Health Tips: ನಿಮ್ಮ ಹಲ್ಲು, ವಸಡಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವಿಸಿ ನೋಡಿ

ನೆನಪಿಡಿ, ಹಲ್ಲುಗಳ ಆರೋಗ್ಯ ಕಾಪಾಡಲು ಕೇವಲ ಉತ್ತಮ ಆಹಾರವನ್ನು ಸೇವಿಸಿದರೆ ಮಾತ್ರ ಸಾಕಾಗುವುದಿಲ್ಲ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಮೂಲಕ ನಿಮ್ಮ ಹಲ್ಲುಗಳನ್ನು ಸ್ವಚ್ಚವಾಗಿ ಇರಿಸುವುದು ಕೂಡ ಅತ್ಯಗತ್ಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವೇನು ತಿನ್ನುತ್ತೀರೋ ಅದೇ ನೀವಾಗಿರುತ್ತೀರಿ’ ಎಂಬ ನುಡಿಗಟ್ಟು ಹಲ್ಲುಗಳ ವಿಷಯಕ್ಕೆ ಚೆನ್ನಾಗಿ ಹೊಂದುತ್ತದೆ. ಯಾಕಂತೀರಾ? ನಿಮ್ಮ ವಸಡು ಮತ್ತು ಹಲ್ಲುಗಳ ಆರೋಗ್ಯ (Health) ನಿರ್ವಹಣೆ, ನೀವು ದಿನವಿಡೀ ಏನನ್ನು ತಿನ್ನುತ್ತೀರಾ ಎಂಬುದನ್ನು ಅವಲಂಬಿಸಿರುತ್ತದೆ. ಉತ್ತಮ ಆಹಾರ(Food) ನಿಮ್ಮ ದೇಹವನ್ನು (Body health) ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ ಮಾತ್ರವಲ್ಲ, ಹಲ್ಲುಗಳು ಮತ್ತು ವಸಡುಗಳ (Gums) ಆರೋಗ್ಯ ನಿರ್ವಹಣೆಯಲ್ಲೂ ಸಹಾಯ ಮಾಡುತ್ತದೆ. ನಿಮ್ಮ ಹಲ್ಲುಗಳ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಉತ್ತಮ.

ಸೆಲೆಬ್ರಿಟಿ ಕಾಸ್ಮೆಟಿಕ್ ಡೆಂಟಿಸ್ಟ್ ಆಗಿರುವ ಡಾ. ರಿದ್ಧಿ ಕಟಾರಾ, ಉತ್ತಮ ದಂತ ಆರೋಗ್ಯ ನಿರ್ವಹಣೆಗೆ ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ.

1. ಪದೇ ಪದೇ ನೀರು ಕುಡಿಯುವುದು
ನೀರನ್ನು ಕುಡಿಯುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ ಮಾತ್ರವಲ್ಲ, ಹಲ್ಲುಗಳಲ್ಲಿರುವ ಸಕ್ಕರೆ ಮತ್ತು ಆಮ್ಲಗಳನ್ನು ತೊಳೆದುಹಾಕುವುದು ಸಾಧ್ಯವಾಗುತ್ತದೆ. ನೀವು ಏನನ್ನಾದರೂ ತಿಂದಾಗ , ಆ ಆಹಾರದ ಕಣಗಳು ಹಲ್ಲುಗಳ ನಡುವೆ ಸಿಲುಕಿಕೊಳ್ಳುತ್ತವೆ, ಅವು ಹಾನಿಕಾರಕವಾಗಿದ್ದು, ದಂತ ಕವಚವನ್ನು ಕೊಳೆಯುವಂತೆ ಮಾಡುತ್ತವೆ. ನೀರನ್ನು ಕುಡಿದಾಗ ಅಂತಹ ಕಣಗಳು ತೊಳೆದುಹೋಗುತ್ತವೆ ಮತ್ತು ವಸಡುಗಳು ಹಾನಿಕಾರಕ ಬ್ಯಾಕ್ಟೀರಿಯಾ ಸೃಷ್ಟಿಸುವುದು ಕಡಿಮೆ ಆಗುತ್ತದೆ.

ಇದನ್ನೂ ಓದಿ: Health Tips: ಪ್ರತಿನಿತ್ಯ ಮೊಸರು ಸೇವಿಸಿದ್ರೆ, ಹೃದಯಾಘಾತದಿಂದ ದೂರವಿರಬಹುದಂತೆ..!

2. ನೀರು ಮತ್ತು ಹಾಲಿನ ಉತ್ಪನ್ನಗಳು
ಒಂದೆಡೆ, ನೀರು ಕುಡಿಯುವುದರಿಂದ ಹಲ್ಲುಗಳಲ್ಲಿರುವ ಸಕ್ಕರೆ ಮತ್ತು ಆಮ್ಲಗಳನ್ನು ತೊಳೆದುಹಾಕುವುದು ಸಾಧ್ಯವಾದರೆ, ಇನ್ನೊಂದೆಡೆ ಹಾಲಿನ ಉತ್ಪನ್ನಗಳ ಸೇವನೆಯಿಂದ ಹಲ್ಲಿನ ದಂತ ಕವಚಗಳು ಗಟ್ಟಿಯಾಗುತ್ತವೆ. ಏಕೆಂದರೆ ಹಾಲಿನ ಉತ್ಪನ್ನಗಳಲ್ಲಿ ಇರುವ ಹೈಡ್ರಾಕ್ಸಿಪಟೈಟ್ ಖನಿಜಗಳು ದಂತ ಕವಚವನ್ನು ಬಲಪಡಿಸುತ್ತವೆ. ಹಾಲನ್ನು ಕುಡಿಯುವುದು ಅಲ್ಲಿನ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ವಿಧಾನಗಳಲ್ಲಿ ಒಂದು. ಏಕೆಂದರೆ ಹಾಲಿನಲ್ಲಿ ಹಲ್ಲಿನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶವಾದ ಕ್ಯಾಲ್ಸಿಯಂ ಇದೆ.

3. ಅಧಿಕ ಫೈಬರ್ ಉಳ್ಳ ಆಹಾರ
ಹಸಿರು ಸೊಪ್ಪು ತರಕಾರಿಗಳು ಮತ್ತು ಇತರ ಅತ್ಯಧಿಕ ನಾರಿನ ಅಂಶವನ್ನು ಉಳ್ಳ ಆಹಾರಗಳ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹೊಂದಲು ಸಾಧ್ಯವಾಗುತ್ತದೆ, ಮಾತ್ರವಲ್ಲ ಅವು ನಿಮ್ಮ ಹಲ್ಲುಗಳ ಆರೋಗ್ಯದ ಮೇಲೂ ಅದ್ಭುತ ಪರಿಣಾಮಗಳನ್ನು ಉಂಟು ಮಾಡಬಲ್ಲವು. ಪಾಲಕ್, ಲೆಟ್ಯೂಸ್‌, ಕಾಲೆ ಮತ್ತು ಅರುಗ್ಯುಲದಂತಹ ಅನೇಕ ಹಸಿರು ಸೊಪ್ಪು ತರಕಾರಿಗಳು ಹಲ್ಲಿನ ದಂತ ಕವಚವನ್ನು ಬಲಪಡಿಸಲು ಸಹಾಯ ಮಾಡುವ ಕೆಲವು ಸೂಪರ್ ಫುಡ್‍ಗಳಾಗಿವೆ.

4. ಸಕ್ಕರೆ ಮುಕ್ತ ವಸಡು
ವಸಡುಗಳು, ಅದರಲ್ಲೂ ವಿಶೇಷವಾಗಿ ಸಕ್ಕರೆ ಮುಕ್ತ ವಸಡುಗಳು ಉತ್ತಮ ಪ್ರಮಾಣದ ಲಾಲಾ ರಸವನ್ನು ಉತ್ಪಾದಿಸುತ್ತವೆ. ಲಾಲಾ ರಸ ಹಲ್ಲುಗಳ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.

5. ಕ್ರ್ಯಾನ್‍ಬೆರಿ ಜ್ಯೂಸ್
ಕ್ರ್ಯಾನ್‍ಬೆರಿ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಹಾಗೆಯೇ ಹಲ್ಲಿನ ಆರೋಗ್ಯಕ್ಕೂ ಕೂಡ. ಕ್ರ್ಯಾನ್‍ಬೆರಿ ರಸವು ಪ್ಲಾಕ್ ಅನ್ನು ಸುಮಾರು ಶೇಕಡಾ 95ರಷ್ಟು ಕಡಿಮೆ ಮಾಡುತ್ತದೆ.

6. ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯ ಬಳಕೆಯಿಂದ ನಿಮ್ಮ ವಸಡುಗಳ ಆರೋಗ್ಯ ಕಾಪಾಡಲು ಸಹಾಯ ಆಗಬಹುದು. ತೆಂಗಿನ ಎಣ್ಣೆ ದಂತಕ್ಷಯವನ್ನು ತಡೆಯುತ್ತದೆ ಮತ್ತು ವಸಡುಗಳಿಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ತೆಂಗಿನ ಎಣ್ಣೆಯನ್ನು ಮುಕ್ಕಳಿಸಲು ಮತ್ತು ಅಡುಗೆಯಲ್ಲಿ ಬಳಸಿ.

ಇದನ್ನೂ ಓದಿ: Health Tips: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ನೆನಪಿಡಿ, ಹಲ್ಲುಗಳ ಆರೋಗ್ಯ ಕಾಪಾಡಲು ಕೇವಲ ಉತ್ತಮ ಆಹಾರವನ್ನು ಸೇವಿಸಿದರೆ ಮಾತ್ರ ಸಾಕಾಗುವುದಿಲ್ಲ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಮೂಲಕ ನಿಮ್ಮ ಹಲ್ಲುಗಳನ್ನು ಸ್ವಚ್ಚವಾಗಿ ಇರಿಸುವುದು ಕೂಡ ಅತ್ಯಗತ್ಯವಾಗಿದೆ. ಯಾವುದಾದರೂ ಆಹಾರದ ಕಣ ನಿಮ್ಮ ಹಲ್ಲುಗಳ ನಡುವೆ ಸಿಲುಕಿಕೊಂಡಿದ್ದರೆ, ಅದನ್ನು ಮಲಗುವ ಮುನ್ನ ತೆಗೆದು ಹಾಕಲು ಪ್ರಯತ್ನಿಸಿ , ಏಕೆಂದರೆ ನಿದ್ರೆಯ ಸಮಯದಲ್ಲಿ ನಮ್ಮ ದೇಹ ಮತ್ತು ಹಲ್ಲುಗಳು ರಿಪೇರಿ ಮೋಡ್‍ನಲ್ಲಿ ಇರುತ್ತವೆ.
Published by:vanithasanjevani vanithasanjevani
First published: