Deepavali 2021 : ದೀಪಾವಳಿ ಆಚರಣೆ ಹಿಂದಿದೆ 5 ಪೌರಾಣಿಕ ಪ್ರಮುಖ ಪ್ರಸಂಗಗಳು!

Deepavali: `ತಮಸೋಮ ಜ್ಯೋತಿರ್ಗಮಯ’ ಎನ್ನುವಂತೆ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಕರೆದೊಯ್ಯುವಂತಹ ಹಬ್ಬ ದೀಪಾವಳಿ. ಈ ಹಬ್ಬವೆಂದರೇ ಅದೇನೋ ಒಂಥರಾ ಸಂಭ್ರಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಶ್ವಯುಜ ಮಾಸದ ಕೊನೆಯ ಮೂರು ದಿನಗಳು ಮತ್ತು ಕಾರ್ತೀಕ ಮಾಸದ ಆರಂಭದ ಎರಡು ದಿನಗಳು ಹೀಗೆ ಒಟ್ಟು ಐದು ದಿನಗಳು  ಬೆಳಕು, ಶಬ್ಧ ಮತ್ತು ರಂಗು ರಂಗಿನ ಚಿತ್ತಾರಗಳಿಂದ ಆಚರಿಸುವ ಹಬ್ಬವೇ ದೀಪಾವಳಿ(Deepavali). `ತಮಸೋಮ ಜ್ಯೋತಿರ್ಗಮಯ’ ಎನ್ನುವಂತೆ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಕರೆದೊಯ್ಯುವಂತಹ ಹಬ್ಬ ದೀಪಾವಳಿ. ಈ ಹಬ್ಬವೆಂದರೇ ಅದೇನೋ ಒಂಥರಾ ಸಂಭ್ರಮ(Celebration). ಎಲ್ಲರ ಬದುಕಲ್ಲಿ ಬೆಳಕು ಮೂಡಿಸುವ ಈ ಹಬ್ಬ ನಿಜಕ್ಕೂ ವಿಶೇಷ(Special).  ಏಕೆಂದರೆ ಈ ಹಬ್ಬದಲ್ಲಿ ಉಳಿದ ಹಬ್ಬಗಳಂತೆ ಹೆಚ್ಚಿನ ಆಚಾರ, ಮಡಿ- ಹುಡಿಗಳಿಲ್ಲದೇ, ಮೋಜು ಮಸ್ತಿ, ಹೊಸ ಬಟ್ಟೆ(New Cloths), ಸಿಹಿ ತಿಂಡಿಗಳ(Sweets) ಜೊತೆಗೆ ಹಸಿರು ಪಟಾಕಿ(Green Crackers) ಹೊಡೆಯುವ ಅವಕಾಶ ವಿರುವ ಕಾರಣ ಇಡೀ ಭಾರತಾದ್ಯಂತ ಸಂಭ್ರಮ ಸಡಗರಗಳಿಂದ ಆಚರಿಸುವ ಹಬ್ಬವಾಗಿದೆ. ಆದರೆ ನಮ್ಮ ಪೌರಾಣಿಕ ಹಿನ್ನಲೆಯಲ್ಲಿ ದೀಪಾವಳಿ ಆಚರಿಸುವ ಹಿಂದೆ ಈ ಐದು ಪ್ರಮುಖ ಪ್ರಸಂಗಗಳಿವೆ. ಅದು ಯಾವುದು ಅಂತೀರಾ? ಮುಂದೆ ನೋಡಿ. 

ವನವಾಸ ಮುಗಿಸಿ ಇದೇ ದಿನ ಅಯೋಧ್ಯೆಗೆ ಬಂದಿದ್ದ ರಾಮ

14 ವರ್ಷಗಳ ಕಾಲ ರಾಮ, ಸೀತೇ ಮತ್ತು ಲಕ್ಷ್ಮಣರು ವನವಾಸ ಮಾಡುತ್ತಿದ್ದಾಗ ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಯ ಅಶೋಕವನದಲ್ಲಿ ಬಂಧನದಲ್ಲಿಟ್ಟಿದ್ದಾಗ, ರಾಮ ಮತ್ತು ಲಕ್ಷ್ಮಣರು ಸುಗ್ರೀವ, ಜಾಂಬುವಂತ, ಹನುಮಂತ ಮತ್ತು ಲಕ್ಷಾಂತರ ಕಪಿ ಸೇನೆಯ ಸಹಾಯದೊಂದಿಗೆ ರಾವಣನ್ನು ಸಂಹರಿಸಿ, ಶ್ರೀರಾಮ ಚಂದ್ರನು ಪುಷ್ಪಕ ವಿಮಾನದಲ್ಲಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಲಂಕೆಯಿಂದ ಅಯೋಧ್ಯೆಗೆ ಇದೇ ಸಮಯದಲ್ಲಿಯೇ ಮರಳಿದಾಗ ಅಲ್ಲಿಯ ಜನರು ದೀಪಗಳನ್ನು ಹಚ್ಚಿ ಆರತಿ ಮಾಡಿ ಪಟಾಕಿಗಳನ್ನು ಸಿಡಿಸುವ ಮುಖಾಂತರ ಶ್ರೀ ರಾಮಚಂದ್ರನನ್ನು ಸ್ವಾಗತಿಸಿ ಸಂಭ್ರಮಿಸಿದ ದಿನವು ಇದೇ. ಹೀಗಾಗಿ ದೀಪಾವಳಿ ಹಬ್ಬಕ್ಕೂ, ರಾಮ ವನವಾಸ ಮುಗಿಸಿ ಅಯೋಧ್ಯಗೆ ಬಂದ ದಿನಕ್ಕೂ ಲಿಂಕ್​ ಇದೆ.


ಇದನ್ನು ಓದಿ : ದೀಪಾವಳಿಯ ಸಂದರ್ಭದಲ್ಲಿ ತಪ್ಪದೇ ಈ ಸಲಹೆಗಳನ್ನು ಪಾಲಿಸಿ


ಇದೇ ದಿನ ನರಕಾಸುರನನ್ನ ಸಂಹರಿಸಿದ್ದ ಶ್ರೀ ಕೃಷ್ಣ ಪರಮಾತ್ಮ


ಆಶ್ಚಯುಜ ಬಹುಳ ಚತುರ್ದಶಿಯಿಂದ ಶ್ರೀ ಕೃಷ್ಣ ಪರಮಾತ್ಮ ತನ್ನ ಪ್ರಜೆಗಳಿಗೆ ಹಿಂಸೆ ನೀಡುತ್ತಿದ್ದ ನರಕಾಸುರ ಎಂಬ ರಾಕ್ಷಕನನ್ನು ಸಂಹರಿಸುತ್ತಾನೆ. ನರಕಾಸುರನು ಹೀಗೆ ಸಾಯುವ ಮುನ್ನ ಶ್ರೀ ಕೃಷ್ಣನ ಬಳಿ ಕೊನೆಯ ಆಸೆಯೊಂದನ್ನು ನೇರವೇರಿಸುವಂತೆ ಮನವಿ ಮಾಡಿಕೊಳ್ಳುತ್ತಾನೆ. ನಮ್ಮ ಜನ ನನ್ನ ಸಾವಿನ ದಿನದಂದು ಹೊಸ ಬಟ್ಟೆಗಳನ್ನು ಧರಿಸಿ, ಬಂಧು- ಸ್ನೇಹಿತರೊಂದಿಗೆ ಸಿಹಿ ಹಂಚಿಕೊಂಡು, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸ ಬೇಕು ಎಂದು ನರಕಾಸುರ ಶ್ರೀ ಕೃಷ್ಣನ ಬಳಿ ಕೇಳುತ್ತಾನೆ. ಸಂಪೂರ್ಣ ಶರಣಾಗಿ ಕೊನೆಯ ಆಸೆಯನ್ನು ಶ್ರೀ ಕೃಷ್ಣ ಪರಮಾತ್ಮನೂ ತಥಾಸ್ತು ಎಂದು ಒಪ್ಪಿರುತ್ತಾರೆ. ಹೀಗಾಗಿಯೇ ನರಕ ಚರ್ತುದಶಿ ದಿನದಂದು ಹೊಸ ಬಟ್ಟೆ ಧರಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತೆ.


ಸಿರಿ ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯ ಹುಟ್ಟುಹಬ್ಬ


ಹೌದು, ದೀಪಾವಳಿಯ ಸಂದರ್ಭದಲ್ಲಿ ಆಶ್ವಯುಜ ಮಾಸದ ಅಮಾವಾಸೆ ಸಿರಿ ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯ ಹುಟ್ಟು ಹಬ್ಬವೆಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ದೇವಿಯು ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ, ಆರೋಗ್ಯ, ಐಶ್ವರ್ಯ, ಸಂತೋಷ, ಸಿರಿ ಮತ್ತು ಸಂಪತ್ತನ್ನು ಕರುಣಿಸುವವಳು ಎಂದು ನಂಬಿರುವ ಕಾರಣ ಈ ದಿನದಂದು ಎಲ್ಲರ ಮನೆಗಳಲ್ಲಿಯೂ ಭಕ್ತಿ ಪೂರ್ವಕವಾಗಿ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಶ್ರದ್ಧೆಯಿಂದ ಲಕ್ಷ್ಮೀ ಪೂಜೆ ಮಾಡಿದಲ್ಲಿ ಪೂಜೆ ಮಾಡಿದವರ ಅಹಂ, ದುರಾಸೆ ಮತ್ತು ಇತರ ದುಷ್ಟಶಕ್ತಿಗಳ ನಿವಾರಣೆಯನ್ನು ಲಕ್ಷ್ಮೀ ದೇವಿ ಮಾಡುತ್ತಾಳೆ ಎಂಬ ನಂಬಿಕೆ ಜನರದ್ದು.


ಇದನ್ನು ಓದಿ :ದೀಪಗಳ ಹಬ್ಬದ ಆಚರಣೆ ಮತ್ತು ಅದರ ಮಹತ್ವ ಇಲ್ಲಿದೆ


ಬಲಿ ಚಕ್ರವರ್ತಿಯನ್ನು ಸಂಹರಿಸಲು ವಾಮನ ರೂಪದಲ್ಲಿ ಕೃಷ್ಣ ಬಂದ ದಿನ!


ಬಹಳ ಅಂಹಕಾರಿಯಾಗಿದ್ದ ಬಲಿ ಚಕ್ರವರ್ತಿಯನ್ನು ಸಂಹರಿಸ ಬೇಕೆಂದು ದೇವಾನು ದೇವತೆಗಳು ಭಗವಾನ್ ವಿಷ್ಣುವಿನಲ್ಲಿ ಕೋರಿದಾಗ, ವಿಷ್ಣು ವಟು ರೂಪಿ ವಾಮನ ವೇಷದಲ್ಲಿ ಬಂದು ಮೂರು ಹೆಜ್ಜೆಗಳ ಬಿಕ್ಷೆ ಬೇಡಿ, ಬೃಹದಾಕಾರವಾಗಿ ತ್ರಿವಿಕ್ರಮ ರೂಪದಲ್ಲಿ ಬೆಳೆದು ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೂ, ಎರಡನೇ ಹೆಜ್ಜೆಯನ್ನು ಆಕಾಶದಲ್ಲಿ ಮೇಲೆ ಇಟ್ಟು ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಕೇಳಿದಾಗ, ವಿಧಿ ಇಲ್ಲದೇ, ನನ್ನ ತಲೆಯ ಮೇಲೆ ಇಡು ಎಂದು ಹೇಳಿದಾಗ, ವಾಮನ ಬಲಿ ಚಕ್ರವರ್ತಿಯ ತಲೆ ಮೇಲೆ ಕಾಲಿಟ್ಟು ಆತನನ್ನು ಪಾತಾಳಕ್ಕೆ ದೂಡಿದ್ದೂ ಕಾರ್ತೀಕ ಮಾಸದ ಪಾಡ್ಯದಂದು.

 ಶ್ರೀ ಕೃಷ್ಣ ಗೋವರ್ಧನ ಬೆಟ್ಟವನ್ನು ಕಿರುಬೆರಳಿನಲ್ಲಿ ಎತ್ತಿದ ದಿನ 

ಇಂದ್ರನ ಅಹಂನಿಂದಾಗಿ ಗೋಕುಲದ ಮೇಲೆ ಸುರಿದ ಅಕಾಲಿಕ ಮಳೆಯಿಂದ ತತ್ತರಿಸಿ ಹೋಗಿದ್ದ ಜನರನ್ನು ರಕ್ಷಿಸುವ ಸಲುವಾಗಿ ಶ್ರೀ ಕೃಷ್ಣ ಪರಮಾತ್ಮ, ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತಿ, ಜನರು, ಗೋವುಗಳಿಗೆ ಅದರಡಿ ಆಶ್ರಮ ನೀಡಿದ ದಿನವೂ ಇದೇ ದಿನವಾಗಿದೆ. ಹೀಗಾಗಿ ದೀಪಾವಳಿ ಸಂದರ್ಭದಲ್ಲಿ ಗೋವುಗಳಿಗೂ ವಿಶೇಚ ಪೂಜೆ ಮಾಡಲಾಗುತ್ತೆ.
Published by:Vasudeva M
First published: