Cycling: ನಿಮಗೂ ಸೈಕ್ಲಿಂಗ್‌ ಮಾಡುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ 5 ಟಿಪ್ಸ್ ತಪ್ಪದೆ ಫಾಲೋ ಮಾಡಿ

'ರೂಟೆಡ್ ಕೋ' ಕಂಪನಿಯ ಸ್ಥಾಪಕರಾದ ರೋಹಿತ್ ಮೋಹನ್ ಪುಗಾಲಿಯಾ ಸೈಕ್ಲಿಂಗ್‌ನಿಂದ ಹೇಗೆ ನಾವು ಉತ್ತಮವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ನಮಗೆ 5 ಪ್ರಮುಖ ಟಿಪ್ಸ್ ಗಳನ್ನು ನೀಡಿದ್ದಾರೆ. ಅವುಗಳನ್ನು ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಇತ್ತಿಚೀಗೆ ಒಂದು ವ್ಯಾಯಾಮ (Exercise) ತನ್ನದೆ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಇದು ಐಟಿ-ಬಿಟಿಯವರಿಗಂತೂ ಹೆಚ್ಚು ಪ್ರಿಯವಾದ ವ್ಯಾಯಾಮವಾಗಿದೆ. ಇದು ಯಾವ ವ್ಯಾಯಾಮ ಎಂದು ನೀವೆನಾದರೂ ಗೆಸ್ ಮಾಡುವುದಕ್ಕೆ ಸಾಧ್ಯವಿದೆಯಾ.? ಗೆಸ್ ಮಾಡಿ ನೋಡೋಣ. ಯೆಸ್. ನಿಮ್ಮ ಊಹೆ ಸರಿ. ಅದು ನಮಗೂ ಮತ್ತೂ ನಿಮಗೂ ಕೂಡ ಇಷ್ಟವಾದ ಸೈಕ್ಲಿಂಗ್ (Cycling) ಆಗಿದೆ. ಈ ಸೈಕ್ಲಿಂಗ್ ಎನ್ನುವುದು ಈ ಕಂಪ್ಯೂಟರ್ ಯುಗದಲ್ಲಿ ಹೆಚ್ಚು ಖ್ಯಾತಿ ಪಡೆದಿದೆ ಎಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಸೈಕಲ್ (Cycle) ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಕ್ಕೆ ಬಳಸುತ್ತಿದ್ದ ಒಂದು ಸಾರಿಗೆ ಸಾಧನವಾಗಿತ್ತು. ಅಷ್ಟೆ ಹೊರತು ಯಾರು ಕೂಡ ಅದನ್ನು ತಮ್ಮ ದೇಹದ ನಿರ್ವಹಣೆಗೆ ಬಳಕೆ ಮಾಡುತ್ತಿರಲಿಲ್ಲ.

ಸೈಕ್ಲಿಂಗ್ ಒಂದು ಉತ್ತಮ ಕಾರ್ಡಿಯೋ ವ್ಯಾಯಾಮ
ಈಗೀಗ ಸೈಕ್ಲಿಂಗ್ ಅದು ಎಷ್ಟು ಫೇಮಸ್ ಆಗಿರೋ ವ್ಯಾಯಾಮವಾಗಿದೆ ಎಂದರೆ ನಂಬುವುದಕ್ಕೂ ಕಷ್ಟ ಸಾಧ್ಯವಾಗಿದೆ. ಈ ಸೈಕ್ಲಿಂಗ್ ಒಂದು ಉತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ. ಸೈಕ್ಲಿಂಗ್ ಮಾಡೋದರಿಂದ ಕೇವಲ ಮನಸ್ಸಿಗೆ ಮಾತ್ರ ತೃಪ್ತಿಯಾಗದೇ ಇದು ತೂಕ ಇಳಿಕೆಗೆ ಕೂಡ ಸಹಾಯಕಾರಿಯಾಗಿದೆ. ಈ ಸೈಕ್ಲಿಂಗ್ ಮಾಡಿ ತೂಕ ಇಳಿಸೋದಾ? ಏನಪ್ಪ ಇವರು ಏನೋ ಹೊಸ ವಿಷಯ ಹೇಳ್ತಿದಾರೆ ಅನ್ಕೊಂಡಿದೀರಾ ಹಾಗೇನಿಲ್ಲ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋ ವಿಚಾರವೇ ಅಲ್ವಾ.!

 ದೇಹದಲ್ಲಿರುವ ಕೊಬ್ಬಿನಾಂಶ  ಕಡಿಮೆ ಮಾಡಲು ಸೈಕ್ಲಿಂಗ್ ಮಾಡಬೇಕು
ಇತ್ತಿಚೀನ ಟ್ರೆಂಡ್ ನೋಡುವುದಾದರೆ ಈ ಸೈಕ್ಲಿಂಗ್ ಕೇವಲ ವಿಶ್ರಾಂತಿಯ ಸಮಯದಲ್ಲಿ ಮಾಡುವ ವ್ಯಾಯಾಮವಾಗಿರದೇ ಇದು ಒಂದು ಗಂಭೀರ ಫಿಟ್‌ನೆಸ್‌ ಮಂತ್ರವಾಗಿದೆ. ಈ ಸೈಕ್ಲಿಂಗ್ ಬಗ್ಗೆ ಹೆಚ್ಚು ಒಲವು ಇರುವವರು ಇದನ್ನು ತಮ್ಮ ದೇಹದ ನಿರ್ವಹಣೆಗೆ ಒಂದು ಸಾಧನವಾಗಿ ಮಾಡಿಕೊಂಡಿದ್ದಾರೆ. ಈ ಸೈಕ್ಲಿಂಗ್ ಮಾಡುವುದರಿಂದ ದೇಹದ ಶಕ್ತಿ ಉತ್ತಮಗೊಳ್ಳುತ್ತದೆ. ನಿಮ್ಮ ಮೆಟಬೊಲಿಸಮ್ ಉತ್ತಮಗೊಂಡು, ದೇಹದಲ್ಲಿರುವ ಕೊಬ್ಬಿನಾಂಶ ಕ್ರಮೇಣವಾಗಿ ಕಡಿಮೆಗೊಳ್ಳುತ್ತದೆ.

ಆದರೆ ಈ ಸೈಕ್ಲಿಂಗ್‌ಅನ್ನು ಯಾವಾಗಲೋ ಒಮ್ಮೆ ಮಾಡುವುದರಿಂದ ನಿಮಗೆ ಯಾವ ಪ್ರಯೋಜನಗಳು ಸಿಗುವುದಿಲ್ಲ. ಇದನ್ನು ಪ್ರತಿನಿತ್ಯ ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ ಮಾತ್ರ ಇದರ ಸಾಕಷ್ಟು ಪ್ರಯೋಜನಗಳು ನಿಮಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ:  Plastic Straws: ಪ್ಲಾಸ್ಟಿಕ್​ ಸ್ಟ್ರಾ ಬಳಸಿ ಜ್ಯೂಸ್​ ಕುಡಿತೀರಾ? ಆರೋಗ್ಯ ಸಮಸ್ಯೆ ಕಾಡುತ್ತೆ ಕಣ್ರಿ!

ಇದರ ಕುರಿತು ಹೆಚ್ಚಿನ ಮಾಹಿತಿಯನ್ನು 'ರೂಟೆಡ್ ಕೋ' ಕಂಪನಿಯ ಸ್ಥಾಪಕರಾದ ರೋಹಿತ್ ಮೋಹನ್ ಪುಗಾಲಿಯಾ ಸೈಕ್ಲಿಂಗ್‌ನಿಂದ ಹೇಗೆ ನಾವು ಉತ್ತಮವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ನಮಗೆ 5 ಪ್ರಮುಖ ಟಿಪ್ಸ್ ಗಳನ್ನು ನೀಡಿದ್ದಾರೆ. ಅವುಗಳನ್ನು ತಿಳಿಯೋಣ ಬನ್ನಿ.

 1. ನಿಮ್ಮ ಗುರಿಯನ್ನು ಸೆಟ್ ಮಾಡಿ
  ನಿಮ್ಮಷ್ಟಕ್ಕೆ ನೀವು ಮೊದಲು ಮಾಡಬೇಕಾಗಿರುವ ಕೆಲಸವೆಂದರೆ 'ನಾನು ಪ್ರತಿನಿತ್ಯ ಇಂತಿಷ್ಟು ಸಮಯ ಸೈಕ್ಲಿಂಗ್‌ ಮಾಡೇ ಮಾಡುತ್ತೆನೆ ಎಂದು ಸ್ಟ್ರಾಂಗ್ ಆಗಿ ನಿರ್ಧಾರ ಮಾಡಿ ಅದನ್ನು ತಪ್ಪದೇ ಫಾಲೋ ಮಾಡೋದು ಇಲ್ಲಿ ತುಂಬಾ ಮುಖ್ಯವಾಗುತ್ತದೆ. ದಿನಾಲು ಈ ಸೈಕ್ಲಿಂಗ್ ಮಾಡುವುದರಿದ ಅನೇಕ ದೈಹಿಕ ಮತ್ತು ಮಾನಸಿಕ ಲಾಭಗಳನ್ನು ಪಡೆಯಬಹುದು. ಇದರಿಂದ ದೇಹದಲ್ಲಿನ ಕೆಟ್ಟ ಕೊಬ್ಬಿನಾಂಶವನ್ನು ಇಲ್ಲವಾಗಿಸಿ ಹೆಚ್ಚಿನ ವೇಗದಲ್ಲಿ ತೂಕ ಕಳೆದುಕೊಂಡು ನೀವು ಉತ್ತಮ ದೇಹದ ಆರೋಗ್ಯವನ್ನು ಪಡೆದುಕೊಳ್ಳಬಹುದು.

 2. ನಿಮ್ಮ ಡಯಟ್‌ಅನ್ನು ಉತ್ತಮಗೊಳಿಸಿ
  ಸೈಕ್ಲಿಂಗ್ ಮಾಡುವವರಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ನೀವು ಹೆಚ್ಚು ನೀರನ್ನು ಕುಡಿಯುವುದರ ಜೊತೆಗೆ ಉತ್ತಮ ಪ್ರೋಟಿನ್, ಕಾರ್ಬೊಹೈಡ್ರೆಡ್‌ಗಳಿರುವ ಆಹಾರ ಸೇವಿಸುವುದು ತುಂಬಾ ಮುಖ್ಯವಾಗುತ್ತದೆ. ಆದ್ದರಿಂದ ಸಿರಿಧಾನ್ಯದ ಉಪಹಾರವಾದ ಗ್ರಾನೋಲಾವನ್ನು ಸೇವಿಸಿದರೆ ಇನ್ನು ಉತ್ತಮ. ಇದನ್ನು ಸಿರಿಧಾನ್ಯಗಳು, ಡ್ರೈಫ್ರೂಟ್ಸ್ ಮತ್ತು ಜೇನುತಪ್ಪು ಬಳಸಿ ತಯಾರಿಸಲಾಗುತ್ತದೆ. ಇದರಲ್ಲಿ ದೇಹಕ್ಕೆ ಬೇಕಾಗುವ ಹೇರಳ ವಿಟಮಿನ್‌ಗಳು ಸಿಗುತ್ತವೆ.

 3. 30 ಸೆಕೆಂಡ್ ಗಳ ಕಾಲ ಸ್ಪ್ರಿಂಟ್ ವರ್ಕ್
  ಎದ್ದ ತಕ್ಷಣ 10 ನಿಮಿಷಗಳ ಕಾಲ ನಿಮ್ಮ ದೇಹಕ್ಕೆ ಚೈತನ್ಯ ಬರಲು ಸುಲಭ ವ್ಯಾಯಾಮ ಮಾಡಿ. ನಂತರ ದೇಹದ ಎಲ್ಲ ಭಾಗಕ್ಕೂ ವ್ಯಾಯಾಮ ದೊರಕುವಂತೆ ಸುಲಭ ಮತ್ತು ಸರಳವಾಗಿರುವ ಸ್ಪ್ರಿಂಟ್ ವರ್ಕ್ ಮಾಡಿ. ಇದನ್ನು 10-12 ಸಲ ಮಾಡುವುದರಿದ ಉತ್ತಮ ದೈಹಿಕ ಲಾಭಗಳು ದೊರಕುತ್ತವೆ. ಇದರಿಂದ ಜಿಡ್ಡು ಗಟ್ಟಿದ ದೇಹ ಕ್ರಿಯಾಶೀಲವಾಗಿ ದೇಹಶಕ್ತಿಯು ಉತ್ತಮಗೊಳ್ಳುತ್ತದೆ.

 4. ಸೈಕ್ಲಿಂಗ್ ಗ್ರೂಪ್‌ಗಳಿಗೆ ಸೇರಿ
  ನಾವು ಎಷ್ಟೆ ಸೆಲ್ಪ್ ಮೋಟಿವೆಟ್ ಆಗಿ ಕೆಲಸ ಮಾಡಿದಾಗಲೂ ಕೂಡ ಕೆಲವೊಮ್ಮೆ ಯಾವುದೋ ಅನಿವಾರ್ಯತೆ ನಮ್ಮ ಗುರಿಯನ್ನು ಸೇರಲು ಬಿಡುವುದಿಲ್ಲ. ಇಂತಹ ಸಮಯದಲ್ಲಿ ಈ ಗ್ರೂಪ್‌ಗಳು ನಮಗೆ ಹೆಲ್ಪ್ ಮಾಡುತ್ತವೆ. ನಿಮ್ಮ ಸ್ನೇಹಿತರೊಡನೆ ಸೈಕ್ಲಿಂಗ್ ಹೋದರೆ ಎಷ್ಟು ಮಜಾ ಇರುತ್ತೆ ಅಲ್ವಾ. ಒಬ್ಬರೇ ಹೋಗುವುದಕ್ಕಿಂತ ಜೊತೆಗೂಡಿ ದಿನಾಲು ಹೋಗುವುದರಿಂದ ಮನಸ್ಸಿಗೆ ಖುಷಿ ಜೊತೆ ನಮ್ಮ ದೇಹಕ್ಕೂ ಉತ್ತಮ ವ್ಯಾಯಾಮ ದೊರಕುತ್ತದೆ.

 5. ಸ್ಥಿರತೆಯನ್ನು ಕಾಪಾಡಿಕೊಳ್ಳಿ
  ಸೈಕ್ಲಿಂಗ್ ಮಾಡ್ತಿನಿ ಎಂದು ಒಂದು ದಿನ ತುಂಬಾ ದೂರ ಹೋಗಿ ಬರೋದು ಅಥವಾ ಇನ್ನೊಂದು ದಿನ ಕಾಲು ನೋವು ಎಂದು ಹೋಗದೇ ಇರೋದು ಇಲ್ಲಿ ಕೆಲಸ ಮಾಡೋದಿಲ್ಲ. ನಿಮಗೆ ಉತ್ತಮ ರಿಸಲ್ಟ್ ಈ ಸೈಕ್ಲಿಂಗ್ ನಿಂದ ಬೇಕೆಂದರೇ ಇದರಲ್ಲಿ ನೀವು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು. ದಿನನಿತ್ಯ ನಾನೂ ಇಷ್ಟೆ ದೂರ ಸೈಕ್ಲಿಂಗ್ ಮಾಡಬೇಕು ಎಂದು ನಿರ್ಧರಿಸಿ ಹೊರಡಿ. ಆಗ ನೋಡಿ ನಿಮಗೆ ನಂಬಕ್ಕೆ ಸಾಧ್ಯವಿರದ ರಿಸಲ್ಟ್ ನಿಮ್ಮದಾಗುತ್ತದೆ.


ಇದನ್ನೂ ಓದಿ:  Weight Loss: ಸುಲಭವಾಗಿ ತೂಕ ಇಳಿಸಲು ಆ್ಯಪಲ್ ಸೈಡರ್ ವಿನೆಗರ್ ಬೆಸ್ಟ್; ಹೀಗೆ ಮಾಡಿ ಬೊಜ್ಜು ಕರಗಿಸಿ

ಈಗ ಗೊತ್ತು ಆಯ್ತು ಅಲ್ವಾ..ಈ ಸೈಕ್ಲಿಂಗ್‌ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ. ಮತ್ಯಾಕೆ ತಡ, ಹೊರಡಿ ನಿಮ್ಮ ಸೈಕಲ್‌ನ ಪೇಡಲ್ ತುಳಿಯಕ್ಕೆ ಸ್ಟಾರ್ಟ್ ಮಾಡಿ.
Published by:Ashwini Prabhu
First published: