Weight Loss: ದಿನಾ ಈ 6 ಯೋಗಾಸನ ಮಾಡಿದ್ರೆ ಕೆಲವೇ ವಾರಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬಹುದು ನೋಡಿ

6 yoga for reducing belly : ಸೊಂಟದ ಸುತ್ತ ಇರುವ ಕೊಬ್ಬು ಇಳಿಸಿಕೊಂಡು ಬಳುಕುವ ಬಳ್ಳಿಯಂತೆ ಕಾಣಬೇಕು ಎನ್ನುವ ಹೆಣ್ಣು ಮಕ್ಕಳು ಪ್ರತಿನಿತ್ಯ ನಿಯಮಿತವಾಗಿ ಈ ಯೋಗಸಾನಗಳನ್ನ ಮಾಡುವುದಿಂದ ಸೊಂಟದ ಸುತ್ತ ಅನಗತ್ಯವಾಗಿ ತುಂಬಿರುವ ಕೊಬ್ಬು ಇಳಿಸಿಕೊಂಡು ಸುಂದರವಾಗಿ ಕಾಣಬಹುದು

ಯೋಗಾ

ಯೋಗಾ

 • Share this:
  ಯೋಗಾಸನ(Yoga asanas) ಮಾಡುವ ವ್ಯಕ್ತಿ ಆಸ್ಪತ್ರೆಯಿಂದ(Hospital) ದೂರ ಉಳಿಯುತ್ತಾನೆ ಎಂಬ ಮಾತಿದೆ. ಯೋಗ ಮಾನಸಿಕ ನೆಮ್ಮದಿಯೊಂದಿಗೆ(Mental Health) ದೇಹಕ್ಕೆ(body) ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು(Health Problems) ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆಯಂತೆ 'ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ'. ಅನಾದಿ ಕಾಲದಿಂದಲೂ ಯೋಗಿಗಳು ತಪಸ್ವಿಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅನುಷ್ಠಾನಿಕೊಂಡವರು. ಹೀಗಾಗಿ ಮಾನವನಿಗೂ ತನ್ನ ದೇಹಕ್ಕೆ ಕಾಯಿಲೆಗಳು ಬಾರದಂತೆ, ಬಂದರೂ ಪ್ರಾಕೃತಿಕವಾಗಿಯೇ ಅವುಗಳನ್ನು ನಿವಾರಿಸಿಕೊಳ್ಳಬಹುದಾದ ದಾರಿಗಳು ಹುಟ್ಟಿನಿಂದಲೇ ಲಭ್ಯವಿವೆ. ಹೀಗೆ ಲಭ್ಯವಿರುವ ದಾರಿಗಳಲ್ಲಿ ಯೋಗ ಕೂಡ ಒಂದು.

  ಆರೋಗ್ಯವೆಂದರೆ ಕೇವಲ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಮನಸ್ಸಿಗೂ ಸಂಬಂಧಿಸಿದ್ದು. ದೇಹ ಮನಸ್ಸು ಎರಡೂ ಆರೋಗ್ಯದಿಂದ ಇದ್ದರೆ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ. ಹೀಗೆ ದೇಹ ಮತ್ತು ಮನಸ್ಸು ಎರಡನ್ನೂ ಏಕಕಾಲದಲ್ಲಿ ಆರೋಗ್ಯವಾಗಿ ಇಡಲು ಯೋಗ ಸಹಕಾರಿ. ಜೊತೆಗೆ ಸೊಂಟದ ಸುತ್ತ ಇರುವ ಕೊಬ್ಬು ಇಳಿಸಿಕೊಂಡು ಬಳುಕುವ ಬಳ್ಳಿಯಂತೆ ಕಾಣಬೇಕು ಎನ್ನುವ ಹೆಣ್ಣು ಮಕ್ಕಳು ಪ್ರತಿನಿತ್ಯ ನಿಯಮಿತವಾಗಿ ಈ ಯೋಗಸಾನಗಳನ್ನ ಮಾಡುವುದಿಂದ ಸೊಂಟದ ಸುತ್ತ ಅನಗತ್ಯವಾಗಿ ತುಂಬಿರುವ ಕೊಬ್ಬು ಇಳಿಸಿಕೊಂಡು ಸುಂದರವಾಗಿ ಕಾಣಬಹುದು. ಹಾಗಿದ್ರೆ ಆ ಯೋಗಾಸನಗಳು ಯಾವುವು ಮತ್ತು ಅದನ್ನು ಹೇಗೆ ಮಾಡುವುದು ಎನ್ನುವ ಮಾಹಿತಿ ಇಲ್ಲಿದೆ

  ೧)ಭುಜಂಗಾಸನ (Cobra pose)

  ಭುಜಂಗಾಸನದ ಮಾಡುವ ಮೊದಲು ನೆಲದ ಮೇಲೆ ನೇರವಾಗಿ ಮಲಗಿಕೊಳ್ಳಬೇಕು. ನಿಮ್ಮ ಕೈಗಳನ್ನು ಭುಜದ ಸಮವಾಗಿ ನೆಲದ ಮೇಲೆ ಇರಿಸಬೇಕು.ಉಸಿರನ್ನು ಒಳ ತೆಗೆದುಕೊಳ್ಳತ್ತಾ ಕೈಗಳ ಆಧಾರದ ಮೇಲೆ ತಲೆ ಮತ್ತು ಭುಜದ ಸಹಾಯದಿಂದ ತಲೆಯನ್ನು ನಿಧಾನವಾಗಿ ಹಾವಿನ ಎಡೆಯಂತೆ ಮೇಲಕ್ಕೆ ಎತ್ತಿ ಈ ಸ್ಥಿತಿಯಲ್ಲಿ ಸಂಪೂರ್ಣವಾಗಿ ಎದೆಯ ಭಾಗವು ಮೇಲಕ್ಕೆ ಇರಬೇಕು. ಒಂದೆರಡು ಬಾರಿ ಉಸಿರಾಡಿದ ನಂತರ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ಹೀಗೆ ಈ ಆಸನವನ್ನು ೧೫ ರಿಂದ ೩೦ ಬಾರಿ ಮಾಡಿದ್ರೆ ಸೊಂಟದ ಸುತ್ತ ಸೇರಿಕೊಂಡಿರುವ ಅನಗತ್ಯ ಕೊಬ್ಬು ನಿಧಾನವಾಗಿ ಕಡಿಮೆಯಾಗುತ್ತ ಬರುವುದು.

  ಇದನ್ನೂ ಓದಿ :ನಿತ್ಯ ಈ ಐದು ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ಪುರುಷರು ಶಕ್ತಿ-ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದಂತೆ..!

  ೨) ಧನುರಾಸನ(Bow pose)

  ಧನುರಾಸನ ಎಂಬ ಸಂಸ್ಕೃತ ಹೆಸರು ಎರಡು ಪದಗಳಿಂದ ಬಂದಿದೆ. ಮೊದಲ ‘ಧನು’ ಎಂದರೆ ‘ಬಿಲ್ಲು’ ಮತ್ತು ಎರಡನೆಯ ‘ಆಸನ’ ಎಂದರೆ ‘ಭಂಗಿ’. ಈ ಆಸನದ ಅಂತಿಮ ಸ್ಥಾನವು ಬಿಲ್ಲಿನ ಆಕಾರವನ್ನು ಹೋಲುತ್ತದೆ ಮತ್ತು ಆದ್ದರಿಂದ ಈ ಹೆಸರನ್ನು ಇಡಲಾಗಿದೆ. ದೇಹದ ಎಲ್ಲಾ ಅಂಗಗಳ ಉತ್ತಮ ಕಾರ್ಯನಿರ್ವಹಣೆಗೆ ಇದು ಅತ್ಯುತ್ತಮ ಭಂಗಿ. ಧನುರಾಸನ ಮಾಡುವಾಗ ಹೊಟ್ಟೆಯು ನೆಲಕ್ಕೆ ತಾಗಿ ಕಾಲು ಮತ್ತು ಕೈ ಗಳನ್ನು ಉದ್ದಕ್ಕೆ ಚಾಚಿ, ಬಳಿಕ ಗಲ್ಲವನ್ನು ನೆಲದ ಮೇಲೆ ಇರಿಸಿ ಹಾಗು ಕೈಗಳಿಂದ ಪಾದಗಳನ್ನು ಹಿಡಿದುಕೊ ಬೇಕು.ಆಳವಾದ ಉಸಿರನ್ನು ತೆಗೆದುಕೊಳ್ಳಿ. ಕಾಲುಗಳ ಸ್ನಾಯುಗಳನ್ನು ಬಿಗಿಗೊಳಿಸಿ. ನಿಧಾನವಾಗಿ ತಲೆ, ಗಲ್ಲ, ಎದೆ ಮತ್ತು ತೊಡೆಯೊಂದಿಗೆ ಕಾಲುಗಳನ್ನು ಏಕಕಾಲದಲ್ಲಿ ಹೆಚ್ಚಿಸಲು ಪ್ರಾರಂಭಿಸ ಬೇಕು.ಹೊಟ್ಟೆಯು ಇಡೀ ದೇಹದ ತೂಕವನ್ನು ಸಂಪೂರ್ಣವಾಗಿ ಹೊಂದಬೇಕು. ಅಭ್ಯಾಸದುದ್ದಕ್ಕೂ ಮೊಣಕೈಯನ್ನು ನೇರವಾಗಿ ಇರಿಸಿ. ನೋಡಲು ಬಿಲ್ಲು/ಧನಸ್ಸಿನ ಆಕಾರದಲ್ಲಿ ಕಾಣಬೇಕು. ಹೀಗೆ ನಮಗೆ ಸಾಧ್ಯವಾಗುವಷ್ಟು ಸಮಯ ಧನಸ್ಸಿನ ಆಕಾರದ ಭಂಗಿಯಲ್ಲಿ ಇದ್ದು,ದಣಿವಿನ ಅನುಭವ ಆಗುವುದೊ ಆಗ ನಿಧನಾಗಿ ತಲೆ ಗಲ್ಲ ಎದೆ ಕೈ ಮತ್ತು ಕಾಲುಗಳನ್ನು ನೆಲದ ಮೇಲೆ ತಂದು,ಇಡೀ ದೇಹವನ್ನು ವಿಶ್ರಾಂತಿ ಮಾಡಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು

  ೩)ಕುಂಭಾಸನ (The plank )
  ಹೊಟ್ಟೆ ಬೊಜ್ಜು ಕರಗಿಸಲು ಇದು ಸೂಕ್ತ ಆಸನವಾಗಿದ್ರೂ ಇದನ್ನ ಮಾಡೋದು ಬಹಳ ಕಷ್ಟವಾದ ಕೆಲಸ.. ಈ ಕುಂಭಾಸನ ಮಾಡುವಾಗ ಕೈ ಕಾಲುಗಳು ಹಾಗೂ ಸೊಂಟದ ಭಾಗ ಬಹು ನೋವು ಅನುಭವಿಸಬೇಕಾಗುತ್ತೆ. ಆದ್ರೆ ಸೋಂಟದ ಸುತ್ತ ಇರುವ ಕೊಬ್ಬು ಕರಗಿಸಬೇಕು ಎಂದು ಬಯಸುವವರು ಕುಂಭಾಸನ ಮಾಡಲೇ ಬೇಕು. ಮುಖವನ್ನ ಕೆಳಗೆ ಮಾಡಿ, ತೋಳುಗಳನ್ನ ನೆಲಕ್ಕೆ ಊರಿ, ತೋಳುಗಳ ಆಧಾರದ ಮೇಲೆ ದೇಹವನ್ನ ನಿಧಾನವಾಗಿ ಬ್ಯಾಲೆನ್ಸ್ ಮಾಡಬೇಕು. ಜೊತೆಗೆ ಕಾಲ್ ಬೆರಳುಗಳ ಮೇಲೆ ಸಮತೋಲ ಕಾಪಾಡಿಕೊಂಡು, ಕೈಗಳೊಂದಿಗೆ ಬ್ಯಾಲೆನ್ಸ್ ಮಾಡಬೇಕು.. ಹೀಗೆ ೨೦ರಿಂದ ೩೦ ಸೆಕೆಂಡುಗಳ ಬಳಿಕ ವಿಶ್ರಾಂತಿ ಸ್ಥಿತಿಗೆ ಬಂದು ಮತ್ತೆ ಈ ಆಸನವನ್ನ ಪ್ರಾರಂಭ ಮಾಡಬೇಕು

  ೪) ನೌಕಾಸನ (Boat pose)

  ನೌಕಾಸನ ಕೂಡ ಹೊಟ್ಟೆಯ ಬೊಜ್ಜು ಕರಗಿಸಲು ಇರುವ ಅತ್ಯುತ್ತಮ ಯೋಗಾಸನಗಳಲ್ಲಿ ಒಂದು.. ನೌಕಾಸಾನ ಮಾಡುವಾಗ ನೆಲದ ಮೇಲೆ ಹಾಗೆ ಮಲಗಿ ಮತ್ತು ಬೆನ್ನು ಸರಿಯಾಗಿ ನೆಲದ ಮೇಲೆ ಬರುವಂತೆ ಮಲಗಬೇಕು.. ಬಳಿಕ.ದೇಹದ ಮೇಲ್ಭಾಗ ಮತ್ತು ಕಾಲುಗಳನ್ನು 30 ಡಿಗ್ರಿಯಲ್ಲಿ ಮೇಲಕ್ಕೆ ಎತ್ತಬೇಕು. ಹೀಗೆ ಭಂಗಿಯಲ್ಲಿ 30-40 ಸೆಕೆಂಡುಗಳ ಕಾಲ ಇರಿ. ಇದರ ಬಳಿಕ ಮತ್ತೆ ಮೊದಲ ಭಂಗಿಗೆ ಬಂದು ವಿಶ್ರಾಂತಿ ಪಡೆಯಬೇಕು.ಇನ್ನು ನೌಕಾಸನದ ಭಂಗಿಯನ್ನ ಬಿಗಿಯಾಗಿ ಇಟ್ಟುಕೊಂಡರೆ ಆಗ ಹೊಟ್ಟೆಯ ಮೇಲಿನ ಹಾಗೂ ಕೆಳಭಾಗದ ಆಬ್ಸ್ ತುಂಬಾ ಬಲಗೊಳ್ಳುವುದು.

  ಇದನ್ನೂ ಓದಿ :ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಮಾಡಬಾರದ 7 ಯೋಗಾಸನಗಳು ಯಾವುವು..?

  ೫)ಉಸ್ತ್ರಾಸನ (Camel pose)

  ಉಸ್ತ್ರಾಸನವೂ ನೌಕಾಸನಕ್ಕೆ ವಿರುದ್ಧವಾದ ಭಂಗಿಯಾಗಿದೆ.. ಇದನ್ನ ಮಾಡುವಾಗ ಮೊದಲು ಮೊಣಕಾಳಿನ ಮೇಲೆ ನಿಲ್ಲಿ ಮತ್ತು ಪಾದಗಳು ಮೇಲಕ್ಕೆತ್ತಿ, ಬಳಿಕ ಬೆನ್ನನ್ನು ಬಾಗಿಸಿ ಮತ್ತು ಕೈಗಳನ್ನು ಒಂದರ ಹಿಂದೆ ಒಂದರಂತೆ ಮೊಣಕಾಲಿನ ಮೇಲಿಡ ಬೇಕು. ಬಳಿಕತಲೆಯನ್ನು ಹಿಂದಕ್ಕೆ ಮಾಡಿಕೊಂಡು ಹೊಟ್ಟೆ ಮುಂದಕ್ಕೆ ತಂದು 30 ಸೆಕೆಂಡು ಕಾಲ ಇದೇ ಭಂಗಿಯಲ್ಲಿರಿ ಬೇಕು ಮತ್ತು 30 ಸಲ ನೀವು ಇದನ್ನು ಪುನರಾವರ್ತಿಸಿ ಬೇಕು. ಉಸ್ತ್ರಾಸನ ಮಾಡುವುದರಿಂದಗೂನುಬೆನ್ನು ದೂರವಾಗಿ ಬೆನ್ನಿನ ಭಾಗಕ್ಕೆ ಚೈತನ್ಯ ಬರುವುದು. ಥೈರಾಯ್ಡ್‌, ಅಸ್ತಮ, ಹೃದ್ರೋಗ ಸಮಸ್ಯೆ ನಿವಾರಣೆಗೆ ಉತ್ತಮ ಆಸನ. ಮಂಡಿನೋವು ಇರುವವರು ಈ ಆಸನ ಮಾಡದಿರುವುದು ಸೂಕ್ತ.

  ೬) ಏಕ ಪಾದ ಅಧೋಮುಖ ಸ್ವನಾಸನ(One-Legged Downward-Facing Dog Pose)

  ಏಕ ಪದಾ ಅಧೋ ಮುಖ ಸ್ವಾನಾಸನ ಹೇಸರು ಹೇಳುವಂತೆ ನಾಯಿ ಯಾವ ಭಂಗಿಯಲ್ಲಿ ನಿಲ್ಲುತ್ತದೋ , ಅದೇ ಭಂಗಿಯಲ್ಲಿ ನಿಂತು ಮಾಡುವ ಆಸನ.. ಮೊದಲಿಗೆ, ನಾಯಿಯಂತೆ ನಿಮ್ಮ ಮೊಣಕಾಲು ಊರಿ ನಿಂತು,ನಿಧಾನವಾಗಿ ಉಸಿರು ಬಿಡಿ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಮೊಣಕೈ ಮತ್ತು ಒಂದು ಕಾಲನ್ನು ನೇರವಾಗಿಸಿ, ಮತ್ತೊಂದು ಕಾಲನ್ನ ಮೇಲೆ ನೇರವಾಗಿ ಎತ್ತಬೇಕು.ಕೈಗಳು ಭುಜದ ಸಮಾನಾಂತರವಾಗಿರಬೇಕು ಮತ್ತು ಪಾದಗಳು ಸೊಂಟದ ಸಮಾನವಾಗಿರಲಿ. ಹೆಬ್ಬೆರಳುಗಳು ಮೇಲಿನ ಭಾಗಕ್ಕೆ ನೋಡುತ್ತಿರಲಿ.ಬಳಿಕ ಕೈಗಳನ್ನು ನೆಲಕ್ಕೆ ಊರಿಕೊಳ್ಳಿ ಮತ್ತು ಕುತ್ತಿಗೆ ಎಳೆ. ಕಿವಿಗಳು ಒಳಭಾಗದ ಕೈಗಳನ್ನು ಮುಟ್ಟಬೇಕು ಮತ್ತು ನಾಭಿ ಕಡೆಗೆ ನೋಟವನ್ನಿ ಬೇಕು ಕೆಲವು ಸೆಕೆಂಡು ಹಾಗೆ ಇದ್ದು ಕಾಲು ಕೆಳಗೆ ಇಳಿಸಿ, ಎರಡು ಕಾಲುಗಳನ್ನ ಮಡಚಿ ಮೊದಲಿನ ಭಂಗಿಗೆ ಬರಬೇಕು ..
  Published by:ranjumbkgowda1 ranjumbkgowda1
  First published: