ಈ ದೇಶದಲ್ಲಿ ಶೇ.50 ರಷ್ಟು ಜನರಿಗೆ ಮದುವೆ ಎಂಬುದೇ ಮರೀಚಿಕೆ...!

ಇದು ಹೀಗೆಯೇ ಮುಂದುವರೆದರೆ ಜಪಾನ್​ ದೇಶದಲ್ಲಿ ಜನಸಂಖ್ಯೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿವಾಹ ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

Latha CG | news18
Updated:June 19, 2019, 5:11 PM IST
ಈ ದೇಶದಲ್ಲಿ ಶೇ.50 ರಷ್ಟು ಜನರಿಗೆ ಮದುವೆ ಎಂಬುದೇ ಮರೀಚಿಕೆ...!
ಸಾಂದರ್ಭಿಕ ಚಿತ್ರ
  • News18
  • Last Updated: June 19, 2019, 5:11 PM IST
  • Share this:
ಈ ದೇಶದಲ್ಲಿ ಶೇ.50 ರಷ್ಟು ಅವಿವಾಹಿತರಿಗೆ ಬಾಳಸಂಗಾತಿಯೇ ಸಿಗುತ್ತಿಲ್ಲವಂತೆ
ಈ​ ದೇಶದಲ್ಲಿ ಮದುವೆಯಾಗಲು ಬಯಸುವ ಶೇ.50 ರಷ್ಟು ವ್ಯಕ್ತಿಗಳು ತಮಗೆ ಸರಿಹೊಂದುವ ಬಾಳಸಂಗಾತಿಯನ್ನು ಹುಡುಕಲು ವಿಫಲರಾಗುತ್ತಿದ್ದಾರಂತೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶೇ.61.4 ರಷ್ಟು ಜನರು ಹೇಳಿದ್ದಾರೆ. ಇಂತಹ ಒಂದು ಹೊಸ ಸಮೀಕ್ಷೆಯನ್ನು ಬಿಡುಗಡೆ ಮಾಡಿರುವುದು ಜಪಾನ್​ ಸರ್ಕಾರ.

ಜಪಾನ್​ ದೇಶದಲ್ಲಿ ಸೂಕ್ತ ಸಂಗಾತಿಯನ್ನು ಭೇಟಿಯಾಗುವ ಅವಕಾಶ ಹೆಚ್ಚಾಗಿ ಇಲ್ಲವಂತೆ. ಅವಿವಾಹಿತರು ಆರ್ಥಿಕವಾಗಿ ಸಬಲರಾಗಿಲ್ಲದಿರುವುದು, ಸಂಗಾತಿಯ ಜೊತೆ ಬೆರೆಯಲು, ಮಾತನಾಡಲು ಸಾಮರ್ಥ್ಯವಿಲ್ಲದಿರುವುದು.. ಮತ್ತಿತರ ಪ್ರಮುಖ ವಿಷಯಗಳು ಇದಕ್ಕೆ ಕಾರಣ ಎಂದು ಜಪಾನ್​ ದೇಶದ ಕಡಿಮೆಯಾಗುತ್ತಿರುವ ಜನನ ದರದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಶೇ.50 ರಷ್ಟು ಜಪಾನಿಯರಿಗೆ ಮದುವೆ ಎಂಬುದು ಮರೀಚಿಕೆಯಾಗಿದೆ.

ಇದನ್ನೂ ಓದಿ: ಹುಡುಗರನ್ನು ಕಂಡಾಗ ಹುಡುಗಿಯರು ಮೊದಲು ನೋಡುವುದು ಈ ಅಂಗವನ್ನಂತೆ..!

ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 20-40 ವರ್ಷ ವಯಸ್ಸಿನ ಸುಮಾರು 4 ಸಾವಿರ ಪುರುಷರು ಮತ್ತು ಮಹಿಳೆಯರಲ್ಲಿ ಶೇ.46.8 ರಷ್ಟು ಮಂದಿಗೆ ಮದುವೆಯಾಗುವ ಇಚ್ಛೆಯಿದ್ದರೂ ಸೂಕ್ತ ಸಂಗಾತಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ಇದು ಹೀಗೆಯೇ ಮುಂದುವರೆದರೆ ಜಪಾನ್​ ದೇಶದಲ್ಲಿ ಜನಸಂಖ್ಯೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವಿವಾಹ ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.
First published:June 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading