Netra Suraksha: ಡಯಾಬಿಟೀಸ್ ಮತ್ತು ನಿಮ್ಮ ದೃಷ್ಟಿಯ ಬಗೆಗಿನ 6  ತಪ್ಪುಕಲ್ಪನೆಗಳು

ನಿಮ್ಮ ವೈಯಕ್ತಿಕ ಅಪಾಯವನ್ನು ಕನಿಷ್ಠಗೊಳಿಸಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಿಮ್ಮ ವೈದ್ಯರು ಸೂಚಿಸಿದ ಡಯಾಬಿಟೀಸ್ ನಿರ್ವಹಣೆ ಯೋಜನೆಯನ್ನು ಎಚ್ಚರಿಕೆಯಿಂದ ಅನುಸರಿಸುವುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  “ಡಯಾಬಿಟೀಸ್” ಎಂಬ ಪದವನ್ನು ಹೇಳಿ ಮತ್ತು ಆ ಸಂಭಾಷಣೆಯು ಡಯಟ್ ನಿರ್ಬಂಧಗಳು, ಕಾರ್ಬೋಹೈಡ್ರೇಟ್‌ಗಳ ಲೆಕ್ಕಾಚಾರ, ಡಯಾಬಿಟೀಸ್ ತಜ್ಞರೊಂದಿಗಿನ ಭೇಟಿಯ ಕುರಿತ ವಿವರಣೆಗಳು ಮತ್ತು ಇತ್ತೀಚಿನ ಬ್ಲಡ್ ಶುಗರ್ ನಿಯಂತ್ರಿಸುವ ಸಾಧನಗಳ ಬಗ್ಗೆ ತಿರುಗುತ್ತದೆ. ಅತ್ಯಂತ ಕಡಿಮೆ ಚರ್ಚಿಸುವ ವಿಷಯವೆಂದರೆ ಡಯಾಬಿಟೀಸ್ ಹೇಗೆ ನಮ್ಮ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು. ವಾಸ್ತವವಾಗಿ, ಡಯಾಬಿಟೀಸ್ ನಿಮ್ಮ ದೃಷ್ಟಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಾಕಷ್ಟು ತಪ್ಪುಕಲ್ಪನೆಗಳಿವೆ.

  ಈ ತಪ್ಪುಕಲ್ಪನೆಗಳನ್ನು ತೊಡೆದುಹಾಕಲು ಮತ್ತು ಡಯಾಬಿಟೀಸ್ ಇರುವವರು ಅವರ ಆರೋಗ್ಯ ಮತ್ತು ದೃಷ್ಟಿಯ ಕಾಳಜಿ ಮಾಡುವಂತೆ ಅವರನ್ನು ಸಶಕ್ತರನ್ನಾಗಿಸಲು, Novartis ಸಹಯೋಗದೊಂದಿಗೆ, Network 18, Netra Suraksha' - India Against Diabetes ಉಪಕ್ರಮವನ್ನು ಆರಂಭಿಸಿದೆ. ಈ ಉಪಕ್ರಮದ ಭಾಗವಾಗಿ, ವೈದ್ಯಕೀಯ ಕ್ಷೇತ್ರದ ತಜ್ಞರೊಂದಿಗಿನ ದುಂಡು ಮೇಜಿನ ಸಂವಾದಗಳನ್ನು ಪ್ರಸಾರ ಮಾಡುವುದರ ಜತೆಗೆ, ವಿವರಣಾತ್ಮಕ ವೀಡಿಯೊಗಳು ಮತ್ತು ಲೇಖನಗಳನ್ನು ಪ್ರಕಟಿಸಿದೆ. ಇವೆಲ್ಲವೂ ಸಹ ಡಯಾಬಿಟೀಸ್, ದೃಷ್ಟಿಯ ಮೇಲೆ ಅದರ ಪರಿಣಾಮ ಮತ್ತು ಡಯಾಬಿಟೀಸ್ ಇರುವ ಸುಮಾರು ಅರ್ಧದಷ್ಟು ಜನರಲ್ಲಿ ಉಂಟಾಗಿರುವ ಒಂದು ಭಯಹುಟ್ಟಿಸುವ ಸಮಸ್ಯೆಯಾಗಿರುವ ಡಯಾಬಿಟಿಕ್ ರೆಟಿನೋಪಥಿ ಬಗೆಗಿನ ಸಾರ್ವಜನಿಕ ಜ್ಞಾನವನ್ನು ಹೆಚ್ಚಿಸುತ್ತವೆ1.

  ಹಾಗಾದರೆ ನಾವು ನೇರವಾಗಿ ವಾಸ್ತವಾಂಶಗಳನ್ನು ತಿಳಿಯೋಣ.

  ತಪ್ಪುಕಲ್ಪನೆ 1: ನಾನು ನೋಡಬಲ್ಲೆ, ನನ್ನ ಕಣ್ಣುಗಳು ಆರೋಗ್ಯವಾಗಿವೆ.

  ಸ್ಪಷ್ಟವಾದ ದೃಷ್ಟಿಯು ಪ್ರಮುಖವಾದದ್ದು, ಆದರೆ ಅದು ನಿಮ್ಮ ಕಣ್ಣುಗಳು ಆರೋಗ್ಯವಾಗಿವೆ ಎಂಬುದಕ್ಕೆ ಗ್ಯಾರಂಟಿಯಲ್ಲ. ಹಲವು ಆರೋಗ್ಯ ಸ್ಥಿತಿಗಳು ಅವುಗಳ ಪ್ರಾಥಮಿಕ ಹಂತಗಳಲ್ಲಿ ಕೆಲವು ಲಕ್ಷಣಗಳನ್ನು ಹೊಂದಿರುತ್ತವೆ ಅಥವಾ ಯಾವ ಲಕ್ಷಣಗಳೂ ಇರುವುದಿಲ್ಲ. 

  ಗ್ಲಾಕೋಮಾವನ್ನು ದೃಷ್ಟಿಯ ನಿಶ್ಯಬ್ದ ಕಳ್ಳ ಎಂದು ಕರೆಯಲಾಗುತ್ತದೆ, ಏಕೆಂದರೆ ನಿಮ್ಮನ್ನು ಎಚ್ಚರಿಸಲು ಯಾವುದೇ ಲಕ್ಷಣಗಳೂ ಇರುವುದಿಲ್ಲ. ಗ್ಲಾಕೋಮಾ ನಿಮ್ಮ ಕಣ್ಣಿನ ಹಿಂದೆ ಇರುವ, ಆಪ್ಟಿಕ್ ನರ್ವ್ ಎಂದು ಕರೆಯಲಾಗುವ ನರವನ್ನು ಹಾನಿಗೊಳಿಸುತ್ತದೆ, ಅದು ಮೆದುಳಿಗೆ ಸಂಪರ್ಕಗೊಂಡಿರುತ್ತದೆ2. ಗ್ಲಾಕೋಮಾಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಹಾಗಾಗಿ ನೀವು ಅದನ್ನು ಆರಂಭದಲ್ಲೇ ಪತ್ತೆಹಚ್ಚುವುದು ಹಾಗೂ ಚಿಕಿತ್ಸೆ ಆರಂಭಿಸುವುದು ಬಹಳ ಮುಖ್ಯವಾಗಿದೆ. ಚಿಕಿತ್ಸೆ ಇಲ್ಲದಿದ್ದರೆ ಗ್ಲಾಕೋಮಾವು ಕುರುಡುತನ ಉಂಟುಮಾಡುತ್ತದೆ. 

  ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಎಂಬುದು ನಿಮ್ಮ ಕಣ್ಣಿನ ಮಸೂರಗಳಲ್ಲಿ ಇರುವ ಒಂದು ಮಸುಕಾದ ಪ್ರದೇಶವಾಗಿದೆ. ಕ್ಯಾಟರಾಕ್ಟ್‌ಗಳು ಬೆಳೆಯಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತವೆ ಹಾಗೂ ಅವು ತೀವ್ರಗೊಳ್ಳುವವರೆಗೂ ದೃಷ್ಟಿಯ ಮೇಲೆ ಪರಿಣಾಮ ಬೀರದೇ ಇರಬಹುದು. ಒಮ್ಮೆ ರೋಗವು ಉಲ್ಬಣಗೊಂಡರೆ, ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ3.

  ಡಯಾಬಿಟಿಕ್ ರೆಟಿನೋಪಥಿ ಎಂಬುದು, ಹಾಗೆ ನೊಡಿದರೆ ಡಯಾಬಿಟೀಸ್ಗೆ ಸಂಬಂಧಿಸಿದ ಅತ್ಯಂತ ಸಾಮಾನ್ಯವಾದ ಕಾಯಿಲೆಯಾಗಿದೆ. ಡಯಾಬಿಟಿಕ್ ರೆಟಿನೋಪಥಿಯಲ್ಲಿ ಕಣ್ಣುಗಳಿಗೆ (ನಿರ್ದಿಷ್ಟವಾಗಿ ರೆಟಿನಾ) ರಕ್ತ ಪೂರೈಸುವ ರಕ್ತನಾಳಗಳು ಬ್ಲಾಕ್ ಆಗುತ್ತವೆ, ಅಥವಾ ಸೋರುತ್ತವೆ ಅಥವಾ ಒಡೆದುಹೋಗಬಹುದು4. ಡಯಾಬಿಟಿಕ್ ರೆಟಿನೋಪಥಿಯು ಪ್ರಾಥಮಿಕ ಹಂತಗಳಲ್ಲಿ ಲಕ್ಷಣರಹಿತವಾಗಿದ್ದರೂ, ಅದೇ ಸ್ಥಿತಿ ಬೆಳವಣಿಗೆಯಾದಂತೆಲ್ಲಾ ಓದುವುದಕ್ಕೆ ಸಮಸ್ಯೆ ಉಂಟುಮಾಡುತ್ತದೆ ಮತ್ತು ಅದು ಕನ್ನಡಕಗಳನ್ನು ಬದಲಾಯಿಸುವುದರಿಂದ ಸರಿ ಹೋಗುವುದಿಲ್ಲ. ಸರಿಯಾದ ಸಮಯಕ್ಕೆ ಪತ್ತೆಹಚ್ಚದಿದ್ದರೆ, ಅದು ಶಾಶ್ವತ ದೃಷ್ಟಿಹೀನತೆ ಉಂಟುಮಾಡಬಹುದು4

  ತಪ್ಪುಕಲ್ಪನೆ 2: ಡಯಾಬಿಟೀಸ್ ಇರುವವರಿಗೆ ಕಣ್ಣಿನ ಸಮಸ್ಯೆಗಳ ಅಪಾಯವು ಹೆಚ್ಚೇನಿಲ್ಲ

  ಸಂಖ್ಯೆಗಳು ಸುಳ್ಳು ಹೇಳುವುದಿಲ್ಲ. ವಿಶ್ವದಾದ್ಯಂತ, ಕೆಲಸ ಮಾಡುವ ವಯಸ್ಸಿನ ಜನರಲ್ಲಿನ ಕುರುಡುತನಕ್ಕೆ ಪ್ರಮುಖ ಕಾರಣವೆಂದರೆ ಅದು ಡಯಾಬಿಟಿಕ್ ರೆಟಿನೋಪಥಿ ಆಗಿದೆ5. ಭಾರತದಲ್ಲಿ, 2025ರ ಹೊತ್ತಿಗೆ ಡಯಾಬಿಟೀಸ್ ಮೆಲಿಟಸ್ ಇರುವ ಸುಮಾರು 57 ಮಿಲಿಯನ್ ಜನರು ರೆಟಿನೋಪಥಿಯಿಂದ ಬಳಸಬಹುದು ಎನ್ನಲಾಗಿದೆ5

  ಸಕಾರಾತ್ಮಕ ಯೋಚನೆಯು ಎಂದಿಗೂ ಒಂದು ಆಸ್ತಿ, ಆದರೆ ಇಚ್ಛೆಯುಳ್ಳ ಯೋಚನೆಯು ಅದರ ವಿರುದ್ಧವಾದ ಪರಿಣಾಮವನ್ನು ಹೊಂದಿದೆ. ಡಯಾಬಿಟಿಕ್ ರೆಟಿನೋಪಥಿಯು ಡಯಾಬಿಟೀಸ್‌ನ ಒಂದು ಗಂಭೀರವಾದ ಹಾಗೂ ಸಾಮಾನ್ಯವಾದ ಸಮಸ್ಯೆಯಾಗಿದೆ ಮತ್ತು ಎಲ್ಲಿಯವರೆಗೂ ನೀವು ಡಯಾಬಿಟೀಸ್ ಹೊಂದಿರುತ್ತೀರೋ, ಅಪಾಯವೂ ಅಷ್ಟೇ ಹೆಚ್ಚಿರುತ್ತದೆ.

  ತಪ್ಪುಕಲ್ಪನೆ 3: ಟೈಪ್ 1 ಡಯಾಬಿಟೀಸ್ ಇರುವವರಿಗೆ ಮಾತ್ರ ಡಯಾಬಿಟಿಕ್ ರೆಟಿನೋಪಥಿ ಪರಿಣಾಮ ಬೀರುತ್ತದೆ.

  ಡಯಾಬಿಟೀಸ್ ಇರುವ ಯಾರೇ ಆದರೂ ಡಯಾಬಿಟಿಕ್ ಕಣ್ಣಿನ ಕಾಯಿಲೆಯಿಂದ ಬಳಲಬಹುದು, ಅದು ಟೈಪ್ 1 ಮತ್ತು 1ಐಪ್ 2 ಎಂದು ತಾರತಮ್ಯ ಮಾಡುವುದಿಲ್ಲ. ಯಾರಾದರೂ ಗರ್ಭಾವಸ್ಥೆಯ ಡಯಾಬಿಟೀಸ್ ಹೊಂದಿದ್ದರೆ, ಅವರ ಮೇಲೆಯೂ ಸಹ ಗರ್ಭಧಾರಣೆಯ ಅವಧಿಯಲ್ಲಿ ಪರಿಣಾಮ ಬೀರುತ್ತದೆ. ರೋಗದ ಮೊದಲ ಎರಡು ದಶಕಗಳ ಅವಧಿಯಲ್ಲಿ, ಟೈಪ್ 1 ಡಯಾಬಿಟೀಸ್ ಇದ್ದ ಎಲ್ಲರಲ್ಲಿ ಹಾಗೂ ಟೈಪ್ 2 ಡಯಾಬಿಟೀಸ್ ಇದ್ದ >60% ರೋಗಿಗಳಲ್ಲಿ ರೆಟಿನೋಪಥಿ ಬೆಳವಣಿಗೆಯಾಗಿದೆ6.

  ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದರಿಂದ ನಿಮ್ಮ ವೈದ್ಯರು ಡಯಾಬಿಟೀಸ್‌ನಿಂದ ಆಗುವ ದೃಷ್ಟಿಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಹಾಗೂ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.

  ತಪ್ಪುಕಲ್ಪನೆ 4: ನಾನು ಡಯಾಬಿಟೀಸ್‌ಗೆ ರೋಗನಿರ್ಣಯ ಮಾಡಿಸಿದ್ದೇನೆ, ಹಾಗಾಗಿ ನನಗೆ ಈಗಲೇ ಕಣ್ಣಿನ ತಪಾಸಣೆ ಬೇಡ.

  ನೀವು ಎಷ್ಟು ಸುದೀರ್ಘ ಅವಧಿಗೆ ಡಯಾಬಿಟೀಸ್ ಹೊಂದಿರುತ್ತೀರೋ, ಡಯಾಬಿಟಿಕ್ ರೆಟಿನೋಪಥಿಯ ಅಪಾಯವೂ ಅಷ್ಟೇ ಹೆಚ್ಚು ಎಂಬುದೂ ಸತ್ಯ, ಇದೊಂದು ಲೆಕ್ಕಾಚಾರ. ವೈಯಕ್ತಿಕ ಅಪಾಯಗಳು ವಿಭಿನ್ನವಾಗಿರುತ್ತವೆ. ಪ್ರತಿಯೊಬ್ಬರ ದೇಹವೂ ಭಿನ್ನ ಹಾಗೂ ಒಟ್ಟಾರೆ ಜನರಲ್ಲಿ ಏನೋ ಒಂದು ಬೆಳವಣಿಗೆಯಾಗುವ ಅಪಾಯ ಹೆಚ್ಚೇನೂ ಇಲ್ಲ ಎಂದ ಮಾತ್ರಕ್ಕೆ ವೈಯಕ್ತಿಕವಾಗಿ ನಿಮ್ಮ ಅಪಾಯವು ವೈಯಕ್ತಿಕವಾಗಿ ಜಾಸ್ತಿ ಇಲ್ಲ ಎಂದು ಅರ್ಥವಲ್ಲ. ಅಥವಾ, ಅದು ನಿಮಗೆ ಬರುವುದಿಲ್ಲ ಎನ್ನುವ ಹಾಗಿಲ್ಲ.

  ಹೌದು, ಮೊದಲ 3-5 ವರ್ಷಗಳ ಡಯಾಬಿಟೀಸ್‌ನಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿರುವ ಟೈಪ್ 1 ಡಯಾಬಿಟೀಸ್ ರೋಗಿಗಳಲ್ಲಿ ದೃಷ್ಟಿ-ಭೀತಿಗೊಳಿಸುವ ರೆಟಿನೋಪಥಿಯು ಅಪರೂಪವಾದದ್ದು. ಮುಂದಿನ ಎರಡು ದಶಕಗಳಲ್ಲಿ ಬುತೇಕ ಎಲ್ಲಾ ಟೈಪ್ 1 ಡಯಾಬಿಟೀಸ್ ರೋಗಿಗಳಲ್ಲಿ ರೆಟಿನೋಪಥಿ ಬೆಳವಣಿಗೆಯಾಗಬಹುದು.  

  ಆದರೆ, ಟೈಪ್ 2 ಡಯಾಬಿಟೀಸ್ ಇರುವ 21% ರೋಗಿಗಳು ಡಯಾಬಿಟೀಸ್‌ನ ಮೊದಲ ರೋಗನಿರ್ಣಯದಲ್ಲಿ ರೆಟಿನೋಪಥಿಯನ್ನು ಹೊಂದಿದ್ದಾರೆ6!

  ತಪ್ಪುಕಲ್ಪನೆ 5: ಡಯಾಬಿಟಿಕ್ ರೆಟಿನೋಪಥಿಯು ಯಾವಾಗಲೂ ಕುರುಡುತನ ಉಂಟುಮಾಡುತ್ತದೆ.

  ಇಲ್ಲ. ಮೊದಲೇ ಪತ್ತೆಹಚ್ಚಿದರೆ ಹಾಗಾಗುವುದಿಲ್ಲ. ಎಷ್ಟು ಬೇಗ ನಿಮ್ಮ ವೈದ್ಯರು ನಿಮಗೆ ರೋಗನಿರ್ಣಯ ಮಾಡುತ್ತಾರೋ ನಿಮ್ಮ ಮುನ್ಸೂಚನೆಯು ಅಷ್ಟೇ ಉತ್ತಮಗೊಳ್ಳುತ್ತದೆ. ಡಯಾಬಿಟಿಕ್ ರೆಟಿನೋಪಥಿಯು ಒಂದು ಪ್ರಗತಿಹೊಂದುವ ರೋಗವಾಗಿದೆ, ಅಂದರೆ, ಎಷ್ಟು ಬೇಗ ಅದನ್ನು ನೀವು ಪತ್ತೆಹಚ್ಚುವಿರೋ, ಹಾಗೂ ಅದನ್ನು ಎಷ್ಟು ಚೆನ್ನಾಗಿ ನಿರ್ವಹಿಸುವಿರೋ, ಅದರ ಬೆಳವಣಿಗೆಯನ್ನು ಅಷ್ಟೇ ಉತ್ತಮವಾಗಿ ತಡೆಯುವ ಅವಕಾಶಗಳು ಹೆಚ್ಚು.

  1980ರಿಂದ 2008ರ ಅವಧಿಯಲ್ಲಿ ವಿಶ್ವದಾದ್ಯಂತ ನಡೆಸಲಾದ 35 ಅಧ್ಯಯನಗಳನ್ನು ಆಧರಿಸಿ ಹೇಳುವುದಾದರೆ, ಡಯಾಬಿಟೀಸ್ ಇರುವವರಲ್ಲಿ ರೆಟಿನಲ್ ಇಮೇಜ್‌ಗಳನ್ನು ಬಳಸಿ ಅಂದಾಜಿಸಿದಂತೆ ಯಾವುದೇ ಡಯಾಬಿಟಿಕ್ ರೆಟಿನೋಪಥಿಯ ಹರಡುವಿಕೆಯು ಒಟ್ಟಾರೆ ದೃಷ್ಟಿಸಹಿತ 35% ಆಗಿದೆ – 12% ನಲ್ಲಿ ಭಯಭೀತಗೊಳಿಸುವಂತಹ ಡಯಾಬಿಟಿಕ್ ರೆಟಿನೋಪಥಿ ಇದೆ4.

  ಹಾಗಾಗಿ, ನಿಮ್ಮ ವಾರ್ಷಿಕ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ (ನಿಮ್ಮ ವೈದ್ಯರ ಬಳಿಯೇ ಹೊರತು ಕನ್ನಡಕದ ಅಂಗಡಿಯಲ್ಲಿ ಅಲ್ಲ!), ಹಾಗೂ ನಿಮ್ಮ ಬ್ಲಡ್ ಶುಗರ್ ಅನ್ನು ನಿರ್ವಹಿಸಿ.

  ತಪ್ಪುಕಲ್ಪನೆ 6: ನನ್ನ ಕಣ್ಣುಗಳಿಗೆ ಗಂಭೀರವಾದದ್ದು ಏನಾದರೂ ಆದರೆ ನಾನು ತಕ್ಷಣ ತಿಳಿಯುತ್ತೇನೆ.

  ಹಲವಾರು ವಿಧದ ಕಣ್ಣಿನ ಸಮಸ್ಯೆಗಳೊಂದಿಗೆ, ರೋಗಿಗಳು ಮೊದಲ ಹಂತಗಳಲ್ಲಿ – ಅಂದರೆ, ಅತ್ಯಂತ ಚಿಕಿತ್ಸಾತ್ಮಕ ಹಂತಗಳಲ್ಲಿ ಲಕ್ಷಣಗಳನ್ನು ಗಮನಿಸುವುದಿಲ್ಲ. ಉದಾಹರಣೆಗೆ, ಡಯಾಬಿಟಿಕ್ ರೆಟಿನೋಪಥಿಯು ಅದು ಉಲ್ಬಣಗೊಳ್ಳುವವರೆಗೂ ಲಕ್ಷಣರಹಿತವಾಗಿರುತ್ತದೆ7.

  ಅದು ಸರಿಯಾಗಿದೆ: ಯಾವುದೇ ನೋವಿಲ್ಲ. ದೃಷ್ಟಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ7. ಯಾವ ಸೂಚನೆಗಳೂ ಇರುವುದೇ ಇಲ್ಲ. ವಾಸ್ತವವಾಗಿ, ರೆಟಿನಾ ಸೊಸೈಟಿ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಡಾ. ಮನೀಶ್ ಅಗರ್‌ವಾಲ್ ಅವರ ಪ್ರಕಾರ, ಪ್ರಾಥಮಿಕ ಹಂತಹ ಲಕ್ಷಣಗಳಲ್ಲಿ ಒಂದಾಗಿರುವುದು ಯಾವುದು ಎಂದರೆ ಓದುವುದಕ್ಕೆ ಸತತವಾಗಿ ತೊಂದರೆ ಆಗುವುದು, ಕನ್ನಡಕವನ್ನು ಬದಲಾಯಿಸಿದರೂ ಸಹ ಆ ತೊಂದರೆ ಹೋಗದೇ ಇರುವುದು. ಇದೊಂದು ಪ್ರಾಥಮಿಕ ಲಕ್ಷಣವಾಗಿದ್ದು, ಅದನ್ನು ಹಗುರವಾಗಿ ಪರಿಗಣಿಸಬಾರದು. ಒಂದು ವೇಳೆ ನಿರ್ಲಕ್ಷಿಸಿದರೆ, ಈ ಲಕ್ಷಣಗಳು ನೀವು ಎಲ್ಲಿ ದೃಷ್ಟಿ ಹರಿಸುವಿರೋ ಅಲ್ಲೆಲ್ಲಾ ಕಪ್ಪು ಅಥವಾ ಕೆಂಪು ಕಲೆಗಳಿರುವ ಮೋಡಗಳನ್ನು ಹೆಚ್ಚಿಸಬಹುದು ಅಥವಾ ಕಣ್ಣಿನ ರಕ್ತಸ್ರಾವದಿಂದಾಗಿ ದಿಢೀರ್ ಕಪ್ಪುಚುಕ್ಕೆಗಳು ಉಂಟಾಗಬಹುದು.

  ಅದೃಷ್ಟವಶಾತ್, ಲಕ್ಷಣಗಳು ಕಾಣಿಸಿಕೊಲ್ಳುವ ಮೊದಲೇ ಸಮಸ್ಯೆಯನ್ನು ಪತ್ತೆಹಚ್ಚಬಲ್ಲ ಕಣ್ಣಿನ ಪರೀಕ್ಷೆಗಳಿವೆ. ಇದೊಂದು ನೋವುರಹಿತವಾದ ಹಿಗ್ಗಿಸಿದ ಕಣ್ಣು ಪರೀಕ್ಷೆಯಾಗಿದ್ದು, ಅದರಲ್ಲಿ ನಿಮ್ಮ ಕಣ್ಣಿನ ವೈದ್ಯರು ಪಾಪೆಗಳನ್ನು ಹಿಗ್ಗಿಸಲು ಐ ಡ್ರಾಪ್‌ಗಳನ್ನು ಬಳಸುವುದರಿಂದ ಅವರು ಕಣ್ಣಿನ ಹಿಂಭಾಗವನ್ನು (ರೆಟಿನಾ ಇರುವ ಪ್ರದೇಶ) ನೋಡಬಹುದು7.

  ಇಷ್ಟೊಂದು ಸುಲಭವಾಗಿರುವುದು ನಿಮ್ಮ ದೃಷ್ಟಿಯನ್ನು ಉಳಿಸಬಲ್ಲದು. ಅದೇ ರೀತಿ, ಕೊಂಚ ಅರಿವು ಇದ್ದರೆ ತಡೆಯಬಹುದಾದ ದೃಷ್ಟಿಹೀನತೆಯನ್ನು ಮಟ್ಟಹಾಕಬಹುದು.

  ಯಾವುದೇ ರೋಗವನ್ನು ಹಿಮ್ಮೆಟ್ಟಿಸಲು ಇರುವ ಅತ್ಯುತ್ತಮ ವಿಧಾನ ಎಂದರೆ ಅದರ ಬಗ್ಗೆ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು. ನಿಮ್ಮ ಆರೋಗ್ಯ ಮತ್ತು ನಿಮ್ಮ ದೃಷ್ಟಿಯ ನಿಯಂತ್ರಣವನ್ನು ಪಡೆದುಕೊಳ್ಳಿ. ವಿಶೇಷವಾಗಿ, ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಒಂದು ವೇಳೆ ಡಯಾಬಿಟೀಸ್ ರೋಗನಿರ್ಣವನ್ನು ಮಾಡಿಸಿದ್ದರೆ, News18.com ಅನುಸರಿಸುವ ಮೂಲಕ ಡಯಾಬಿಟಿಕ್ ರೆಟಿನೋಪಥಿ ಬಗ್ಗೆ ತಿಳಿಯಿರಿ ಮತ್ತು Netra Suraksha ಉಪಕ್ರಮದ ಕುರಿತು ಇನ್ನಷ್ಟು ಅಪ್‌ಡೇಟ್‌ಗಳನ್ನು ಪಡೆಯಿರಿ. ಅಲ್ಲದೆ, ನಿಮ್ಮ ವೈದ್ಯರನ್ನು ನೀವು ಕಾಣಬೇಕೆ ಎಂಬುದನ್ನು ನಿರ್ಣಯಿಸಲು ಆನ್‌ಲೈನ್ Diabetic Retinopathy ಸ್ವಯಂ ತಪಾಸಣೆ ಮಾಡಿಕೊಳ್ಳಿ.

  ನಿಮ್ಮ ವೈಯಕ್ತಿಕ ಅಪಾಯವನ್ನು ಕನಿಷ್ಠಗೊಳಿಸಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಿಮ್ಮ ವೈದ್ಯರು ಸೂಚಿಸಿದ ಡಯಾಬಿಟೀಸ್ ನಿರ್ವಹಣೆ ಯೋಜನೆಯನ್ನು ಎಚ್ಚರಿಕೆಯಿಂದ ಅನುಸರಿಸುವುದು. ಸುಲಭವಾದ ಶಿಫಾರಸು ಎಂದರೆ ಡಯಾಬಿಟಿಕ್ ರೆಟಿನೋಪಥಿಗಾಗಿ ನಿಮ್ಮ ಕಣ್ಣುಗಳನ್ನು ವರ್ಷಕ್ಕೊಮ್ಮೆ ಪರೀಕ್ಷಿಸಿಕೊಳ್ಳಿ – ಅದೊಂದು ಸರಳವಾದ, ನೋವುರಹಿತ ಪರೀಕ್ಷೆಯಾಗಿದ್ದು, ಅದು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವನದ ಗುಣಮಟ್ಟದ ಮೇಲೆ ಅಗಾಧವಾದ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಿಂಜರಿಯಬೇಡಿ ಮತ್ತು ನಿಮ್ಮನ್ನು ಹಾನಿಗೊಳಿಸಲಾಗದು ಎಂದು ಭಾವಿಸಬೇಡಿ. 

  ಉಲ್ಲೇಖಗಳು

  1. https://www.medicalnewstoday.com/articles/diabetes-in-india[U1]  10 Dec, 2021.

  2. https://www.nei.nih.gov/about/news-and-events/news/glaucoma-silent-thief-begins-tell-its-secrets 17 Dec, 2021

  3. https://www.nei.nih.gov/learn-about-eye-health/eye-conditions-and-diseases/cataracts 17 Dec, 2021

  4. https://www.nei.nih.gov/learn-about-eye-health/eye-conditions-and-diseases/diabetic-retinopathy 10 Dec, 2021

  5. Balasubramaniyan N, Ganesh KS, Ramesh BK, Subitha L. Awareness and practices on eye effects among people with diabetes in rural Tamil Nadu, India. Afri Health Sci. 2016;16(1): 210-217.

  6. https://care.diabetesjournals.org/content/27/suppl_1/s84 17, Dec 2021

  7. https://youtu.be/nmMBudzi4zc 29 Dec, 2021

  Published by:Soumya KN
  First published: