ದೇಹದ ಆರೋಗ್ಯ (Healthy) ನಮಗೆ ಎಷ್ಟು ಮುಖ್ಯವಾಗಿರುತ್ತದೆಯೋ, ಮುಖದ ಚರ್ಮದ ಆರೋಗ್ಯವು (Skin Care) ಸಹ ಅಷ್ಟೇ ಮುಖ್ಯವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬಹುತೇಕರು ತಮ್ಮ ಮುಖದ ಚರ್ಮದ ಆರೈಕೆಗಾಗಿ ಏನೆಲ್ಲಾ ರಾಸಾಯನಿಕ ಕ್ರೀಂಗಳನ್ನು (Chemical Cream) ಮತ್ತು ನೈಸರ್ಗಿಕವಾಗಿ ಸಿಗುವ ಹಣ್ಣುಗಳಿಂದ (Fruits) ಮತ್ತು ತರಕಾರಿಗಳಿಂದ (Vegetables) ಮುಖದ ಚರ್ಮವನ್ನು ಕಾಪಾಡಿಕೊಳ್ಳಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ ಅಂತ ಹೇಳಬಹುದು. ಮೂಲಭೂತ ಸೌಂದರ್ಯ ನಿಯಮವನ್ನು ಅನುಸರಿಸುವುದು ಚರ್ಮವನ್ನು ಪೋಷಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಆ ಹೊಳಪನ್ನು ಒಳಗಿನಿಂದ ಹೊರ ತರುತ್ತದೆ ಎನ್ನಬಹುದು. ನಿಮ್ಮ ಮುಖದಂತೆಯೇ, ನಿಮ್ಮ ಕಣ್ಣುಗಳ ಕೆಳಗಿನ ಆ ಚರ್ಮದ ಆರೈಕೆಯು ಸಹ ತುಂಬಾನೇ ಮುಖ್ಯವಾಗಿರುತ್ತದೆ ಅಂತ ಅನೇಕ ಮಂದಿಗೆ ತಿಳಿದಿರುವುದಿಲ್ಲ ನೋಡಿ.
ಹೌದು.. ನಿಮ್ಮ ಮುಖದ ಚರ್ಮದ ಮೇಲಿನ ಪ್ರೀತಿ ನಿಮ್ಮ ಕಣ್ಣುಗಳ ಕೆಳಗಿನ ಚರ್ಮದ ಬಗ್ಗೆಯೂ ಇರಲಿ. ಏಕೆಂದರೆ ಈ ಭಾಗವನ್ನು ನಿರ್ಲಕ್ಷ್ಯ ಮಾಡಿದರೆ ಅಲ್ಲಿ ಕಪ್ಪು ಕಲೆಗಳು, ಕಪ್ಪು ಛಾಯೆ ಆವರಿಸಿಕೊಂಡು ಬಿಡುವುದು ಗ್ಯಾರೆಂಟಿ. ಏಕೆಂದರೆ ಕಣ್ಣುಗಳ ಕೆಳಗಿನ ಚರ್ಮವು ಸಾಕಷ್ಟು ಸೂಕ್ಷ್ಮವಾಗಿರುತ್ತದೆ. ಇದನ್ನು ಅನೇಕರು ನಿರ್ಲಕ್ಷ್ಯ ಮಾಡುವುದರಿಂದಲೇ ಕಪ್ಪು ವೃತ್ತಗಳು, ಸೂಕ್ಷ್ಮ, ಸುಕ್ಕುಗಳು ಮತ್ತು ಹೆಚ್ಚಿನ ಕಲೆಗಳಿಗೆ ಇದು ಕಾರಣವಾಗುತ್ತದೆ.
ಕಣ್ಣುಗಳ ಕೆಳಭಾಗವನ್ನು ನಿರ್ದಿಷ್ಟವಾಗಿ ಪೂರೈಸುವ ಚರ್ಮದ ಆರೈಕೆ ಉತ್ಪನ್ನಗಳು ಹೇರಳವಾಗಿದ್ದರೂ, ಈ ಉತ್ಪನ್ನಗಳಲ್ಲಿ ಬಳಸಲಾಗುವ ಪದಾರ್ಥಗಳ ಬಗ್ಗೆ ಮತ್ತು ಅವು ಪ್ರದೇಶದ ಸುತ್ತಲಿನ ಚರ್ಮಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನೀವು ತಿಳಿದಿರಬೇಕು. ಕಣ್ಣುಗಳ ಕೆಳಗಿನ ಚರ್ಮದ ಮೇಲಿನ ಕಪ್ಪು ವರ್ತುಲಗಳು ಅಥವಾ ವಯಸ್ಸಾದ ಚಿಹ್ನೆಗಳನ್ನು ತೊಡೆದು ಹಾಕಲು ವಿವಿಧ ಉತ್ಪನ್ನಗಳೊಂದಿಗೆ ಪ್ರಯೋಗ ಮಾಡುತ್ತಿದ್ದರೆ, ನೀವು ಖಂಡಿತವಾಗಿಯೂ ಈ ಪದಾರ್ಥಗಳನ್ನು ನಿಮ್ಮ ಕಣ್ಣುಗಳ ಕೆಳಗಿನ ಚರ್ಮಕ್ಕೆ ತಾಕಿಸಬೇಡಿ.
ಈ ಐದು ಪದಾರ್ಥಗಳನ್ನು ನೀವು ಎಂದಿಗೂ ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿಕೊಳ್ಳಬೇಡಿ
1. ಸ್ಯಾಲಿಸಿಲಿಕ್ ಆಸಿಡ್: ಈ ಆಮ್ಲವು ನಿಮ್ಮ ಮುಖದ ಮೇಲೆ ಅದ್ಭುತಗಳನ್ನು ಮಾಡುತ್ತದೆಯಾದರೂ, ಈ ಪದಾರ್ಥವನ್ನು ನಿಮ್ಮ ಕಣ್ಣುಗಳ ಕೆಳಗೆ ಅನ್ವಯಿಸುವುದರಿಂದ ಕಿರಿಕಿರಿ ಮತ್ತು ಶುಷ್ಕತೆಗೆ ಕಾರಣವಾಗಬಹುದು ಮತ್ತು ಇದು ಸುಕ್ಕುಗಳು ಆಗುವುದನ್ನು ಇನ್ನಷ್ಟು ಹೆಚ್ಚಿಸುತ್ತದೆ.
2. ಸ್ಟೀರಾಯ್ಡ್ ಗಳು: ಕಣ್ಣುಗಳ ಕೆಳಗೆ ಸ್ಟಿರಾಯ್ಡ್ ಗಳನ್ನು ಹಚ್ಚಿಕೊಳ್ಳುವುದರಿಂದ ಅಲರ್ಜಿ ಮತ್ತು ಸೂರ್ಯನ ಅಡಿಯಲ್ಲಿ ಹೆಚ್ಚು ಸಂವೇದನಾಶೀಲತೆಗೆ ಕಾರಣವಾಗಬಹುದು.ಬೋಲ್ಡ್‌ಕ್ಸಿ ಪ್ರಕಾರ, ಕಪ್ಪು ವರ್ತುಲಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲು ರೆಟಿನಾಲ್ ಅಥವಾ ಹೈಲುರೊನಿಕ್ ಆಸಿಡ್ ತುಂಬಿದ ಉತ್ಪನ್ನಗಳನ್ನು ಬಳಸಬೇಕು.
3. ಸಂಶ್ಲೇಷಿತ ಸುಗಂಧ : ನಿಮ್ಮ ಕಣ್ಣುರೆಪ್ಪೆಗಳ ಬಳಿ ಸಂಶ್ಲೇಷಿತ ಸುಗಂಧ ದ್ರವ್ಯಗಳನ್ನು ಹಚ್ಚಿಕೊಳ್ಳುವುದರಿಂದ ಕಿರಿಕಿರಿ ಮತ್ತು ಉರಿಯೂತವನ್ನು ಉಂಟು ಮಾಡುತ್ತದೆ ಮತ್ತು ಅಷ್ಟೇ ಅಲ್ಲದೆ ಇದು ನಿಮ್ಮ ದೃಷ್ಟಿಯನ್ನು ದುರ್ಬಲಗೊಳಿಸುತ್ತದೆ. ಕನಿಷ್ಠ ಅಥವಾ ನೈಸರ್ಗಿಕ ಸುಗಂಧವನ್ನು ಹೊಂದಿರುವ ಉತ್ಪನ್ನಗಳನ್ನು ಆರಿಸಿಕೊಳ್ಳಿರಿ.
4. ಫಾರ್ಮಾಲ್ಡಿಹೈಡ್: ಈ ಪದಾರ್ಥವನ್ನು ಹೊಂದಿರುವ ಕ್ರೀಂ ಮತ್ತು ಇನ್ನಿತರೆ ಉತ್ಪನ್ನಗಳ ಬಗ್ಗೆ ತುಂಬಾನೇ ಜಾಗರೂಕರಾಗಿರಿ, ಏಕೆಂದರೆ ಇದು ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು, ಇದು ತುರಿಕೆ, ಕೆಂಪು ದದ್ದುಗಳು ಮತ್ತು ಗುಳ್ಳೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: Eye Care: ಮಧುಮೇಹಿಗಳು ಕಣ್ಣಿನ ಆರೈಕೆಯನ್ನು ಈ ರೀತಿ ಮಾಡಬೇಕಂತೆ
4. ಆಲ್ಕೋಹಾಲ್: ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಆಲ್ಕೋಹಾಲ್ ಬಗ್ಗೆ ತುಂಬಾನೇ ಹುಷಾರಾಗಿರಿ, ಏಕೆಂದರೆ ಚರ್ಮದ ಮೇಲೆ ಆಲ್ಕೋಹಾಲ್ ಬಳಸುವುದರಿಂದ ಅದರ ರಕ್ಷಣಾತ್ಮಕ ಪದರಕ್ಕೆ ಹಾನಿಯಾಗಬಹುದು. ತೇವಾಂಶವನ್ನು ಹೀರಿಕೊಳ್ಳಬಹುದು, ಶುಷ್ಕ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಎಣ್ಣೆಯುಕ್ತ ಚರ್ಮವನ್ನು ಹೊಂದಿರುವ ಜನರಿಗೆ ಇದು ತುಂಬಾನೇ ಹಾನಿಕಾರಕವಾಗಿದೆ. ಆದ್ದರಿಂದ, ಇದನ್ನು ಕಣ್ಣುಗಳ ಕೆಳಗೆ ಹಚ್ಚುವುದರಿಂದ ಕೆಲವು ಗಂಭೀರ ಸುಟ್ಟಗಾಯಗಳಿಗೆ ಕಾರಣವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ