Monsoon Snacks: ಮಳೆಗಾಲದ ಹಾಟ್ ಫೆವರಿಟ್‍ಗಳ ತಿನಿಸುಗಳ ಪಟ್ಟಿಯಲ್ಲಿ ಏನೇನಿದೆ ನೋಡಿ

ಹೊರಗೆ ಮಳೆ ಬರುತ್ತಿದ್ದರೆ, ಮನೆಯೊಳಗೆ ಬೆಚ್ಚಗೆ ಕುಳಿತು ಬಿಸಿ ಬಿಸಿ ಚಹಾದ ಜೊತೆಗೆ ಕರಿದ ತಿಂಡಿಗಳನ್ನು ತಿನ್ನುತ್ತಾ ಕುಳಿತುಕೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತದ ವಿವಿಧ ರಾಜ್ಯಗಳಲ್ಲಿ , ಮಳೆಗಾಲದ ಮೆಚ್ಚಿನ ತಿನಿಸು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಅಂತಹ ಕೆಲವು ತಿನಿಸುಗಳ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲ (Rainy Season) ಬಂತೆಂದರೆ ಸಾಕು ಪ್ರತಿಯೊಬ್ಬರಿಗೂ ಬಜ್ಜಿ , ಬೋಂಡ, ವಡೆ ಮುಂತಾದ ಕರಿದ, ಕುರುಕಲು ತಿಂಡಿಗಳನ್ನು (Snacks) ತಿನ್ನುವ ಆಸೆ ಹೆಚ್ಚುತ್ತದೆ. ಹೊರಗೆ ಮಳೆ (Rain) ಬರುತ್ತಿದ್ದರೆ, ಮನೆಯೊಳಗೆ (Home) ಬೆಚ್ಚಗೆ ಕುಳಿತು ಬಿಸಿ ಬಿಸಿ ಚಹಾದ ಜೊತೆಗೆ ಕರಿದ ತಿಂಡಿಗಳನ್ನು ತಿನ್ನುತ್ತಾ ಕುಳಿತುಕೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತದ (India) ವಿವಿಧ ರಾಜ್ಯಗಳಲ್ಲಿ (State) , ಮಳೆಗಾಲದ ಮೆಚ್ಚಿನ ತಿನಿಸು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ (Different).  ಹಾಗಿದ್ರೆ ಮಳೆಗಾಲದ ಎಲ್ಲರ ನೆಚ್ಚಿನ ಬಿಸಿ ಬಿಸಿಯಾದ ಕೆಲವು ತಿನಿಸುಗಳ ಮಾಹಿತಿ ಇಲ್ಲಿದೆ.

ಸಮೋಸ ( ಪಂಬಾಜಿ) :
ಸಮೋಸ ಭಾರತದ ಉದ್ದಗಲಕ್ಕೂ ಎಲ್ಲಿ ಹೋದರೂ ತಿನ್ನಲು ಸಿಗುವ ತಿನಿಸು. ಎಲ್ಲಾ ಋತುಗಳಲ್ಲೂ ಇದನ್ನು ಮೆಲ್ಲಬಹುದಾದರೂ, ಮಳೆಗಾಲದಲ್ಲಿ ತಂಪು ವಾತಾವರಣದಲ್ಲಿ ಬಿಸಿ ಬಿಸಿ ಸಮೋಸ ತಿನ್ನುವುದು ಬೇರೆಯೇ ಆನಂದ ನೀಡುತ್ತದೆ ಅಲ್ಲವೇ? ಪಂಜಾಬಿಗಳಿಗಂತೂ ಸಮೋಸ ಎಂದರೆ ಇನ್ನೂ ಅಚ್ಚುಮೆಚ್ಚು. ಗೋಧಿ ಹಿಟ್ಟಿಗೆ ಹಾಲು ಮತ್ತು ಎಣ್ಣೆ ಬೆರೆಸಿ ತಯಾರಿಸಿದ ಹಿಟ್ಟಿನಿಂದ, ಮಸಾಲೆಯುಕ್ತ ಆಲೂಗಡ್ಡೆ ಪಲ್ಯ ಸೇರಿಸಿ ಸಮೋಸ ತಯಾರಿಸುತ್ತಾರೆ ಅವರು. ದೇಶದ ಬೇರೆ ಪ್ರದೇಶಗಳಲ್ಲಿ ಸಿಗುವ ಸಮೋಸಗಳಿಗೆ ಹೋಲಿಸಿದರೆ, ಪಂಜಾಬಿ ಸಮೋಸ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಮಸಾಲೆ ಚಹಾದ ಜೊತೆ ಪಂಜಾಬಿ ಸಮೋಸ ತಿಂದು ನೋಡಿ, ಮಳೆಗಾಲದ ಆನಂದ ಇನ್ನಷ್ಟು ಹೆಚ್ಚುತ್ತದೆ.

ಗೇಹೂಂಕಿ ಖಿಚಿಡಿ (ರಾಜಸ್ಥಾನಿ ಶೈಲಿ) :
ಮಳೆಗಾಲದಲ್ಲಿ ಬಿಸಿಬಿಸಿ ಖಿಚಿಡಿ ಮಾಡಿಕೊಂಡು ತಿನ್ನುವುದರ ಮಜವೇ ಬೇರೆ. ಅದರ ಜೊತೆ ಒಂದಿಷ್ಟು ಕರಿದ ತಿಂಡಿಗಳಿದ್ದರೆ ಇನ್ನೂ ಮಹದಾನಂದ. ಉತ್ತರ ಭಾರತೀಯರು ಖಿಚಡಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ರಾಜಸ್ಥಾನಿಗಳಿಗಂತೂ ಬಿಕನೇರಿ ಗೇಹೂಂಕಿ ಖಿಚಡಿ ಎಂದರೆ ಬಹಳ ಇಷ್ಟ.

ಇದನ್ನೂ ಓದಿ:  Pickle: ನೀವು ಎಂದಾದ್ರೂ ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ

ಮಳೆಗಾಲದಲ್ಲಿ ಈ ಖಿಚಡಿಯನ್ನು ಅಲ್ಲಿನ ಮಂದಿ ಹೆಚ್ಚು ಖುಷಿಯಿಂದ ಚಪ್ಪರಿಸುತ್ತಾರೆ. ಹಿಂದಿಯಲ್ಲಿ ಗೇಹು ಎಂದರೆ ಗೋಧಿ. ರಾತ್ರಿಯಿಡಿ ನೆನೆಸಿಟ್ಟ ಗೋಧಿಯನ್ನು ತರಿತರಿಯಾಗಿ ರುಬ್ಬಿಕೊಂಡು, ನೆನೆಸಿಟ್ಟ ಹೆಸರು ಬೇಳೆಯ ಜೊತೆ , ಅರಸಿನ , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕುಕ್ಕರಿನಲ್ಲಿ ಬೇಯಿಸಿಕೊಂಡು, ಬಳಿಕ ಅದಕ್ಕೆ ಹಸಿ ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಹಿಂಗು ಹಾಕಿ ಒಗ್ಗರಣೆ ನೀಡಲಾಗುತ್ತದೆ.

ಶೊರ್ಶೆ ಇಲಿಶ್ ( ಬಂಗಾಳಿ ಶೈಲಿ) :
ಮಳೆಗಾಲದಲ್ಲಿ ಇಲಿಶ್ (ಹಿಲ್ಸಾ ಮೀನು) ಮೀನಿನ ರುಚಿ ನೋಡ ಬಯಸದ ಬಂಗಾಳಿಗಳು ಯಾರೂ ಸಿಗುವುದಿಲ್ಲ. ಇಲಿಶ್‍ಗೂ ಮಳೆಗಾಲಕ್ಕೂ ಅಷ್ಟೊಂದು ನಂಟು. ಮಳೆಗಾಲದಲ್ಲಿ ಬಂಗಾಳಿ ಅಡುಗೆ ಮನೆಗಳಲ್ಲಿ, ವಿಶೇಷ ಪರಿಮಳ ಮತ್ತು ರುಚಿಯನ್ನು ಹೊಂದಿರುವ ಹಿಲ್ಸಾ ಮೀನಿನ ಖಾದ್ಯಗಳದ್ದೇ ರಾಜ್ಯಭಾರ. ಈ ಮೀನಿನಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಆದರೆ ಬಂಗಾಳಿಗಳಿಗೆ ಅಧಿಕ ಇಷ್ಟವಾಗುವುದು ಶೊರ್ಶೆ ಇಲಿಶ್. ಹಿಲ್ಸಾ ಮೀನನ್ನು ಸಾಸಿವೆ ಪೇಸ್ಟ್‍ನಲ್ಲಿ ಬೇಯಿಸಿ ತಯಾರಿಸುವ ಮೀನು ಸಾಂಬಾರ್ ಇದು.

ಪರಿಪ್ಪು ವಡ (ಕೇರಳ ಶೈಲಿ) :
ಮಳೆಗಾಲ ಮತ್ತು ಕರಿದ ತಿಂಡಿಗಳಿಗೆ ಒಂಥರಾ ಅವಿನಾಭಾವ ನಂಟಿದೆ ಎಂಬುವುದು ನಿಮಗೆಲ್ಲಾ ಗೊತ್ತೇ ಇದೆ. ಕೇರಳಿಗರು ಮಳೆಗಾಲದಲ್ಲಿ ಹೆಚ್ಚಾಗಿ ಮಾಡುವ ಪರಿಪ್ಪು ವಡೆಯನ್ನು ಎಂದಾದರೂ ತಿಂದಿದ್ದೀರಾ? ಇದನ್ನು ಒಂದು ಟ್ವಿಸ್ಟ್ ನೀಡಿ ತಯಾರಿಸಲಾಗುವ ಕೇರಳ ಶೈಲಿಯ ಮೆದು ವಡೆ ಎನ್ನಬಹುದು. ಕಡಲೇಬೇಳೆ, ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಇತ್ಯಾದಿಗಳನ್ನು ಹಾಕಿ ತಯಾರಿಸುವ ಕುರುಕಲು ವಡೆ ಇದು. ಈ ಮಸಾಲೆಯುಕ್ತ ಪರಿಪ್ಪು ವಡೆಯನ್ನು ಒಂದು ದಿನಕ್ಕಿಂತಲೂ ಹೆಚ್ಚು ಸಮಯದ ವರೆಗೆ ಡಬ್ಬಿಯಲ್ಲಿ ಹಾಕಿಟ್ಟು ತಿನ್ನಬಹುದು.

ಇದನ್ನೂ ಓದಿ: Morning Breakfast: ಬೆಳಗಿನ ಉಪಹಾರಕ್ಕೆ ಮಾಡಿ ದಾಲ್ ಪರೋಠಾ; ಇಲ್ಲಿದೆ ಓದಿ ಸೂಪರ್ ರೆಸಿಪಿ

ಇಂದೋರಿ ಭುಟ್ಟೆ ಕಾ ಕೀಸ್ ( ಮಧ್ಯ ಪ್ರದೇಶ ಖಾದ್ಯ):
ಮಳೆಗಾಲದಲ್ಲಿ ನಮ್ಮ ದೇಶದಲ್ಲಿ ಹೇರಳವಾಗಿ ಮೆಕ್ಕೆ ಜೋಳವನ್ನು (ಹಿಂದಿಯಲ್ಲಿ ಇದನ್ನು ಭುಟ್ಟಾ ಎನ್ನುತ್ತಾರೆ) ಬೆಳೆಯಲಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಮೆಕ್ಕೆಜೋಳದ ಬಳಕೆಯೂ ಹೆಚ್ಚು. ಮೆಕ್ಕೆಜೋಳದಿಂದ ತಯಾರಿಸುವ ತರಾವರಿ ತಿನಿಸುಗಳ ಪೈಕಿ ಭುಟ್ಟೇ ಕಾ ಕೀಸ್ ಕೂಡ ಒಂದು. ಮಧ್ಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಚಪ್ಪರಿಸಲ್ಪಡುವ ತಿನಿಸಿದು. ಮೆಕ್ಕೆಜೋಳಕ್ಕೆ ಹಾಲು , ಶುಂಠಿ- ಬೆಳ್ಳುಳ್ಳಿ -ಹಸಿಮೆಣಸಿನಕಾಯಿ ಪೇಸ್ಟ್ , ತೆಂಗಿನ ತುರಿ, ತುಪ್ಪ ಮತ್ತು ಮಸಾಲೆಗಳನ್ನು ಸೇರಿಸಿ ತಯಾರಿಸುವ ಒಂದು ರೀತಿಯ ಪಲ್ಯ.
Published by:Ashwini Prabhu
First published: