Fasting Foods: ರಂಜಾನ್ ಉಪವಾಸ ಮಾಡುತ್ತಿರುವ ಮಧುಮೇಹಿಗಳೇ, ಈ ಆಹಾರವನ್ನು ಮಿಸ್​ ಮಾಡ್ದೆ ತಿನ್ನಿ!

ರಂಜಾನ್ ಉಪವಾಸ

ರಂಜಾನ್ ಉಪವಾಸ

ಸಾಮಾನ್ಯವಾಗಿ, ಮಧುಮೇಹದಿಂದ ಬಳಲುತ್ತಿರುವ ಜನರು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಮಧುಮೇಹಿಗಳು ರಂಜಾನ್ ಮಾಸದಲ್ಲಿ ಉಪವಾಸವಿರುವುದರಿಂದ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಕೆಲವು ಆಯ್ದ ಪದಾರ್ಥಗಳನ್ನು ಮಾತ್ರ ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.

ಮುಂದೆ ಓದಿ ...
  • Share this:

ರಂಜಾನ್ (Ramadan) ಮುಸ್ಲಿಮರ (Muslims) ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಪವಿತ್ರ ರಂಜಾನ್ ತಿಂಗಳು ಇತ್ತೀಚೆಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಮುಸ್ಲಿಮರು ಕಟ್ಟುನಿಟ್ಟಾಗಿ ಉಪವಾಸವನ್ನು(Fasting) ಮಾಡುತ್ತಾರೆ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿರುತ್ತಾರೆ. ಈ ತಿಂಗಳು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾವುದೇ ಆಹಾರ ಅಥವಾ ಪಾನೀಯವನ್ನು ತೆಗೆದುಕೊಳ್ಳುವುದಿಲ್ಲ. ಆರೋಗ್ಯವಾಗಿರುವ (Health)  ಜನರಿಗೆ ಉಪವಾಸ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಮಧುಮೇಹಿಗಳಿಗೆ (Sugar Patients) ಇದೊಂದು ಸವಾಲಾಗಿದೆ. ಈ ಹಿನ್ನೆಲೆ ಮಧುಮೇಹ ರೋಗಿಗಳು ರಂಜಾನ್ ಉಪವಾಸದ ಸಂದರ್ಭದಲ್ಲಿ ಆಹಾರದ ವಿಷಯದಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವು ಎಂದು ನೋಡೋಣ ಬನ್ನಿ.


ರಂಜಾನ್ ಉಪವಾಸ


ಸಾಮಾನ್ಯವಾಗಿ, ಮಧುಮೇಹದಿಂದ ಬಳಲುತ್ತಿರುವ ಜನರು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಮಧುಮೇಹಿಗಳು ರಂಜಾನ್ ಮಾಸದಲ್ಲಿ ಉಪವಾಸವಿರುವುದರಿಂದ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಕೆಲವು ಆಯ್ದ ಪದಾರ್ಥಗಳನ್ನು ಮಾತ್ರ ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.


ಧಾನ್ಯಗಳು: ಧಾನ್ಯಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಶಕ್ತಿ ಕೇಂದ್ರವಾಗಿದೆ. ಡಯಾಬಿಟಿಸ್ ರೋಗಿಗಳು ರಂಜಾನ್ ಉಪವಾಸದ ಅವಧಿಯಲ್ಲಿ ಕಂದು ಅಕ್ಕಿ, ಕ್ವಿನೋವಾ ಮತ್ತು ಗೋಧಿ ಬ್ರೆಡ್‌ನಂತಹ ಧಾನ್ಯಗಳನ್ನು ಸೇವಿಸಿದರೆ ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬ್ರೆಡ್‌ಗಳನ್ನು ಸಿರಿಧಾನ್ಯಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಅದನ್ನು ಆಹಾರವಾಗಿ ಸೇವಿಸಬಹುದು. ಬ್ರೆಡ್​​ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ಮಧುಮೇಹ ರೋಗಿಗಳು ಇವುಗಳ ಸೇವನೆಯಿಂದ ದೇಹದಲ್ಲಿ ಶಕ್ತಿಯು ನಿಧಾನವಾಗಿ ಮತ್ತು ಸ್ಥಿರವಾಗಿ ಬಿಡುಗಡೆಯಾಗುತ್ತದೆ. ಉಪವಾಸದ ಸಮಯದಲ್ಲಿ ಪ್ರೊಟೀನ್ ಯುಕ್ತ ಪನ್ನೀರ್, ಚಿಕನ್, ಮೀನು ಇತ್ಯಾದಿಗಳ ಜೊತೆಗೆ ಸೇವಿಸಿದರೆ ಆರೋಗ್ಯ ಸಮಸ್ಯೆ ಇರುವುದಿಲ್ಲ.


ರಂಜಾನ್ ಉಪವಾಸ


ದ್ವಿದಳ ಧಾನ್ಯಗಳು: ಮಧುಮೇಹಿಗಳು ರಂಜಾನ್ ಉಪವಾಸದ ಸಮಯದಲ್ಲಿ ಕಡಲೆ, ಕಡಲೆಕಾಳು, ಹೆಸರು ಕಾಳು ಮತ್ತು ಅಲಸಂದೆಯಂತಹ ಕಾಳುಗಳನ್ನು ತಿನ್ನಬಹುದು. ಇವುಗಳಲ್ಲಿ ಪ್ರೊಟೀನ್ ಮತ್ತು ಫೈಬರ್ ಅಂಶ ಅಧಿಕವಾಗಿದೆ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಆದ್ದರಿಂದ ಈ ಬೇಳೆಕಾಳುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತುಂಬಾ ವೇಗವಾಗಿ ಏರುವುದನ್ನು ತಡೆಯುತ್ತದೆ.


ತಾಜಾ ಹಣ್ಣುಗಳು: ತಾಜಾ ಹಣ್ಣುಗಳು ಪೋಷಕಾಂಶಗಳು, ಖನಿಜಗಳು ಮತ್ತು ಫೈಬರ್​ನಲ್ಲಿ ಸಮೃದ್ಧವಾಗಿವೆ. ಮಧುಮೇಹಿಗಳು ರಂಜಾನ್ ಉಪವಾಸದ ಸಮಯದಲ್ಲಿ ಕಲ್ಲಂಗಡಿ, ಪಪ್ಪಾಯಿ, ಸೇಬು, ದಾಳಿಂಬೆ, ಸಪೋಟ ಮುಂತಾದ ಹಣ್ಣುಗಳನ್ನು ಸೇವಿಸಬೇಕು. ಇದರೊಂದಿಗೆ, ದೇಹವು ಅಗತ್ಯವಾದ ಶಕ್ತಿಯನ್ನು ತ್ವರಿತವಾಗಿ ಪಡೆಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.


ಹಣ್ಣುಗಳು


ಬೀಜಗಳು: ಕಾಳುಗಳು ಮತ್ತು ಬೀಜಗಳು ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ. ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹಾಗಾಗಿ ಮಧುಮೇಹಿಗಳು ಇವುಗಳನ್ನು ಮಿತವಾಗಿ ಸೇವಿಸಬೇಕು. ಮುಖ್ಯವಾಗಿ ಅಗಸೆ ಬೀಜಗಳು, ಚಿಯಾ ಬೀಜಗಳು, ಬಾದಾಮಿ, ವಾಲ್‌ನಟ್ಸ್ ಇತ್ಯಾದಿಗಳನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು.


ತರಕಾರಿಗಳು: ತಾಜಾ ತರಕಾರಿಗಳಾದ ಸೌತೆಕಾಯಿ, ಮೆಂತ್ಯೆ, ಪಾಲಕ್ ಸೊಪ್ಪು ಮತ್ತು ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಅಧಿಕವಾಗಿರುತ್ತದೆ. ಆದ್ದರಿಂದ, ರಂಜಾನ್ ಉಪವಾಸದ ಅವಧಿಯಲ್ಲಿ ಮಧುಮೇಹಿಗಳಿಗೆ ತರಕಾರಿಗಳು ಉತ್ತಮ ಆಹಾರವಾಗಿದೆ. ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಇದಲ್ಲದೇ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುತ್ತದೆ.


ಇದನ್ನೂ ಓದಿ: ರಂಜಾನ್ ಉಪವಾಸ ವೃತ ಇಂದಿನಿಂದ ಶುರು!


top videos



    ಡೇಟ್ಸ್​​: ಖರ್ಜೂರವನ್ನು ಹೆಚ್ಚಾಗಿ ಮುಸ್ಲಿಮರು ರಂಜಾನ್ ಸಮಯದಲ್ಲಿ ಉಪವಾಸ ಮುಗಿದ ನಂತರ ತಿನ್ನುತ್ತಾರೆ. ಇವುಗಳಲ್ಲಿ ಫೈಬರ್ ಸಮೃದ್ಧವಾಗಿದೆ. ತಿಂದ ತಕ್ಷಣ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಇದು ರಕ್ತಪ್ರವಾಹಕ್ಕೆ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಆದರೆ ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ  ಇರುತ್ತದೆ. ಹಾಗಾಗಿ ಮಧುಮೇಹಿಗಳು ಉಪವಾಸದ ಸಮಯದಲ್ಲಿ ಮಿತವಾಗಿ ಸೇವಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು