Education: ಉನ್ನತ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲ ಪಡೆಯುವ ಮುನ್ನ 5 ವಿಷಯಗಳು ಗಮನದಲ್ಲಿರಲಿ

Education Loan: ಶೈಕ್ಷಣಿಕ ಸಾಲ ಪಡೆಯೋ ಮುನ್ನ ವಿವಿಧ ಬ್ಯಾಂಕುಗಳಲ್ಲಿ ಲಭ್ಯವಿರೋ ಸಾಲದ ಅವಕಾಶಗಳು, ಬಡ್ಡಿದರ ಸಾಲ ಮರುಪಾವತಿ ಅವಧಿಗಳ ಮಾಹಿತಿ ಸಂಗ್ರಹಿಸಿ ಹೋಲಿಕೆ ಮಾಡಿ ನೋಡಿ. ಬಹುತೇಕ ಬ್ಯಾಂಕುಗಳು 4ಲಕ್ಷ ರೂ. ತನಕದ ಸಾಲಕ್ಕೆ ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗ ಸಿಕ್ಕಿ ಮೂರು ವರ್ಷಗಳ ತನಕ ಅವಕಾಶ ನೀಡುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಶಿಕ್ಷಣವು(Education) ಯಶಸ್ವೀ ಜೀವನಕ್ಕೆ ಕೀಲಿಕೈ ಇದು ನಮ್ಮ ಭವಿಷ್ಯವನ್ನು(Future) ನಿರ್ಧರಿಸುತ್ತದೆ" ಅಂತಾರೆ. ಆದರೆ ಅತ್ಯಂತ ದುಬಾರಿಯಾಗಿರುವ(Costly) ಇಂತಹ ಶಿಕ್ಷಣವು ವಿದ್ಯಾಕಾಂಕ್ಷಿಗಳಿಗೆ ಕೈಗೆಟುಕುವುದು ಬಹಳ ಕಷ್ಟವಾಗಿದೆ. ಅದನ್ನು ಎಟುಕಿಸಿಕೊಳ್ಳುಲು ಶಿಕ್ಷಣ ಸಾಲವು(Education Loan) ಬಹು ಸಹಕಾರಿಯಾಗಿದೆ. ಆದರೆ ಸಾಲ ತೆಗೆದುಕೊಳ್ಳುವುದರಿಂದ ಹಿಡಿದು ಮರುಪಾವತಿ ಮಾಡುವ ತನಕ ಎಲ್ಲೂ ಏನೂ ಅಡ್ಡಿ ಆತಂಕಗಳು ಬರದಂತೆ ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಇಂದಿನ ಹೆಜ್ಜೆ ಸರಿಯಾಗಿಟ್ಟರೆ ನಾಳೆಯು ಸುಗಮವಾಗಿರುತ್ತದೆ. ಇನ್ನು ಭಾರತದಲ್ಲಿ(India) ಅಧ್ಯಯನಕ್ಕೆ ಹಲವಾರು ಆಯ್ಕೆಗಳಿವೆ. ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಅಭಿವೃದ್ಧಿ(Development) ಹೊಂದಿದ ಶೈಕ್ಷಣಿಕ ಕೇಂದ್ರಗಳಲ್ಲಿ ಭಾರತವೂ ಪ್ರಮುಖ ಸ್ಥಾನ ಹೊಂದಿದೆ. ಒಂದು ಅಧ್ಯಯನದ ಪ್ರಕಾರ ಭಾರತದ ಉನ್ನತ ಶಿಕ್ಷಣದ ಸರಾಸರಿ ವೆಚ್ಚವು ವರ್ಷದಿಂದ ವರ್ಷಕ್ಕೆ ಶೇಕಡಾ 15ರಷ್ಟು ಹೆಚ್ಚುತ್ತಿದೆ. ಈ ವೆಚ್ಚವನ್ನು ಸರಿದೂಗಿಸಲು ಪಾಲಕರು ಮ್ಯೂಚುವಲ್ ಫಂಡ್, ಆವರ್ತಕ ನಿಧಿಗಳು, ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಯೋಜನೆಗಳು ಹಾಗೂ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆರ್ಥಿಕವಾಗಿ ಸದೃಢರಾಗಿಲ್ಲದ ಕಾರಣ, ಅವರ ಉನ್ನತ ಶಿಕ್ಷಣದ ಕನಸು ಸಾಕಾರಗೊಳ್ಳುತ್ತಿಲ್ಲ.

  ಸರಿಯಾಗಿ ದೇಶದಲ್ಲಿ ಅಥವಾ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಕನಸು ಬ್ಯಾಂಕುಗಳು ನೀಡುತ್ತಿರುವ ಶೈಕ್ಷಣಿಕ ಸಾಲದಿಂದ ನನಸಾಗುತ್ತಿದೆ.ಬ್ಯಾಂಕುಗಳು ನೀಡುವ ಈ ಸಾಲುಗಳು ಅನೇಕ ವಿದ್ಯಾರ್ಥಿಗಳು ದೇಶದ ಉನ್ನತ ವಿಶ್ವವಿದ್ಯಾಲಯ ಮಾತ್ರವಲ್ಲದೆ ವಿದೇಶದಲ್ಲಿಯೂ ಓದಲು ಸಹಕಾರಿಯಾಗಿದೆ. ಹೀಗಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಬ್ಯಾಂಕುಗಳಿಂದ ಸಾಲ ಪಡೆಯುವ ಮುನ್ನ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಗಮನದಲ್ಲಿ ಇಟ್ಟುಕೊಂಡಿರಬೇಕು.. ಹೀಗಾಗಿ ನೀವು ಬ್ಯಾಂಕ್ ನಿಂದ ಸಾಲ ಪಡೆಯುವ ಮುನ್ನ ಈ ವಿಷಯಗಳ ಬಗ್ಗೆ ಜಾಗೃತರಾಗಿರಿ

  ವಿದೇಶದಲ್ಲಿ ಅಭ್ಯಾಸ ಮಾಡಲು ಹೆಚ್ಚಿದ ವಿದ್ಯಾರ್ಥಿಗಳ ಆಸಕ್ತಿ

  ಭಾರತದಲ್ಲಿ ಅದೆಷ್ಟೇ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳು ಇದ್ದರು ಸಹ ಭಾರತದ ವಿದ್ಯಾರ್ಥಿಗಳು ಆಸಕ್ತಿ ವಿದೇಶದಲ್ಲಿ ಅಧ್ಯಯನ ಮಾಡಬೇಕು ಎಂಬುದು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 2022 ರಲ್ಲಿ ವಿದೇಶಿ ವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಅರ್ಜಿ ಸಲ್ಲಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಗಾಗಿ ಬ್ಯಾಂಕ್ಗಳಿಂದ ಎಜುಕೇಶನ್ ಲೋನ್ ಪಡೆಯಲು ವಿದ್ಯಾರ್ಥಿಗಳು ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ.
  2019ರಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 7.70ಲಕ್ಷ ತಲುಪಿದೆ. ಕಳೆದ ಮೂರು ವರ್ಷಗಳಲ್ಲಿ ಇದು ದೇಶೀಯ ವಿದ್ಯಾರ್ಥಿಗಳ ಪ್ರಗತಿ ಪ್ರಮಾಣಕ್ಕಿಂತ ಆರು ಪಟ್ಟು ಹೆಚ್ಚು. 2024ರಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳೋ ನಿರೀಕ್ಷೆಯಿದ್ದು, 18 ಲಕ್ಷ ತಲುಪೋ ಸಾಧ್ಯತೆಯಿದೆ. ಇನ್ನು ವಿದೇಶಿ ವಿಶ್ವವಿದ್ಯಾಲಯಗಳು ಕೂಡ ವಿದ್ಯಾರ್ಥಿವೇತನ ನೀಡಿಕೆ ನಿಯಮಗಳಲ್ಲಿ ಸಡಿಲಿಕೆ ಮಾಡಿವೆ.

  1) ಸಾಲ ಪಡೆಯಲು ಅರ್ಹತೆ: ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳು ಸಾಲ ನೀಡಲು ನಿಯಮಗಳು ಇರುತ್ತವೆ. ಗಾಗಿ ಯಾವುದೇ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅರ್ಹತೆಗಳು ಸೇರಿದಂತೆ ವಿವಿಧ ವಿವರಗಳ ಬಗ್ಗೆ ಸಾಲಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಸಂಪೂರ್ಣ ಮಾಹಿತಿ ಹೊಂದುವುದು ಅಗತ್ಯ. ಇನ್ನು ಒಬ್ಬ ವಿದ್ಯಾರ್ಥಿ ಬ್ಯಾಂಕಿನಿಂದ ಶೈಕ್ಷಣಿಕ ಸಾಲ ಪಡೆಯಬೇಕು ಅಂದರೆ ಭಾರತೀಯ ಪ್ರಜೆಯಾಗಿರಬೇಕು. ಅಲ್ಲದೆ ಅಂಗೀಕೃತ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು. ಅಲ್ಲದೇ 4ಲಕ್ಷದ ತನಕದ ವಿದ್ಯಾರ್ಥಿ ಯಾವುದೇ ಆಧಾರ ನೀಡಬೇಕಾಗಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಸಾಲಕ್ಕೆ ವಿದ್ಯಾರ್ಥಿ ಸಲ್ಲಿಕೆ ಮಾಡಬೇಕು ಅಂದರೆ ಅರ್ಜಿದಾರರ ಯಾವುದಾದರೂ ಆಧಾರದ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು.

  ಇದನ್ನೂ ಓದಿ: ರಾಜ್ಯ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಿಎಫ್ಐ ವಿರೋಧ

  2)ಬಡ್ಡಿದರ ಹಾಗೂ ಪಾವತಿ ಅವಧಿ: ಶೈಕ್ಷಣಿಕ ಸಾಲ ಪಡೆಯೋ ಮುನ್ನ ವಿವಿಧ ಬ್ಯಾಂಕುಗಳಲ್ಲಿ ಲಭ್ಯವಿರೋ ಸಾಲದ ಅವಕಾಶಗಳು, ಬಡ್ಡಿದರ ಸಾಲ ಮರುಪಾವತಿ ಅವಧಿಗಳ ಮಾಹಿತಿ ಸಂಗ್ರಹಿಸಿ ಹೋಲಿಕೆ ಮಾಡಿ ನೋಡಿ. ಬಹುತೇಕ ಬ್ಯಾಂಕುಗಳು 4ಲಕ್ಷ ರೂ. ತನಕದ ಸಾಲಕ್ಕೆ ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗ ಸಿಕ್ಕಿ ಮೂರು ವರ್ಷಗಳ ತನಕ ಅವಕಾಶ ನೀಡುತ್ತವೆ. ಇದಕ್ಕೆ ಶೇ. 10-15 ಬಡ್ಡಿದರ ವಿಧಿಸಲಾಗುತ್ತದೆ. ಜಾಸ್ತಿ ಮೊತ್ತದ ಶೈಕ್ಷಣಿಕ ಸಾಲ ಹೊಂದಿರೋರಿಗೆ ಬ್ಯಾಂಕುಗಳು ಸುದೀರ್ಘ ಮರುಪಾವತಿ ಅವಧಿಗೆ ಕಡಿಮೆ ಬಡ್ಡಿ ವಿಧಿಸುತ್ತವೆ.

  3) ಸಾಲದ ಪರಿಶೀಲನೆ: ಇನ್ನು ಯಾವುದಾದರೂ ವಿದ್ಯಾರ್ಥಿಯು ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆಯಲು ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದಾನೆ ಎಂದರೆ ಬ್ಯಾಂಕುಗಳು ವಿದ್ಯಾರ್ಥಿಗೆ ಸಾಲ ನೀಡೋ ಮುನ್ನ, ಈಗಾಗಲೇ ಬೇರೆ ಸಾಲ ಇದೆಯಾ ಎಂಬುದನ್ನು ಪರಿಶೀಲನೆ ನಡೆಸುತ್ತದೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಾಲ ನೀಡಲಾಗುತ್ತದೆ.

  4)ಇಎಂಐ ಹೊರೆ: ಆರ್ಥಿಕ ತಜ್ಞರು ವಿದ್ಯಾರ್ಥಿಗಳಿಗೆ ದೀರ್ಘಾವಧಿ ಸಾಲ ಪಡೆಯುವಂತೆ ಸಲಹೆ ನೀಡುತ್ತಾರೆ. ಇದ್ರಿಂದ ಮುಂದೆ ಇಎಂಐ ಮೊತ್ತ ಕಡಿಮೆಯಾಗುತ್ತದೆ. ಉದ್ಯೋಗ ಸಿಕ್ಕ ಪ್ರಾರಂಭದಲ್ಲಿ ವೇತನ ಕಡಿಮೆಯಿರೋ ಕಾರಣ ಇಎಂಐ ( ಮೊತ್ತ ಜಾಸ್ತಿಯಿದ್ರೆ ಕಷ್ಟವಾಗುತ್ತದೆ

  ಇದನ್ನೂ ಓದಿ: ಶಾಲೆಗಳಿಂದ ಭವಿಷ್ಯದ ಒಲಿಂಪಿಕ್ ಸ್ಟಾರ್​ಗಳನ್ನ ಹೆಕ್ಕಿ ತೆಗೆಯಲು ಸರ್ಕಾರ ಯೋಜನೆ

  5)ವಿಶೇಷ ಯೋಜನೆಗಳು: ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳನ್ನು ಹೊಂದಿವೆ. ಈ ಯೋಜನೆಗಳಡಿಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಅಥವಾ ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುತ್ತದೆ.
  Published by:ranjumbkgowda1 ranjumbkgowda1
  First published: