HOME » NEWS » Lifestyle » 6 CRORE EPFO MEMBERS LIKELY TO GET 8 5 PARCENTAGE INTEREST BY NEXT MONTH KVD

EPFO ಸದಸ್ಯರಿಗೆ ಇಲ್ಲಿದೆ ಗುಡ್​​ನ್ಯೂಸ್​​: ಮುಂದಿನ ತಿಂಗಳು 6 ಕೋಟಿ ಮಂದಿಗೆ ಶೇ.8.5 ಬಡ್ಡಿ

EPF ಬಡ್ಡಿಯನ್ನು ಜುಲೈ ಅಂತ್ಯದ ವೇಳೆಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.

Kavya V | news18-kannada
Updated:June 8, 2021, 8:20 PM IST
EPFO ಸದಸ್ಯರಿಗೆ ಇಲ್ಲಿದೆ ಗುಡ್​​ನ್ಯೂಸ್​​: ಮುಂದಿನ ತಿಂಗಳು 6 ಕೋಟಿ ಮಂದಿಗೆ ಶೇ.8.5 ಬಡ್ಡಿ
ಸಾಂದರ್ಭಿಕ ಚಿತ್ರ
  • Share this:
EPFO ವ್ಯಾಪ್ತಿಗೆ ಬರುವ ದೇಶದ ಸುಮಾರು 6 ಕೋಟಿ ಸದ್ಯರಿಗೆ ಗುಡ್​​ನ್ಯೂಸ್​​ ಇದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗುವ ಶೇ.8:5 ಬಡ್ಡಿಯನ್ನು ಜುಲೈ ಅಂತ್ಯದೊಳಗೆ ನೀಡಲಾಗುವುದು. EPF ಬಡ್ಡಿಯನ್ನು ಜುಲೈ ಅಂತ್ಯದ ವೇಳೆಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಗೆ ಕಾರ್ಮಿಕ ಸಚಿವಾಲಯವೂ ಗ್ರೀನ್​ ಸಿಗ್ನಲ್​ ನೀಡಿದೆ.

020-2021ರ ಆರ್ಥಿಕ ವರ್ಷದಲ್ಲಿ  ಈ ಸೇವೆಯನ್ನು ನೌಕಕರು ಪಡೆಯಬಹುದಾಗಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಅನೇಕರು ನೌಕರರು ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅಂತವರಿಗೆ ಈ ವಿಚಾರ ಸಂತಸ ನೀಡಿದೆ. ಅಂದಾದಹಾಗೆಯೇ ಕಾರ್ಮಿಕ ಸಚಿವಾಲಯ ಅನುಮೋದನೆಯ ನಂತರ ಶೇ. 8.5 ರಷ್ಟು ಬಡ್ಡಿ ಮೊತ್ತವು ಇಪಿಎಫ್ ಚಂದಾದಾರರ ಖಾತೆಗೆ ಬರಲಿದೆ. ಸಚಿವಾಲಯದ ನಂತರ ವರ್ಗಾವಣೆ ನಂತರ ಇದರ ಪ್ರಕ್ರಿಯೆ ಶುರುವಾಗಲಿದೆ

ಇದನ್ನೂ ಓದಿ: Karnataka Lockdown: ಲಾಕ್​ಡೌನ್​ ಸಡಿಲಿಕೆ ಕುರಿತು ಇನ್ನೆರಡು ದಿನಗಳಲ್ಲಿ ಸಿಎಂ ಚರ್ಚೆ

6 ಕೋಟಿಗೂ ಹೆಚ್ಚು EPFO ಸದಸ್ಯರಿಗೆ ಜೂನ್ 1 ರಿಂದ ಕೆಲವು ನಿಯಮಗಳು ಬದಲಾಗಿವೆ. ಸಾಮಾಜಿಕ ಭದ್ರತಾ ಸಂಹಿತೆ 2020 ರಡಿಯಲ್ಲಿ ಇಪಿಎಫ್​​​ಓ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮದ ಪ್ರಕಾರ, ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಅಂದರೆ ಜೂನ್ 1 ರ ನಂತರ ಖಾತೆಯನ್ನು ಆಧಾರ್‌ನೊಂದಿಗೆ (Aadhaar) ಲಿಂಕ್ ಮಾಡಲಾಗದ ಖಾತೆದಾರರಿಗೆ ECR ಭರ್ತಿ ಮಾಡಲಾಗುವುದಿಲ್ಲ. ಅಂದರೆ, ಅವರ ಕಂಪನಿ ನೀಡುವ ಕೊಡುಗೆ  ಪಿಎಫ್ ಖಾತೆಯಲ್ಲಿ ಪಡೆಯುವುದು ಖಾತೆದಾರರಿಗೆ ಕಷ್ಟಕರವಾಗಲಿದೆ. ನೌಕರರು ಖಾತೆಯಲ್ಲಿ ತಮ್ಮ ಕೊಡುಗೆಯನ್ನು ಮಾತ್ರ ಪಡೆಯಬಹುದು.

ಈ ನೂತನ ನಿಯಮದ ಪ್ರಕಾರ, ಎಲ್ಲ ಖಾತೆದಾರರ UAN ಕೂಡ ಆಧಾರ್ ವೇರಿಫೈಡ್ ಆಗಿರುವುದು ಅನಿವಾರ್ಯವಾಗಿದೆ. ಹೀಗಿರುವಾಗ ನೀವೂ ಕೂಡ ಅಧಿಕೃತ ವೆಬ್ ಸೈಟ್ ಘೆ ಭೇಟಿ ನೀಡಿ, ನಿಮ್ಮ ಖಾತೆಯನ್ನು ಮೊದಲು ಆಧಾರ್ ಜೊತೆಗೆ ಲಿಂಕ್ ಮಾಡಿ ಬಳಿಕ UAN ಸಂಖ್ಯೆಯನ್ನೂ ಕೂಡ ಆಧಾರ್ ಕಾರ್ಡ್ ನಿಂದ ವೆರಿಫೈ ಮಾಡಿ. ಇದರಿಂದ ನಿಮಗೆ ಕಂಪನಿಯಿಂದ ಸಿಗುವ ಕೊಡುಗೆಯಲ್ಲಿ ಯಾವುದೇ ರೀತಿಯ ಅಡಚಣೆ ಎದುರಾಗುವುದಿಲ್ಲ.
Published by: Kavya V
First published: June 8, 2021, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories