Health Tips: ಮಹಿಳೆಯರೇ ಈ ಸಮಸ್ಯೆ ಕಂಡ್ರೆ ತಕ್ಷಣವೇ ಡಾಕ್ಟರ್​ ಬಳಿ ಹೋಗಿ

ಮಹಿಳೆಯರಲ್ಲಿ ಹೆಚ್ಚಾಗಿ ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು, ಕಿರಿಕಿರಿ, ಮತ್ತೆ ಒಸರುವ ಬಿಳಿ ಸ್ರಾವ ಲಕ್ಷಣಗಳು ಕಂಡುಬರುತ್ತವೆ. ಇವೆಲ್ಲಾ ಯೋನಿ ಸೋಂಕಿನ ಸಂಕೇತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೆಣ್ಣು ಮಕ್ಕಳು  ಬೆಳೆಯುತ್ತಿದ್ದ ಹಾಗೆ  ಅವರ ದೇಹದಲ್ಲೂ ಅನೇಕ ಬದಲಾವಣೆ ಕಂಡು ಬರುತ್ತದೆ. ಹಾರ್ಮೋನುಗಳ (Hormonal changes) ವ್ಯತ್ಯಾಸದಿಂದಾಗಿ ಋತುಚಕ್ರ (Menstrual Cycle) ಸೇರಿ ಹಲವು ರೀತಿಯ ಬದಲಾವಣೆಗಳಾಗುತ್ತವೆ. ತಾಯಿಯಾದ (Mother) ನಂತರವಂತು ಹೆಣ್ಣು ಮಕ್ಕಳ ದೇಹದಲ್ಲಿ ವೀಪರೀತ ಬದಲಾವಣೆ ನೋಡಬಹುದು. ತೂಕದಲ್ಲಿ ವ್ಯತ್ಯಾಸ, ಹಾರ್ಮೋನಗಳ ಅಸಮತೋಲನ, ದೇಹದ ಸ್ಥಿತಿ ಬದಲಾವಣೆ, ಕೂದಲು (Hair loss) ಉದುರುವಿಕೆ ಹೀಗೆ ನಾನಾ ಬದಲಾವಣೆ ಆಗುತ್ತವೆ. ತುಂಬಾ ಜನ ಮಹಿಳೆಯರು ಈ ಸಮಸ್ಯೆಗಳ (Problems) ಬಗ್ಗೆ ಲಕ್ಷ್ಯ ವಹಿಸುವುದೇ ಇಲ್ಲ. ಇಂತ ಅಲಕ್ಷ್ಯಗಳೇ ನಮ್ಮ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಉಂಟು ಮಾಡುತ್ತವೆ.

ಮಹಿಳೆಯರು ಸಣ್ಣ ಪುಟ್ಟ ಸಮಸ್ಯೆಗಳು ಕಂಡುಬಂದರೂ ತಕ್ಷಣ ವೈದ್ಯಕೀಯವಾಗಿ ಪರೀಕ್ಷಿಸಿಕೊಳ್ಳುವುದು ಮುಖ್ಯ. ಮಕ್ಕಳು, ಮನೆ, ಸಂಸಾರ, ಕೆಲಸ ಅಂತ ಮಹಿಳೆಯರು ತಮ್ಮ ಕಾಳಜಿ ಮಾಡಿಕೊಳ್ಳುವುದೇ ಇಲ್ಲ.ರೋಗ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ, ತಡೆಗಟ್ಟುವಿಕೆ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಉತ್ತಮವಾಗಿದೆ. ಸ್ತನ ಕ್ಯಾನ್ಸರ್ ಮತ್ತು ಯೋನಿ ಸೋಂಕಿನಂತಹ ಕೆಲವು ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಹೆಚ್ಚು ಕಾಡುವಂತಹ ಸಮಸ್ಯೆಗಳಾಗಿವೆ.

ಹಾಗಾದರೆ ಹಾರ್ಮೋನಗಳ ಬದಲಾವಣೆಯಿಂದಾಗಿ ಮತ್ತು ಮಹಿಳೆಯರಲ್ಲಿ ಸಹಜವಾಗಿ ಯಾವೆಲ್ಲಾ ಸಮಸ್ಯೆಗಳು ಕಂಡುಬರುತ್ತವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

1) ಯೋನಿ ಸೋಂಕು

ಮಹಿಳೆಯರಲ್ಲಿ ಹೆಚ್ಚಾಗಿ ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು, ಕಿರಿಕಿರಿ, ಮತ್ತೆ ಒಸರುವ ಬಿಳಿ ಸ್ರಾವ ಲಕ್ಷಣಗಳು ಕಂಡುಬರುತ್ತವೆ. ಇವೆಲ್ಲಾ ಯೋನಿ ಸೋಂಕಿನ ಸಂಕೇತವಾಗಿದೆ. ಇದಲ್ಲದೆ ಸಾಮಾನ್ಯವಾಗಿ ಸಂಭೋಗದ ನಂತರ, ಗರ್ಭಧಾರಣೆಯ ಸಮಯದಲ್ಲಿ ಅಥವಾ ಹೆಚ್ಚು ಹೆಚ್ಚು ಮೂತ್ರ ವಿಸರ್ಜನೆಯಿಂದಾಗಿಯೂ ಯೋನಿ ಸೋಂಕು ಉಂಟಾಗುತ್ತದೆ. ಈ ಸಮಯದಲ್ಲಿ ದುರ್ವಾಸನೆ, ತುರಿಕೆ ಅಥವಾ ಮೂತ್ರ ಬದಲಾದ ಬಣ್ಣದಲ್ಲಿದ್ದರೆ ಸ್ವಲ್ಪ ಗಮನ ಹರಿಸಬೇಕು. ಇಲ್ಲವಾದಲ್ಲಿ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ

2) ದುರ್ಬಲ ರೋಗ ನಿರೋಧಕ ಶಕ್ತಿ

ವಯಸ್ಸಾದಂತೆ ಮಹಿಳೆಯರಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯವಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಆಹಾರ ಪದ್ಧತಿ, ಜೀವನ ಶೈಲಿ, ಅಸಮತೋಲಿತ ಆಹಾರ ಸೇವನೆಯಿಂದಾಗಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಕೊರತೆ ಉಂಟಾಗಿ 30-40ರ ಹರೆಯದ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿಯು ಕುಂದುತ್ತದೆ.

3) ಸ್ತನ ಕ್ಯಾನ್ಸರ್

ವಿಶ್ವಾದ್ಯಂತ ಮಹಿಳೆಯರಿಗೆ ಹೆಚ್ಚು ಕಾಡುವುದೆಂದರೆ ಅದು ಸ್ತನ ಕ್ಯಾನ್ಸರ್. ಇದು ಸಾಮಾನ್ಯವಾಗಿ ಹಾಲಿನ ನಾಳಗಳ ಒಳ ಪದರದಲ್ಲಿ ಅಥವಾ ಹಾಲನ್ನು ಪೂರೈಸುವ ಲೋಬಲ್‌ಗಳಲ್ಲಿ ಪ್ರಾರಂಭವಾಗುತ್ತದೆ. ಸ್ತನ ಕ್ಯಾನ್ಸರ್’ನ ಮೊದಲ ಲಕ್ಷಣಗಳು ಸಾಮಾನ್ಯವಾಗಿ ಮಹಿಳೆಯ ಸ್ತನದಲ್ಲಿ ದಪ್ಪದಾದ ಅಂಗಾಂಶ ಅಥವಾ ಉಂಡೆಯಾಗಿರುತ್ತವೆ. ಹೆಚ್ಚಿನ ಉಂಡೆಗಳೂ ಕ್ಯಾನ್ಸರ್ ಅಲ್ಲ. ಆದರೂ ಮಹಿಳೆಯರು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು.

4) ಅಂಡಾಶಯ ಅಥವಾ ಗರ್ಭ ಕ್ಯಾನ್ಸರ್

ಅಂಡಾಶಯ ಕ್ಯಾನ್ಸರ್ ಫಾಲೋಪಿಯನ್ ಟ್ಯೂಬ್‌ನಲ್ಲಿ ಸಂಭವಿಸುತ್ತದೆ ಮತ್ತು ಗರ್ಭಕಂಠದ ಕ್ಯಾನ್ಸರ್ ಗರ್ಭಾಶಯದ ಕೆಳಗಿನ ಭಾಗದಲ್ಲಿ ಸಂಭವಿಸುತ್ತದೆ. ಎರಡೂ ಕ್ಯಾನ್ಸರ್ ವಿಧಗಳು ಮಾರಣಾಂತಿಕ ಪರಿಣಾಮಗಳನ್ನು ಹೊಂದಿವೆ.

ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

5) ಖಿನ್ನತೆ ಮತ್ತು ಆತಂಕ

ಹಲವಾರು ಸನ್ನಿವೇಶಗಳಿಂದಾಗಿ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತಂಕ ಕಂಡುಬರುತ್ತದೆ.ಅದು ಸಾಮಾಜಿಕ ಅಥವಾ ದೈಹಿಕವಾಗಿರಲಿ, ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರು ಆತಂಕ ಅಥವಾ ಖಿನ್ನತೆಗೆ ಒಳಗಾಗುತ್ತಾರೆ. ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ಗಳು ಖಿನ್ನತೆ ಮತ್ತು ಆತಂಕ ಉಂಟುಮಾಡಬಹುದು.  ಮಹಿಳೆಯರು ಉಸಿರುಗಟ್ಟುವಿಕೆ, ದುಃಖ, ಮರಗಟ್ಟುವಿಕೆ ಅಥವಾ ಸಾರ್ವಕಾಲಿಕ ಆತಂಕದಿಂದ ಬಳಲುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಈ ಮೇಲಿನ ತೊಂದರೆಗಳು ಎಲ್ಲಾ ಮಹಿಳೆಯರಲ್ಲೂ ಕಂಡು ಬರುತ್ತದೆ. ಹೀಗಾಗಿ ಇವುಗಳನ್ನು ಅಲಕ್ಷಿಸದೇ ನಮ್ಮ ಆರೋಗ್ಯದ ಬಗ್ಗೆ ಸಹ ಕಾಳಜಿ ವಹಿಸಬೇಕು.
Published by:vanithasanjevani vanithasanjevani
First published: