Father Role: ಮಕ್ಕಳ ಜೀವನದಲ್ಲಿ ತಂದೆಗೆ ವಿಶೇಷ ಸ್ಥಾನ ಸಿಗೋದು ಇದೇ ಕಾರಣಕ್ಕೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕುಟುಂಬದ ಯಜಮಾನನಾಗಿ ಸಂಪೂರ್ಣ ಕುಟುಂಬದ ಹೊಣೆ ಹೊರುವ ಅಪ್ಪ ಮಕ್ಕಳಿಗೆ ನೈತಿಕತೆ, ಸದ್ಗುಣಗಳನ್ನು ಕಲಿಸಬೇಕು ಎಂದು ಬಯಸುತ್ತಾನೆ. ತಂದೆ ತಮ್ಮ ಮಕ್ಕಳಿಗೆ ಸಾಮಾಜಿಕ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು, ಜನರೊಂದಿಗೆ ಹೇಗೆ ಮಾತನಾಡಬೇಕು ಮತ್ತು ಸಭ್ಯ, ಜವಾಬ್ದಾರಿ ಮತ್ತು ಉತ್ತಮ ನಡತೆಯ ನಾಗರಿಕನಾಗುವುದು ಹೇಗೆ ಎಂಬುದನ್ನು ಕಲಿಸುತ್ತಾರೆ

ಮುಂದೆ ಓದಿ ...
  • Share this:

ಮಕ್ಕಳು ಹುಟ್ಟಿ ಅವರು ದೊಡ್ಡವರಾಗುವವರೆಗೂ ಮಕ್ಕಳ ಒಳಿತಿಗಾಗಿ, ಅವರ ಏಳಿಗೆಗಾಗಿ ಜೀವ ತೇಯುವ ಎರಡು ಜೀವಗಳೆಂದರೆ ಅದು ಅಪ್ಪ-ಅಮ್ಮ. ಅಮ್ಮ ಮಮತೆಯ ಬಂಡಿಯಾದರೆ ಅಪ್ಪ (Father) ಜವಾಬ್ದಾರಿ, ಶಿಸ್ತುಗಳನ್ನು ಕಲಿಸುವ ಶಿಕ್ಷಕ (Teacer). ಅಮ್ಮನ ತ್ಯಾಗ, ಪರಿಶ್ರಮ ಇವುಗಳ ಬಗ್ಗೆ ಎಲ್ಲರೂ ಯಾವಾಗಲೂ ಮಾತಾಡುತ್ತಾರೆ, ಇದರ ಮಧ್ಯೆ ಅಪ್ಪನ ತ್ಯಾಗ ಹೆಚ್ಚಾಗಿ ಕಾಣೋದೇ ಇಲ್ಲಾ. ಅಪ್ಪ ಪ್ರತಿಯೊಬ್ಬ ಮಕ್ಕಳ ಬದುಕಲ್ಲಿ ಮೊದಲ ಹೀರೋ (Hero). ತಾನು ನೋಡದ ಪ್ರಪಂಚವನ್ನು ಹೆಗಲ ಮೇಲೆ ಕೂರಿಸಿ ಮಕ್ಕಳಿಗೆ ತೋರಿಸುವ ಹೃದಯವಂತ ಆತ. ಏನೇ ಕಷ್ಟವಿದ್ದರೂ ತಾನೋಬ್ಬನೇ ಅನುಭವಿಸಿ ಮಕ್ಕಳು ಖುಷಿಯಾಗಿರಬೇಕು ಎಂದು ಹಂಬಲಿಸುವ ಜೀವವದು. ಪ್ರೀತಿಯ (Love) ನಡುವೆ ಗಟ್ಟಿಯಾಗಿ ಗದರುವ ಅಪ್ಪ ಮಕ್ಕಳಿಗೆ ಅವರ ಜೀವನದುದ್ದಕ್ಕೂ ಕಲಿಸುವ ಪಾಠಗಳು (Lesson) ಅಷ್ಟಿಷ್ಟಲ್ಲ.


ಸಂಕ್ಷಿಪ್ತವಾಗಿ ಹೇಳುವುದಾದರೆ, ತಮ್ಮ ತಂದೆಯ ನೆರಳಿನಲ್ಲಿ ಬೆಳೆಯುವ ಮಕ್ಕಳು, ಜೀವನದಲ್ಲಿ ಉತ್ತಮ ಭವಿಷ್ಯವನ್ನು ಹೊಂದಿರುತ್ತಾರೆ. ಯಾವ ಕಾರಣಕ್ಕೆ ತಂದೆ ಮಕ್ಕಳ ಜೀವನದಲ್ಲಿ ಪ್ರಮುಖನಾಗುತ್ತಾನೆ ಎಂಬುದಕ್ಕೆ ಸಾವಿರಾರು ಕಾರಣಗಳಿವೆ. ಅದರಲ್ಲಿ 5 ಕಾರಣಗಳು ಇಲ್ಲಿವೆ ನೋಡಿ.


ಮಕ್ಕಳ ಜೀವನದಲ್ಲಿ ತಂದೆಯು ಪ್ರಮುಖ ಪಾತ್ರ ವಹಿಸಲು 5 ಕಾರಣಗಳು
ಉತ್ತಮ ನಡವಳಿಕೆ
ತಂದೆ ಮಕ್ಕಳಿಗೆ ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಾನೆ ಮತ್ತು ಅವರ ಮಕ್ಕಳಿಗೆ ಅತ್ಯುತ್ತಮ ಪುರುಷ ಮಾದರಿಯಾಗಿ ನಿಲ್ಲುತ್ತಾನೆ. ಮಕ್ಕಳಿಗೆ ಮೊದಲ ಹೀರೋನೆ ಅವರಪ್ಪನಾಗಿರುತ್ತಾರೆ. ತಂದೆಯ ಉತ್ತಮ ನಡವಳಿಕೆ, ಆದರ್ಶ ಮಾರ್ಗಗಳ ಅಡಿಯಲ್ಲಿ ಬೆಳೆಯುವ ಮಕ್ಕಳು ಹೆಚ್ಚಾಗಿ ದಯೆ, ಪರಾನುಭೂತಿ, ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಇಂತಹ ಜೀವನದ ಮೌಲ್ಯಗಳನ್ನು ಅಪ್ಪ ತನ್ನ ಮಕ್ಕಳಿಗೆ ಧಾರೆ ಎರೆಯುತ್ತಾನೆ.


ಇದನ್ನೂ ಓದಿ: Kheer: ಹೋಳಿ ಹಬ್ಬಕ್ಕೆ ಈ ರೀತಿ ಪಾಯಸ ಮಾಡಿ, ಮುಂದಿನ ವರ್ಷದವರೆಗೂ ಇದರ ರುಚಿ ನಿಮ್ಮ ನೆನಪಿನಲ್ಲಿರುತ್ತೆ


ಮಕ್ಕಳನ್ನು ನಿರ್ಭೀತರನ್ನಾಗಿ ಮಾಡುವುದು
ತಾಯಿಯು ಮಗುವಿನ ಸುರಕ್ಷತೆ ಮತ್ತು ಉತ್ತಮ ಪಾಲನೆಯ ಮೇಲೆ ಕೇಂದ್ರೀಕರಿಸಿದರೆ, ತಂದೆ ಎಂತಹ ಸವಾಲುಗಳನ್ನು ಎದುರಿಸಲು ಮತ್ತು ಸ್ವತಂತ್ರವಾಗಿ ಯೋಚಿಸಲು ಅವರನ್ನು ಪ್ರೇರೇಪಿಸುತ್ತಾನೆ. ತಂದೆ ಜೊತೆಗಿದ್ದರೆ ನೂರಾನೆ ಬಲ ಮಕ್ಕಳಿಗೆ. ಆತನ ಬೆಂಬಲವು ನಿಮ್ಮನ್ನು ನಿರ್ಭೀತರನ್ನಾಗಿ ಮಾಡುತ್ತದೆ. ತಂದೆ ಇಲ್ಲದೆ ಬೆಳೆದ ಮಕ್ಕಳು ಕೆಟ್ಟ ದಾರಿ ಹಿಡಿಯುವ ಅಪಾಯವು ಮೂರು ಪಟ್ಟು ಹೆಚ್ಚು ಎಂದು ವರದಿಗಳು ಸೂಚಿಸುತ್ತವೆ. ಹೀಗಾಗಿ ತಂದೆ ಮಕ್ಕಳಿಗೆ ಸವಾಲುಗಳನ್ನು ಎದೆಗುಂದದೆ ಎದುರಿಸುವ ಮನಸ್ಥೈರ್ಯವನ್ನು ನೀಡುತ್ತಾನೆ.


ಆತ್ಮವಿಶ್ವಾಸವನ್ನು ಹೆಚ್ಚಿಸುವ ಅಪ್ಪ
ತಂದೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಾನೆ. ಯಾವ ಕೆಲಸವಾದರೂ ನಾನು ಮಾಡುತ್ತೇನೆ ಎಂಬ ಆತ್ಮಸ್ಥೈರ್ಯ ತುಂಬುವ ಅಪ್ಪ ಮಕ್ಕಳನ್ನು ಕಠಿಣ ಸಮಯಗಳಿಗೆ ಸಿದ್ಧಪಡಿಸುತ್ತಾನೆ.


ಮಕ್ಕಳ ಜೀವನದ ಮೇಷ್ಟ್ರು
ಕುಟುಂಬದ ಯಜಮಾನನಾಗಿ ಸಂಪೂರ್ಣ ಕುಟುಂಬದ ಹೊಣೆ ಹೊರುವ ಅಪ್ಪ ಮಕ್ಕಳಿಗೆ ನೈತಿಕತೆ, ಸದ್ಗುಣಗಳನ್ನು ಕಲಿಸಬೇಕು ಎಂದು ಬಯಸುತ್ತಾನೆ. ತಂದೆ ತಮ್ಮ ಮಕ್ಕಳಿಗೆ ಸಾಮಾಜಿಕ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು, ಜನರೊಂದಿಗೆ ಹೇಗೆ ಮಾತನಾಡಬೇಕು ಮತ್ತು ಸಭ್ಯ, ಜವಾಬ್ದಾರಿ ಮತ್ತು ಉತ್ತಮ ನಡತೆಯ ನಾಗರಿಕನಾಗುವುದು ಹೇಗೆ ಎಂಬುದನ್ನು ಕಲಿಸುತ್ತಾರೆ
ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಆತನ ದೊಡ್ಡ ಹಂಬಲ. ನಾನು ಓದದೇ ಇದ್ದರೂ ಸಹ ತನ್ನ ಮಕ್ಕಳು ನಾಲ್ಕು ಅಕ್ಷರ ಕಲಿತು ಸಮಾಜದಲ್ಲಿ ಗೌರವ ಪಡೆದುಕೊಳ್ಳಬೇಕು ಎನ್ನುವುದೇ ಆತನ ದೊಡ್ಡ ಕನಸು.




ಬೌದ್ಧಿಕ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಾನೆ
ತಂದೆಯ ಬೆಂಬಲವನ್ನು ಹೊಂದಿರುವ ಮಕ್ಕಳು ಅರಿವಿನ ಬೆಳವಣಿಗೆಯ ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಕುತೂಹಲ ಮತ್ತು ಅನ್ವೇಷಣೆಗೆ ಹೆಚ್ಚಿನ ಒಲವು ಹೊಂದಿರುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ಸಾಮಾನ್ಯವಾಗಿ ಹೇಳುವುದಾದರೆ, ತಂದೆಯ ಬೆಂಬಲವನ್ನು ಹೊಂದಿರುವ ಮಕ್ಕಳು ಮೌಖಿಕ ಮತ್ತು ಗಣಿತ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುತ್ತಾರೆ ಮತ್ತು ಶಾಲೆಯಿಂದ ಹೊರಗುಳಿಯುವ ಅಥವಾ ಬಾಲಾಪರಾಧಿ ಅಪರಾಧಗಳನ್ನು ಮಾಡುವ ಸಾಧ್ಯತೆ ಕಡಿಮೆ.

First published: