೆಯುವ ವೇಳೆ ಅನೇಕ ಯಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಕೆಲವು ಕಾಲ ವೈದ್ಯರನ್ನು ಸಂಪರ್ಕಿಸುವುದು ಮರೆಯುತ್ತಾರೆ.. ಹೀಗಾಗಿ ಅನೇಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ..

  ಹೀಗಾಗಿ ಯಾವುದೇ ತೊಂದರೆ ತೆಗೆದುಕೊಳ್ಳದೇ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿಯಾಗಿ ಉತ್ತಮ ಚಿಕಿತ್ಸೆ ತೆಗೆದುಕೊಳ್ಳಬೇಕು..ಪ್ರಸೂತಿ ತಜ್ಞ ಅಥವಾ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಹಲವು ಸಲಹೆಗಳನ್ನು ಕೂಡ ಪಡೆದುಕೊಳ್ಳಬೇಕು.

  3) ಸರಿಯಾದ ಗರ್ಭಧಾರಣೆಯ ಕಿಟ್ ಬಳಸುವುದು

  ಗರ್ಭಧರಿಸಲು ಪ್ರಯತ್ನಿಸುವಾಗ, ಪೀರಿಯಡ್ ತಪ್ಪಿದ ಅವಧಿಯು ಗರ್ಭಧಾರಣೆಯ ಸೂಚನೆ . ಅಂತಹ ಸಮಯದಲ್ಲಿ ನೀವು ಗೈನೆಕಾಲಜಿಸ್ಟ್ ಭೇಟಿ ಮಾಡಿ ಕೆಲವೊಂದು ಸಲಹೆಗಳನ್ನು ಪಡೆಯಬೇಕಾಗುತ್ತದೆ. ಗರ್ಭ ಧರಿಸುತ್ತೇನೆ ಎಂಬ ವಿಷಯ ತಿಳಿದ ತಕ್ಷಣವೇ ನೀವು ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಆದರೆ ಇದಕ್ಕೂ ಮುಂಚೆ ನೀವು ನಿಮ್ಮ ಪ್ರೆಗ್ನನ್ಸಿ ಕನ್ಫರ್ಮ್ ಮಾಡಿಕೊಳ್ಳಲು ಸೂಕ್ತವಾದ ಗರ್ಭಧಾರಣೆಯ ಕಿಟ್ ಗಳನ್ನು ಬಳಸಿ ಕೇವಲ 5 ನಿಮಿಷದಲ್ಲಿ ನೀವು ನಿಮ್ಮ ಪ್ರೆಗ್ನೆನ್ಸಿ ದೃಢ ಪಡಿಸಿಕೊಳ್ಳಬಹುದು

  4) ಹಣ ಉಳಿತಾಯ

  ಗರ್ಭಧರಿಸುವ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು. ಏಕೆಂದರೆ ಇದಕ್ಕೆ ಸಂಬಂಧಿಸಿದ ಖರ್ಚುಗಳು ಹೆಚ್ಚಾಗಿರುತ್ತದೆ.ನೀವು ಮಗುವನ್ನು ಹೊಂದಲು ಬಯಸುತ್ತಿದ್ದಾರೆ ಅಥವಾ ಈಗಾಗಲೇ ಗರ್ಭಿಣಿಯಾಗಿದ್ದರೆ ತಡಮಾಡದೆ ಆರ್ಥಿಕವಾಗಿ ಹಣವನ್ನು ಉಳಿತಾಯ ಮಾಡಿ. ಮಗು ಆಗುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ತಾಯಿ ಒಂಬತ್ತು ತಿಂಗಳು ಗರ್ಭದಲ್ಲಿ ಮಗುವನ್ನು ಜೋಪಾನ ಮಾಡಬೇಕು.ಇದಕ್ಕೆಲ್ಲ ಹೆಚ್ಚಿನ ಪ್ರಮಾಣದ ಖರ್ಚಿನ ಅಗತ್ಯವಿರುತ್ತದೆ.

  ಗರ್ಭಿಣಿಯರಿಗೆ ಸಂಬಂಧಿಸಿದ ಆರೋಗ್ಯ ತಪಾಸಣೆ ಗಳು, ಪ್ರತಿತಿಂಗಳು ಮಾಡಿಸುವಂತಹ ತಪಾಸಣೆಗಳು ಎಲ್ಲವೂ ಹೆಚ್ಚಿನ ಹಣದಾಗಿರುತ್ತದೆ. ಗರ್ಭಧಾರಣೆ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು ಒಳ್ಳೆಯದು.ಮಗುವಿನ ಲಾಲನೆ ಪಾಲನೆಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಆದರೆ ಯಾವುದೇ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡದೆ ಅವಶ್ಯಕ ಕೆಲಸಗಳಿಗೆ ಮಾತ್ರ ಖರ್ಚು ಮಾಡಬೇಕು.

  ಇದನ್ನೂ ಓದಿ :ಪೆನ್ಸಿಲ್​ ಕದ್ದಿದ್ದಕ್ಕೆ ಸ್ನೇಹಿತನ ಮೇಲೆ ದೂರು: 3ನೇ ಕ್ಲಾಸ್​ ಬಾಲಕನ ಮಾತು ಕೇಳಿ ಪೊಲೀಸರೇ ಕಕ್ಕಾಬಿಕ್ಕಿ..!

  5) ಮಗುವಿಗೆ ಅಗತ್ಯವಿರುವ ವಸ್ತು ಮುಂಚೆಯೇ ಖರೀದಿಸಿ

  ಒಂದು ಮಗು ಜನಿಸಿದೆ,ಎಂದರೆ ಅದಕ್ಕೆ ಸಂಬಂಧಿಸಿದ ಹಲವಾರು ವಸ್ತುಗಳ ಅಗತ್ಯವಿರುತ್ತದೆ. ನಿಮ್ಮ ಮಗುವಿಗೆ ಸಂಬಂಧಿಸಿದ ವಸ್ತುಗಳನ್ನು ನಿಮ್ಮ ಆದಾಯಕ್ಕೆ ತಕ್ಕಂತೆ ಖರೀದಿ ಮಾಡಿ. ನಿಮ್ಮ ಮಗುವಿಗಾಗಿ ನಿಮ್ಮ ಹಣವನ್ನು ಉಳಿತಾಯ ಮಾಡಿ.ಉಳಿತಾಯ ಮಾಡಿದ ಹಣವನ್ನು ನಿಮ್ಮ ಮಗುವಿಗೆ ಸಂಬಂಧಿಸಿದ ವಸ್ತುಗಳನ್ನು ಮತ್ತು ಅವಶ್ಯಕತೆಯಿರುವ ವಸ್ತುಗಳನ್ನು ತೆಗೆದುಕೊಳ್ಳಲು ಬಳಸಿ.

  ನಿಮ್ಮ ಮಗುವಿಗೆ ಯಾವ ಯಾವ ವಸ್ತುಗಳು ಬೇಕು ಎನ್ನುವುದನ್ನು ಒಂದು ಪಟ್ಟಿ ಮಾಡಿಕೊಳ್ಳಿ, ಒಂಬತ್ತು ತಿಂಗಳ ಅವಧಿಯಲ್ಲಿ ಎಲ್ಲಾ ವಸ್ತುಗಳನ್ನು ಖರೀದಿ ಮಾಡಲು ಪ್ರಯತ್ನಿಸಿ.

  6) ಹೆಚ್ಚಿನ ಸುರಕ್ಷತೆ ಇರಲಿ :ಮಗು ಪಡೆಯಲು ಬಯಸುವವರು ಮೊದಲು ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು.. ಉತ್ತಮ ಯೋನಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ನಿಮ್ಮ ಸೋಂಕಿನ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು.

  ನೀವು ಗರ್ಭಾವಸ್ಥೆಯಲ್ಲಿ ಸೋಂಕುಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಮಾಮಾಕ್ಸ್‌ಪರ್ಟ್‌ನ ಇಂಟಿಮೇಟ್ ವಾಶ್‌ನಂತಹ ಉತ್ತಮ ಇಂಟಿಮೇಟ್ ವಾಶ್ ಬಳಸ ಬೇಕು ಇದು ತುರಿಕೆಗೆ ಪರಿಹಾರವನ್ನು ನೀಡುತ್ತದೆ ಮತ್ತು ಯಾವುದೇ ಅಹಿತಕರ ವಾಸನೆಯನ್ನು ಕಡಿಮೆ ಮಾಡುತ್ತದೆ.
  Published by:ranjumbkgowda1 ranjumbkgowda1
  First published: