Health Tips: ನಿಮ್ಮ ವಯಸ್ಸು 50ಕ್ಕಿಂತ ಹೆಚ್ಚಾ? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ

Food: ಈಗಿನ ಕಾಲದಲ್ಲಿ ಹೆಚ್ಚಿನ ಪುರುಷರು ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಮಧುಮೇಹ, ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವುಗಳಿಗೆಲ್ಲ ಕಾರಣ ಜೀವನ ಶೈಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಯಸ್ಸು ಹೆಚ್ಚಾದಂತೆ ದೇಹಕ್ಕೆ ಶಕ್ತಿಯ ಅವಶ್ಯಕತೆ ಹೆಚ್ಚಾಗುತ್ತದೆ. ಆದರೆ ಮನುಷ್ಯನಿಗೆ ಶಕ್ತಿ ಕಡಿಮೆಯಾಗುತ್ತದೆ. ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೋಷಕಾಂಶಯುಕ್ತ ಆಹಾರದ ಅಗತ್ಯವಿರುತ್ತದೆ.  ಇನ್ನು ವೈದ್ಯರ ಪ್ರಕಾರ, 50 ವರ್ಷ ಮೇಲ್ಪಟ್ಟ ಪುರುಷರು 20 ವರ್ಷದ ಪುರುಷರಿಗಿಂತ ನಿಧಾನಗತಿಯ ಜೀರ್ಣಕ್ರಿಯೆಯನ್ನು ಹೊಂದಿರುತ್ತಾರೆ. ಆದ್ದರಿಂದ ಅವರಿಗೆ ಆರೋಗ್ಯವಾಗಿರಲು ಒಳ್ಳೆಯ ಆಹಾರದ ಅಗತ್ಯವಿದೆ. ಈಗಿನ ಕಾಲದಲ್ಲಿ ಹೆಚ್ಚಿನ ಪುರುಷರು ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಮಧುಮೇಹ, ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವುಗಳಿಗೆಲ್ಲ ಕಾರಣ ಜೀವನ ಶೈಲಿ ಎಂದರೆ ತಪ್ಪಾಗಲಾರದು. ಹಾಗಾಗಿ ಆಹಾರದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಹಾಗಾದ್ರೆ 50 ವರ್ಷ ಮೇಲ್ಪಟ್ಟ ಪುರುಷರು ಯಾವ ಆಹಾರಗಳನ್ನು ಸೇವಿಸಬೇಕು ಎಂಬುದು ಇಲ್ಲಿದೆ.

ಫ್ಯಾಟಿ ಮೀನುಗಳು

ಸಾಲ್ಮನ್ ಇತ್ಯಾದಿ ಫ್ಯಾಟಿ ಮೀನುಗಳು ಒಮೇಗಾ-3 ಯನ್ನು ಸಮೃದ್ಧವಾಗಿ ಹೊಂದಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಲಕ್ಷಣವನ್ನು ಹೊಂದಿದ್ದು, ಇದು  ರಕ್ತನಾಳದೊಳಗೆ ಪ್ಲಾಕ್ ಸಂಗ್ರಹವಾಗುವುದನ್ನು ನಿಧಾನಗೊಳಿಸುತ್ತದೆ, ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ದೇಹದಲ್ಲಿ  ಹೆಚ್ಚಿಸುತ್ತದೆ. ಇದು ಮಲಬದ್ಧತೆ ಸಮಸ್ಯೆ ಹಾಗು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವಲ್ಲಿ  ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಪುರುಷರು ತಮ್ಮ ಆಹಾರದಲ್ಲಿ ನಿಯಮಿತವಾಗಿ ಫ್ಯಾಟಿ ಮೀನುಗಳ ಸೇವನೆ ಮಾಡುವುದು ಆರೋಗ್ಯಕ್ಕೆ  ಒಳ್ಳೆಯದು.

ಬೀಟ್ ರೂಟ್

ಬೀಟ್ ರೂಟ್ ಗಳು ನೈಟ್ರೇಟ್ ಎನ್ನುವ   ನೈಸರ್ಗಿಕವಾದ   ರಾಸಾಯನಿಕವನ್ನು ಹೊಂದಿದ್ದು,   ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ ಹಾಗೂ ಹೃದಯದ ಸಮಸ್ಯೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ.  ಬೀಟ್ ರೂಟ್ ಅಧಿಕ ಪ್ರಮಾಣದ ಪೊಟ್ಯಾಷಿಯಂ ಹೊಂದಿದ್ದು, ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬೀಟ್ ರೂಟ್ ಜ್ಯೂಸ್ ಅನ್ನು ದಿನಕ್ಕೆ ಒಂದು ಬಾರಿ ಸೇವನೆ ಮಾಡುವುದು ಒಳ್ಳೆಯದು.

ಇದನ್ನೂ ಓದಿ: ಗೊರಕೆ ಸಮಸ್ಯೆಯಿಂದ ನಿದ್ದೆ ಹಾಳಾಗುತ್ತಿದೆಯಾ? ಹಾಗಾದ್ರೆ ಈ ಕ್ರಮಗಳನ್ನು ಅನುಸರಿಸಿ

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು  ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಇದು ದೇಹಕ್ಕೆ ಬೇಕಾಗಿರುವ ಉತ್ತಮವಾದ  ಕೊಬ್ಬಿನಿಂದ ಸಮೃದ್ಧವಾಗಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಕಡಿಮೆ ಮಾಡಿ, ಹೃದಯ ಸಂಬಂಧಿ ರೋಗಗಳು ಬರದಂತೆ ತಡೆಯುತ್ತದೆ. ಅಲ್ಲದೇ ಇದು ದೇಹದ ತೂಕವನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ನೀವು ದಿನಕ್ಕೆ ಒಂದು ಬೆಣ್ಣೆ ಹಣ್ಣನ್ನು ಜ್ಯೂಸ್  ಮಾಡಿಕೊಂಡು ಅಥವಾ ಹಾಗೆಯೇ ತಿನ್ನುವುದು ಸಹಾಯ ಮಾಡುತ್ತದೆ.

ಬಾದಾಮಿ

ಬಾದಾಮಿ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬನ್ನು ಹೊಂದಿದೆ. ಬಾದಾಮಿಯೊಂದಿಗೆ ವಾಲ್ನಟ್ ಸಹ ನಾರನ್ನು ಹೊಂದಿದ್ದು, ಇದು ಕೊಬ್ಬಿನ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 10 ರಿಂದ 12 ಬಾದಾಮಿಯನ್ನು ಒಂದು ದಿನಕ್ಕೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ರಾತ್ರಿ ಮಲಗುವ ಮುನ್ನ 10 ಬಾದಾಮಿಗಳನನ್ನು ನೆನಸಿಟ್ಟು ಬೆಳಗ್ಗೆ ಸೇವನೆ ಮಾಡುವುದು ಬಹಳ ಒಳ್ಳೆಯದು.

ಮೊಟ್ಟೆ

ಪುರುಷರಿಗೆ ವಯಸ್ಸಾಗುತ್ತಿದ್ದಂತೆ, ಅವರ ಸ್ನಾಯು ಸಮಸ್ಯೆಗಳು ಹೆಚ್ಚಾಗುತ್ತದೆ. ನೋವು ಮತ್ತು ಸೆಳೆತ ಆರಂಭವಾಗುತ್ತದೆ.  ಮೊಟ್ಟೆಯಲ್ಲಿ ಪ್ರೋಟೀನ್ ಹೆಚ್ಚಿರುವ ಕಾರಣ ಸ್ನಾಯು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ವಿಟಮಿನ್ ಡಿ ಹಾಗೂ ಒಮೆಗಾ 3 ಫ್ಯಾಟಿ ಆಮ್ಲದಂತಹ ಇತರ ಪೋಷಕಾಂಶವನ್ನೂ ಹೊಂದಿದೆ. ದಿನಕ್ಕೆ ಒಂದು ಮೊಟ್ಟೆಯನ್ನು ಬೇಯಿಸಿ ಸೇವನೆ ಮಾಡಿ.

ಬೆರ್ರಿ ಹಣ್ಣುಗಳು

ಬೆರ್ರಿಗಳು ಮೆದುಳಿನ ಆರೊಗ್ಯ ದೃಷ್ಟಿಯಿಂದ ಉತ್ತಮವಾಗಿದೆ. ಇದೊಂದು  ಅದ್ಭುತ ಆಹಾರವಾಗಿದ್ದು ಇದು ನಾರನ್ನು ಹೊಂದಿರುವುದರಿಂದ ದೇಹದ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಬೆರ್ರಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ  ಪರಿಹಾರ ನೀಡುತ್ತದೆ. ಇದು ಚರ್ಮ, ಶ್ವಾಸಕೋಶ, ಸ್ತನ ಮತ್ತು ಜಠರದ ಕ್ಯಾನ್ಸರ್ ಉಂಟಾಗುವುದನ್ನು ತಡೆಯುತ್ತದೆ.
Published by:Sandhya M
First published: