• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Weight Loss Tips: ಪ್ರೋಟೀನ್ ಶೇಕ್ ಕುಡಿಯುವುದು ಆರೋಗ್ಯ ಒಳ್ಳೆಯದಾ? ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ!

Weight Loss Tips: ಪ್ರೋಟೀನ್ ಶೇಕ್ ಕುಡಿಯುವುದು ಆರೋಗ್ಯ ಒಳ್ಳೆಯದಾ? ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ!

ಪ್ರೋಟೀನ್ ಶೇಕ್

ಪ್ರೋಟೀನ್ ಶೇಕ್

ಪ್ರೋಟೀನ್​ ಪೌಡರ್ ಅನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿಕೊಂಡು ಸ್ನಾಯುಗಳ ಬೆಳವಣಿಗೆಗೆ ಮತ್ತು ಆಯಾಸದಿಂದ ಚೇತರಿಕೆಗೆ ಅಂತ ಸೇವಿಸುತ್ತಾರೆ. ಆಹಾರದ ಮೂಲಕ ತಮ್ಮ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದವರಿಗೆ ಈ ಪ್ರೋಟೀನ್ ಶೇಕ್ ಸೂಕ್ತವಾಗಿದೆ. ಆದರೆ ಈ ಪ್ರೋಟೀನ್ ಶೇಕ್ ಗಳ ಬಗ್ಗೆ ಜನರಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ ಮತ್ತು ಈ ಶೇಕ್ ಅನ್ನು ಕುಡಿಯುವಲ್ಲಿ ಸ್ವಲ್ಪ ತಪ್ಪುಗಳನ್ನು ಸಹ ಮಾಡುತ್ತಾರೆ ನೋಡಿ.

ಮುಂದೆ ಓದಿ ...
 • Share this:

ಹೊಸದಾಗಿ ಜಿಮ್(Gymಗೆ ಹೋಗೋದಕ್ಕೆ ಶುರು ಮಾಡಿದರೆ, ಅಲ್ಲಿ ಇಟ್ಟಿರುವಂತಹ ದೊಡ್ಡ ದೊಡ್ಡ ಪ್ರೋಟೀನ್ ಶೇಕ್ ಪೌಡರ್ (Protein Shake Powder) ಗಳ ಡಬ್ಬಿಗಳ ಮೇಲೆ ನಮ್ಮ ಗಮನ ಹೋಗಿರಲಿಕ್ಕೆ ಬೇಕು. ಹೌದು.. ಜಿಮ್ ಗೆ ಹೋಗಿ ಬಾಡಿ ಬಿಲ್ಡ್ (Body Build) ಮಾಡಬೇಕು ಅನ್ನೋರು ಸಾಮಾನ್ಯವಾಗಿ ಕಠಿಣವಾದ ತಾಲೀಮು ಮಾಡಿ ಮುಗಿಸಿದ ನಂತರ ಈ ಪ್ರೋಟೀನ್ ಶೇಕ್ ಅನ್ನು ಕುಡಿಯುತ್ತಾರೆ. ಆದರೆ ಈ ಪ್ರೋಟೀನ್ ಶೇಕ್ ಅನ್ನು ಎಲ್ಲರೂ ಕುಡಿಯೋದಿಲ್ಲ, ಏಕೆಂದರೆ ಎಷ್ಟೋ ಜನರಿಗೆ ಇದನ್ನು ಕುಡಿಯಬೇಕೆ ಅಥವಾ ಬೇಡವೇ ಅನ್ನೋದರ ಬಗ್ಗೆ ತುಂಬಾನೇ ಗೊಂದಲಗಳಿರುತ್ತವೆ. ಬನ್ನಿ ಹಾಗಾದರೆ ಈ ಪ್ರೋಟೀನ್ ಶೇಕ್ ಬಗ್ಗೆ ಇನ್ನಷ್ಟು ವಿವರವಾಗಿ ನಾವು ತಿಳಿದುಕೊಳ್ಳೋಣ.


ಪ್ರೋಟೀನ್ ಶೇಕ್


ಈ ಪ್ರೋಟೀನ್ ಶೇಕ್ ಎಂಬುದು ಪ್ರೋಟೀನ್ ನಿಂದ ತುಂಬಿರುವ ಒಂದು ರೀತಿಯ ಆಹಾರ ಪೂರಕವಾಗಿದೆ. ಇದನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿಕೊಂಡು ಸ್ನಾಯುಗಳ ಬೆಳವಣಿಗೆಗೆ ಮತ್ತು ಆಯಾಸದಿಂದ ಚೇತರಿಕೆಗೆ ಅಂತ ಸೇವಿಸುತ್ತಾರೆ. ಆಹಾರದ ಮೂಲಕ ತಮ್ಮ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದವರಿಗೆ ಈ ಪ್ರೋಟೀನ್ ಶೇಕ್ ಸೂಕ್ತವಾಗಿದೆ. ಆದರೆ ಈ ಪ್ರೋಟೀನ್ ಶೇಕ್ ಗಳ ಬಗ್ಗೆ ಜನರಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ ಮತ್ತು ಈ ಶೇಕ್ ಅನ್ನು ಕುಡಿಯುವಲ್ಲಿ ಸ್ವಲ್ಪ ತಪ್ಪುಗಳನ್ನು ಸಹ ಮಾಡುತ್ತಾರೆ ನೋಡಿ.


ಪ್ರೋಟೀನ್ ಶೇಕ್ ಅನ್ನು ತೂಕ ಇಳಿಸಿಕೊಳ್ಳಲು ಬಳಸುವುದು


ಪ್ರೋಟೀನ್ ಶೇಕ್ ಕುಡಿಯುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಅನ್ನೋ ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಅವರು ಸರಿಯಾದ ಆಹಾರವನ್ನು ಸೇವಿಸದೆ ಮತ್ತು ವ್ಯಾಯಾಮದಲ್ಲಿ ತೊಡಗದೆ ಪ್ರೋಟೀನ್ ಶೇಕ್ ಕುಡಿಯುತ್ತಾರೆ. ಮೊದಲನೆಯದಾಗಿ, ತೂಕ ಕಡಿಮೆ ಮಾಡಿಕೊಳ್ಳುವುದು ಹೆಚ್ಚಾಗಿ ನಮ್ಮ ದೈನಂದಿನ ಕ್ಯಾಲೊರಿ ಸೇವನೆ ಮತ್ತು ಎಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೇವೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ.


ಪ್ರತಿದಿನ, ನೀವು ಪ್ರತಿ ಕಿಲೋಗ್ರಾಂ ತೂಕಕ್ಕೆ 0.8-1 ಗ್ರಾಂ ಪ್ರೋಟೀನ್ ಸೇವಿಸಬೇಕು. ನೀವು 60 ಕೆಜಿ ತೂಕವಿದ್ದರೆ, ನಿಮ್ಮ ಪ್ರೋಟೀನ್ ಸೇವನೆ 48-60 ಗ್ರಾಂ ನಡುವೆ ಇರಬೇಕು. ತೂಕ ಕಡಿಮೆ ಮಾಡಿಕೊಳ್ಳುವ ಸಮಯದಲ್ಲಿ ಪ್ರೋಟೀನ್ ಶೇಕ್ ಅನ್ನು ಸೇವಿಸಬಹುದು, ಆದರೆ ನೀವು ವ್ಯಾಯಾಮ ಮಾಡುತ್ತಿದ್ದರೆ ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸುತ್ತಿದ್ದರೆ ಮಾತ್ರ ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.


ಸರಿಯಾದ ಸಮಯದಲ್ಲಿ ಪ್ರೋಟೀನ್ ಶೇಕ್ ತೆಗೆದುಕೊಳ್ಳದಿರುವುದು


ನಿಮ್ಮ ಪ್ರೋಟೀನ್ ಶೇಕ್ ತೆಗೆದುಕೊಳ್ಳುವ ಸಮಯವನ್ನು ನಿಗದಿಪಡಿಸುವುದು ಅನೇಕರು ಮಾಡುವ ಮತ್ತೊಂದು ಪ್ರಮುಖ ತಪ್ಪು ಆಗಿದೆ. ಊಟ ಮಾಡುವ ಸ್ವಲ್ಪ ಮುಂಚೆ ಮತ್ತು ಉಟವಾದ ಸ್ವಲ್ಪ ಹೊತ್ತಿನ ನಂತರ ನೀವು ಪ್ರೋಟೀನ್ ಶೇಕ್ ಗಳನ್ನು ಸೇವಿಸಬಾರದು.


ಪ್ರೋಟೀನ್ ಶೇಕ್


ಅಂತೆಯೇ, ವ್ಯಾಯಾಮ ಶುರು ಮಾಡುವ ಕೆಲವು ಗಂಟೆಗಳ ಮೊದಲು ಅಥವಾ ವ್ಯಾಯಾಮ ಮಾಡಿದ ಕೆಲವು ಗಂಟೆಗಳ ನಂತರ ಪ್ರೋಟೀನ್ ಶೇಕ್ ಅನ್ನು ಸೇವಿಸಬೇಡಿ. ಸಾಮಾನ್ಯವಾಗಿ, ವ್ಯಾಯಾಮ ಮಾಡಿದ ನಂತರದ 30 ರಿಂದ 40 ನಿಮಿಷಗಳ ಒಳಗೆ ಪ್ರೋಟೀನ್ ಶೇಕ್ ಸೇವನೆ ಸೂಕ್ತವಾಗಿದೆ.


ತಪ್ಪು ಪ್ರಮಾಣದ ಪ್ರೋಟೀನ್ ಶೇಕ್ ಬಳಕೆ


ತುಂಬಾ ಕಡಿಮೆ ಅಥವಾ ಹೆಚ್ಚು ಪ್ರೋಟೀನ್ ಪುಡಿಯನ್ನು ತೆಗೆದುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ನೀವು ಬಳಸಬೇಕಾದ ಪ್ರೋಟೀನ್ ಪುಡಿಯ ಪ್ರಮಾಣವು ನಿಮ್ಮ ದೇಹದ ತೂಕ ಮತ್ತು ನಿಮ್ಮ ಜಿಮ್ ತಾಲೀಮುಗಳನ್ನು ಅವಲಂಬಿಸಿರುತ್ತದೆ.


ನೀವು ಈಗಷ್ಟೇ ವ್ಯಾಯಾಮ ಮಾಡಲು ಪ್ರಾರಂಭಿಸಿದ್ದರೆ, ನಿಮ್ಮ ದೇಹಕ್ಕೆ ಸರಿಹೊಂದುತ್ತದೆಯೇ ಅಥವಾ ಇಲ್ಲವೇ ಎಂದು ನೋಡಲು 3-4 ದಿನಗಳವರೆಗೆ ಅರ್ಧ ಸ್ಕೂಪ್ ಪ್ರೋಟೀನ್ ಪುಡಿಯನ್ನು ಸೇವಿಸಿ ನೋಡಿ. ಕೆಲವು ಜನರು ಪ್ರೋಟೀನ್ ಶೇಕ್ ಕುಡಿದಾದ ನಂತರ ಅಜೀರ್ಣ ಮತ್ತು ಹೊಟ್ಟೆ ಉಬ್ಬರವನ್ನು ಅನುಭವಿಸುತ್ತಾರೆ. ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ಪುಡಿಯನ್ನು ಬಳಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಪ್ರೋಟೀನ್ ಪುಡಿ ನಿಮಗೆ ಸರಿಹೊಂದಿದರೆ, ನಿಮ್ಮ ಅಗತ್ಯಗಳನ್ನು ಅವಲಂಬಿಸಿ ನೀವು ಸುಲಭವಾಗಿ ದಿನಕ್ಕೆ 1-2 ಸ್ಕೂಪ್ ಗಳಿಗೆ ಬದಲಾಯಿಸಿಕೊಳ್ಳಬಹುದು.


ಕಡಿಮೆ ಗುಣಮಟ್ಟದ ಪ್ರೋಟೀನ್ ಬಳಸುವುದು


ಪ್ರೋಟೀನ್ ಪುಡಿಯ ವಿಷಯಕ್ಕೆ ಬಂದಾಗ, ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಕಡಿಮೆ ಬೆಲೆಯ ಕಾರಣದಿಂದಾಗಿ ನೀವು ಕಡಿಮೆ ಗುಣಮಟ್ಟದ ಪ್ರೋಟೀನ್ ಪುಡಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಅದು ನಿಮ್ಮ ದೇಹದ ಮೇಲೆ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು.


ಪ್ರೋಟೀನ್ ಶೇಕ್


ಯಾವಾಗಲೂ ವಿಶ್ವಾಸಾರ್ಹ ಮತ್ತು ಪ್ರಮಾಣೀಕೃತ ಬ್ರ್ಯಾಂಡ್ ನಿಂದ ಪ್ರೋಟೀನ್ ಪುಡಿಯನ್ನು ಅವರ ಅಧಿಕೃತ ವೆಬ್ಸೈಟ್ ನಿಂದ ಅಥವಾ ಪರವಾನಗಿ ಪಡೆದ ಮಾರಾಟಗಾರರಿಂದ ಖರೀದಿಸಿ.


ಸರಿಯಾಗಿ ಮಿಶ್ರಣ ಮಾಡದೇ ಇರುವುದು


ಪ್ರೋಟೀನ್ ಪುಡಿಗಳು ಹಾಲಿನಲ್ಲಿ ಹಾಕಿದಾಗ ಚಿಕ್ಕ ಚಿಕ್ಕ ಉಂಡೆಗಳಾಗುತ್ತವೆ ಮತ್ತು ಆದ್ದರಿಂದ ಅದು ಹಾಲಿನಲ್ಲಿ ಚೆನ್ನಾಗಿ ಬೆರೆಯಲು ಅದನ್ನು ಚೆನ್ನಾಗಿ ಕಲಕಿ. ಇದಕ್ಕಾಗಿ ನೀವು ಶೇಕ್ ಮಾಡುವ ಶೇಕರ್ ಗಳನ್ನು ಬಳಸುವುದು.


ಇದು ಚಿಕ್ಕ ಚಿಕ್ಕ ಉಂಡೆಗಳನ್ನು ಒಡೆಯಲು ಸಹಾಯ ಮಾಡುತ್ತದೆ ಮತ್ತು ಪ್ರೋಟೀನ್ ಪುಡಿಯನ್ನು ಸರಿಯಾಗಿ ಕರಗಲು ಸಹಾಯ ಮಾಡುತ್ತದೆ. ನೀವು ಶೇಕರ್ ಅನ್ನು ಸಂಪೂರ್ಣವಾಗಿ ತುಂಬಿಸಬೇಡಿ, ಏಕೆಂದರೆ ಅದನ್ನು ಪೂರ್ತಿಯಾಗಿ ತುಂಬಿಸಿದರೆ ಅದನ್ನು ಅಲುಗಾಡಿಸುವುದು ಕಷ್ಟವಾಗುತ್ತದೆ.


ಪ್ರೋಟೀನ್ ಶೇಕ್ ಮೇಲೆ ಅತಿಯಾಗಿ ಅವಲಂಬಿತವಾಗುವುದು


ಪ್ರೋಟೀನ್ ನ ದೈನಂದಿನ ಅಗತ್ಯವನ್ನು ಪೂರೈಸಲು ಪ್ರೋಟೀನ್ ಶೇಕ್ ಗಳನ್ನು ಅವಲಂಬಿಸುವುದು ಅನೇಕ ಜನರು ಮಾಡುವ ಮತ್ತೊಂದು ಗಂಭೀರವಾದ ತಪ್ಪು. ನಿಮ್ಮ ಆಹಾರದಿಂದ ಗರಿಷ್ಠ ಪ್ರಮಾಣದ ಪ್ರೋಟೀನ್ ಅನ್ನು ನೀವು ಮೊದಲು ತೆಗೆದುಕೊಳ್ಳಬೇಕು. ನೀವು ಸಸ್ಯಾಹಾರಿಗಳಾಗಿದ್ದರೆ, ಪನೀರ್ ಮತ್ತು ಸೋಯಾವನ್ನು ಹೆಚ್ಚಾಗಿ ಸೇವಿಸಬೇಕು.
ಇದನ್ನೂ ಓದಿ: Protein Diet: ಜಾಸ್ತಿ ಪ್ರೋಟಿನ್​​ ಸೇವಿಸಿದ್ರೂ ಆರೋಗ್ಯ ಸಮಸ್ಯೆ ಉಂಟಾಗುತ್ತೆ, ಎಚ್ಚರಿಕೆ!

top videos


  ಒಂದು ವೇಳೆ ಮಾಂಸಾಹಾರಿಗಳಾಗಿದ್ದರೆ ನೀವು ಮೊಟ್ಟೆ, ಚಿಕನ್ ಮತ್ತು ಮೀನಿನಂತಹ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ನೀವು ಸೇವಿಸುವ ಪ್ರತಿ ಊಟದಲ್ಲಿ ಪ್ರೋಟೀನ್ ನ ಒಂದು ಭಾಗವನ್ನು ನೀವು ಹೊಂದಿರಬೇಕು. ಆಹಾರದ ಮೂಲಕ ಪಡೆದ ಪ್ರೋಟೀನ್ ಸೇವನೆ ಇನ್ನೂ ಕಡಿಮೆ ಅಂತ ಅನ್ನಿಸಿದರೆ, ಆಗ ಪ್ರೋಟೀನ್ ಶೇಕ್ ಅನ್ನು ಕುಡಿಯಬಹುದು.

  First published: