Hot Water Bath: ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡಿದ್ರೆ ಒಳ್ಳೇದು ಅನ್ಕೊಂಡಿದ್ದೀರಾ? ಈ ಸುದ್ದಿ ಓದಿ

Hot Water Bath Benefits: ಬಿಸಿನೀರು ಚರ್ಮದ ತೇವಾಂಶವನ್ನು ಕಡಿಮೆ ಮಾಡುವುದಲ್ಲದೆ ಕಣ್ಣುಗಳಲ್ಲಿನ ಅಂಶಗಳನ್ನು ಸಹ ಕಡಿಮೆ ಮಾಡುತ್ತದೆ.. ಹೀಗಾಗಿ ಕಣ್ಣುಗಳಲ್ಲಿ ಶುಷ್ಕತೆ ಉಂಟಾಗುತ್ತದೆ.. ಜೊತೆಗೆ ಕಣ್ಣುಗಳಲ್ಲಿ ತುರಿಕೆ ಸಮಸ್ಯೆ ಉಂಟಾಗಬಹುದು. ಹೀಗಾಗಿ ಬಹುತೇಕರು ಬಿಸಿನೀರಿನಿಂದ ಸ್ನಾನ ಮಾಡಿದ ತಕ್ಷಣ ಅವರ ಕಣ್ಣುಗಳು ಸಂಪೂರ್ಣವಾಗಿ ಕೆಂಪು ಕೆಂಪಾಗಿ ಕಾಣಿಸಿಕೊಳ್ಳುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚಳಿಗಾಲ (Winter) ಬಂದರೆ ಸಾಕು ಬೆಚ್ಚಗೆ ಇರಬೇಕೆಂಬ ಅನುಭೂತಿ ಎಲ್ಲರಲ್ಲೂ ಬರುತ್ತದೆ. ಬಿಸಿ ಬಿಸಿ ನೀರು (Hot Water) ದೇಹದ (Body) ಮೇಲೆ ಬಿದ್ದರೆ ಬೆಚ್ಚಗಿನ ಅನುಭವ ಆಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಹೀಗಾಗಿಯೇ ಪ್ರತಿ ಬಾರಿ ಸ್ನಾನ ಮಾಡುವಾಗ ಹೆಚ್ಚು ಜನರು ಸುಡುವ ನೀರನ್ನು ಮೈಮೇಲೆ ಸುರಿದುಕೊಳ್ಳಲು ಬಯಸುತ್ತಾರೆ.. ಇದು ಕೇವಲ ಚಳಿಗಾಲಕ್ಕೆ ಮಾತ್ರವಲ್ಲ ಬೇಸಿಗೆ (Summer) ಕಾಲದಲ್ಲಿಯೂ ಸಹ ಬಿಸಿ ನೀರು ಇಲ್ಲದೇ ಕೆಲವರು ಸ್ನಾನವೇ (Bath) ಮಾಡುವುದಿಲ್ಲ..

    ಹೀಗಾಗಿ ಯಾವ ಕಾಲಕ್ಕೂ ಕೆಲವರಿಗೆ ಬಿಸಿನೀರು ಸ್ನಾನಕ್ಕೆ ಇರಲೇಬೇಕು. ಆದರೆ ಕೆಲವೊಮ್ಮೆ ಎಲ್ಲಾ ಕಾಲದಲ್ಲೂ ಬಿಸಿನೀರು ಸ್ನಾನಕ್ಕೆ ಬಳಸುವುದು ಆರೋಗ್ಯಕ್ಕೆ ಅಷ್ಟಾಗಿ ಉತ್ತಮ ಆಗಿರುವುದಿಲ್ಲ.. ಸ್ನಾನಕ್ಕೆ ಬಿಸಿ ನೀರು ಬಳಕೆ ಮಾಡುವುದರಿಂದ ಹಲವು ಅನಾರೋಗ್ಯಕಾರಿ ಪ್ರಯೋಜನಗಳು ಇದು ಹಲವು ಸಮಸ್ಯೆಗಳು ಕೂಡ ಉಂಟಾಗಲಿವೆ.. ಹಾಗಿದ್ರೆ ಸ್ನಾನಕ್ಕೆ ಬಿಸಿ ನೀರು ಬಳಕೆ ಮಾಡುವುದರಿಂದ ಆಗುವ ಅಪಾಯಕಾರಿ ಅಂಶಗಳು ಏನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ..

    1) ಪುರುಷರಲ್ಲಿ ಬಂಜೆತನ ಸಮಸ್ಯೆ: ಸಾಮಾನ್ಯವಾಗಿ ಬಹುತೇಕ ಪುರುಷರು ತಣ್ಣೀರಿನ ಸ್ನಾನ ಮಾಡುತ್ತಾರೆ. ಆದರೆ ಕೆಲವರು ಬಿಸಿನೀರು ಸ್ನಾನ ಮಾಡುವುದರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ.. ಆದ್ರೆ ಬಿಸಿನೀರಿನ ಸ್ನಾನ ಮಾಡುವುದರಿಂದ ಪುರುಷರ ಫಲವತ್ತತೆಯ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಬೀರಲಿದ್ದು ಅವರಲ್ಲಿ ಬಂಜೆತನದ ಸಮಸ್ಯೆಗಳು ಉಂಟಾಗಬಹುದು ಎಂದು ಸಂಶೋಧನೆಗಳು ಹೇಳಿವೆ. ಬಿಸಿ ನೀರಿನ ಸ್ನಾನದಿಂದ ವೃಷಣಗಳ ಉಷ್ಣತೆ ಏರಿಕೆಯಿಂದಾಗಿ ವೀರ್ಯದ ಗುಣಮಟ್ಟ ಕಳೆದುಕೊಳ್ಳುವ ಸಂಭವ ಇರುತ್ತದೆ.. ಹೀಗಾಗಿ ಬಿಸಿನೀರಿನ ಸ್ನಾನ ಮಾಡುವ ಮುನ್ನ ಪುರುಷರು ಒಮ್ಮೆ ಎಚ್ಚರಿಕೆಯಿಂದ ಇರಬೇಕು.

    ಇದನ್ನೂ ಓದಿ: ಮನೆಯಲ್ಲಿಯೇ ಸ್ಪಾ ಮಾಡಿಕೊಳ್ಳಲು ಈ ಐಡಿಯಾ ಯೂಸ್​ ಮಾಡಿ

    2) ಕೂದಲು ಉದುರುವುದು: ತಲೆ ಬಾಚಿದಾಗ ಎಷ್ಟು ಕೂದಲು ಉದುರುತ್ತದೆ ಅದರ ಹತ್ತು ಪಟ್ಟು ಕೂದಲು ಸ್ನಾನ ಮಾಡಿದಾಗ ಕೂದಲು ಉದುರುತ್ತದೆ.. ಅದರಲ್ಲೂ ಬಿಸಿ ನೀರಿನ ಹನಿಗಳು ತಲೆಯ ಮೇಲೆ ಬಿದ್ದಾಗ ತಲೆಯಲ್ಲಿ ಇರುವ ಕೆರಾಟಿನ್ಎಂಬ ಪ್ರೋಟೀನ್ ದುರ್ಬಲಗೊಳ್ಳುತ್ತದೆ.. ಈ ಕೆರಟಿನ್ ಎಂಬ ಪ್ರೋಟೀನ್ ಕೂದಲು ದುರ್ಬಲಗೊಳ್ಳಲು ಒಡೆಯದಂತೆ ರಕ್ಷಣೆ ಮಾಡುತ್ತದೆ.. ಬಿಸಿನೀರು ತಲೆಯ ಮೇಲೆ ಬಿದ್ದಾಗ ಇದು ದುರ್ಬಲಗೊಂಡು ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಒಂದು ವೇಳೆ ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಪುರುಷರ ತಲೆ ಸಂಪೂರ್ಣ ಬೋಳಾಗುತ್ತದೆ.

    3) ಒಣ ಚರ್ಮ ಮತ್ತು ತುರಿಕೆ: ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳೆಂದರೆ ಒಣ ತ್ವಚೆ ಮತ್ತು ಚರ್ಮದ ಮೇಲೆ ತುರಿಕೆ. ಏಕೆಂದರೆ, ಬಿಸಿನೀರು ಕೊಳಕು ಮತ್ತು ಧೂಳಿನ ಜೊತೆಗೆ ಚರ್ಮದ ರಕ್ಷಣಾತ್ಮಕ ತೇವಾಂಶವನ್ನು ತೆಗೆದುಹಾಕುತ್ತದೆ. ಈ ಕಾರಣದಿಂದಾಗಿ, ಚರ್ಮವು ಒಣಗಲು ಪ್ರಾರಂಭಿಸುತ್ತದೆ ಮತ್ತು ತುರಿಕೆ ಉಂಟಾಗುತ್ತದೆ.

    4) ಒಣ ಕಣ್ಣುಗಳು: ಬಿಸಿನೀರು ಚರ್ಮದ ತೇವಾಂಶವನ್ನು ಕಡಿಮೆ ಮಾಡುವುದಲ್ಲದೆ ಕಣ್ಣುಗಳಲ್ಲಿನ ಅಂಶಗಳನ್ನು ಸಹ ಕಡಿಮೆ ಮಾಡುತ್ತದೆ..
    ಹೀಗಾಗಿ ಕಣ್ಣುಗಳಲ್ಲಿ ಶುಷ್ಕತೆ ಉಂಟಾಗುತ್ತದೆ.. ಜೊತೆಗೆ ಕಣ್ಣುಗಳಲ್ಲಿ ತುರಿಕೆ ಸಮಸ್ಯೆ ಉಂಟಾಗಬಹುದು. ಹೀಗಾಗಿ ಬಹುತೇಕರು ಬಿಸಿನೀರಿನಿಂದ ಸ್ನಾನ ಮಾಡಿದ ತಕ್ಷಣ ಅವರ ಕಣ್ಣುಗಳು ಸಂಪೂರ್ಣವಾಗಿ ಕೆಂಪು ಕೆಂಪಾಗಿ ಕಾಣಿಸಿಕೊಳ್ಳುತ್ತವೆ.

    ಇದನ್ನೂ ಓದಿ: ಹಿಮ್ಮಡಿ ಬಿರುಕು ಬಿಟ್ಟಿದ್ರೆ ಈ ವಸ್ತುಗಳನ್ನು ಬಳಸಿ ಸಾಕು

    5) ಮೊಡವೆ ಸಮಸ್ಯೆ: ಮೊಡವೆಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆ ಒಣಗುವುದಲ್ಲದೆ, ಮೊಡವೆ ಸಮಸ್ಯೆಯೂ ಹೆಚ್ಚುತ್ತದೆ. ಅತಿಯಾದ ಬಿಸಿನೀರು ಬ್ಯಾಕ್ಟೀರಿಯಾವನ್ನು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ, ಇದು ಮೊಡವೆಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
    Published by:ranjumbkgowda1 ranjumbkgowda1
    First published: