Health Tips: ಪದೇ ಪದೇ ಅನಾರೋಗ್ಯಕ್ಕೆ ನೀವು ತುತ್ತಾಗುತ್ತಿದ್ರೆ ತಪ್ಪದೆ ಈ ಐದು ಕ್ರಮಗಳನ್ನ ಅನುಸರಿಸಿ

HEALTHY LIFESTYLE: ನಾವು ಆಹಾರದಿಂದ ಪಡೆಯುವ ವಿಟಮಿನ್ ಗಳು ಮತ್ತು ಮಿನರಲ್ ಗಳು ಶರೀರದ ವಿವಿಧ ಕಾರ್ಯಗಳನ್ನು ನಡೆಸಲು ನೆರವಾಗುತ್ತದೆ. ಪ್ರತಿಯೊಂದು ವಿಟಮಿನ್ ನಿರ್ದಿಷ್ಟ ಪಾತ್ರವನ್ನು ಹೊಂದಿದ್ದು, ಇದನ್ನು ಇತರ ಯಾವುದೇ ಪೋಷಕಾಂಶಗಳಿಂದ ಬದಲಾಯಿಸಲಾಗುವುದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಲವರು ಏನು ತಿಂದ್ರೂ, ಏನು ಮಾಡಿದ್ರೂ ಪದೇ ಪದೇ ಅನಾರೋಗ್ಯಕ್ಕೆ(Sick) ತುತ್ತಾಗುತ್ತಾರೆ.. ನೋಡಲು ಎಷ್ಟೇ ಸದೃಢವಾಗಿದ್ರು ಪದೇ ಪದೇ ರೋಗಗಳು(Diseases) ಭಾದಿಸುತ್ತಲೆ ಇರುತ್ತವೆ, ಅದರಲ್ಲೂ ಕೊರೋನಾ(Corona) ಸಮಯವಾಗಿರುವುದರಿಂದ ಈ ಸಮಯದಲ್ಲಿಯೇ ರೋಗನಿರೋಧಕ(Immunity) ಶಕ್ತಿ ಕಡಿಮೆಯಾಗಿ ಇನ್ನೂ ಅನೇಕ ರೋಗಗಳು ಭಾಧಿಸುತ್ತವೆ. ಅದ್ರಲ್ಲೂ, ಚಳಿಗಾಲ(Winter) ಹಾಗೂ ಕೊರೋನಾ ಕಾಲವಾಗಿರುವುದರಿಂದ ಜ್ವರ(Fever), ನೆಗೆಡಿ(Cold), ಶೀತ, ಕೆಮ್ಮು, ತಲೆನೋವು (Headache)ಸರ್ವೇ ಸಾಮಾನ್ಯವಾಗಿದೆ.. ಆದ್ರೆ ಹೀಗೆ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರೋದಕ್ಕೆ ನಿಮ್ಮ ಜೀವನ ಶೈಲಿಯೇ(Lifestyle) ಕಾರಣವಾಗಿದೆ. ಹೌದು.. ನೀವು ವ್ಯಾಯಾಮ ಮಾಡಿ, ಆಹಾರ ಸೇವನೆ ಮಾಡಿದ್ರು ನಿಮಗೆ ರೋಗಗಳು ಕಾಡಲಿದೆ. ಹೀಗಾಗಿ ನೀವು ಈ ಕೆಲಸಗಳನ್ನ ಮಾಡಿದ್ರೆ ನೀವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದನ್ನ ತಪ್ಪಿಸಬಹುದು.

  1) ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ಪ್ರಸ್ತುತ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವದು ಅಗತ್ಯ. ಹವಮಾನ ಬದಲಾವಣೆಯಾಗುತ್ತಿದ್ದಂತೆ ಅನೇಕ ರೋಗಗಳು ಕಾಡಲಿವೆ. ಹೀಗಾಗಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಸಿರು ತರಕಾರಿ, ತುಳಸಿ ಎಲೆ, ಅರಿಶಿನ ಬೆರೆಸಿದ ಹಾಲು, ಹಣ್ಣುಗಳು, ಒಣ ಹಣ್ಣುಗಳು, ಸೊಪ್ಪುಗಳ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಪಡೆದುಕೊಂಡಿರುತ್ತದೆ. ನಮಗೆ ಕೆಮ್ಮು, ಕಫ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಅಥವಾ ಮಳೆಗಾಲ ಜೊತೆಗೆ ಚಳಿಗಾಲದ ಸಮಯದಲ್ಲಿ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡಿ ಸೋಂಕುಗಳಿಗೆ ದೇಹದಲ್ಲಿ ಜಾಗ ಇಲ್ಲದಂತೆ ಮಾಡುತ್ತದೆ

  ಇದನ್ನೂ ಓದಿ: ನೀವು ಮಧುಮೇಹ ಪೀಡಿತರೆ? ಹಾಗಿದ್ರೆ ನಿಮ್ಮ ಆರೋಗ್ಯ ರಕ್ಷಣೆಗಾಗಿ ಇಲ್ಲಿವೆ ಗಿಡಮೂಲಿಕೆಗಳು

  2) ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಿ: ಕೆಲವರು ಎಷ್ಟೇ ವ್ಯಾಯಾಮ ಮಾಡಿದರೂ ಎಷ್ಟೇ ಆಹಾರಸೇವನೆಯ ಮಾಡುದ್ರು ವೈಯಕ್ತಿಕವಾಗಿ ಅನ್ನುವುದನ್ನ ಮರೆತು ಬಿಟ್ಟಿರುತ್ತಾರೆ.. ಪ್ರತಿನಿತ್ಯ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಂಡಿರುವುದಿಲ್ಲ...ಊಟ ಮಾಡುವ ಮುನ್ನ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆಯುವ ಅಭ್ಯಾಸ ಇಟ್ಟುಕೊಂಡಿರುವುದಿಲ್ಲ..  ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳದೆ ಇರುವುದು ರೋಗಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ.. ಅದರಲ್ಲೂ ಸಾರ್ವಜನಿಕ ಶೌಚಾಲಯಗಳ ಬಳಕೆ ಮಾಡುವುದು ಕೂಡ ಅಪಾಯಕ್ಕೆ ಆಹ್ವಾನ ನೀಡಿದಂತೆ..ಹೀಗಾಗಿ ಪ್ರತಿನಿತ್ಯ ಸ್ನಾನ ಮಾಡುವುದು ಊಟಕ್ಕೆ ಮೊದಲು ಕೈಗಳನ್ನು ಶುಚಿಯಾಗಿ ಇರಿಸಿಕೊಳ್ಳುವುದು,ಸಾರ್ವಜನಿಕ ಶೌಚಾಲಯ ಬಳಕೆ ಯಿಂದ ಬರುವ ಮುನ್ನ ಸಾಕಷ್ಟು ಮುಂಜಾಗ್ರತೆ ವಹಿಸುವುದು.. ಸಾರ್ವಜನಿಕ ಶೌಚಾಲಯದ ಬಳಕೆ ಬಳಿಕ ಸ್ವಚ್ಛವಾಗಿ ಕೈತೊಳೆದುಕೊಳ್ಳುವುದು ಸೇರಿ ಹಲವಾರು ಕ್ರಮಗಳನ್ನು ಅನುಸರಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

  3)ಅಗತ್ಯ ತಪಾಸಣೆ ಮಾಡಿ: ಕಾಲಕಾಲಕ್ಕೆ ತಪಾಸಣೆ ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡುತ್ತಿರಬೇಕು. 30 ವರ್ಷ ದಾಟಿದ ನಂತರ ಪುರುಷರು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಲ್ಲದೆ, ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ನಿಯಮಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ , ಹೃದ್ರೋಗ ತಜ್ಞರಿಗೆ ತೋರಿಸಿ. ವರ್ಷಕ್ಕೆ ಎರಡು ಬಾರಿ ದಂತವೈದ್ಯರನ್ನು ಭೇಟಿ ಮಾಡಿ. ಕಣ್ಣಿನ ತಪಾಸಣೆಯನ್ನೂ ನಿಯಮಿತವಾಗಿ ಮಾಡುತ್ತಿರಿ

  4)ವಿಟಮಿನ್ ಇರುವ ಆಹಾರ ಸೇವನೆ: ನಾವು ಆಹಾರದಿಂದ ಪಡೆಯುವ ವಿಟಮಿನ್ ಗಳು ಮತ್ತು ಮಿನರಲ್ ಗಳು ಶರೀರದ ವಿವಿಧ ಕಾರ್ಯಗಳನ್ನು ನಡೆಸಲು ನೆರವಾಗುತ್ತದೆ. ಪ್ರತಿಯೊಂದು ವಿಟಮಿನ್ ನಿರ್ದಿಷ್ಟ ಪಾತ್ರವನ್ನು ಹೊಂದಿದ್ದು, ಇದನ್ನು ಇತರ ಯಾವುದೇ ಪೋಷಕಾಂಶಗಳಿಂದ ಬದಲಾಯಿಸಲಾಗುವುದಿಲ್ಲ. ನಮ್ಮ ಶರೀರ ದೀರ್ಘ ಸಮಯದವರೆಗೆ ನಿರ್ದಿಷ್ಟ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯದಿದ್ದಾಗ, ಪೋಷಕಾಂಶ ಕೊರತೆ ಉಂಟಾಗುತ್ತದೆ ಹಾಗೂ ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.ಹೀಗಾಗಿ ವಿಟಮಿನ್ ಇರುವ ಆಹಾರಗಳನ್ನು ಪ್ರತಿನಿತ್ಯ ತಪ್ಪದೆ ಸೇವನೆ ಮಾಡಬೇಕು.

  ಇದನ್ನೂ ಓದಿ: ಕೋವಿಡ್ ತಗುಲಿದ ವ್ಯಕ್ತಿಗೆ ಕಾಡಲಿದೆ 81 ಬಗೆಯ ಬ್ಯಾಕ್ಟೀರಿಯಾಗಳ ಕಾಟ!

  5)ಆಹಾರ ಸೇವಿಸುವ ಸರಿಯಾದ ಮಾರ್ಗ : ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದರೆ, ಬಹಳ ಬೇಗನೆ ಅನಾರೋಗ್ಯಕ್ಕೆ ಒಳಗಾಗಬಹುದು. ರಾತ್ರಿ 8 ಗಂಟೆಯ ನಂತರ ಆಹಾರವನ್ನು ಸೇವಿಸಬೇಡಿ. ಬೆಳಿಗ್ಗೆ ಎದ್ದ 40 ನಿಮಿಷಗಳಲ್ಲಿ ಉಪಹಾರ ಮಾಡಿ ಮುಗಿಸಿ. ಒಂದೇ ಸಮಯದಲ್ಲಿ ಹೆಚ್ಚು ತಿನ್ನುವ ಬದಲು, ಸ್ವಲ್ಪ ಸ್ವಲ್ಪವೇ ಆಹಾರದಂತೆ 5 ಬಾರಿ ಸೇವಿಸಲು ಪ್ರಯತ್ನಿಸಿ. ದಿನವೂ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
  Published by:ranjumbkgowda1 ranjumbkgowda1
  First published: