Constipation: ಯೋಗಾಸನದ ಈ ಭಂಗಿಗಳು ಮಲಬದ್ಧತೆ ಸಮಸ್ಯೆಗೆ ಪರಿಹಾರವಂತೆ

Yoga For Constipation: ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಮಲಬದ್ಧತೆಗೆ ಚಿಕಿತ್ಸೆ ನೀಡುವಲ್ಲಿ ಆಹಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದರ ಹೊರತಾಗಿ ಮಲಬದ್ಧತೆ ನಿವಾರಣೆಗೆ ಯೋಗವು ಸೂಕ್ತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಲವಾರು ಜನರನ್ನು ಕಾಡುವ ಒಂದು ಸಮಸ್ಯೆ ಎಂದರೆ ಮಲಬದ್ಧತೆ (Constipation) . ಮಲಬದ್ಧತೆಯಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಮಲ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಾರೆ ಮತ್ತು ಕೆಲವು ವ್ಯಕ್ತಿಗಳಿಗೆ ಈ ಸ್ಥಿತಿಯು ಹಲವಾರು ವಾರಗಳವರೆಗೆ ಮತ್ತು ತಿಂಗಳುಗಳವರೆಗೆ ಇರುತ್ತದೆ. ಮನುಷ್ಯನಿಗೆ ಆಹಾರ ಸೇವನೆ (Food)  ಪ್ರಕ್ರಿಯೆ ಎಷ್ಟು ಸರಾಗವಾಗಿ ನಡೆಯುತ್ತದೆ ಅದೇ ರೀತಿ ದೇಹದಲ್ಲಿ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು.

ಇದು ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಮಲಬದ್ಧತೆಗೆ ಚಿಕಿತ್ಸೆ ನೀಡುವಲ್ಲಿ ಆಹಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದರ ಹೊರತಾಗಿ ಮಲಬದ್ಧತೆ ನಿವಾರಣೆಗೆ ಯೋಗವು ಸೂಕ್ತವಾಗಿದೆ.

ನಿಮಗೆಲ್ಲಾ ಗೊತ್ತಿರುವ ಹಾಗೆ ಯೋಗವು ಅದ್ಭುತವಾದ ವ್ಯಾಯಾಮ ಕ್ರಮ. ಯೋಗವು ನಮ್ಮ ದೇಹವನ್ನು ಪ್ಲೆಕ್ಸಿಬಲ್ ಆಗಿಸಲು ಸಹಕರಿಸುತ್ತದೆ. ಕೆಲವು ಯೋಗದ ಭಂಗಿಗಳು ನಮ್ಮಲ್ಲಿರುವ ಅನೇಕ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಒತ್ತಡವನ್ನು ಕಡಿಮೆ ಮಾಡುತ್ತದೆ, ಕರುಳಿನಲ್ಲಿ ರಕ್ತದ ಹರಿವನ್ನು ಹೆಚ್ಚಿಸುವುದು. ಕರುಳನ್ನು ಸಂಕುಚಿತಗೊಳಿಸಲು ಉತ್ತೇಜಿಸುವುದು. ಹೀಗೆ ಮಲಬದ್ಧತೆಯಿಂದ ಮುಕ್ತಿ ಹೊಂದಲು ಯೋಗದಲ್ಲಿ ವಿಶೇಷವಾಗಿ 5 ಆಸನಗಳಿವೆ.

ಇದನ್ನೂ ಓದಿ: ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ತೂಕ ಕಡಿಮೆಯಾಗುತ್ತಂತೆ

ಈ ಐದು ಯೋಗಾಸನದ ಭಂಗಿಯು ಮಲಬದ್ಧತೆ ನಿವಾರಿಸುತ್ತದೆ.
1) ಸುಪ್ತ ಮತ್ಸ್ಯೇಂದ್ರಾಸನ

ಈ ಯೋಗ ಭಂಗಿಯು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಯೋಗ ಚಾಪೆಯ ಮೇಲೆ ಬೆನ್ನಿನ ಮೇಲೆ ಚಪ್ಪಟೆಯಾಗಿ ಮಲಗಬೇಕು ಮತ್ತು ಅಂಗೈಗಳು ಕೆಳಮುಖವಾಗಿರುವಂತೆ ದೇಹಕ್ಕೆ ಲಂಬವಾಗಿ ತೋಳುಗಳನ್ನು ಇಡಬೇಕು. ಈಗ, ನಿಮ್ಮ ಮೊಣಕಾಲುಗಳಲ್ಲಿ ಒಂದನ್ನು ಬಗ್ಗಿಸಿ ಮತ್ತು ಭುಜಗಳನ್ನು ಸಮತಟ್ಟಾಗಿ ಇರಿಸಿಕೊಂಡು ಅದನ್ನು ಇನ್ನೊಂದು ಮೊಣಕಾಲಿನ ಮೇಲೆ ನಿಧಾನವಾಗಿ ಬಿಡಿ. ಕೆಲ ಹೊತ್ತು ಉಸಿರಾಟದ ಜೊತೆ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿ ಮತ್ತು ಇನ್ನೊಂದು ಕಾಲಿನಿಂದ ಪುನರಾವರ್ತಿಸಿ.ಹೀಗೆ ಮಾಡಿದಲ್ಲಿ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದೆಂದು ಯೋಗ ತಜ್ಞರು ಹೇಳುತ್ತಾರೆ.

2) ಭುಜಂಗಾಸನ
ಭುಜಂಗಾಸನ ಅಥವಾ ನಾಗರ ಭಂಗಿ, ಇದು ಹೊಟ್ಟೆಯ ಮೇಲೆ ಚಪ್ಪಟೆಯಾಗಿ ಮಲಗಿ ತೋಳು ಮತ್ತು ಬೆರಳುಗಳನ್ನು ನೆಲಕ್ಕೆ ಊರಿ. ನಂತರ ಕುತ್ತಿಗೆ, ಎದೆ ಭಾಗವನ್ನು ನಿಧಾನವಾಗಿ ಮೇಲಕ್ಕೆತ್ತಿ. ನಿಮ್ಮ ಅಂಗೈಗಳ ಭಾರ ಹಾಕಿ ಎದ್ದೇಳಿ. ಭುಜಂಗಾಸನವು ಸೂರ್ಯ ನಮಸ್ಕಾರದ ಕೆಲವು ರೂಪಗಳಲ್ಲಿ ಯೋಗ ಭಂಗಿಗಳ ಅನುಕ್ರಮದ ಭಾಗವಾಗಿದೆ, ಇದು ನಮ್ಮ ಜೀರ್ಣ ಕ್ರಿಯೆಗೆ ಸಹಕರಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

3) ಪವನ ಮುಕ್ತಾಸನ
ಪವನ ಅಂದರೆ ವಾಯು ಎಂದರ್ಥ, ದೇಹದಲ್ಲಿನ ವಾಯು ಹೊರ ಹಾಕುವಲ್ಲಿ ಈ ಆಸನ ಸಹಾಯ ಮಾಡುತ್ತದೆ. ಈ ಆಸನ ಮಾಡಲು ಬೆನ್ನ ಮೇಲೆ ನೇರವಾಗಿ ಮಲಗಬೇಕು, ನಂತರ ಎರಡು ಕಾಲುಗಳನ್ನು ಮಂಡಿಗಳು ಹೊಟ್ಟೆಗೆ ತಾಗುವಂತೆ ಮಡಚಬೇಕು. ಕೈಗಳಿಂದ ಕಾಲುಗಳನ್ನು ಹಿಡಿದುಕೊಂಡಿರಬೇಕು. ಈಗ ತಲೆಯನ್ನು ಮೇಲಕ್ಕೆ ಎತ್ತಿ ಮಂಡಿಗೆ ತಾಗಿಸಲು ಪ್ರಯತ್ನಿಸಿ, ಈ ಸಂದರ್ಭದಲ್ಲಿ ವಾಯು ಬಂದರೆ ತಡೆ ಹಿಡಿಯಲು ಪ್ರಯತ್ನಿಸಬೇಡಿ.

4) ವಜ್ರಾಸನ
ವಜ್ರಾಸನ ಮಾಡಲು ಮೊದಲು ಸುಖಾಸನ ಸ್ಥಿತಿಯಲ್ಲಿ ನೇರವಾಗಿ ಕುಳಿತುಕೊಳ್ಳಬೇಕು, , ಕಾಲುಗಳನ್ನು ಒಂದಾದ ಬಳಿಕ ಒಂದರಂತೆ ಮುಂದಕ್ಕೆ ಚಾಚಿ, ನಂತರ ಮಡಚಿ, ತೊಡೆಗಳು ಕಾಲಿನ ಮೇಲೆ ಬರುವಂತೆ ಕೂತು ಕೊಳ್ಳಿ, ಈಗ ಕೈಗಳನ್ನು ತೊಡೆಯ ಮೇಲಿಟ್ಟು ನಿಧಾನಕ್ಕೆ ಉಸಿರು ತೆಗೆದು, ನಿಧಾನಕ್ಕೆ ಬಿಡಿ. ಅಜೀರ್ಣ ಇರುವವರು ಊಟವಾದ ಬಳಿಕ ಸ್ವಲ್ಪ ಹೊತ್ತು ವಜ್ರಾಸನದಲ್ಲಿ ಕೂತರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಿಂದ ಮಲಬದ್ಧತೆ ಕಾಡುವುದಿಲ್ಲ.

ಇದನ್ನೂ ಓದಿ: ನುಗ್ಗೆ ಹೂವಿನಿಂದ ಪುರುಷರ ಲೈಂಗಿಕ ಸಮಸ್ಯೆ ನಿವಾರಣೆಯಾಗುತ್ತಂತೆ, ಮತ್ತಷ್ಟು ಅದ್ಭುತ ಪ್ರಯೋಜನಗಳಿವೆ ನೋಡಿ

5) ಬಾಲಾಸನ
ಮಗುವಿನ ಭಂಗಿ ಅಥವಾ ಬಾಲಾಸನ ಪವನ ಮುಕ್ತಾಸನವನ್ನು ಹೋಲುತ್ತದೆ. ನಿಮ್ಮ ಮೊಣಕಾಲುಗಳನ್ನು ನಿಮ್ಮ ಸೊಂಟದ ಅಗಲಕ್ಕಿಂತ ಹೆಚ್ಚು ದೂರದಲ್ಲಿಟ್ಟುಕೊಂಡು ನೀವು ಚಾಪೆಯ ಮೇಲೆ ಕುಳಿತುಕೊಳ್ಳಬೇಕು. ನಿಮ್ಮ ಕಾಲ್ಬೆರಳುಗಳು ನೆಲಕ್ಕೆ ಸ್ಪರ್ಶಿಸಬೇಕು. ಈಗ, ಮುಂದಕ್ಕೆ ಬಾಗಿ ನಿಮ್ಮ ಕೈಗಳನ್ನು ಮುಂಭಾಗದಲ್ಲಿ ಚಾಚಿ ಇದರಿಂದ ನಿಮ್ಮ ತಲೆಯು ಚಾಪೆಯನ್ನು ಮುಟ್ಟುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸರಾಗವಾಗಿ ಮಲಬದ್ಧತೆ ನಿವಾರಣೆಯಾಗುತ್ತದೆ.
Published by:Sandhya M
First published: