Heritage Sites: ದಕ್ಷಿಣ ಭಾರತದ 5 ವಿಶ್ವ ಪರಂಪರೆಯ ತಾಣಗಳಿವು, ಜೀವನದಲ್ಲಿ ಒಮ್ಮೆಯಾದ್ರೂ ಭೇಟಿ ನೀಡಿ

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಈ ಐದು ರಾಜ್ಯಗಳನ್ನು ಭಾರತದಲ್ಲಿ ʼದಕ್ಷಿಣ ಭಾರತʼ ಎಂದು ಕರೆಯುತ್ತೇವೆ. ಐದು ರಾಜ್ಯಗಳು ತಮ್ಮ ವಿಶಿಷ್ಠ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಈ ಐತಿಹಾಸಿಕ ತಾಣಗಳು ಅಗ್ರ ಶ್ರೇಯಾಂಕ ʼಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನ ಪಡದಿವೆ. ನಮ್ಮ ದೇಶದ ದಕ್ಷಿಣ ಭಾಗದಲ್ಲಿ 5 ಸಾಂಸ್ಕೃತಿಕ ತಾಣಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಹಂಪಿ

ಹಂಪಿ

  • Share this:
ಪ್ರವಾಸ (Tour) ಹೊರಡುವುದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹಳೆ ಕಾಲದ ಇತಿಹಾಸ ಹೇಳುವ ಗತಕಾಲದ ಪ್ರವಾಸಿ ತಾಣಗಳು (Tourist Spots) ನಮ್ಮ ದೇಶದಲ್ಲಿ ಅನೇಕ ಸ್ಥಳಗಳು (Place) ಇವೆ. ಹಾಗೆಯೇ ಐತಿಹಾಸಿಕ ತಾಣಗಳ (Historical sites) ವಿಷಯಕ್ಕೆ ಬಂದರೆ ನಮ್ಮ ದೇಶದಲ್ಲಿ ಪ್ರಮುಖವಾಗಿ ದಕ್ಷಿಣ ಭಾಗವು ಯಾವಾಗಲೂ ಅತ್ಯಂತ ಪ್ರಮುಖ ತಾಣವಾಗಿರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಈ ಐದು ರಾಜ್ಯಗಳನ್ನು ಭಾರತದಲ್ಲಿ ʼದಕ್ಷಿಣ ಭಾರತʼ (South India) ಎಂದು ಕರೆಯುತ್ತೇವೆ. ಈ ಐದು ರಾಜ್ಯಗಳು ತಮ್ಮ ವಿಶಿಷ್ಠ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ.

ಈ ಭಾಗದಲ್ಲಿ ಅನೇಕ ರಾಜ-ರಾಜರುಗಳು ಆಳ್ವಿಕೆ ನಡೆಸಿದ್ದಾರೆ. ಆ ಯುಗದ ಐತಿಹಾಸಿಕ ರಾಜ ಮನೆತನಗಳಾದ ಚೋಳರು, ಮಧುರೈ ಪಾಂಡ್ಯಗಳು, ಕೃಷ್ಣದೇವರಾಯನ ತುಳುವಾ ವಂಶ ಮತ್ತು ಇನ್ನು ಮುಂತಾದವುಗಳು. ಈ ಐತಿಹಾಸಿಕ ತಾಣಗಳು ಏಕೆ ವಿಶಿಷ್ಟವಾಗಿವೆ? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಐತಿಹಾಸಿಕ ತಾಣಗಳು ಅಗ್ರ ಶ್ರೇಯಾಂಕ ʼಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನ ಪಡದಿವೆ. ನಮ್ಮ ದೇಶದ ದಕ್ಷಿಣ ಭಾಗದಲ್ಲಿ 5 ಸಾಂಸ್ಕೃತಿಕ ತಾಣಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ದಕ್ಷಿಣ ಭಾರತದ 5 ವಿಶ್ವ ಪರಂಪರೆಯ ತಾಣಗಳು :

 1) ಹಂಪಿ, ಕರ್ನಾಟಕ
ನಿಮಗೆ ತೆನಾಲಿ ರಾಮನ್ ಎಂಬ ಹಾಸ್ಯ ದಿಗ್ಗಜನ ಬಗ್ಗೆ ಗೊತ್ತಿರಬೇಕಲ್ವಾ. ಹಾಗೆಯೇ ವಿಜಯನಗರದ ಪ್ರಸಿದ್ಧ ರಾಜ ಕೃಷ್ಣ ದೇವರಾಯನ ಬಗ್ಗೆಯೂ ನಿಮಗೆ ಸ್ವಲ್ಪವಾದರೂ ಗೊತ್ತಿರಲೇಬೇಕು. ವಿಜಯನಗರ ಸಾಮ್ರಾಜ್ಯವನ್ನು ಕೃಷ್ಣದವರಾಯ ಅವರು 1509 ರಿಂದ 1529 ರವರೆಗೆ ಆಳಿದರು. ಕೃಷ್ಣೇವರಾಯ ರಾಜವಂಶದ ಅವಶೇಷಗಳಾದ ಗುಡಿ, ಗೋಪುರಗಳು ಮುಂತಾದ ಅವಶೇಷಗಳಿಂದ ಇಂದು, ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇಲ್ಲಿ ವಿರುಪಾಕ್ಷಾ ದೇವಾಲಯವಿದೆ. ತುಂಗಭದ್ರಾ ನದಿಯ ಉದ್ದಕ್ಕೂ ಹಂಪಿ ಎತ್ತರವಾಗಿ ಬೆಳೆದಿದೆ. ಈ ನದಿಯು ಈ ಕ್ಷೇತ್ರವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ನೀವು ಈ ಸ್ಥಳಕ್ಕೆ ಪ್ರವಾಸ ಹೊರಡಲು ಸಿದ್ದರಿದ್ದರೆ, 3-4 ದಿನಗಳ ಯೋಜನೆ ಬೇಕಾಗುವುದು.

ಇದನ್ನೂ ಓದಿ: Water Falls: ಕರ್ನಾಟಕದಲ್ಲಿ ಒಮ್ಮೆಯಾದರೂ ನೀವು ನೋಡಲೇಬೇಕಾದ ಅದ್ಭುತ ಜಲಪಾತಗಳಿವು

2) ನಿಲಿಗಿರಿ ಪರ್ವತ ರೈಲ್ವೆ, ತಮಿಳುನಾಡು
ಈ ಸಾಂಪ್ರದಾಯಿಕ ಶೈಲಿಯ ಉಗಿಬಂಡೆ ರೈಲು ಸಾಕಷ್ಟು ಪ್ರವಾಸಿ ಪ್ರಾಮುಖ್ಯತೆಯನ್ನು ಹೊಂದಿದ್ದು ಇದರ ಪ್ರಯಾಣದ ಅನುಭವ ಪಡೆಯಲು ಜನರು ಹಾತೊರೆಯುತ್ತಾರೆ. ಈ ಸ್ಟೀಮ್ ಚಾಲಿತ ಟ್ರೈನು ಪ್ರಾಕೃತಿಕ ಸಂಪತ್ತಿನಿಂದ ಕಂಗೊಳಿಸುವ ಕುಣ್ಣೂರು ಮತ್ತು ಊಟಿಗಳ ವಿಹಂಗಮ ದೃಶ್ಯಾವಳಿಗಳನ್ನು ನೋಡುಗರಿಗೆ ಉಣಬಡಿಸುತ್ತದೆ. ಈ ನೀಲಗಿರಿ ಪರ್ವತ ರೈಲು 2005 ರಲ್ಲಿ ಯುನೆಸ್ಕೋ ಸಂಸ್ಥೆಯಿಂದ ಗುರುತಿಸಲ್ಪಟ್ಟಿದೆ. ಈ ರೈಲಿನಲ್ಲಿ ಬಳಕೆ ಮಾಡಿರುವ ಎಂಜಿನಿಯರಿಂಗ್ ತಂತ್ರವು ಅದ್ಭುತ ಆಗಿದೆ. ಇದು ವಿಶ್ವ ಪರಂಪರೆಯ ತಾಣಗಳ ಒಂದು ಭಾಗವಾಗಿದೆ.

3) ಪಟ್ಟದಕಲ್ಲು, ಕರ್ನಾಟಕ : ಈ ಸ್ಥಳವು ಚಾಲುಕ್ಯ ಆಳ್ವಿಕೆಯಲ್ಲಿ ಸಂಸ್ಕೃತಿಯ ಅಗ್ರಜ ಕೇಂದ್ರವಾಗಿತ್ತು. ಈ ಪ್ರದೇಶದ ರಚನೆ ಮತ್ತು ಶೈಲಿಯು ದ್ರಾವಿಡ ಕಲೆಯಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಳುಗಲ್ಲುಗಳಿಂದ ತಯಾರಿಸಿದ ದೇವಾಲಯಗಳಿವೆ. ಇವು ಮುಖ್ಯವಾಗಿ ಶಿವ ದೇವಾಲಯಗಳು ಅಥವಾ ಜೈನ ದೇವಾಲಯಗಳಾಗಿವೆ. ಮಲಪ್ರಭಾ ನದಿಯ ದಂಡಯ ಮೇಲೆ ಈ ಸ್ಥಳ ಇದೆ. ಹೀಗಾಗಿ ಇದು ವಿಶ್ವದ ಪಾರಂಪರಿಕ ತಾಣಗಳಲ್ಲಿ ಮುಖ್ಯ ಸ್ಥಳವಾಗಿದೆ.

4) ಪಶ್ಚಿಮ ಘಟ್ಟಗಳು: ಇವು ಸುಮಾರು 1600 ಕಿಲೋಮೀಟರ್ ಉದ್ದವನ್ನು ಹೊಂದಿವೆ. ಪಶ್ಚಿಮ ಘಟ್ಟಗಳು ಅತಿದೊಡ್ಡ ವ್ಯಾಪಕವಾದ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇದರ ವ್ಯಾಪ್ತಿಯು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಉದ್ದಕ್ಕೂ ಕಾಣಬಹುದಾಗಿದೆ. ಈ ಭೌಗೋಳಿಕ ಪ್ರದೇಶವು ಚಹಾ ಮತ್ತು ಕಾಫಿ ತೋಟಗಳಿಗೆ ಸೂಕ್ತವಾಗಿದೆ. ಈ ಪ್ರದೇಶವು ಹಲವಾರು ಪ್ರಮುಖ ನದಿಗಳು ಹಾಗೂ ವೈವಿಧ್ಯಮ ಜೀವಸಂಕುಲಗಳಿಗೂ ಮೂಲವಾಗಿದೆ. ಹೀಗಾಗಿ ಪಶ್ಚಿಮ ಘಟ್ಟಗಳು ವಿಶ್ವದ ಪಾರಂಪರಿಕ ತಾಣಗಳ ಪ್ರಮುಖ ಭಾಗವಾಗಿವೆ.

ಇದನ್ನೂ ಓದಿ:  National Park: ಬೆಂಗಳೂರಿಗೆ ಹತ್ತಿರವಿರುವ ನ್ಯಾಷನಲ್ ಪಾರ್ಕ್‍ಗಳಿವು, ನೀವೊಮ್ಮೆ ವಿಸಿಟ್​ ಮಾಡಿ

5) ಮಾಮಲ್ಲಪುರಂ ತಮಿಳುನಾಡು: ಮಾಮಲ್ಲಪುರಂನಲ್ಲಿರುವ ಗ್ರಾನೈಟ್-ನಿರ್ಮಿತ ಸ್ಮಾರಕಗಳನ್ನು ಪಲ್ಲವ ರಾಜವಂಶದ ಮೂರು ವಿಭಿನ್ನ ತಲೆಮಾರುಗಳಿಂದ ನಿರ್ಮಿಸಲಾಗಿದೆ. ಸುಮಾರು 40 ಸ್ಮಾರಕಗಳ ಗುಂಪನ್ನು ಒಳಗೊಂಡಿರುವ ಈ ತಾಣ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಪಂಚ ರಥ, ಗಡಿಯಾರ ಗೋಪುರ, ಹಿಲ್ಸೈಡ್ ಗುಹೆ, ಟೈಗರ್ ಗುಹೆ, ಶೋರ್ ಟೆಂಪಲ್ ಮತ್ತು ಇನ್ನೂ ಅನೇಕ ವಿನ್ಯಾಸಗಳನ್ನು ಇಲ್ಲಿ ಕಾಣಬಹುದು.

ಅಂತಿಮವಾಗಿ ಈ ಎಲ್ಲ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಮತ್ತಷ್ಟು ಅರ್ಥಗೊಳಿಸಿಕೊಳ್ಳಿ.
Published by:Ashwini Prabhu
First published: