ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಬಿಸಿ ಬಿಸಿ ಚಹಾ ಕುಡಿದರೆ ಮನಸ್ಸಿಗೆ ಅದೇನೋ ಆನಂದ. ಒಂದು ಕಪ್ ಟೀ ಕುಡಿದರೆ ಹೊಸ ಉಲ್ಲಾಸದೊಂದಿಗೆ ದಿನಚರಿ ಆರಂಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ. ಇದೀಗ ಗ್ರೀನ್ ಟೀ, ಬ್ಲೂ ಟೀ ಸೇರಿದಂತೆ ಹಲವು ವಿಭಿನ್ನ ಚಹಾಗಳು ಲಭ್ಯವಿದೆ. ಆದರೂ ದಾಸವಾಳ ಹೂವಿನ ಚಹಾದ ಸ್ವಾದವೇ ಬೇರೆ. ಅದರ ಜೊತೆ ಆರೋಗ್ಯವನ್ನು ಸಹ ವೃದ್ಧಿಸಿಕೊಳ್ಳಬಹುದು. ಏಕೆಂದರೆ ಈ ಚಹಾದಲ್ಲಿ ವಿಟಮಿನ್ ಸಿ ಮತ್ತು ಎ, ಸತು ಮತ್ತು ಅನೇಕ ಖನಿಜಾಂಶಗಳು ಒಳಗೊಂಡಿರುತ್ತದೆ. ಹಾಗೆಯೇ ಅ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಇದು ನಮ್ಮ ಕೂದಲು ಮತ್ತು ಚರ್ಮಕ್ಕೂ ಸಹ ಒಳ್ಳೆಯದು. ಹಾಗಿದ್ರೆ ಬೆಲ್ಲದ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳನ್ನು ನೋಡೋಣ.
ದೇಹ ತೂಕ ಇಳಿಕೆ: ಈ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹ ತೂಕ ತ್ವರಿತಗತಿಯಲ್ಲಿ ಇಳಿಕೆಯಾಗುತ್ತದೆ. ಪೋಷಕಾಂಶಗಳು, ಫ್ಲೇವೊನೈಡ್ಗಳು ಮತ್ತು ವಿವಿಧ ಖನಿಜಗಳಿಂದ ಸಮೃದ್ಧವಾಗಿರುವ ದಾಸವಾಳವು ದೇಹದಲ್ಲಿನ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕವಿದ್ದು, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದೇಹ ತೂಕ ಇಳಿಕೆಗೆ ದಾಸವಾಳ ಚಹಾ ಉತ್ತಮ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಇದು ಸಾಕಷ್ಟು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ದಾಸವಾಳ ಹೂವಿನ ಚಹಾ ಸಹಾಯಕ.
ಖಿನ್ನತೆ ಮತ್ತು ಆತಂಕ ನಿವಾರಣೆ: ದಾಸವಾಳವು ಖಿನ್ನತೆ-ವಿರೋಧಿ ಗುಣಗಳನ್ನು ಹೊಂದಿದೆ. ಇದು ಆತಂಕ, ಖಿನ್ನತೆ ಮತ್ತು ಒತ್ತಡದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಇದರಲ್ಲಿರುವ ಫ್ಲೇವನಾಯ್ಡ್ಗಳು ನರಮಂಡಲವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ನಕಾರಾತ್ಮಕ ಚಿಂತನೆಯಂತಹ ರೋಗಲಕ್ಷಣಗಳನ್ನು ನಿವಾರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದುಃಖಿತರಾಗಿದ್ದರೆ ಒಂದು ಕಪ್ ದಾಸವಾಳದ ಚಹಾವನ್ನು ಕುಡಿದು ನೋಡಿ.
ಕೂದಲು ಮತ್ತು ಚರ್ಮಕ್ಕೆ ಉತ್ತಮ: ದಾಸವಾಳದಲ್ಲಿ ವಿಟಮಿನ್ ಎ ಮತ್ತು ಸಿ ಹೊಂದಿರುತ್ತವೆ. ಇದು ಕೂದಲು ಉದುರುವುದನ್ನು ತಡೆಯುವ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದು ತಲೆಹೊಟ್ಟು ಸಹ ಗುಣಪಡಿಸುತ್ತದೆ. ಹಾಗೆಯೇ ಅಕಾಲಿಕ ಬಿಳಿ ಕೂದಲನ್ನು ತಡೆಯುತ್ತದೆ. ಕೂದಲಿನ ಜೊತೆಗೆ ಈ ಚಹಾ ಕೂಡ ಚರ್ಮಕ್ಕೆ ಒಳ್ಳೆಯದು. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ತುಂಬಿರುವುದರಿಂದ ಇದು ಯುವಿ ಕಿರಣಗಳು, ಮಾಲಿನ್ಯಕಾರಕಗಳು ಮತ್ತು ರೋಗಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ. ಈ ಚಹಾವು ಅಕಾಲಿಕ ಸುಕ್ಕುಗಳನ್ನು ಸಹ ತಡೆಯುತ್ತದೆ. ಇದು ನಿಮ್ಮ ಚರ್ಮವನ್ನು ವರ್ಷದಿಂದ ವರ್ಷಕ್ಕೆ ಕಿರಿಯ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ