ಜೋಕೆ..! ಈ ಐದು ಲಕ್ಷಣಗಳು ಕಾಣಿಸಿದ್ರೆ ನಿಮ್ಮ ಲಿವರ್​ಗೆ ಹಾನಿಯಾಗಿದೆ ಎಂದರ್ಥ..!

ನೀವು ಪ್ರತಿಬಾರಿಯು ಗೊಂದಲಕ್ಕೀಡಾಗುತ್ತಿದ್ದರೆ ಅದು ಕೂಡ ಯಕೃತ್​ಗೆ ಹಾನಿಯಾಗಿರುವುದರ ಲಕ್ಷಣ. ರೋಗಪೀಡಿತ ಲಿವರ್​,​ ರಕ್ತದಲ್ಲಿ ಸಾರಾ ಕಾಪೆರ್​ ಅಂಶವನ್ನು ಉತ್ಪಿತಿ ಮಾಡುತ್ತದೆ.

zahir | news18
Updated:January 25, 2019, 2:45 PM IST
ಜೋಕೆ..! ಈ ಐದು ಲಕ್ಷಣಗಳು ಕಾಣಿಸಿದ್ರೆ ನಿಮ್ಮ ಲಿವರ್​ಗೆ ಹಾನಿಯಾಗಿದೆ ಎಂದರ್ಥ..!
ಸಾಂದರ್ಭಿಕ ಚಿತ್ರ
  • News18
  • Last Updated: January 25, 2019, 2:45 PM IST
  • Share this:
ಮನುಷ್ಯನು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಾಂಗಳು ಸರಿಯಾಗಿ ಕಾರ್ಯಾಚರಿಸಬೇಕು. ಇಂತಹ ಅಂಗಗಳಲ್ಲಿ ಯಕೃತ್ (ಲಿವರ್) ಕೂಡ ಒಂದು. ಈ ಅಂಗಾಂಗ ದೇಹದ ಚಯಾಪಚಯ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು ಸಂಪೂರ್ಣ ಆರೋಗ್ಯವಾಗಿರಲು ಯಕೃತ್ ಆರೋಗ್ಯಕರವಾಗಿರಬೇಕು. ಇಲ್ಲದಿದ್ದಲ್ಲಿ ಮಾರಣಾಂತಿಕ ತೊಂದರೆ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ.

ಲಿವರ್​ ಹಾರ್ಮೋನುಗಳ ಉತ್ಪಾದನೆ ಮತ್ತು ಆಹಾರದಲ್ಲಿನ ವಿಷದ ಅಂಶವನ್ನು ತೆಗೆದುಹಾಕುವ ಕಾರ್ಯ ಮಾಡುತ್ತದೆ. ಹೀಗಾಗಿಯೇ ಯಕೃತ್ ಅನ್ನು ದೇಹದ ಅತಿ ಮುಖ್ಯ ಅಂಗಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ಆದರೆ ನಿಮ್ಮ ದೇಹದಲ್ಲಿ ಕೆಲ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಏಕೆಂದರೆ ಲಿವರ್​ಗೆ ಹಾನಿಯುಂಟಾಗಿದ್ದರೆ ಈ ಲಕ್ಷಣಗಳು ಕಾಣಿಸುತ್ತದೆ. ಅಂತಹ ಐದು ಲಕ್ಷಣಗಳನ್ನು ಇಲ್ಲಿ ತಿಳಿಸಲಾಗಿದೆ.

ಹೊಟ್ಟೆ ನೋವು: ನಿಮ್ಮಲ್ಲಿ ನಿರಂತರ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ. ಏಕೆಂದರೆ ಲಿವರ್​ ಸಮಸ್ಯೆಗಳು ಕಾಣಿಸುತ್ತಿದ್ದರೆ ಹೊಟ್ಟೆ ನೋವು ಉಂಟಾಗುತ್ತದೆ. ಅದೇ ವೇಳೆ ಇಂತಹ ನೋವನ್ನು ನಿರ್ಲಕ್ಷಿಸುವುದು ಕೂಡ ಅಪಾಯಕಾರಿ.

ಕೀಲು ನೋವು: ನಿಮಲ್ಲಿ ಕೀಲು ನೋವು, ಶೀತ ಮತ್ತು ಕೆಮ್ಮು ಹಾಗೂ ಹಸಿವಿನ ಸಮಸ್ಯೆಗಳು ಕಂಡು ಬರುತ್ತಿದ್ದರೆ ಅದು ಕೂಡ ಲಿವರ್​ ತೊಂದರೆಗೀಡಾಗಿರುವುದರ ಲಕ್ಷಣ. ಈ ರೀತಿಯ ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಸದಾ ಗೊಂದಲ: ನೀವು ಪ್ರತಿಬಾರಿಯು ಗೊಂದಲಕ್ಕೀಡಾಗುತ್ತಿದ್ದರೆ ಅದು ಕೂಡ ಯಕೃತ್​ಗೆ ಹಾನಿಯಾಗಿರುವುದರ ಲಕ್ಷಣ. ರೋಗಪೀಡಿತ ಲಿವರ್​,​ ರಕ್ತದಲ್ಲಿ ಸಾರಾ ಕಾಪೆರ್​ ಅಂಶವನ್ನು ಉತ್ಪಿತಿ ಮಾಡುತ್ತದೆ. ಇದರಿಂದ ನಿಮ್ಮ ಮೆದುಳಿನ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಗೊಂದಲಕ್ಕೀಡಾಗುತ್ತೀರಿ. ಈ ರೀತಿಯ ಸಮಸ್ಯೆಗಳಿದ್ದರೂ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ.

ಚರ್ಮದ ಮೇಲೆ ರಕ್ತದ ಗುರುತು: ಪಿತ್ತಜನಕಾಂಗ ಅಥವಾ ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಹೀಗೆ ಹೆಪ್ಪುಗಟ್ಟುವಂತಹ ರಕ್ತದ ಗುರುತುಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಈ ರೀತಿಯಾಗಿ ನಿಮ್ಮ ತ್ವಚೆಯ ಮೇಲೆ ಕಲೆಗಳು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಯಕೃತ್​ ಅನ್ನು ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: ಮಹೀಂದ್ರಾ ಕಂಪೆನಿಯ ಹೊಸ ಕಾರಿಗೆ ಹೆಸರು ನೀಡಿದ್ರೆ 2 ಕಾರುಗಳು ಉಚಿತ..!ಹಳದಿ ಕಣ್ಣು ಮತ್ತು ಚರ್ಮ: ಯಕೃತ್​ನಲ್ಲಿ ಸಮಸ್ಯೆಗಳಿದ್ದರೆ ವ್ಯಕ್ತಿಯ ಕಣ್ಣುಗಳು ಮತ್ತು ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಸಮಸ್ಯೆಯು ಹೆಚ್ಚಾದಂತೆ ಕಾಮಾಲೆ ರೋಗಕ್ಕೆ ಈಡಾಗುತ್ತೀರಿ. ಹೀಗಾಗಿ ಚರ್ಮ ಮತ್ತು ಕಣ್ಣುಗಳ ಬಣ್ಣಗಳಲ್ಲಿ ಬದಲಾವಣೆ ಕಾಣಿಸುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

First published:January 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading