ಅಜೀರ್ಣ ಸಮಸ್ಯೆಯೇ? ಇಲ್ಲಿದೆ ಐದು ನೈಸರ್ಗಿಕ ಪರಿಹಾರಗಳು

ಶಂಖ ಭಸ್ಮವು ಆಯುರ್ವೇದ ಪದ್ಧತಿ ಮೂಲಕ ತಯಾರಿಸುವ ಪುಡಿಯಾಗಿದೆ. ಈ ಪುಡಿಯ ಸೇವನೆಯಿಂದ ಹಸಿವು ಹೆಚ್ಚುವುದಲ್ಲದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ.

zahir | news18
Updated:January 1, 2019, 9:25 PM IST
ಅಜೀರ್ಣ ಸಮಸ್ಯೆಯೇ? ಇಲ್ಲಿದೆ ಐದು ನೈಸರ್ಗಿಕ ಪರಿಹಾರಗಳು
ಸಾಂದರ್ಭಿಕ ಚಿತ್ರ
  • News18
  • Last Updated: January 1, 2019, 9:25 PM IST
  • Share this:
ಆಧುನಿಕ ಜೀವನ ಶೈಲಿ, ದೈಹಿಕ ಚಟುವಟಿಕೆಗಳ ಕೊರತೆ, ನಿದ್ರಾಹೀನತೆ, ಜಂಕ್ ಫುಡ್​ಗಳ ಸೇವನೆಯಿಂದ ಜೀರ್ಣಕ್ರಿಯೆಯ ಸಮಸ್ಯೆ ಸೇರಿದಂತೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತದೆ. ಜೀರ್ಣಕ್ರಿಯೆಯು ನಿಧಾನಗೊಳ್ಳುವುದರಿಂದ ಮಲಬದ್ಧತೆ, ವಾಯು, ಹೊಟ್ಟೆಯ ಊದುವಿಕೆ, ಗ್ಯಾಸ್ಟಿಕ್ ಸೇರಿದಂತೆ ಇನ್ನಿತರ ತೊಂದರೆಗಳು ಉಂಟಾಗುತ್ತದೆ. ಇಂತಹ ಸಮಸ್ಯೆಗಳನ್ನು ಆರಂಭದಲ್ಲೇ ನೈಸರ್ಗಿಕವಾಗಿ ಸಿಗುವಂತಹ ಪದಾರ್ಥಗಳಿಂದ ಹೋಗಲಾಡಿಸಿಕೊಳ್ಳಬಹುದು. ಅಂತಹ ಕೆಲ ಔಷಧೀಯ ಗುಣಗಳಿರುವ ಕೆಲ ಪದಾರ್ಥಗಳನ್ನು ಇಲ್ಲಿ ತಿಳಿಸಲಾಗಿದೆ.

ಶುಂಠಿ
ಶುಂಠಿ ಇರದ ಭಾರತೀಯ ಅಡುಗೆ ಮನೆ ಇರಲ್ಲ ಎನ್ನಬಹುದು. ಏಕೆಂದರೆ ಭಾರತೀಯ ಪಾಕ ವಿಧಾನದಲ್ಲಿ ಶುಂಠಿಗೆ ತನ್ನದೇಯಾದ ಸ್ಥಾನವಿದೆ. ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಸಲುವಾಗಿ ದೇಸಿ ಅಡುಗೆಗಳಲ್ಲಿ ಶುಂಠಿಯನ್ನು ಬಳಸಲಾಗುತ್ತದೆ. ಹಾಗೆಯೇ ಜೀರ್ಣಕ್ರಿಯೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಮೊದಲ ಮನೆಮದ್ದು ಶುಂಠಿ ಆಗಿದೆ. ಶುಂಠಿಯನ್ನು ರಸ ಅಥವಾ ಆಹಾರದ ರೂಪದಲ್ಲಿ  ಸೇವಿಸುವುದರಿಂದ ಗ್ಯಾಸ್ಟ್ರಿಕ್ ಆಮ್ಲ ಸುಧಾರಣೆಗೊಳ್ಳುದಲ್ಲದೆ,  ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯ ಗ್ಯಾಸ್​ ಅನ್ನು ಹೊರ ಹಾಕುವಲ್ಲಿ ಶುಂಠಿ ಪ್ರಮುಖ ಪಾತ್ರವಹಿಸುತ್ತದೆ.

ಇದನ್ನೂ ಓದಿ: ರಿವರ್ಸ್​ ಗೇರ್​ ಇರುವ ಈ ಸ್ಕೂಟರ್​ ಪೆಟ್ರೋಲ್​ ಇಲ್ದೆ 75 ಕಿ.ಮೀ ಮೈಲೇಜ್ ನೀಡುತ್ತೆ..!

ಕರಿ ಮೆಣಸು
ಮಸಾಲೆಗಳ ಮಹರಾಜ ಕರಿಮೆಣಸು ಕೂಡ ಎಲ್ಲರ ಮನೆಯಲ್ಲೂ ಇರುವ ಒಂದು ಮಸಾಲ ಪದಾರ್ಥ. ಈ ಮಸಾಲೆಯಲ್ಲಿ ಪೈಪರಿನ್ ಎಂಬ ಸಂಯುಕ್ತವು ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಕಾರ್ಯ ಮಾಡುತ್ತದೆ. ಇದರಲ್ಲಿರುವ ಔಷಧೀಯ ಗುಣ ಪಿತ್ತರಸ ಆಮ್ಲವನ್ನು ನಿಯಂತ್ರಿಸುವುದಲ್ಲದೇ, ದೇಹದಲ್ಲಿ ಆಹಾರದ ವಿಭಜನೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಇದು ಕೂಡ ಜೀರ್ಣಾಂಗ ವ್ಯವಸ್ಥೆಯಿಂದ ವಾಯುವನ್ನು ಹೊರ ಹಾಕುತ್ತದೆ. ಹೀಗಾಗಿ ವಾಯು ಸಮಸ್ಯೆ, ಬೆಲ್ಚಿಂಗ್ ತೊಂದರೆಗಳಿಗೆ ಕರಿಮೆಣಸು ಪರಿಹಾರವಾಗಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಕೇವಲ 500 ರೂ. ಉಳಿತಾಯ ಮಾಡಿ ಕೋಟ್ಯಾಧಿಪತಿಗಳಾಗಿ..!ತ್ರಿಫಲಾ
ತ್ರಿಫಲಾ ಎನ್ನುವುದು ಮೂರು ಫಲಗಳಿಂದ ತಯಾರಿಸುವ ಆಯುರ್ವೇದಿಕ್ ಔಷಧಿ. ನೆಲ್ಲಿಕಾಯಿ, ಬಿಭಿತಕಿ ಅಥವಾ ಬೆಟ್ಟ ಅಡಿಕೆ ಮತ್ತು ಹರಿತಾಕಿ ಎಂಬ ಕಾಯಿಗಳಿಂದ ತಯಾರಿಸುವ ಪುಡಿಯನ್ನು ತ್ರಿಫಲಾ ಎನ್ನಲಾಗುತ್ತದೆ. ಇದರಲ್ಲಿ ಸಾಕಷ್ಟು ಆರೋಗ್ಯದಾಯಕ ಅಂಶಗಳಿದ್ದು, ಇದರ ಸೇವೆನೆಯಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ನಿರಂತರ ಈ ಪುಡಿಯ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಗ್ಯಾಸ್ ಉಂಟಾಗುವುದಿಲ್ಲ. ಹಾಗೆಯೇ ಜೀರ್ಣಕ್ರಿಯೆಯ ಚಲನೆಯನ್ನು ಸುಧಾರಿಸುವಲ್ಲಿ ತ್ರಿಫಲಾ ಮುಖ್ಯ ಪಾತ್ರವಹಿಸುತ್ತದೆ. ಇದರ ಸೇವನೆಯಿಂದ ಕೂಡ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಬಹುದು.

ಇದನ್ನೂ ಓದಿ: ಹೊಸ ವರ್ಷದಿಂದ ಈ ನೌಕರರಿಗೆ ಸಿಗಲಿದೆ ಜಿಯೋ ಉಚಿತ ಸಿಮ್​, ತಿಂಗಳಿಗೆ 60GB ಡೇಟಾ..!

ಸೋಂಪು
ಸೋಂಪನ್ನು ಸಮಾನ್ಯವಾಗಿ ಆಹಾರ ಸೇವಿಸಿದ ಬಳಿಕ ತಿನ್ನಲಾಗುತ್ತದೆ. ಇದರಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುವ ಔಷಧೀಯ ಗುಣಗಳು ಹೇರಳವಾಗಿದೆ. ಸೋಂಪಿನಲ್ಲಿ ಕರುಳಿನ ಸ್ನಾಯುಗಳನ್ನು ಸಡಿಲಿಸಲು ಸಹಾಯ ಮಾಡುವ ಆಂಟಿಸ್ಪಾಸ್ಮೊಡಿಕ್ ಅಂಶವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆಯ ಗ್ಯಾಸ್​ನ್ನು ನಿಂಯತ್ರಿಸುವಲ್ಲಿಯು ಸೋಂಪು ಕಾಳುಗಳು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕೇಂದ್ರದಿಂದ ಭರ್ಜರಿ ಗಿಫ್ಟ್​: ಗ್ಯಾಸ್​ ದರ 120 ರೂ. ಇಳಿಕೆ

ಶಂಖ ಭಸ್ಮ
ಶಂಖ ಭಸ್ಮವು ಆಯುರ್ವೇದ ಪದ್ಧತಿ ಮೂಲಕ ತಯಾರಿಸುವ ಪುಡಿಯಾಗಿದೆ. ಈ ಪುಡಿಯ ಸೇವನೆಯಿಂದ ಹಸಿವು ಹೆಚ್ಚುವುದಲ್ಲದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಜಠರದ ಉರಿ ಮತ್ತು ಡ್ಯುಯೊಡೆನಿಟಿಸ್​ನಂತಹ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಶಂಖ ಭಸ್ಮದಿಂದ ಪರಿಹಾರ ಕಂಡುಕೊಳ್ಳಬಹುದು.

First published:January 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ