5 Healthy Winter Fruits : ಚಳಿಗಾಲದಲ್ಲಿ ಮನೆಯಲ್ಲಿಯೇ ಆರೋಗ್ಯ ಕಾಪಾಡಿಕೊಳ್ಳಲು ಈ 5 ಹಣ್ಣು ತಿಂದ್ರೆ ಸಾಕಂತೆ

ಚಳಿಗಾಲದಲ್ಲಿ ದ್ರಾಕ್ಷಿ, ಸೇಬು, ಕಿತ್ತಳೆ, ಕಿವಿ ಹಣ್ಣುಗಳ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಅಲ್ಲದೆ ಚಳಿಗಾಲದಲ್ಲಿ ಬರುವ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು..

ಚಳಿಗಾಲಕ್ಕೆ ಬೇಕು ಈ ಹಣ್ಣು

ಚಳಿಗಾಲಕ್ಕೆ ಬೇಕು ಈ ಹಣ್ಣು

  • Share this:
    ಶರದೃತುವಿನ(Winter) ಆಗಮನಕ್ಕೆ ಕೆಲವೇ ಕೆಲವು ದಿನ ಬಾಕಿ ಇದೆ.. ಶರದೃತು ಆಗಮನವಾದ ಬಳಿಕ ಪ್ರಕೃತಿಯಲ್ಲಿ ನಾನಾ ಬದಲಾವಣೆಗಳು(Changes) ಶುರುವಾಗುತ್ತದೆ.. ಜೊತೆಗೆ ಮನುಷ್ಯನ ಬದುಕಿನಲ್ಲಿ ಚಳಿಗಾಲ ಹೊಸ ಅನುಭೂತಿಯನ್ನು ನೀಡುತ್ತದೆ.. ಮನುಷ್ಯನ ಆರೋಗ್ಯ ಸಮಸ್ಯೆಗಳು (Health Issue) ಚಳಿಗಾಲದಲ್ಲಿ ಎಂದಿಗಿಂತಲೂ ಅಧಿಕವಾಗಿ ಕಾಣಿಸಿಕೊಳ್ಳುತ್ತವೆ.. ತಾಪಮಾನ ಕಡಿಮೆ ಇರುವುದರಿಂದ ಶೀತದಂತಹ(Cold) ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಜೊತೆಗೆ ರೋಗನಿರೋಧಕ ಶಕ್ತಿಗಳು(Immunity Booster) ಈ ಸಮಯದಲ್ಲಿ ಕಡಿಮೆ ಇರುತ್ತವೆ.. ಹೀಗಾಗಿ ಮನೆಯಲ್ಲಿಯೇ(Home) ಇರುವ ಸದಾಕಾಲಕ್ಕೂ ಸಿಗುವ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದಾಗಿದೆ..

    ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ಕೆಲವು ಹಣ್ಣುಗಳಿಂದ ನಮ್ಮ ದೇಹದಲ್ಲಿ   ಸಿವಿಟಮಿನ್ ಉತ್ಪಾದನೆ ಹೆಚ್ಚಲು ಇವು ಸಹಕಾರಿಯಾಗಿವೆ.. ಹಾಗಿದ್ರೆ ಚಳಿಗಾಲದಲ್ಲಿ ನಮ್ಮ ಮನೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿರುವ ೫ ಹಣ್ಣುಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..

    1) ಸೇಬು (Apple)

    ದಿನಕ್ಕೊಂದು ಸೇಬು ಹಣ್ಣು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಯಾಕಂದ್ರೆ ಬೇರೆಲ್ಲಾ ಹಣ್ಣುಗಳಲ್ಲಿ ಇರುವುದಕ್ಕಿಂತ ಅಧಿಕವಾಗಿ ಸೇಬಿನ ಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಾಗಿವೆ. ಹೀಗಾಗಿ ಪ್ರತಿನಿತ್ಯ ಸೇಬು ಹಣ್ಣು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಹಾಗೂ ವಿಟಮಿನ್ ಹಾಗೂ ಆಂಟಿ ಆಕ್ಸಿಡೆಂಟ್ ಗಳನ್ನ ಯಥೇಚ್ಛವಾಗಿ ಉತ್ಪಾದನೆಯಾಗುತ್ತದೆ..ಅಲ್ಲದೆ ಸೇಬು ಹಣ್ಣು ಅಲ್‌ಝೈಮರ್(Alzheimer's) ಎಂಬ ಮರೆವಿನ ಕಾಯಿಲೆ ಹಾಗೂ ಡಯಾಬಿಟಿಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸೇಬು ಹಣ್ಣಿನ ಸೇವನೆ ಸಹಕಾರಿಯಾಗಿದೆ

    2) ದ್ರಾಕ್ಷಿ(Grapes)

    ಹಣ್ಣುಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ದ್ರಾಕ್ಷಿ ಹಣ್ಣು ಹೇರಳವಾಗಿ ಸಿ ವಿಟಮಿನ್ ಉತ್ಪಾದನೆಗೆ ಸಹಕಾರಿಯಾಗಿದೆ..ಕ್ಯಾಲ್ಸಿಯಂ, ಮೆಗ್ನಿಸಿಯಂ, ರಂಜಕ, ವಿಟಮಿನ್ ಕೆ ಸೇರಿದಂತೆ ಮೂಳೆಗಳ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ದ್ರಾಕ್ಷಿ ಹಣ್ಣು ಉತ್ಪಾದನೆ ಮಾಡುತ್ತದೆ.. ಮೆದುಳಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಸಹ ದ್ರಾಕ್ಷಿ ಹಣ್ಣಿನ ಸೇವನೆ ಸಹಕಾರಿಯಾಗಿದೆ.. ಇನ್ನೂ ಬಹುಮುಖ್ಯವಾಗಿ ಚರ್ಮ ಕಾಂತಿಯನ್ನು ಹೆಚ್ಚಿಸುವಲ್ಲಿ ಹಾಗೂ ಚರ್ಮ ರೋಗಗಳಿಂದ ರಕ್ಷಣೆ ಮಾಡಿಕೊಳ್ಳಲು ದ್ರಾಕ್ಷಿಹಣ್ಣು ಸಹಕಾರಿಯಾಗಿದೆ..

    ಇದನ್ನೂ ಓದಿ: ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವನೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳು ಹೀಗಿವೆ..!

    3)ಕಿವಿ (Kiwi)

    ಕೊರೋನಾ, ಡೆಂಗ್ಯೂ ನಂತಹ ರೋಗಗಳಿಂದ ನರಳುತ್ತಿರುವ ಜನರು ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ಇಂದಿನ ದಿನಗಳಲ್ಲಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.. ಚಳಿಗಾಲದಲ್ಲಿ ಸಹ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನ್ಯೂಜಿಲ್ಯಾಂಡ್ ದೇಶದ ಹಣ್ಣು ಎಂದೇ ಖ್ಯಾತಿ ಪಡೆದಿರುವ ಕಿವಿ ಹಣ್ಣು ಸಹಕಾರಿಯಾಗಿವೆ.. ಯಥೇಚ್ಛವಾಗಿ ಖನಿಜಾಂಶಗಳು ಹಾಗೂ ಸಿ ವಿಟಮಿನ್ ಉತ್ಪಾದನೆ ಮಾಡುವ ಕಿವಿ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.. ದಿನಕ್ಕೆ ಒಂದು ಕಿವಿ ಹಣ್ಣು ತಿನ್ನುವುದರಿಂದ ರಕ್ತ ತೆಳುವಾಗಲು ಸಹಕಾರಿಯಾಗಿದೆ. ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಚರ್ಮ ಸಂಬಂಧಿತ ರೋಗಗಳಿಂದ ದೂರವಿರಬಹುದು.

    4) ಕಿತ್ತಳೆ(Oranges)

    ಕಿತ್ತಳೆ ಹಣ್ಣು ಎಷ್ಟು ರುಚಿಕರವೂ ಆರೋಗ್ಯ ಕಾಪಾಡಿಕೊಳ್ಳಲು ಸಹ ಕಿತ್ತಲೆ ಹಣ್ಣು ಅಷ್ಟೇ ಸಹಕಾರಿ.. ಕಿತ್ತಳೆ ಹಣ್ಣಿನಲ್ಲಿ ಇರುವ ಎ,ಸಿ ಹಾಗೂ ಪೊಟ್ಯಾಶಿಯಂ ನಂತಹ ವಿಟಮಿನ್ ಗಳು ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿವೆ..ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳಿಂ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಲು ಕಿತ್ತಲೆ ಹಣ್ಣು ಸಹಕಾರಿಯಾಗಿದೆ. ಚರ್ಮ ಸಂಬಂಧಿತ ಕಾಯಿಲೆ ಹಾಗೂ ಕ್ಯಾನ್ಸರ್ ನಿಂದ ರಕ್ಷಣೆ ಮಾಡಿಕೊಳ್ಳಲು ಸಹ ಕಿತ್ತಳೆ ಹಣ್ಣು ಸಹಕಾರಿಯಾಗಿದೆ.

    ಇದನ್ನೂ ಓದಿ :ಈ ಟಿಪ್ಸ್​ಗಳನ್ನು ಫಾಲೋ ಮಾಡಿ ಚಳಿಗಾಲದ ಒಣಚರ್ಮಕ್ಕೆ ಹೇಳಿ ಬೈ ಬೈ

    5) ಸ್ಟ್ರಾಬೆರಿ ( Strawberries )

    ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಸ್ಟ್ರಾಬೆರಿ ಹಣ್ಣಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಕಬ್ಬಿಣ, ಸುಣ್ಣ, ಪೊಟಾಸಿಯಂ, ಮೆಗ್ನೇಷಿಯಂ, ಮ್ಯಾಂಗನೀಸ್, ಸತು, ನಿಯಾಸಿನ್, ಪ್ಯಾಂಟೋಥೆನಿಕ್ ಅಮ್ಲಗಳಲ್ಲದೆ ಎ, ಬಿ, ಸಿ, ಕೆ ಜೀವಸತ್ವಗಳೂ ಇವೆ. ಸ್ಟ್ರಾಬೆರಿ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಚಳಿಗಾಲದಲ್ಲಿ ಬರುವ ಹಲವು ರೋಗಗಳಿಂದ ದೂರವಿಡುತ್ತದೆ..
    Published by:ranjumbkgowda1 ranjumbkgowda1
    First published: