5 Hour Rule: ಇದೇನಿದು 5 ಗಂಟೆಗಳ ನಿಯಮ? ಎಲೋನ್ ಮಸ್ಕ್ ಮತ್ತು ಬಿಲ್ ಗೇಟ್ಸ್ ಸಹ ಇದನ್ನೇ ಫಾಲೋ ಮಾಡ್ತಾರಂತೆ

ನೀವು '5 ಹವರ್ ರೂಲ್' ಎಂದರೆ ಕನ್ನಡದಲ್ಲಿ ‘5 ಗಂಟೆಗಳ ನಿಯಮ’ ದ ಬಗ್ಗೆ ಎಂದಾದರೂ ಕೇಳಿದ್ದೀರಾ? ಯಾವಾಗಲೂ ಹೊಸದನ್ನು ಕಲಿಯಲು ಅಥವಾ ವಾರದಲ್ಲಿ ಐದು ದಿನಗಳ ಕೆಲಸದ ವೇಳೆಯ ನಡುವೆ ಒಂದು ಗಂಟೆಯನ್ನು ಪಕ್ಕಕ್ಕೆ ಇರಿಸಿ, ಆ ಗಂಟೆಯಲ್ಲಿ ತಮ್ಮನ್ನು ತಾವು ಬೇರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದೇ ಇದರ ತಾತ್ಪರ್ಯ. 

ಎಲೋನ್ ಮಸ್ಕ್ ಮತ್ತು ಬಿಲ್ ಗೇಟ್ಸ್

ಎಲೋನ್ ಮಸ್ಕ್ ಮತ್ತು ಬಿಲ್ ಗೇಟ್ಸ್

  • Share this:
ಹಣದ ಜೊತೆಗೆ ಜನಪ್ರಿಯತೆಯನ್ನು ಗಳಿಸಿರುವ ದೊಡ್ಡ ದೊಡ್ಡ ವ್ಯಕ್ತಿಗಳ (Persons) ಬದುಕನ್ನು ಒಮ್ಮೆ ನೋಡಿದರೆ ನಮಗೆ ಸ್ಪಷ್ಟವಾಗಿ ಅರ್ಥವಾಗುವುದು ಎಂದರೆ ಅವರ ಪರಿಶ್ರಮ ಮತ್ತು ಅವರು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿರುವಂತಹ ಕೆಲವು ಒಳ್ಳೆಯ ವಿಷಯಗಳು (Good things) ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು '5 ಹವರ್ ರೂಲ್' ಎಂದರೆ ಕನ್ನಡದಲ್ಲಿ ‘5 ಗಂಟೆಗಳ ನಿಯಮ’ (5 Hour Rule) ದ ಬಗ್ಗೆ ಎಂದಾದರೂ ಕೇಳಿದ್ದೀರಾ? ಯಾವಾಗಲೂ ಹೊಸದನ್ನು ಕಲಿಯಲು ಅಥವಾ ವಾರದಲ್ಲಿ ಐದು ದಿನಗಳ ಕೆಲಸದ ವೇಳೆಯ (Working Time) ನಡುವೆ ಒಂದು ಗಂಟೆಯನ್ನು ಪಕ್ಕಕ್ಕೆ ಇರಿಸಿ, ಆ ಗಂಟೆಯಲ್ಲಿ ತಮ್ಮನ್ನು ತಾವು ಬೇರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದೇ ಇದರ ತಾತ್ಪರ್ಯ. 

ನೀವು ಪ್ರತಿದಿನ ಕೆಲಸದಲ್ಲಿ ಹೊಸ ಹೊಸ ವಿಷಯಗಳನ್ನು ಕಲೆಯುತ್ತಾ ಮತ್ತು ನಿಮ್ಮ ಸಾಮರ್ಥ್ಯವನ್ನು ಮತ್ತು ನಿಮಗಿರುವ ಮಾಹಿತಿಯನ್ನು ಹೆಚ್ಚು ಮಾಡಿಕೊಳ್ಳುವ ಮೂಲಕ ನೀವು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಪ್ರಗತಿ ಸಾಧಿಸಬಹುದು. ಹೆಚ್ಚುವರಿಯಾಗಿ, ನಿರ್ದಿಷ್ಟ ವಿಷಯಗಳ ಬಗ್ಗೆ ನಿಮ್ಮ ಜ್ಞಾನವನ್ನು ಅಪ್ಡೇಟ್ ಮಾಡಿಕೊಳ್ಳಲು ಈ ನಿಯಮ ನಿಮಗೆ ಸಹಾಯ ಮಾಡಬಹುದು.

‘5 ಗಂಟೆಗಳ ನಿಯಮ’ ದ ಮುಖ್ಯವಾದ ಉದ್ದೇಶವೆಂದರೆ ಉದ್ದೇಶ ಪೂರ್ವಕ ಕಲಿಕೆಗೆ ವಾರಕ್ಕೆ ಕನಿಷ್ಠ ಐದು ಗಂಟೆಗಳ ಕಾಲ ಹೂಡಿಕೆ ಮಾಡುವುದು ಎಂದರ್ಥ. ನೀವು ಎಷ್ಟೇ ಯಶಸ್ವಿ ವ್ಯಕ್ತಿಯಾಗಿದ್ದರೂ ಅಥವಾ ಜ್ಞಾನವಂತರಾಗಿದ್ದರೂ ಸಹ ಇದರಿಂದ ನೀವು ಅಗಾಧವಾದ ದೀರ್ಘಕಾಲೀನ ಪ್ರಯೋಜನಗಳನ್ನು ಹೊಂದಬಹುದು. ಇದನ್ನು ಬಳಸುವವರಲ್ಲಿ ಹೆಚ್ಚಿನವರು ಸಮಯವನ್ನು ಮೂರು ವಿಭಿನ್ನ ವರ್ಗಗಳಾಗಿ ವಿಂಗಡಿಸುತ್ತಾರೆ:

  • ಓದುವುದು
    ನಿಯಮಿತವಾಗಿ ಓದುವುದು ನಿಮಗೆ ವಿಶ್ರಾಂತಿ ಪಡೆಯಲು ಮತ್ತು ಕ್ರಮೇಣ ನಿಮ್ಮ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆ ಸಮಯವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಬಳಸಲು ನಿಮಗೆ ಸಾಮಾನ್ಯವಾಗಿ ಓದುವ ಗುರಿಗಳು ಬೇಕಾಗುತ್ತವೆ, ಅದನ್ನು ದಿನಕ್ಕೆ ನಿರ್ದಿಷ್ಟ ಸಂಖ್ಯೆಯ ಅಧ್ಯಾಯಗಳಾಗಿ ಅಥವಾ ತಿಂಗಳಿಗೆ ಇಷ್ಟು ಪುಸ್ತಕಗಳನ್ನು ನಾನು ಓದಲೇಬೇಕು ಎಂದು ನಿಗದಿಪಡಿಸಿಕೊಳ್ಳುವುದು.


ಇದನ್ನೂ ಓದಿ: Ratan Tata: ಯುವ ತಂಡದ ಬೆನ್ನಿಗೆ ನಿಂತ ರತನ್​ ಟಾಟಾ! ಈ ಕಂಪೆನಿಯಲ್ಲಿ ಇನ್ವೆಸ್ಟ್​ ಮಾಡ್ತಾರಂತೆ ದಿಗ್ಗಜ ಉದ್ಯಮಿ

ಸ್ಪೇಸ್ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ರಾಕೆಟ್ ಗಳನ್ನು ಹೇಗೆ ನಿರ್ಮಿಸಬೇಕೆಂದು ಕಲಿಯಲು ಓದುತ್ತಾರೆ. ಮತ್ತೊಂದೆಡೆ, ಬಿಲ್ ಗೇಟ್ಸ್ ಅವರು ತಮ್ಮ ರಜಾ ದಿನಗಳಲ್ಲಿ ಪುಸ್ತಕಗಳನ್ನು ತರುವುದರಲ್ಲಿ ಹೆಸರುವಾಸಿಯಾಗಿದ್ದಾರೆ ಮತ್ತು ವರ್ಷಕ್ಕೆ ಕನಿಷ್ಠ 50 ಸಂಪುಟಗಳನ್ನು ಓದುತ್ತಾರೆ ಎಂದು ನಂಬಲಾಗಿದೆ. ನೀವು ಪುಸ್ತಕವನ್ನು ಓದಲು ಪ್ರಾರಂಭಿಸಬೇಕು. ನೀವು ನಿಮ್ಮನ್ನು ನಿಧಾನಗತಿಯ ಓದುಗ ಎಂದು ಪರಿಗಣಿಸಿದರೆ, ನೀವು ಮೊದಲು ಒಂದು ಅಧ್ಯಾಯವನ್ನು ಮುಗಿಸುವ ಮೂಲಕ ಪ್ರಾರಂಭಿಸಬಹುದು. ನೀವು ಹೊಸ ಓದುಗನಾಗಿದ್ದರೆ, ನೀವು ಓದಲು ಸುಲಭವಾದ ಪುಸ್ತಕಗಳಿಂದ ಪ್ರಾರಂಭಿಸಬಹುದು.

  • ಪ್ರಯೋಗಿಸುವುದು
    ಹೊಸ ವಿಷಯಗಳನ್ನು ತಿಳಿದುಕೊಳ್ಳಲು, ಜ್ಞಾನವನ್ನು ಸಂಪಾದಿಸಲು ಮತ್ತು ಹೊಸ ಊಹೆಗಳನ್ನು ಪರೀಕ್ಷಿಸಲು ನೀವು ನಿಮ್ಮ ಐದು ಗಂಟೆಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಶೈಕ್ಷಣಿಕ ಜ್ಞಾನವನ್ನು ಕಾರ್ಯರೂಪಕ್ಕೆ ತರುವ ಮೂಲಕ ನೀವು ಹೆಚ್ಚು ನವೀನ ಮತ್ತು ಸೃಜನಶೀಲರಾಗಬಹುದು. ನೀವು ವಿಫಲವಾದ ಪ್ರಯೋಗಗಳನ್ನು ಬೋಧನಾ ಸಾಧನವಾಗಿ ಸಹ ಬಳಸಬಹುದು.


ಎಲೋನ್ ಮಸ್ಕ್ ಹೊಸ ವಿಷಯಗಳನ್ನು ಪ್ರಯತ್ನಿಸುವ ಧೈರ್ಯ ಮಾಡದಿದ್ದರೆ, ಸ್ಪೇಸ್ ಎಕ್ಸ್, ರಾಕೆಟ್ ಅನ್ನು ಕಕ್ಷೆಗೆ ಉಡಾಯಿಸಿದ ಮತ್ತು ಅದನ್ನು ಯಾವುದೇ ಹಾನಿಯಿಲ್ಲದೆ ಭೂಮಿಯ ಮೇಲೆ ಇಳಿಸಿದ ಮೊದಲ ಖಾಸಗಿ ಸಂಸ್ಥೆಯಾಗಿರುತ್ತಿರಲಿಲ್ಲ. ಪುಸ್ತಕಗಳಿಂದ ಕಲಿತ ಮಾಹಿತಿಯನ್ನು ಪ್ರಾಯೋಗಿಕವಾಗಿ ಬಳಸಲು ಸಹ ಮಸ್ಕ್ ಅವರು ಸಲಹೆ ನೀಡುತ್ತಾರೆ.

  • ವಿಶ್ಲೇಷಣೆ ಮಾಡುವುದು
    ಮಾಹಿತಿಯನ್ನು ವಿಶ್ಲೇಷಿಸುವುದನ್ನು ಐಡಿಯಾಟಿಂಗ್ ಎಂದು ಕರೆಯಲಾಗುತ್ತದೆ. ಪ್ರತಿ ವಾರ ನೀವು ಲಭ್ಯವಿರುವ ಐದು ಗಂಟೆಗಳನ್ನು ಓದಲು ಮತ್ತು ನಂತರ ನೀವು ಪುಸ್ತಕಗಳಿಂದ ಪಡೆದ ಜ್ಞಾನವನ್ನು ಪ್ರತಿಬಿಂಬಿಸಲು ಬಳಸಬಹುದು, ಜೊತೆಗೆ ಕೆಲಸದಲ್ಲಿ ಅಥವಾ ನಿಮ್ಮ ವೈಯಕ್ತಿಕ ಜೀವನದಲ್ಲಿ ವಿವಿಧ ಘಟನೆಗಳ ಬಗ್ಗೆ ಪ್ರತಿಬಿಂಬಿಸಬಹುದು.


ಇದನ್ನೂ ಓದಿ: Success Story: 85ರಲ್ಲಿ ಪತ್ನಿ ಜೊತೆ ಬ್ಯುಸಿನೆಸ್​ ಆರಂಭಿಸಿದ ಅಜ್ಜ! ಚಿಕ್ಕ ವಯಸ್ಸಿನ ಕನಸು ಕೊನೆಗೂ ನನಸಾಯಿತು

ಪುಸ್ತಕವನ್ನು ಓದಿ ಮುಗಿಸಿದ ನಂತರ, ನಿಮ್ಮ ಆಲೋಚನೆಗಳನ್ನು ಬರವಣಿಗೆಯಲ್ಲಿ ಇಡಲು ಪ್ರಯತ್ನಿಸಿ. ದಿನದ ಘಟನೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಮತ್ತು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಕಾಲಾನಂತರದಲ್ಲಿ ಸ್ಪಷ್ಟವಾಗುತ್ತದೆ. ನಿಮ್ಮ ತಲೆಯಲ್ಲಿ ನೀವು ಹೊಂದಿರುವ ಯಾವುದೇ ಪ್ರಶ್ನೆಗಳನ್ನು ಸಹ ನೀವು ಬರೆಯಬಹುದು. ಅದೇ ಸಮಯದಲ್ಲಿ, ಹೊಸ ಮಾಹಿತಿಯನ್ನು ಕಲಿಯಲು ಮತ್ತು ಹಿಂದೆ ಕಲಿತ ವಿಷಯವನ್ನು ನವೀಕರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
Published by:Ashwini Prabhu
First published: