HOME » NEWS » Lifestyle » 6 FOODS THAT MAY LOWER YOUR RISK OF CANCER ZP

Health Tips: ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವ 6 ಆಹಾರಗಳಿವು

ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಕ್ಯಾರೆಟ್‌ನ ಅತಿಯಾದ ಸೇವನೆಯು ಅನೇಕ ರೀತಿಯಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನೀವು ಕ್ಯಾರೆಟ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

news18-kannada
Updated:February 26, 2021, 7:34 AM IST
Health Tips: ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವ 6 ಆಹಾರಗಳಿವು
ಸಾಂದರ್ಭಿಕ ಚಿತ್ರ
  • Share this:
ಕ್ಯಾನ್ಸರ್ ಎಂಬ ಮಹಾಮಾರಿ ನಿರಂತರವಾಗಿ ಹೆಚ್ಚುತ್ತಾ ಹೋಗುತ್ತಿದೆ. ಈ ಮಾರಕ ರೋಗವನ್ನು ತಡೆಗಟ್ಟಲು ಅನೇಕ ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್​ ಪತ್ತೆಯಾದರೆ, ಅದನ್ನು ನಿವಾರಿಸಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು. ಹಾಗೆಯೇ ಕೆಲವು ಆಹಾರಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂತಹ ಕೆಲವೊಂದು ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಬ್ರೊಕೊಲಿ: ಬ್ರೊಕೊಲಿಯಲ್ಲಿ ಐಸೊಥಿಯೊಸೈನೇಟ್ ಮತ್ತು ಇಂಡೋಲ್ ಸಂಯುಕ್ತಗಳಿವೆ. ಇದು ಕ್ಯಾನ್ಸರ್​ಗೆ ಕಾರಣವಾಗುವ ಮತ್ತು ನಿಧಾನವಾಗಿ ಗೆಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಹೆಲ್ತ್‌ಗ್ರೇಡ್ಸ್‌ನಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ.

ಹಸಿರು ಎಲೆಗಳ ತರಕಾರಿಗಳು: ಹಸಿರು ತರಕಾರಿಗಳು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕ್ಯಾನ್ಸರ್ ತಡೆಗಟ್ಟಲು ಸಹ ಇವು ಸಹಾಯಕ. ಇವುಗಳಲ್ಲಿ ಸಾಸಿವೆ, ಪಾಲಕ ಇತ್ಯಾದಿ ಸೇರಿವೆ. ಈ ತರಕಾರಿಗಳಲ್ಲಿರುವ ಫೈಬರ್, ಬೀಟಾ ಕ್ಯಾರೋಟಿನ್, ಲುಟೀನ್, ಫೋಲೇಟ್ ಮತ್ತು ಕ್ಯಾರೊಟಿನಾಯ್ಡ್​ಗಳಂತಹ ಪೋಷಕಾಂಶಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್: ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಕ್ಯಾರೆಟ್‌ನ ಅತಿಯಾದ ಸೇವನೆಯು ಅನೇಕ ರೀತಿಯಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನೀವು ಕ್ಯಾರೆಟ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಕೆಂಪು ದ್ರಾಕ್ಷಿ: ದ್ರಾಕ್ಷಿಯಲ್ಲಿ ಅನೇಕ ಔಷಧೀಯ ಗುಣಗಳು ಸಮೃದ್ಧವಾಗಿದೆ. ರೆಸ್ವೆರಾಟ್ರೊಲ್ ದ್ರಾಕ್ಷಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಸಂಯುಕ್ತವಾಗಿದೆ. ಇದು ವಿಶೇಷವಾಗಿ ಕೆಂಪು ಮತ್ತು ಕಪ್ಪು ದ್ರಾಕ್ಷಿಯಲ್ಲಿ ಕಂಡುಬರುತ್ತದೆ. ಕ್ಯಾನ್ಸರ್ ತಡೆಗಟ್ಟಲು ಇದು ಸಹಾಯಕ.

ಗ್ರೀನ್ ಟೀ: ಗ್ರೀನ್ ಟೀ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಗ್ರೀನ್ ಟೀ ಬ್ಲ್ಯಾಕ್ ಟೀಗಿಂತ ಮೂರು ಪಟ್ಟು ಹೆಚ್ಚು ಕ್ಯಾಟೆಚಿನ್‌ಗಳನ್ನು ಹೊಂದಿದೆ. ಹಸಿರು ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ಟೊಮೆಟೊ: ಟೊಮೆಟೊದಲ್ಲಿ ಲೈಕೋಪೀನ್ ಎಂಬ ಅಂಶವಿದೆ. ಇದು ಕ್ಯಾನ್ಸರ್ ವಿರೋಧಿ ಗುಣಗಳಿಂದ ಕೂಡಿದೆ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಲೈಕೋಪೀನ್ ಪ್ರಾಸ್ಟೇಟ್ ಮತ್ತು ಇತರ ಕ್ಯಾನ್ಸರ್​ಗಳಿಂದ ರಕ್ಷಿಸುತ್ತದೆ.
Published by: zahir
First published: February 26, 2021, 7:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories