Health Tips| ಮಹಿಳೆಯರೇ.. ನೀವು ಈ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ, ಏನು ಸೇವಿಸಬೇಕು?

ಇತ್ತೀಚೆಗೆ ದೇಶಾದ್ಯಂತ ನಡೆದ ಒಂದು ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 20 ರಿಂದ 29 ವರ್ಷ ವಯಸ್ಸಿನಲ್ಲಿರುವಂತಹ ಸುಮಾರು 16 ಪ್ರತಿಶತ ಮಹಿಳೆಯರು ಈ ಪಿಸಿಒಎಸ್ ಮತ್ತು ಪಿಸಿಒಡಿ ಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಆಧುನಿಕ ಜೀವನದಲ್ಲಿರುವ ಮಾನಸಿಕ ಒತ್ತಡದಿಂದ ಮಹಿಳೆಯರನ್ನು ಬಹಳಷ್ಟು ಕಾಯಿಲೆಗಳು ಬೆಂಬಿಡದೆ ಕಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ಈಗಂತೂ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (Polycystic Ovary Syndrome) ಮತ್ತು ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್ (ಪಿಸಿಒಡಿ) ಎರಡು ಹಾರ್ಮೋನ್ ಅಸಮತೋಲನ ಅಸ್ವಸ್ಥತೆಯಂತೂ ಹೆಚ್ಚಿನ ಮಹಿಳೆಯರನ್ನು (Women's) ಕಾಡುತ್ತಿದೆ. ಇತ್ತೀಚೆಗೆ ದೇಶಾದ್ಯಂತ ನಡೆದ ಒಂದು ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 20 ರಿಂದ 29 ವರ್ಷ ವಯಸ್ಸಿನಲ್ಲಿರುವಂತಹ ಸುಮಾರು 16 ಪ್ರತಿಶತ ಮಹಿಳೆಯರು ಈ ಪಿಸಿಒಎಸ್ ಮತ್ತು ಪಿಸಿಒಡಿ ಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ

  ಈ ಎರಡು ಅಸ್ವಸ್ಥತೆಯು ಸಾಮಾನ್ಯವಾಗಿ ಅನಿಯಮಿತವಾದ ಋತುಚಕ್ರದಿಂದ ಅಥವಾ ಯಾವುದೇ ಋತುಸ್ರಾವದಿಂದ ಬರುತ್ತವೆ ಎಂದು ಹೇಳಲಾಗುತ್ತದೆ. ಈ ಸ್ಥಿತಿಯಲ್ಲಿ ಮಹಿಳೆಯರು ಸಾಮಾನ್ಯವಾಗಿ ತಮ್ಮ ಅಂಡಾಶಯದಲ್ಲಿ ಅನೇಕ ಸಿಸ್ಟ್ ಗಳನ್ನು ಹೊಂದಿರುತ್ತಾರೆ, ಇದು ಆಂಡ್ರೋಜೆನ್ ಎನ್ನುವಂತಹ ಹಾರ್ಮೋನುಗಳ ಅತಿಯಾದ ಉತ್ಪಾದನೆಯಿಂದ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

  ಅನೇಕ ಮಹಿಳೆಯರು ಅಧಿಕ ತೂಕವನ್ನು ಹೊಂದಿದ್ದು ಮತ್ತು ಇದಕ್ಕೆ ಸಂಬಂಧಿತ ತೊಡಕುಗಳು ಅವರನ್ನು ಕಾಡಲು ಪ್ರಾರಂಭಿಸುತ್ತವೆ. ಆದರೆ ನಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಆಹಾರ ಕ್ರಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಈ ಹಾರ್ಮೋನಿನ ಅಸ್ವಸ್ಥತೆಯನ್ನು ನಿಭಾಯಿಸುವಲ್ಲಿ ಮತ್ತು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕ ವಾಗಬಹುದು.

  ಈ ರೋಗ ಲಕ್ಷಣಗಳನ್ನು ನಿಯಂತ್ರಿಸದಿದ್ದರೆ, ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಸಹ ಹೆಚ್ಚಾಗುತ್ತದೆ, ಇದು ಮಹಿಳೆಯ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ತೊಡಕುಗಳನ್ನು ಉಂಟುಮಾಡ ಬಹುದು.ಪಿಸಿಒಎಸ್ ಅಥವಾ ಪಿಸಿಒಡಿ ಹೊಂದಿರುವ ಅನೇಕ ಮಹಿಳೆಯರು ತಮ್ಮ ರೋಗ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಆಹಾರ ಮತ್ತು ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳುವುದರ ಮೂಲಕ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ.

  ಹಸಿರು ಎಲೆ ತರಕಾರಿ ಬಳಸಿ:

  ಮಹಿಳೆಯರು ತಮ್ಮ ಆಹಾರದಲ್ಲಿ ಆರೋಗ್ಯಕರ ಪೌಷ್ಟಿಕ ಹಸಿರು ಎಲೆ ತರಕಾರಿಗಳನ್ನು ಕನಿಷ್ಠವಾಗಿ ಒಂದು ಅಥವಾ ಎರಡು ಪದಾರ್ಥಗಳನ್ನು ಮಾಡಿಕೊಂಡು ಸೇವಿಸಬೇಕು. ಇವು ಪೌಷ್ಟಿಕವಾಗಿರುವುದಲ್ಲದೆ, ಇವುಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿರುತ್ತದೆ. ಅಂಡೋತ್ಪತ್ತಿ, ಇನ್ಸುಲಿನ್ ನಿಯಂತ್ರಣ ಮತ್ತು ದೇಹದಲ್ಲಿ ರಕ್ತದ ಹರಿವನ್ನು ನಿಯಮಿತಗೊಳಿಸುವ ಮೂಲಕ ಫಲವತ್ತತೆಯನ್ನು ಬೆಂಬಲಿಸುವ ಪ್ರಮುಖ ಪೋಷಕಾಂಶ ಈ ಹಸಿರು ಎಲೆ ತರಕಾರಿಯಲ್ಲಿ ಇರುತ್ತದೆ.

  ಒಮೆಗಾ-3:

  ಇದು ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸಲು ಸಹಾಯ ಮಾಡುವ ಒಂದು ಪ್ರಮುಖ ಪೋಷಕಾಂಶವಾಗಿದೆ. ಸಾಲ್ಮನ್ ಮತ್ತು ಸಾರ್ಡಿನ್ ನಂತಹ ಕೆಲವು ಮೀನುಗಳು ತುಂಬಾನೇ ಒಮೆಗಾ-3 ಅನ್ನು ಒಳಗೊಂಡಿರುತ್ತವೆ. ಒಮೆಗಾ-3 ಒತ್ತಡದ ಮಟ್ಟವನ್ನು ನಿಯಂತ್ರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಸಸ್ಯಾಹಾರಿಗಳು ಆಗಿದ್ದರೆ ಮೊಸರು ಅಥವಾ ಅಗಸೆ ಬೀಜಗಳನ್ನು ಸೇವಿಸಬಹುದು.

  ದ್ವಿದಳ ಧಾನ್ಯಗಳು:

  ಕಡಲೆ, ಬೀನ್ಸ್, ಬೇಳೆಕಾಳುಗಳು, ಬಟಾಣಿ ಮತ್ತು ಸೋಯಾಬೀನ್ ಗಳು ಶೂನ್ಯ ಕೊಲೆಸ್ಟ್ರಾಲ್ ಹೊಂದಿರುವ ಫೈಬರ್ ಮತ್ತು ಪ್ರೋಟೀನ್ ನಿಂದ ತುಂಬಿರುತ್ತವೆ. ದ್ವಿದಳ ಧಾನ್ಯಗಳು ಮಧುಮೇಹ ನಿರ್ವಹಣೆಗೆ ಪ್ರಯೋಜನಕಾರಿ ಮತ್ತು ಸೇವನೆಯ ನಂತರ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

  ಬೆರ್ರಿಗಳು:

  ಪಿಸಿಒಎಸ್ ಹೊಂದಿರುವ ಮಹಿಳೆಯರಿಗೆ ಬೆರ್ರಿಗಳು ಅತ್ಯಂತ ಪ್ರಯೋಜನಕಾರಿಯಾಗಿವೆ, ಏಕೆಂದರೆ ಅವು ಉತ್ಕರ್ಷಣ ನಿರೋಧಕಗಳಿಂದ ಕೂಡಿರುತ್ತವೆ, ಇದು ಉತ್ಕರ್ಷಣಶೀಲ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆರ್ರಿಗಳಲ್ಲಿ ಪಾಲಿಫಿನಾಲ್ ಗಳಿವೆ, ಇದು ತೂಕ, ಮಧುಮೇಹ ಮತ್ತು ಅಜೀರ್ಣದ ಸಮಸ್ಯೆಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ. ಹೆಚ್ಚು ಪ್ರಯೋಜನ ಪಡೆಯಲು ಸ್ಟ್ರಾಬೆರಿ, ಬ್ಲೂಬೆರಿಗಳ ಮಿಶ್ರಣವನ್ನು ಮೊಸರಿನೊಂದಿಗೆ ಸೇವಿಸಬಹುದು.

  ಇದನ್ನೂ ಓದಿ: Health Tips: 40ರ ವಯಸ್ಸಿನ ಮಹಿಳೆಯರು ಅಗತ್ಯವಾಗಿ ಸೇವಿಸಬೇಕಾದ ಪೌಷ್ಟಿಕಾಂಶಗಳು

  ಓಟ್ಸ್:

  ಓಟ್ಸ್ ಸೇವನೆಯಿಂದ ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಓಟ್ಸ್ ನಲ್ಲಿ ವಿಟಮಿನ್ ಬಿ ಕೂಡ ಇದ್ದು, ಇದು ಪ್ರೊಜೆಸ್ಟ್ರಾನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  Published by:MAshok Kumar
  First published: